ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ತಮಿಳುನಾಡು ರಾಜ್ಯದ ತಿರುವಳ್ಳೂರು ಜಿಲ್ಲೆಯಲ್ಲಿರುವ ಹಳೆಶಿಲಾಯುಗದ ಗುಹಾನೆಲೆ. ಕೋರ್ತಲಯಾರ್ ನದಿ ತೀರದಲ್ಲಿರುವ ಈ ಗುಹೆ ಅಳ್ಳಿಕುಳ್ಳಿ ಬೆಟ್ಟಶ್ರೇಣಿಯಲ್ಲಿದೆ. ಗುಹೆಯೊಳಗಿನ ಅವಶೇಷಗಳನ್ನು ರಾಬರ್ಟ್ ಬ್ರೂಸ್ಫುಟ್ ಪತ್ತೆಹಚ್ಚಿದ. ಕೆ.ಡಿ.ಬ್ಯಾನರ್ಜಿಯವರು 1963-64 ರಲ್ಲಿ ಇಲ್ಲಿ ಉತ್ಖನನ ನಡೆಸಿದರು. ಗುಹೆಯ ಒಳಗೆ ಅಗೆದ ಗುಂಡಿಯಲ್ಲಿ ಅತ್ಯಂತ ಕೆಳಗಿನ ಜಲ್ಲಿಕಲ್ಲಿನ ಸ್ತರದಿಂದ ಅತ್ಯಂತ ಮೇಲಿನ ಹೂಳುಮಣ್ಣಿನ ಸ್ತರದವರೆಗೆ ಹಳೆ ಶಿಲಾಯುಗದ ಉಪಕರಣಗಳು ಅಧಿಕವಾಗಿ ಕಂಡುಬಂದವು. ಕೆಳಗಿನ ಸ್ತರಗಳಲ್ಲಿ ಆದಿ ಹಳೆಶಿಲಾಯುಗೊತ್ತರ ಉಪಕರಣಗಳೂ ಮೇಲಿನ ಸ್ತರಗಳಲ್ಲಿ ಮಧ್ಯ ಹಳೆಶಿಲಾಯುಗೋತ್ತರ ಉಪಕರಣಗಳೂ ಬೆರಳೆಣಿಕೆಯಲ್ಲಿ ಲಭಿಸಿದವು.


ಈ ಹಳ್ಳಿಯ ಬಳಿಯಿರುವ ಗದ್ದೆಯೊಂದರಲ್ಲಿ ಅಗೆದ ಒಂದು ಗುಂಡಿಯಲ್ಲಿ ಜಲ್ಲಿಕಲ್ಲಿನ ಭೂಸ್ತರದಲ್ಲಿ ಹಳೆಶಿಲಾಯುಗದ ಉಪಕರಣಗಳಿದ್ದವು. ಅಪೂರ್ಣ ಕೈಗೊಡಲಿ, ಕಡಿಕತ್ತಿ, ಕೊಚ್ಚುಗತ್ತಿ, ಮೂಲ ಶಿಲೆಗಳಲ್ಲದೆ ದೊಡ್ಡ ಚಕ್ಕೆಗಳು ಇದರಲ್ಲಿ ಅನೇಕ ಸಂಖ್ಯೆಯಲ್ಲಿದ್ದವು. ಇದರ ಮೇಲಿದ್ದ ಕಂದುಮಣ್ಣಿನ ಸಡಿಲವಾದ ಪದರದಲ್ಲಿ ಮಿಶ್ರ ಉಪಕರಣಗಳು, ಅಂದರೆ ಚಕ್ಕೆ, ಮೊನೆ, ಹೆರೆಚಕ್ಕೆ, ಕೈಗೊಡಲಿ, ಕಡಿಕತ್ತಿ, ಅಲಗುಗಳು ಮೊದಲಾದವು ಇದ್ದವು.


ಶ್ರೀಕೃಷ್ಣಪುರಂ ಹಳ್ಳಿಯ ಬಳಿ ಅಗೆದ ಗುಂಡಿಯಲ್ಲಿ ಜಂಬುಮಣ್ಣಿನ ಪದರದಲ್ಲಿ ಮಧ್ಯ ಹಳೆಶಿಲಾಯುಗ ಮತ್ತು ಅಂತ್ಯ ಅಶೂಲಿಯನ್ ಮಾದರಿಯ ಉಪಕರಣಗಳು ಮಿಶ್ರವಾಗಿದ್ದವು. ಈ ಪದರದ ಕೆಳಗೆ ಸವೆದು ಚೂರಾದ ಜಂಬುಕಲ್ಲಿನ ಪದರವಿದ್ದು ಇದರಲ್ಲಿ ಅಂತ್ಯ ಅಶೂಲಿಯನ್ ಮಾದರಿಯ ಉಪಕರಣಗಳಿದ್ದವು. ಕ್ವಾರ್ಟ್ಜೈಟ್ ಕಲ್ಲಿನಿಂದ ಮಾಡಿದ ಮೊನೆ, ಸಣ್ಣ ಚಕ್ಕೆ, ಹೆರೆಚಕ್ಕೆ, ಬಿಲ್ಲೆಯಾಕಾರದ ಉಪಕರಣಗಳು, ಮೂಲಶಿಲೆ, ಕೊಚ್ಚುಗತ್ತಿ, ಕಡಿಗತ್ತಿ, ಕೈಗೊಡಲಿಗಳು ಇಲ್ಲಿ ಸಿಕ್ಕ ಇತರ ಉಪಕರಣಗಳು.

"https://kn.wikipedia.org/w/index.php?title=ಗುಡಿಯಮ್&oldid=667535" ಇಂದ ಪಡೆಯಲ್ಪಟ್ಟಿದೆ