ಗುರುದ್ವಾರ ನಡಾ ಸಾಹಿಬ್, ಮೊಹಾಲಿ

ಮೊಹಾಲಿಯಿಂದ 23 ಕಿ.ಮೀ ಅಂತರದಲ್ಲಿರುವ ಗುರುದ್ವಾರ್ ನಡಾ ಸಾಹಿಬ್ ಪಂಚಕುಲದ ಘಗ್ಗರ್ ನದಿ ತೀರದಲ್ಲಿದೆ. ಗುರು ಗೋವಿಂದ್ ಸಿಂಗ್ ಜಿ ಬಂಘಾನಿ ಕದನದ ನಂತರ 1688 ರಲ್ಲಿ ಅನಂದಪುರ್ ಸಾಹಿಬ್ ಗೆ ಹೋಗುವಾಗ ಇಲ್ಲಿ ತಂಗಿದ್ದರು ಎಂದು ನಂಬಲಾಗಿದೆ. ನಾಡು ಷಾ ಲುಬಾನ ಎಂಬ ಗ್ರಾಮಸ್ಥ ಗುರು ಗೋವಿಂದ್ ಸಾಹಿಬ್ ಮತ್ತು ಆತನ ಅನುಯಾಯಿಗಳಿಗೆ ಇಲ್ಲಿ ಸೇವೆ ಸಲ್ಲಿಸಿದನು. ಆತನ ಭಕ್ತಿಗೆ ಮೆಚ್ಚಿ ಗುರು ಗೋಬಿಂದ್ ಸಿಂಗ್ ಜಿ ಈ ಸ್ಥಳಕ್ಕೆ ಆತನ ಹೆಸರನ್ನು ಇಟ್ಟರು ಎನ್ನಲಾಗಿದೆ.

ನಂತರ ಗುರು ಗೋವಿಂದ್ ಜಿ ಯ ಸ್ಮರಣಾರ್ಥವಾಗಿ ಮೋಟಾ ಭಾಯ್ ಈ ಜಾಗವನ್ನು ಸ್ಥಾಪಿಸಿದರು. 1956 ರಲ್ಲಿ ಶಿರೋಮಣಿ ಗುರುದ್ವಾರ ಪರ್ಬಂಧಕ್ ಸಮಿತಿ ಗುರುದ್ವಾರದ ನಿಯಂತ್ರನವನ್ನು ತೆಗೆದುಕೊಂಡಿತು. ಪ್ರಸ್ತುತ ಈ ಗುರುದ್ವಾರ ನಾಡಾ ಸಾಹಿಬ್ 2 ಅಂತಸ್ತಿನ ಗುಮ್ಮಟಾಕಾರದ ರಚನೆಯನ್ನು ಹೊಂದಿದ್ದು, ಒಂದು ದೊಡ್ಡ ಆಯತಾಕಾರದ ಸಭೆ ನಡೆಸುವ ಹಾಲ್, ವಿಶಾಲವಾದ ಅಂಗಣ, ಒಂದು ಲಂಗರ್ ಹಾಲ್ ಮತ್ತು ಯಾತ್ರಾರ್ಥಿಗಳಿಗೆ ಕೊಠಡಿ ಮುಂತಾದವುಗಳನ್ನು ಒಳಗೊಂಡಿದೆ. ಈ ಸುಂದರ ಸಿಖ್ ದೇವಾಲಯ ಮೊಹಾಲಿಗೆ ಬಂದ ಪ್ರವಾಸಿಗರು ಭೇಟಿ ನೀಡಲೇಬೇಕಾದ ಸ್ಥಳವಾಗಿದೆ.[]

ಉಲ್ಲೇಖಗಳು

ಬದಲಾಯಿಸಿ