ಗುಪ್ತಗಾಮಿನಿ (ಧಾರಾವಾಹಿ)

ಗುಪ್ತಗಾಮಿನಿ ಈ-ಟಿವಿ ಕನ್ನಡದಲ್ಲಿ ಸಂಜೆ ೬.೩೦ ಕ್ಕೆ ಪ್ರಸಾರವಾಗಿತ್ತು. 2003 ರಲ್ಲಿ, ಈ ಧಾರಾವಾಹಿಯು ಕರ್ನಾಟಕ ಪ್ರದೇಶದ ಅತ್ಯಂತ ಜನಪ್ರಿಯ ಟಿವಿ ಧಾರಾವಾಹಿಗಳಲ್ಲಿ ಒಂದಾಗಿತ್ತು []. 2008 ರಲ್ಲಿ ಗುಪ್ತಗಾಮಿನಿ ಐದು ವರ್ಷಗಳನ್ನು ಪೂರ್ಣಗೊಳಿಸಿತು. ಖ್ಯಾತ ಪತ್ರಕರ್ತೆ ಸಂಧ್ಯಾ ಪೈ ಈ ಧಾರವಾಹಿಯನ್ನು ನಿರ್ಮಿಸಿದ್ದರೆ, ವಿಜಯ್‌ ಸಾರಾಯಿ ಈ ಧಾರವಾಹಿಯನ್ನು ನಿರ್ದೇಶಿಸಿದ್ದಾರೆ. ಮಣಿಪಾಲ್ ಎಂಟರ್‌ಟೈನ್‌ಮೆಂಟ್ ನೆಟ್‌ವರ್ಕ್ ಲಿಮಿಟೆಡ್ ಬ್ಯಾನರ್ ಅಡಿಯಲ್ಲಿ ಈ ಧಾರವಾಹಿ ನಿರ್ಮಾಣವಾಗಿದೆ.

ಗುಪ್ತಗಾಮಿನಿ (ಧಾರಾವಾಹಿ)
ಶೈಲಿಧಾರಾವಾಹಿ
ನಿರ್ದೇಶಕರುವಿಜಯ್‌ ಸಾರಾಯಿ
ದೇಶಭಾರತ
ಭಾಷೆ(ಗಳು)ಕನ್ನಡ
ನಿರ್ಮಾಣ
ನಿರ್ಮಾಪಕ(ರು)ಸಂಧ್ಯಾ ಪೈ, ಮಣಿಪಾಲ್ ಎಂಟರ್‌ಟೈನ್‌ಮೆಂಟ್ ನೆಟ್‌ವರ್ಕ್ ಲಿಮಿಟೆಡ್
ಸಮಯ20-22 ನಿಮಿಷಗಳು
ಪ್ರಸಾರಣೆ
ಮೂಲ ವಾಹಿನಿಈಟಿವಿ ಕನ್ನಡ

ಡಿಸೆಂಬರ್ 2008 ರಲ್ಲಿ, ಇದು ಒಟ್ಟು 1300 ಸಂಚಿಕೆಗಳನ್ನು ಪೊರೈಸಿ ಕರ್ನಾಟಕದಲ್ಲಿ ಈ ಧಾರವಾಹಿಯ ಸಂಚಿಕೆಗಳು ದಾಖಲೆಗಳನ್ನು ಮುರಿದಿತ್ತು [] . ಕನ್ನಡ ವೀಕ್ಷಕರಿಗೆ ತನ್ನ ಅಭಿರುಚಿಯನ್ನು ಕಾಯ್ದುಕೊಳ್ಳುವ ಕಂಟೆಂಟ್ ಇದರಲ್ಲಿತ್ತು. ಆದ್ದರಿಂದಲೇ ಧಾರಾವಾಹಿ ಇಷ್ಟು ದೀರ್ಘಾವಧಿಯನ್ನು ತಲುಪಿದೆ ಎಂದು ಜನರು ಭಾವಿಸಿದ್ದಾರೆ. ಈ ಧಾರವಾಹಿಯು ಕರ್ನಾಟಕಕ್ಕೆ ಹಲವು ಪ್ರತಿಭಾವಂತ ಕಲಾವಿದರನ್ನು ಪರಿಚಯಿಸಿದೆ [].

ಕೌಟುಂಬಿಕ ಘಟನೆಗಳನ್ನು ಆಧಾರಿತ ಧಾರವಾಹಿ ಗುಪ್ತಗಾಮಿನಿ. ಈ ಧಾರವಾಹಿಯು ಭಾವನ ಪಾತ್ರದಾರಿಯ ಮೇಲೆ ಕೇಂದ್ರಿಕೃತವಾಗಿತ್ತು. ಸ್ವಾಭಿಮಾನದ ಹೆಣ್ಣು, ಕುಟುಂಬಕ್ಕಾಗಿ ಎಲ್ಲವನ್ನು ತ್ಯಾಗ ಮಾಡಲು ಸಿದ್ದವಾಗಿರುವ ಹೆಣ್ಣಿನ ಕಥೆ.

ಪ್ರಶಸ್ತಿಗಳು

ಬದಲಾಯಿಸಿ
  • ಧಾರಾವಾಹಿಯಲ್ಲಿನ ಭಾವನ ಪಾತ್ರಕ್ಕಾಗಿ ನಟಿ ಸುಷ್ಮಾಗೆ 2007 ರಲ್ಲಿ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ವತಿಯಿಂದ ʼಉತ್ತಮ ನಟಿ ಪ್ರಶಸ್ತಿʼ ಕೂಡಾ ದೊರೆತಿದೆ.
  • ನಿರ್ಮಾಪಕಿ ಸಂಧ್ಯಾ ಎಸ್ ಪೈ ಅವರಿಗೆ ಈ ಧಾರಾವಾಹಿಗಾಗಿ 2009 ರಲ್ಲಿ 'ಖ್ಯಾತ ಧಾರಾವಾಹಿ ಎಂಬ ವಿಶೇಷ ಪ್ರಶಸ್ತಿ' ದೊರೆತಿದೆ.

ಕಲಾವಿದರು

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. "ಗುಪ್ತಗಾಮಿನಿ ಧಾರಾವಾಹಿಯ ಪಾತ್ರವರ್ಗ". nettv4u. Retrieved 10 ಸೆಪ್ಟಂಬರ್ 2023.
  2. "ಐದುವರುಷಗಳನ್ನು ಪೂರ್ಣಗೊಳಿಸಿದ ಗುಪ್ತಗಾಮಿನಿ". ಫಿಲ್ಮಿಬೀಟ್ ಕನ್ನಡ. Retrieved 29 ಡಿಸೆಂಬರ್ 2008.
  3. "ಕನ್ನಡದ ಉತ್ತಮ ಧಾರಾವಾಹಿಗಳು". ದ ಟೈಮ್ಸ್ ಆಪ್ ಇಂಡಿಯಾ. Retrieved 31 ಆಗಸ್ಟ್ 2023.
  4. "ಕಿರುತೆರೆ ನಟನೆಗೆ ಮರಳಿದ ಭಾವನ ಆಲಿಯಾಸ್ ಸುಷ್ಮಾ ಕೆ. ರಾವ್". ಹಿಂದೂಸ್ತಾನ ಟೈಮ್ಸ್. Retrieved 7 ಜುಲೈ 2022.
  5. "ಭಾಗ್ಯಲಕ್ಷ್ಮಿ ಧಾರಾವಾಹಿ ಹಿಂದಿಗೆ ಡಬ್ ಆಗುತ್ತಿದೆ". Retrieved February 15, 2023.