ಗುರುರಾಜ ಬೆಣಕಲ್
ಗುರುರಾಜ ಬೆಣಕಲ್ (೦೭ ಮಾರ್ಚ್ ೧೯೪೭ - ೦೯ ಏಪ್ರಿಲ್ ೨೦೧೮) ಅವರು ಕನ್ನಡದ ಒಬ್ಬರು ಲೇಖಕರು. ಮಕ್ಕಳ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡಿದ್ದರು.
ಜೀವನ
ಬದಲಾಯಿಸಿಅವರು ಬಾಗಲಕೋಟೆಯಲ್ಲಿ ಹುಟ್ಟಿದರು.
ಸಾಹಿತ್ಯ ಕೃಷಿ
ಬದಲಾಯಿಸಿಐದು ದಶಕಗಳಿಂದ ಮಕ್ಕಳ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡಿದ್ದರು. ೪೦ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದರು. ಕವನ, ಕತೆ, ರೋಚಕ ಪ್ರಸಂಗಗಳು, ಒಗಟುಗಳು ಹೀಗೆ ಹಲವು ರೀತಿಯ ಮಕ್ಕಳ ಸಾಹಿತ್ಯವನ್ನು ಅವರು ರಚಿಸಿದ್ದಾರೆ. ಇವರ ಅನೇಕ ಕತೆ, ಕವನಗಳು ಕನ್ನಡ ಪತ್ರಿಕೆಗಳಲ್ಲಿ ೭೦ರ ದಶಕದಿಂದಲೇ ಪ್ರಕಟವಾಗಿವೆ. ಅವರ ’ಅನ್ನ ಜೇನು’ ಕೃತಿಗೆ ರಾಷ್ಟ್ರಕವಿ ಕುವೆಂಪು ಪುರಸ್ಕಾರ ಹಾಗೂ ಹುಬ್ಬಳ್ಳಿಯ ಮೂರು ಸಾವಿರ ಮಠದ ಗ್ರಂಥ ಪುರಸ್ಕಾರ ಲಭಿಸಿತ್ತು. ಇವರ ಬಹುತೇಕ ಕೃತಿಗಳು ಸಪ್ನಾ ಬುಕ್ ಹೌಸ್ ಮತ್ತು ಸಾಹಿತ್ಯ ಪ್ರಕಾಶನದಿಂದ ಪ್ರಕಾಶನಗೊಂಡಿವೆ.
ಮಕ್ಕಳ ಕತೆಗಳು
ಬದಲಾಯಿಸಿ- ಕತೆ ಹೇಳುವೆ (ಮಕ್ಕಳ ಕಥಾಸಂಕಲನ)[೧]
- ಅಪೂರ್ವ ದಾನ
- ಒಂದೂರಲ್ಲಿ.... (ಮಕ್ಕಳ ಕತೆಗಳು)
- ಬುದ್ಧಿವಂತ ಶಿಷ್ಯರು
- ಹನಿ ಹನಿ ಮಿನಿ ಮಿನಿ ಕತೆಗಳು
- ಕತೆಗಳೋ ಕತೆಗಳು
- ಕಥಾ ಪ್ರಸಂಗ:೫೪ ಚಿಣ್ಣರ ಮಳೆ
- ಚೂರು ಕತೆ ಜೋರು ಕತೆ
- ಏನ್ ಕತೆ ಏನ್ ಕತೆ
- ಗಿಣಿರಾಮ
- ಕರಡೀ ಮದುವೆ
ಮಕ್ಕಳ ಕವಿತೆಗಳು
ಬದಲಾಯಿಸಿ- ಗಣಪ ಟೊಣಪ ಮತ್ತು ಮಕ್ಕಳ ಇತರ ಕವಿತೆಗಳು
- ಹಾಡು ಹಕ್ಕಿ ಓಡಿ ಬಾರೆ
- ಮಂಗನ ಮದುವೆ ಮತ್ತು ಮಕ್ಕಳ ಇತರ ಕವನಗಳು
- ಹೂವೇ ಹೂವೇ
- ಚೆಲುವ ಚಂದಿರ
- ಮಂದಹಾಸ
- ಸಂತಸ ನೀಡುವ ಹೂಗಳು
- ಅಮ್ಮನು ಊರಿಗೆ ಹೋದರೆ
- ಅನ್ನ ಜೇನು
ಇತರ
ಬದಲಾಯಿಸಿ- ರೋಚಕ ಒಗಟುಗಳು ಮತ್ತು ಪದ್ಯಗಳಲ್ಲಿ ಕ್ವಿಜ್
- ಒಗಟ ಬಿಡಿಸೊ ಜಾಣ ಎನಿಸೊ
- ಪ್ರೇರಕ ಪ್ರಸಂಗಗಳು - ಬಾಳದಾರಿಯ ದೀಪಗಳು
- ಓದಿವನಿಂದು ಪ್ರೇರಣೆಗೆಂದು
ಪ್ರಶಸ್ತಿ, ಪುರಸ್ಕಾರಗಳು
ಬದಲಾಯಿಸಿ- ರಾಷ್ಟ್ರಕವಿ ಕುವೆಂಪು ಪುರಸ್ಕಾರ
- ಹುಬ್ಬಳ್ಳಿಯ ಮೂರು ಸಾವಿರ ಮಠದ ಗ್ರಂಥ ಪುರಸ್ಕಾರ
ನಿಧನ
ಬದಲಾಯಿಸಿ೦೯ ಏಪ್ರಿಲ್ ೨೦೧೮ ರಂದು ಬೆಂಗಳೂರಿನಲ್ಲಿ ನಿಧನರಾದರು. ೭೧ ವರ್ಷ ವಯಸ್ಸಾಗಿತ್ತು. ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.[೨]
ಉಲ್ಲೇಖಗಳು
ಬದಲಾಯಿಸಿ- ↑ ಅಕ್ಷರಲೋಕದ ಅಂಗಳದಲ್ಲಿ..., ಉದಯವಾಣಿ, Sep 23, 2017,
- ↑ ಗುರುರಾಜ ಬೆಣಕಲ್ ನಿಧನ, ಪ್ರಜಾವಾಣಿ ವಾರ್ತೆ 9 Apr, 2018
ಹೊರಕೊಂಡಿಗಳು
ಬದಲಾಯಿಸಿ- ಮಕ್ಕಳ ಸಾಹಿತ್ಯ ಕೃಷಿಕ – ಶ್ರೀ ಗುರುರಾಜ ಬೆಣಕಲ್, ಅನಂತ ರಮೇಶ, ಸುರಹೊನ್ನೆ