ಗೀತಿಕ ಜಾಕರ್

ಭಾರತೀಯ ಕುಸ್ತಿಪಟು

ಗೀತಿಕಾ ಜಖರ್ (ಜನನ ೧೮ ಆಗಸ್ಟ್ ೧೯೮೫) ಒಬ್ಬ ಭಾರತೀಯ ಕುಸ್ತಿಪಟು. ಇವರು ಕ್ರೀಡಾಪಟುಗಳ ಕುಟುಂಬದಿಂದ ಬಂದವರು. ಭಾರತೀಯ ಕ್ರೀಡಾ ಇತಿಹಾಸದಲ್ಲಿ ೨೦೦೫ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಅತ್ಯುತ್ತಮ ಕುಸ್ತಿಪಟು ಎಂದು ತೀರ್ಮಾನಿಸಲ್ಪಟ್ಟ ಏಕೈಕ ಮಹಿಳಾ ಕುಸ್ತಿಪಟು. ಭಾರತ ಸರ್ಕಾರದಿಂದ ೨೦೦೬ರ ಸಾಲಿನ ಅರ್ಜುನ ಪ್ರಶಸ್ತಿಯನ್ನು ಪಡೆದ ಮೊದಲ ಮಹಿಳಾ ಕುಸ್ತಿಪಟು. ಅವರು ಹರಿಯಾಣ ಸರ್ಕಾರದಿಂದ ಭೀಮ್ ಪ್ರಶಸ್ತಿಗೆ ಸಹ ಭಾಜನರಾಗಿದ್ದಾರೆ. ಕ್ರೀಡಾ ಕ್ಷೇತ್ರದಲ್ಲಿ ಅವರು ಮಾಡಿದ ಅಸಾಧಾರಣ ಸಾಧನೆಗಳಿಗಾಗಿ, ಹರಿಯಾಣ ಸರ್ಕಾರವು ೨೦೦೮ರಲ್ಲಿ ಅವರನ್ನು ಉಪ ಪೊಲೀಸ್ ವರಿಷ್ಠಾಧಿಕಾರಿ ಹುದ್ದೆಗೆ ನೇಮಕ ಮಾಡಿದೆ.

ಗೀತಿಕ ಜಾಕರ್

ವೈಯಕ್ತಿಕ ಜೀವನ ಬದಲಾಯಿಸಿ

ಗೀತಿಕ ಜಖರ್ ೧೮ ಅಗಸ್ಟ್ ೧೯೮೫ರಲ್ಲಿ ಹರಿಯಾಣದಲ್ಲಿ ಜನಿಸಿದರು.ಇವರು ಕ್ರೀಡಾ ಹಿನ್ನೆಲೆಯಿರುವ ಪರಿವಾರದಿಂದ ಬಂದವರಾಗಿದ್ದಾರೆ. ಗೀತಿಕಾ ಅವರ ತಂದೆ ಸತ್ಯವೀರ್ ಸಿಂಗ್ ಜಖರ್ ಅವರು ಹರಿಯಾಣದ ಹಿಸಾರ್‌ನಲ್ಲಿ ಕ್ರೀಡಾ ಅಧಿಕಾರಿಯಾಗಿದ್ದಾರೆ. ಸ್ವತಃ ಕುಸ್ತಿಪಟುವಾಗಿದ್ದ, ಗೀತಿಕಾ ಅವರ ಅಜ್ಜ ಅಮರ್ ಚಂದ್ ಜಖರ್ ಅವರು ಕುಸ್ತಿ ಕ್ರೀಡೆಯಲ್ಲಿ ಮಾಡಿದ್ದ ಅನನ್ಯ ಸಾಧನೆಯೇ ಗೀತಿಕಾ ಅವರು ಕುಸ್ತಿ ಕ್ರೀಡೆಗೆ ಪಾದಾರ್ಪಣೆ ಮಾಡಲು ಪ್ರೇರಣೆಯಾಯಿತು. ತನ್ನ ೧೩ನೇ ವಯಸ್ಸಿನಲ್ಲಿ ಕುಸ್ತಿಯನ್ನು ಕಲಿಯಲು ಪ್ರಾರಂಭಿಸಿದ ಗೀತಿಕಾ, ೨೦೦ನೇ ಇಸವಿಯಲ್ಲಿ ನವದೆಹಲಿಯಲ್ಲಿ ನಡೆದ ಕುಸ್ತಿ ಸ್ಪರ್ದೆಯಲ್ಲಿ, ಸೋನಿಕಾ ಕಲಿರಾಮನ್(ಹೆಸರಾಂತ ಕುಸ್ತಿಪಟು ಚಾಂದಗಿ ರಾಮ್ ಅವರ ಮಗಳು)ರನ್ನು ಸೋಲಿಸಿ, ತನ್ನ ೧೫ನೇ ವಯಸ್ಸಿನಲ್ಲಿ ಭಾರತ್ ಕೇಸರಿ ಪ್ರಶಸ್ತಿಯನ್ನು ಗೆದ್ದರು. ಅಂದಿನಿಂದ ಸತತ ೮ ವರ್ಷಗಳ ಕಾಲ ಭಾರತ್ ಕೇಸರಿ ಪ್ರಶಸ್ತಿಯನ್ನು ತನ್ನಲ್ಲಿ ಉಳಿಸಿಕೊಂಡರು.

ಅವರು ಹರಿಯಾಣ ಲೋಕೋಪಯೋಗಿ ವಿಭಾಗದಲ್ಲಿ ಕಾರ್ಯನಿರ್ವಾಹಕ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಶ್ರೀ ಕಮಲ್ದೀಪ್ ಸಿಂಗ್ ರಾಣಾ ಅವರನ್ನು ವಿವಾಹವಾದರು.

ಕ್ರೀಡಾ ಜೀವನ ಮತ್ತು ಪ್ರಶಸ್ತಿ ಬದಲಾಯಿಸಿ

೨೦೦೨ನೇ ಇಸವಿಯಲ್ಲಿ ಅಮೇರಿಕಾದ ನ್ಯೂಯಾರ್ಕ್ ನಲ್ಲಿ ನಡೆದ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದರು.ಇಲ್ಲಿಂದ ಇವರ ಅಂತರಾಸ್ಟ್ರೀಯ ಕ್ರೀಡಾ ಜೀವನ ಆರಂಭವಾಯಿತು.ಈ ಸ್ಪರ್ದೆಯಲ್ಲಿ ಇವರು ಕ್ವಾಟರ್ ಫ಼ೈನಲ್ ವರೆಗೆ ತಲುಪಿದರು.ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್‌ನ ೬೩ ಕೆಜಿ ವಿಭಾಗದ ಕುಸ್ತಿಯಲ್ಲಿ ಇವರು ಚಿನ್ನದ ಪದಕ ಗೆದ್ದಿರುವರು.ಭಾರತ್ ಕೇಸರಿ ಎಂಬ ಬಿರುದು ಕೂಡ ಇವರ ಸಾಧನೆಗೆ ಲಭಿಸಿದೆ. [೧]೨೦೦೩ರಲ್ಲಿ ಲಂಡನಿನ ಕೆನಡದಲ್ಲಿ ನಡೆದ ಕೋಮನ್ ವೆಲ್ತ್ ಸ್ಪರ್ದೆಯಲ್ಲಿ ಚಿನ್ನದ ಪದಕ ಗೆದ್ದರು.ಲಿಥುವಾನಿಯ ದಲ್ಲಿ ನಡೆದ ವರ್ಲ್ದ್ ಚಾಂಪಿಯನ್ ಶಿಪ್ ನಲ್ಲಿ ಬೆಳ್ಳಿ ಪದಕವನ್ನು ಗೆದ್ದರು.೨೦೦೫ರಲ್ಲಿ ನಡೆದ ಕೋಮನ್ ವೆಲ್ತ್ ಸ್ಪರ್ದೆಯಲ್ಲಿ ಚಿನ್ನದ ಪದಕ ಗೆದ್ದರು.ಕೋಮನ್ ವೆಲ್ತ್ ನ ಉತ್ತಮ ಕುಸ್ತಿಪಟು ಎಂಬ ಬಿರುದು ದೊರೆತ ಭಾರತದ ಮೊದಲ ಮಹಿಳೆ ಇವರಾಗಿದ್ದರೆ.೨೦೦೯ರಲ್ಲಿ ಇವರಿಗೆ ಕಲ್ಪನಾಚಾವ್ಲ ಎಕ್ಸಲೆನ್ಸ್ ಪ್ರಸಸ್ತಿ ದೊರೆತಿದೆ.೨೦೧೨ರಲ್ಲಿ ನಡೆದ ಸೀನಿಯರ್ ನೇಶನಲ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ ತನ್ನದಾಗಿಸಿದ್ದಾರೆ.ಹಲವು ಏಶಿಯನ್ ಚಾಂಪಿಯನ್ ಶಿಪ್ ನಲ್ಲಿ ಇವರು ಭಾಗವಹಿಸಿದ್ದು ೨೦೧೩ರಲ್ಲಿ ದೆಹಲಿಯಲ್ಲಿ ನಡೆದ ಏಶಿಯನ್ ಚಾಂಪಿಯನ್ ಶಿಪ್ ನಲ್ಲಿ ತಾಮ್ರದ ಪದಕ ಗೆದ್ದರು.೨೦೧೪ರಲ್ಲಿ ನಡೆದ ಸ್ಕಾಟ್ಲೆಂಡ್ ನ ಗ್ಲಾಸ್ಗೌ ನಲ್ಲಿ ನಡೆದ ಕೋಮನ್ ವೆಲ್ತ್ ಗೇಮ್ಸ್ ನಲ್ಲಿ ಹಾಗು ಸೌತ್ ಕೊರಿಯಾದಲ್ಲಿ ನಡೆದ ಎಶಿಯನ್ ಗೇಮ್ಸ್ ನಲ್ಲಿ ಕ್ರಮವಾಗಿ ಬೆಳ್ಳಿ ಪದಕ ಮತ್ತು ತಾಮ್ರದ ಪದಕಗಳನ್ನು ತನ್ನದಾಗಿಸಿದ್ದಾರೆ. [೨]

ಉಲ್ಲೇಖ ಬದಲಾಯಿಸಿ

  1. http://www.haryanahammers.com/team-2/geetika-jakhar/
  2. "ಆರ್ಕೈವ್ ನಕಲು". Archived from the original on 2016-06-04. Retrieved 2019-07-28.