ಗುಂಡ್ಲು ಬಸದಿ,ಹಾಡವಳ್ಳಿ ಗುಂಡ್ಲು ಬಸದಿ ಕರ್ನಾಟಕದ ಜೈನ ಬಸದಿಗಳಲ್ಲಿ ಒಂದು.

ಸ್ಥಳ ಬದಲಾಯಿಸಿ

ಗಂಡ್ಲು ಬಸದಿ ಅಥವಾ ಗುಂಡಿನ ಬಸದಿಯು ಹಾಡುವಳ್ಳಿಯಲ್ಲಿರುವ ಬಸದಿ ಸಮುಚ್ಛಯದ ಕೊನೆಯಲ್ಲಿದೆ. ಇತ್ತೀಚೆಗೆ ಜೀರ್ಣೋದ್ದಾರವಾಗಿ ಅದರ ಕೊನೆಯ ಹಂತದಲ್ಲಿದೆ. ಹಿಂದೆ ಇದರಲ್ಲಿ ಶ್ರೀ ಪಾಶ್ರ್ವನಾಥ ಸ್ವಾಮಿಯ ಬಿಂಬವಿತ್ತು ಎಂದು ಹೇಳುತ್ತಾರೆ.

ವಿನ್ಯಾಸ ಬದಲಾಯಿಸಿ

ಬಸದಿಯು ಇಳಿಜಾರಾದ ಪಿರಮಿಡ್ ಆಕಾರವನ್ನು ಹೊಂದಿದೆ. ಇಲ್ಲಿಯ ಹಲವು ಬಸದಿಗಳು ಹಂಚಿನ ಮಾಡನ್ನು ಹೊಂದಿದ್ದರೆ, ಇದು ಮಾತ್ರ ಶಿಲಾಫಲಕಗಳ ಮಾಡನ್ನು ಹೊಂದಿದೆ. ಇದಕ್ಕೆ ಶಿಲಾಮಯವಾದ ಪ್ರಧಾನ ದ್ವಾರವಿದೆ. ಬಸದಿಯ ಸುತ್ತಲೂ ಮೂರು ಮೂರು ಪಟ್ಟಕಗಳನ್ನು ಹೊಂದಿರುವ ಹದಿನಾರು ಕಂಬಗಳಿವೆ. ಇವು ಇದರ ಬಾಹ್ಯ ಪ್ರದಕ್ಷಿಣಾ ಪಥವನ್ನು ರೂಪಿಸಿವೆ. ಇಲ್ಲಿಯವರ ಹೇಳಿಕೆಯಂತೆ ಈ ಬಸದಿಯ ಜೀರ್ಣೋದ್ದಾರದ ಸಮಯದಲ್ಲಿ ಹಿಂದಿನ ಕಂಬಗಳನ್ನೇ ಜೋಡಿಸಲಾಗಿದೆ.[೧]

ಹೊರಾಂಗಣ ವಿನ್ಯಾಸ ಬದಲಾಯಿಸಿ

ಬಸದಿಗೆ ಸುತ್ತಲೂ ಬಲವಾದ ಪ್ರಾಕಾರಗೋಡೆಯನ್ನು ಕೆಂಪುಕಲ್ಲಿನಿಂದ ನಿರ್ಮಿಸಲಾಗಿದೆ. ಹೀಗೆ ಬಸದಿಗೆ ಭದ್ರತೆ ಇದೆ. ಆದರೆ ಪರಿಸರದಲ್ಲಿ ಹುಲ್ಲು ಹೊದರುಗಳು ಬೆಳೆದುಕೊಂಡಿವೆ. ಬಸದಿಗೆ ಅತ್ಯಂತ ಹೊರಗಡೆಯಿಂದ ಪ್ರದಕ್ಷಿಣಾ ಪಥವನ್ನು ನಿರ್ಮಿಸಲಾಗಿದೆ. ಬಸದಿಯನ್ನು ಪ್ರವೇಶಿಸಿದೊಡನೆ ಸಿಗುವ ಪ್ರಾರ್ಥನಾ ಮಂಟಪದಲ್ಲಿ ಮೇಲ್ಗಡೆ ಅಧೋಮುಖ ಕಮಲದ ಆಕೃತಿಗಳಿವೆ. ಮೂಲನಾಯಕನ ಬಿಂಬ ಪ್ರತಿಷ್ಠಾಪನೆ ಬೇಕಾದ ಎತ್ತರದ ಪೀಠವನ್ನು ನಿರ್ಮಿಸಿಡಲಾಗಿದೆ.

ಜೀರ್ಣೋದ್ಧಾರ ಬದಲಾಯಿಸಿ

ರಾಜ್ಯ ಸರಕಾರದ ಪುರಾತತ್ವ ಇಲಾಖೆಯು ಇದನ್ನು ಜೀರ್ಣೋದ್ಧಾರಗೊಳಿಸ ಉಳಿಸಿಕೊಂಡಿದೆಯಂತೆ. ಇದರ ಪಂಚಕಲ್ಯಾಣ ಇತ್ಯಾದಿ ಕಾರ್ಯಕ್ರಮಗಳು ನಿಕಟ ಭವಿಷ್ಯದಲ್ಲೇ ನಡೆಯಲಿಕ್ಕಿವೆ. ಇದರ ಪೂರ್ಣ ಅಧ್ಯಯನ ಮಾಡಿದರೆ ಇಲ್ಲಿ ಜೀರ್ಣೋದ್ಧಾರಕ್ಕಿಂತ ಮೊದಲಿದ್ದ ಬಸದಿಯು ವಿಜಯನಗರ ಕಾಲಕ್ಕೆ ಸೇರಿದ್ದು ಎಂದು ಹೇಳಬಹುದು.

ಉಲ್ಲೇಖಗಳು ಬದಲಾಯಿಸಿ

  1. ಶೇಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳು. ಉಜಿರೆ: ಮಂಜೂಶ್ರೀ ಪ್ರಿಂಟರ್ಸ್. p. ೩೮೦.