ಗೀತಾಂಜಲಿ ರಾವ್ (ಜನನ: 2005) ಒಬ್ಬ ಅಮೇರಿಕನ್ ಸಂಶೋಧಕಿ, ಲೇಖಕಿ ಮತ್ತು STEM ಪ್ರವರ್ತಕಿ. ಅವರು 2017 ರಲ್ಲಿ "ಡಿಸ್ಕವರಿ ಎಜುಕೇಶನ್‌ 3 ಎಂ ಯಂಗ್ ಸೈಂಟಿಸ್ಟ್ ಚಾಲೆಂಜ್" ಗೆದ್ದರು. ಅವರ ಆವಿಷ್ಕಾರಗಳಿಗಾಗಿ ಫೋರ್ಬ್ಸ್ "30 U 30" ಎಂದು ಗುರುತಿಸಲ್ಪಟ್ಟರು.[] ತನ್ನ ಆವಿಷ್ಕಾರಗಳಿಗಾಗಿ ಮತ್ತು ಪ್ರಪಂಚದಾದ್ಯಂತ ಅವರು ನಡೆಸುವ ನಾವೀನ್ಯತೆ ಕಾರ್ಯಾಗಾರಗಳಿಗಾಗಿ 2020 ರಲ್ಲಿ ಟೈಮ್ ಟಾಪ್ ಯಂಗ್ ಇನ್ನೋವೇಟರ್ ಎಂದು ಹೆಸರಿಸಲ್ಪಟ್ಟಳು.[] ಡಿಸೆಂಬರ್ 4, 2020 ರಂದು ಟೈಮ್ಸ್ ಮುಖಪುಟದಲ್ಲಿ, ಗೀತಾಂಜಲಿ ರಾವ್ ಅವರನ್ನು "ಕಿಡ್ ಆಫ್ ದ ಇಯರ್" (ವರ್ಷದ ಮಗು) ಎಂದು ಹೆಸರಿಸಿದೆ.[]

ಆರಂಭಿಕ ಜೀವನ

ಬದಲಾಯಿಸಿ

ಗೀತಾಂಜಲಿ ಕೊಲೊರಾಡೋದ ಲೋನ್ ಟ್ರೀ ಮೂಲದವರು. ಅವರು STEM ಸ್ಕೂಲ್ ಹೈಲ್ಯಾಂಡ್ಸ್ ರಾಂಚ್ ನ ವಿದ್ಯಾರ್ಥಿನಿ. ಮುಂದೆ ಅವರು ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಜೆನೆಟಿಕ್ಸ್ ಮತ್ತು ಸಾಂಕ್ರಾಮಿಕ ರೋಗಶಾಸ್ತ್ರವನ್ನು ಅಧ್ಯಯನ ಮಾಡಲು ಬಯಸಿದ್ದಾರೆ.[] ಅವರು ಲಿಂಗ ವೇತನದ ಅಂತರದ ಬಗ್ಗೆ ಮಾತನಾಡಿ ಪ್ರಸಿದ್ಧಿಗಳಿಸಿದ್ದಾರೆ.[]

ವೃತ್ತಿ

ಬದಲಾಯಿಸಿ

ಸುದ್ದಿಗಳನ್ನು ನೋಡುವಾಗ ಗೀತಾಂಜಲಿ ಫ್ಲಿಂಟ್ ನೀರಿನ ಬಿಕ್ಕಟ್ಟಿನ ಬಗ್ಗೆ ಕೇಳಿದರು.[] ನೀರಿನಲ್ಲಿ ಸೀಸದ ಅಂಶವನ್ನು ಅಳೆಯುವ ವಿಧಾನಗಳಲ್ಲಿ ಅವರು ಆಸಕ್ತಿ ಹೊಂದಿದ್ದರು. ಬ್ಲೂಟೂತ್ ಮೂಲಕ ಮಾಹಿತಿಯನ್ನು ಕಳುಹಿಸಬಲ್ಲ, ಇಂಗಾಲದ ನ್ಯಾನೊಟ್ಯೂಬ್‌ಗಳ ಆಧಾರದ ಮೇಲೆ ಅವರು ಒಂದು ಸಾಧನವನ್ನು ಅಭಿವೃದ್ಧಿಪಡಿಸಿದರು.[] ರಾವ್ 3M ನಲ್ಲಿ ಸಂಶೋಧನಾ ವಿಜ್ಞಾನಿ ಜೊತೆ ಸಹಕರಿಸಿದರು.[] 2017 ರಲ್ಲಿ ರಾವ್ ಡಿಸ್ಕವರಿ ಎಜುಕೇಶನ್ 3 ಎಂ ಯಂಗ್ ಸೈಂಟಿಸ್ಟ್ ಚಾಲೆಂಜ್ ಅನ್ನು ಗೆದ್ದರು ಮತ್ತು ಟೆಥಿಸ್ ಅವರ ಆವಿಷ್ಕಾರಕ್ಕಾಗಿ $25,000 ನೀಡಲಾಯಿತು.[] ಟೆಥಿಸ್ 9-ವೋಲ್ಟ್ ಬ್ಯಾಟರಿ, ಲೀಡ್ ಸೆನ್ಸಿಂಗ್ ಯುನಿಟ್, ಬ್ಲೂಟೂತ್ ವಿಸ್ತರಣೆ ಮತ್ತು ಪ್ರೊಸೆಸರ್ ಅನ್ನು ಒಳಗೊಂಡಿದೆ. ಇದು ಇಂಗಾಲದ ನ್ಯಾನೊಟ್ಯೂಬ್‌ಗಳನ್ನು ಬಳಸುತ್ತದೆ.[೧೦] ಇದರ ಪ್ರತಿರೋಧವು ಸೀಸದ ಉಪಸ್ಥಿತಿಯಲ್ಲಿ ಬದಲಾಗುತ್ತದೆ. ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವೆಬ್‌ಸೈಟ್ ಓದುವಾಗ ಅವರು ಕಾರ್ಬನ್ ನ್ಯಾನೊಟ್ಯೂಬ್‌ಗಳ ಬಗ್ಗೆ ಕಲಿತರು. ಟೆಥಿಸ್‌ನ ಸಾಮರ್ಥ್ಯವನ್ನು ಕಾರ್ಯಸಾಧ್ಯವಾದ ವಿಧಾನವಾಗಿ ತನಿಖೆ ಮಾಡಲು ವಿಜ್ಞಾನಿಗಳು ಮತ್ತು ವೈದ್ಯಕೀಯ ವೃತ್ತಿಪರರೊಂದಿಗೆ ಕೆಲಸ ಮಾಡಲು ಅವರು ಯೋಜಿಸಿದ್ದಾರೆ. ಅವರು 2018 ರ ಮೇಕರ್ಸ್ ಸಮ್ಮೇಳನದಲ್ಲಿ ತಮ್ಮ ಆಲೋಚನೆಯನ್ನು ಮಂಡಿಸಿದರು ಮತ್ತು ಇನ್ನೂ $ 25,000 ಗಳಿಸಿದರು. ಜನವರಿ 2019 ರ ಹೊತ್ತಿಗೆ, ಅವರು ಡೆನ್ವರ್ ನೀರಿನ ಸೌಲಭ್ಯದೊಂದಿಗೆ ಕೆಲಸ ಮಾಡುತ್ತಿದ್ದರು ಮತ್ತು ಮುಂದಿನ ಎರಡು ವರ್ಷಗಳಲ್ಲಿ ಮೂಲಮಾದರಿಯನ್ನು ಹೊಂದುವ ಭರವಸೆ ಹೊಂದಿದ್ದಾರೆ.[೧೧]

ಅವರು 3 ಬಾರಿ ಟೆಡೆಕ್ಸ್ ಸ್ಪೀಕರ್.[೧೨] ಸೆಪ್ಟೆಂಬರ್ 2018 ರಲ್ಲಿ ರಾವ್ ಅವರಿಗೆ ಯುನೈಟೆಡ್ ಸ್ಟೇಟ್ಸ್ ಎನ್ವಿರಾನ್ಮೆಂಟಲ್ ಪ್ರೊಟೆಕ್ಷನ್ ಏಜೆನ್ಸಿ ಅಧ್ಯಕ್ಷರ ಪರಿಸರ ಯುವ ಪ್ರಶಸ್ತಿ ನೀಡಲಾಯಿತು.[೧೩]

ಪ್ರಿಸ್ಕ್ರಿಪ್ಷನ್ ಒಪಿಯಾಡ್ ಚಟವನ್ನು ಆರಂಭಿಕ ರೋಗನಿರ್ಣಯಕ್ಕಾಗಿ ಆನುವಂಶಿಕ ಎಂಜಿನಿಯರಿಂಗ್‌ನಲ್ಲಿನ ಪ್ರಗತಿಯ ಆಧಾರದ ಮೇಲೆ ರೋಗನಿರ್ಣಯ ಸಾಧನವನ್ನು ಅಭಿವೃದ್ಧಿಪಡಿಸಿದ್ದಕ್ಕಾಗಿ ಗೀತಾಂಜಲಿಗೆ ಟಿಸಿಎಸ್ ಇಗ್ನೈಟ್ ಇನ್ನೋವೇಶನ್ ಸ್ಟೂಡೆಂಟ್ ಚಾಲೆಂಜ್ಗಾಗಿ ಮೇ 2019 ರಲ್ಲಿ ಉನ್ನತ ಹೆಲ್ತ್ ಪಿಲ್ಲರ್ ಪ್ರಶಸ್ತಿಯನ್ನು ನೀಡಲಾಯಿತು.[೧೪]

ಅವರು ನಿಪುಣ ಪಿಯಾನೋ ವಾದಕಿಯೂ ಹೌದು.

ಉಲ್ಲೇಖಗಳು

ಬದಲಾಯಿಸಿ
  1. https://www.forbes.com/profile/gitanjali-rao/?sh=49c6051a4ffe
  2. "ಆರ್ಕೈವ್ ನಕಲು". Archived from the original on 2021-07-24. Retrieved 2020-12-05.
  3. https://kannada.asianetnews.com/india-news/gitanjali-rao-is-time-kid-of-the-year-2020-snr-qkt583
  4. https://www.americanbazaaronline.com/2017/10/19/indian-american-girl-gitanjali-rao-is-the-winner-of-2017-discovery-education-3m-young-scientist-challenge-429746/
  5. https://www.youtube.com/watch?v=42GXXLPDvcM
  6. https://www.rookiemag.com/2018/01/finding-solutions-real-problems-interview-gitanjali-rao/
  7. https://www.youtube.com/watch?v=m4WM3arrBgo
  8. https://www.youngscientistlab.com/node/4436
  9. https://www.bbc.co.uk/programmes/p0610bhj
  10. https://www.youtube.com/watch?v=LuvEJi0t5nY
  11. https://www.cpr.org/2019/01/28/13-year-old-gitanjali-raos-lead-detecting-invention-lands-her-on-forbes-30-under-30/
  12. https://www.youtube.com/watch?v=gVgaJN3GI6U
  13. "ಆರ್ಕೈವ್ ನಕಲು". Archived from the original on 2020-12-04. Retrieved 2020-12-05.
  14. "ಆರ್ಕೈವ್ ನಕಲು". Archived from the original on 2019-08-11. Retrieved 2020-12-05.