ಗುರುದ್ವಾರ ಅಂಬ ಸಾಹಿಬ್, ಮೊಹಾಲಿ
ಮೊಹಾಲಿಯಲ್ಲಿರುವ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಹೊಂದಿರುವುದರಿಂದ ಸಾಕಷ್ಟು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ದಂತಕಥೆಗಳ ಪ್ರಕಾರ, ಕಾಬುಲ್ ನ ಭಾಯಿ ಕುರಮ್ ಜಿ ಸಿಖ್ ಗುರು ಅರ್ಜುನ್ ಜಿ ಯ ಆಶೀರ್ವಾದ ಪಡೆಯಲು ಅಮೃತಸರ ಪ್ರಯಾಣಿಸಿದರು. ಅಲ್ಲಿ ಉಳಿದ ಎಲ್ಲರೂ ಗುರೂಜಿ ಗೆ ಉಡುಗೊರೆಗಳನ್ನು ಕೊಡುತ್ತಿರುವಾಗ ಇವರು ಮಾತ್ರ ಖಾಲಿ ಕೈಯಲ್ಲಿ ನಿಂತಿದ್ದರು. ನಾಚಿಕೆಯಿಂದ ತಲೆತಗ್ಗಿಸಿದ ಕುರಮ್ ಅಲ್ಲಿ ನೀಡಲಾದ ಪ್ರಸಾದದ ಅಂಬವನ್ನು ಮರುದಿನ ಬೆಳಗ್ಗೆ ಗುರು ಅರ್ಜುನ್ ಜಿ ಗೆ ನೀಡಿದರು. ಅರ್ಜುನ್ ಜಿ ಪ್ರಸಾದವನ್ನು ತಿನ್ನಲು ಹೇಳಿದರು ಮತ್ತು ನಿನ್ನ ಬೇಡಿಕೆ ಒಂದು ದಿನ ಪೂರೈಸುತ್ತದೆ ಎಂದು ಕುರಮ್ ಗೆ ಆಶೀರ್ವದಿಸಿದರು.
7 ನೇ ಸಿಖ್ ಗುರು ಗುರು ಹರ ರಾಯ್ ಜಿ ತನ್ನ ಮುತ್ತಾತ ಅರ್ಜುನ್ ಜಿ ಯ ಭರವಸೆ ಈಡೇರಿಸಲು ಈ ಗುರುದ್ವಾರಕ್ಕೆ ಭೇಟಿ ನೀಡಿದರು. ಮತ್ತು ತನ್ನ ಶಕ್ತಿಯ ಮೂಲಕ ಈ ಸ್ಥಳದಲ್ಲಿ ಅಂಬ ತುಂಬಿದ ಮರವನ್ನು ನೆಟ್ಟರು. ಅಂದಿನಿಂದ ಈ ಸ್ಥಳವನ್ನು ಗುರುದ್ವಾರ ಅಂಬ ಸಾಹಿಬ್ ಎಂದು ಕರೆಯಲಾಗುತ್ತದೆ.[೧]
ಉಲ್ಲೇಖಗಳು
ಬದಲಾಯಿಸಿ