ಗುರು ಗೋವಿಂದ ಸಿಂಗ್
(ಗುರು ಗೋಬಿಂದ್ ಸಿಂಗ್ ಇಂದ ಪುನರ್ನಿರ್ದೇಶಿತ)
ಸಿಖ್ಖರ ಗುರು ಗುರು ಹರ್ ಗೋವಿಂದ ಸಿಂಗ್ ೧೫೯೫ ರ ಜೂನ್ ೧೯ರಂದು ಪಂಜಾಬ್ನ ಅಮೃತಸರದಲ್ಲಿ ಜನಿಸಿದರು .ಇವರು ಸಿಖ್ಖ್‌ಧರ್ಮದ ಹತ್ತು ಗುರುಗಳಲ್ಲಿ ಆರನೆಯವರು.ಗುರು ಅರ್ಜುನ್‌ದೇವ್ ನಂತರ ೧೬೦೬ ರ ಮೇ ೨೫ರಂದು ಇವರು ಸಿಖ್ಖ್‌ಧರ್ಮದ ಗುರುವಾದರು.ಇವರು ಧರ್ಮಗುರುಗಳಾಗಿರುವುದರ ಜೊತೆಗೆ, ಕ್ರೀಡಾಪಟು ಹಾಗೂ ಅತ್ಯುತ್ತಮ ಸೈನಿಕರಾಗಿದ್ದರು.ಮೊಘಲರ ದಬ್ಬಾಳಿಕೆ ವಿರುದ್ಧ ಹೋರಾಡಿದರು.ಮುಗ್ಧರ ರಕ್ಷಣೆಗಾಗಿ ಯಾವಾಗಲೂ ಎರಡು ಖಡ್ಗಗಳನ್ನು ಧರಿಸಿರುತ್ತಿದ್ದರು. ಹರ್ ಗೋವಿಂದಪುರ ಪಟ್ಟಣವನ್ನು ನಿರ್ಮಿಸಿದರು.ಇವರು ೧೬೪೫ ರ ಮಾರ್ಚ್ ೨೮ರಂದು ನಿಧನರಾದರು.