ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಸಾಹಿತ್ಯಾಭ್ಯಾಸಿಗಳಿಗೆ ಪರಿಚಿತವಾಗಿರುವ ಕಾವ್ಯನಾಯಿಕೆಯ ಹೆಸರು. 12ನೆಯ ಶತಮಾನದ್ದೆಂದು ವಿದ್ವಾಂಸರು ನಿರ್ಣಯಿಸಿರುವ ಎಡ (ನೋಡಿ) ಎಂಬ ಸ್ಕ್ಯಾಂಡಿನೇವಿಯದ ಪುರಾಣ ಕಾವ್ಯದಲ್ಲಿ ಬರುವ ನಾಯಕಿಯ ಹೆಸರು ಇದು. ಈ ಕಾವ್ಯವನ್ನು ಸೀಮುಂಡ್ ಸೀಗ್ಫ್ಯೂಸನ್ ಎಂಬಾತ ಸಂಗ್ರಹಿಸಿದ್ದಾನೆ. ಗುಡ್ರುನ್ ನಾಯಕಿಯ ಮೂರು ವಿವಾಹಗಳು ಈ ಕಾವ್ಯದ ವಸ್ತುವಾಗಿದೆ. ಈಕೆಯ ಮೊದಲ ಪತಿ ಸಿಗುರ್ಡ್. ಆತನ ಮರಣದ ಅನಂತರ ಆಟ್ಲಿ ಎಂಬಾತನನ್ನು ಈಕೆ ವಿವಾಹವಾದಳು. ಆದರೆ, ಆತ ಕ್ರೂರಿಯಾಗಿದ್ದುದರಿಂದ ಆತನನ್ನು ಕೊಂದು, ತಾನೂ ಸಮುದ್ರಕ್ಕೆ ಹಾರಿಕೊಂಡಳು. ಈಕೆಯನ್ನು ಸಮುದ್ರದಿಂದ ಎತ್ತಿದ ಯೊನಾಕುಮ್ ದೊರೆ ಈಕೆಯನ್ನು ವರಿಸಿದ ಮೂರನೆಯ ಪತಿ.


ಗುಡ್ರುನ್ ಎಂಬ ಹೆಸರಿನ 13ನೆಯ ಶತಮಾನದ ಹಳೆಯ ಕಾವ್ಯವೊಂದರ ನಾಯಕಿಯೊಬ್ಬಳ ಹೆಸರು ಗುಡ್ರುನ್. ಇದು ಆಂಗ್ಲೋ - ಸ್ಯಾಕ್ಸನ್ ಕಾವ್ಯ. ಇದರಲ್ಲಿ ಬರುವ ಗುಡ್ರುನ್ ಪತಿವ್ರತೆಯ ಪ್ರತೀಕವಾಗಿದ್ದಾಳೆ. ಈಕೆಯನ್ನು ಹರ್ವಿಗ್ ಎಂಬ ದೊರೆಗೆ ಮದುವೆ ಮಾಡಿಕೊಡಲು ನಿರ್ಧಾರವಾಗಿತ್ತು. ಆದರೆ, ನಾರ್ವೆಯ ರಾಜ ಹರ್ಮೂತ್ ಎಂಬಾತ ಈಕೆಯ ತಂದೆಯಾದ ಹೆಟ್ಟೆಲ್ನನ್ನು ಕೊಂದು ತನ್ನನ್ನು ಮದುವೆಯಾಗುವಂತೆ ಈಕೆಯನ್ನು ಬಲತ್ಕರಿಸಿದ. ಕೊನೆಗೂ ಈಕೆ ಹರ್ಮೂತ್ನನ್ನು ಜಯಿಸಿದ ಹರ್ವಿಗ್ನನ್ನು ವಿವಾಹವಾದಳು.


19ನೆಯ ಶತಮಾನದ ವಿಲಿಯಂ ಮಾರಿಸ್ ಎಂಬ ಕವಿ ಐಸ್ಲೆಂಡಿನ ಲಾಕ್ಸ್‌ಲೇಲ್ ಸಾಗಾ ಎಂಬ ಪದ್ಯದ ಪರಿಚಯವನ್ನು ಮಾಡಿಕೊಡುವ ಅರ್ದ್ಲಿ ಪ್ಯಾರಡೈಸ್ (ಭೂಲೋಕ ಸ್ವರ್ಗ) ಎಂಬ ಕಥನಕವನವನ್ನು ಬರೆದಿದ್ದಾನೆ. ಅದರಲ್ಲಿ ಗುಡ್ರುನ್ನಳ ಪ್ರೇಮಿಗಳು ಎಂಬ ಕಥನಕವನವೊಂದಿದೆ. ಅದರ ಕಥಾನಾಯಕಿ ಗುಡ್ರುನ್.