ಗುಜ್ಜೆ ಗೂಂಜಿನ ಚಟ್ನಿ
ಹಿಂದಿನ ಕಾಲದಲ್ಲಿ ಆಟಿ ತಿಂಗಳಿನಲ್ಲಿ ಬರುವ ಧಾರಕಾರ ಮಳೆಗೆ ತಿನ್ನಲು ಸಿಗುವುದು ಬಹಳ ಕಷ್ಟ. ಆಗ ಉಪ್ಪಲ್ಲಿ ಹಾಕಿಟ್ಟ ಹಲಸಿನ ಹಣ್ಣಿನ ಅಥವಾ ಕಾಯಿಯ ಗೂಂಜಿಯಿಂದ ಚಟ್ನಿ ತಯಾರಿಸುತ್ತಿದ್ದರು . ಗುಜ್ಜೆಗೂಂಜಿ ಚಟ್ನಿ ಅಂದರೆ ಹಲಸಿನ ಹಣ್ಣಿನ ಗೂಂಜಿಯಿಂದ ಮಾಡಿದ ಚಟ್ನಿ .
ಇತಿಹಾಸ
ಬದಲಾಯಿಸಿಹಿಂದಿನ ಕಾಲದಲ್ಲಿ ಆಟಿ ತಿಂಗಳಲ್ಲಿ ಬರಗಾಲ ಇರುತಿತ್ತು ಅದಕ್ಕೆ ಹಲಸಿನ ಹಣ್ಣು ತಿಂದು ಉಳಿದ ಗೂಂಜಿಯನ್ನು ಒಂದು ಭರಣಿಯಲ್ಲಿ ಕುದಿಸಿ ತಣಿಸಿದ ಉಪ್ಪುನೀರು ಹಾಕಿ ಅದರಲ್ಲಿ ಈ ಗೂಂಜಿಯನ್ನು ಹಾಕಿ ಶೇಖರಿಸಿ ಇಡುತ್ತಿದ್ದರು ಬೇಕಾದಾಗ ಅದನ್ನು ತೆಗೆದು ಚಟ್ನಿ ಮಾಡುತ್ತಿದ್ದರು[೧]
ಚಟ್ನಿ ಮಾಡಲು ಬೇಕಾದ ಸಾಮಾಗ್ರಿ
ಬದಲಾಯಿಸಿ- ಒಣ ಮೆಣಸಿನ ಕಾಯಿ
- ತೆಂಗಿನ ತುರಿ
- ಹುಣಸೆ ಹುಳಿ
- ಉಪ್ಪು
- ಶುಂಠಿ
- ಉಪ್ಪಲ್ಲಿ ಹಾಕಿದ ಗುಜ್ಜೆಯ ಗೂಂಜಿ
ಮಾಡುವ ವಿಧಾನ
ಬದಲಾಯಿಸಿಗುಜ್ಜೆ ಗೂಂಜಿಯನ್ನು ಉಪ್ಪು ನೀರಿನಿಂದ ತೆಗೆದು ಸ್ವಲ್ಪ ಹೊತ್ತು ಉಪ್ಪು ಬಿಡುವ ತನಕ ನೀರಿನಲ್ಲಿ ನೆನೆಸಿ ಆಮೇಲೆ ಸ್ವಲ್ಪ ತುಂಡು ಮಾಡಿ ಇಟ್ಟುಕೊಳ್ಳ ಬೇಕು ಆಮೇಲೆ ಒಲೆಯಲ್ಲಿ ಬಾಣಲೆ ಇಟ್ಟು ಸ್ವಲ್ಪ ಎಣ್ಣೆ ಹಾಕಿ ಒಣ ಮೆಣಸಿನ ಕಾಯಿ ಮತ್ತು ಸಾಸಿವೆಯನ್ನು ಹುರಿದು ಕೊಳ್ಳ ಬೇಕು ಅದಕ್ಕೆ ತೆಂಗಿನ ತುರಿ ಹುಣಸೆ ಹುಳಿ ಉಪ್ಪು ಶುಂಠಿ ಸೇರಿಸಿ ನುಣ್ಣಗೆ ರುಬ್ಬಿಕೊಂಡು ಕೊನೆಯಲ್ಲಿ ಸಣ್ಣಗೆ ತುಂಡು ಮಾಡಿಟ್ಟ ಗೂಂಜಿಯನ್ನು ಸೇರಿಸಿ ಸೌಟಲ್ಲಿ ಕಿವುಚಿಕೊಂಡರೆ ಗೂಂಜಿ ಚಟ್ನಿ ತಯಾರಾಗುವುದು ಒಣ ಮೆಣಸಿನಕಾಯಿಯ ಬದಲು ಹಸಿ ಮೆಣಸಿನ ಕಾಯಿಯನ್ನೂ ಉಪಯೋಗಿಸ ಬಹುದು.ಚಟ್ನಿಗೆ ರುಬ್ಬುವಾಗ ಸಾಸಿವೆ ಬೇಕಾದರೆ ಮಾತ್ರ ಉಪಯೋಗಿಸ ಬಹುದು .ಒಗ್ಗರಣೆಗೆ ಮಾತ್ರ ಉಪಯೋಗಿಸಿದರೆ ಸಾಕಾಗುತ್ತದೆ [೨]
ಉಲ್ಲೇಕೊ
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ