ಗಿಳಿ ಜ್ಯೋತಿಷ್ಯ
ಭಾರತೀಯ ರಾಜ್ಯಗಳಾದ ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ಮತ್ತು ಭಾರತೀಯ ಸಿಂಗಾಪುರದವರು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡುವ ಜ್ಯೋತಿಷ್ಯ ಶಾಸ್ತ್ರದ ಒಂದು ವಿಧ ಗಿಳಿ ಜ್ಯೋತಿಷ್ಯ ಅಥವಾ ಗಿಳಿ ಭವಿಷ್ಯ ಹೇಳುವುದಾಗಿದೆ. ಇದು ಮುಖ್ಯವಾಗಿ ಗುಲಾಬಿ-ಉಂಗುರ ಮತ್ತು ಅಲೆಕ್ಸಾಂಡ್ರೈನ್ ಪ್ಯಾರಾಕೀಟ್‌ಗಳನ್ನು ಬಳಸುವುದನ್ನು ಒಳಗೊಂಡಿರುತ್ತದೆ, ಇವುಗಳನ್ನು ಟ್ಯಾರೋ ತರಹದ ಫಾರ್ಚೂನ್ ಕಾರ್ಡ್‌ಗಳನ್ನು ತೆಗೆದುಕೊಳ್ಳಲು ತರಬೇತಿ ನೀಡಲಾಗುತ್ತದೆ.[೨][೩]
ಅದೃಷ್ಟ ಹೇಳುವ ಪ್ರಕ್ರಿಯೆ
ಬದಲಾಯಿಸಿಗಿಳಿ ಜ್ಯೋತಿಷಿ/ಭವಿಷ್ಯ ಹೇಳುವವರು ಸಾಮಾನ್ಯವಾಗಿ ಜನರನ್ನು ಕರೆಯಲು ಮರದ ಕೆಳಗೆ ಅಥವಾ ಜನರು ಸೇರುವ ರಸ್ತೆಯ ಪಕ್ಕದಲ್ಲಿ ಕುಳಿತುಕೊಳ್ಳುತ್ತಾರೆ. ಅವರು ಒಂದು ಅಥವಾ ಎರಡು ತರಬೇತಿ ಪಡೆದ ಗಿಳಿಗಳಿರುವ ಪಂಜರವನ್ನು ಹೊಂದಿರುತ್ತಾರೆ. ಟ್ಯಾರೋ ತರಹದ ಕಾರ್ಡುಗಳು ಅವನ ಮುಂದೆ ಹರಡಿರುತ್ತವೆ ಅಥವಾ ಜೋಡಿಸಲ್ಪಟ್ಟಿರುತ್ತವೆ. ಅವುಗಳು 27 ಮಂದಿ ಭಾರತೀಯ ಬ್ರಹ್ಮಾಂಡವನ್ನು ಪ್ರತಿನಿಧಿಸುತ್ತದೆ. ಪ್ರತಿ ಕಾರ್ಡ್‌ನಲ್ಲಿ ಹಿಂದೂ ದೇವತೆಯ ಚಿತ್ರವಿರುತ್ತದೆ ಮತ್ತು ಕೆಲವು ಕಾರ್ಡ್‌ಗಳು ಬುದ್ಧ ಅಥವಾ ಕನ್ಯೆ ಮರಿಯಳ ಚಿತ್ರ ಶಿಶು ಯೇಸುವಿನೊಂದಿಗೆ ಚಿತ್ರಗಳೊಂದಿಗೆ ಒಳಗೊಂಡಿರುತ್ತವೆ. ಭವಿಷ್ಯ ಹೇಳುವವನ ಮುಂದೆ ಪೋಷಕ ಬಂದು ಕುಳಿತಾಗ, ನಂತರ ಅವರು ಪಂಜರವನ್ನು ತೆರೆದು ಗಿಳಿಯನ್ನು ಹೊರಗೆ ಬಿಡುತ್ತಾರೆ. ಪೋಷಕನಿಗೆ ಕಾರ್ಡ್ ತೆಗೆದುಕೊಡಲು ಅವನು ಗಿಳಿಗೆ ಸೂಚಿಸುತ್ತಾನೆ. ಗಿಳಿ ಕಾರ್ಡ್‌ಗಳತ್ತ ಸಾಗುತ್ತದೆ, ಜೋಡಿಸಲ್ಪಟ್ಟಿರುವ ಅಥವಾ ಹರಡಿರುವ ಕಾರ್ಡ್ ಗಳಿಂದ ಒಂದನ್ನು ತನ್ನ ಕೊಕ್ಕಿನಿಂದ ಆರಿಸಿ ಜ್ಯೋತಿಷಿಗೆ ನೀಡುತ್ತದೆ. ನಂತರ ಅದು ತನ್ನ ಪಂಜರದೊಳಗೆ ಹಿಂತಿರುಗುತ್ತದೆ. ಜ್ಯೋತಿಷಿಯು ಕಾರ್ಡ್ ಅನ್ನು ತೆರೆಯುತ್ತಾನೆ ಮತ್ತು ಚಿತ್ರದ ಆಧಾರದ ಮೇಲೆ ಪೋಷಕನ ಭವಿಷ್ಯವನ್ನು ಹೇಳುತ್ತಾನೆ.[೨][೩]
ಪೋಷಕರ ಕೊರತೆಯಿಂದಾಗಿ ತಮಿಳುನಾಡಿನಲ್ಲಿ ಗಿಳಿ ಜ್ಯೋತಿಶ್ಶಾಸ್ತ್ರದ ಅಭ್ಯಾಸ ಕ್ಷೀಣಿಸುತ್ತಿದೆ.[೨] ಸಿಂಗಾಪುರದಲ್ಲಿ ಇದು ಸೆರಾಂಗೂನ್ ರಸ್ತೆಯ ಉದ್ದಕ್ಕೂ ಇರುವ ಒಂದು ಪ್ರವಾಸಿ ಆಕರ್ಷಣೆಯಾಗಿದೆ..[೪] ಪಾಕಿಸ್ತಾನದಲ್ಲಿ ಇದರ ಒಂದು ರೂಪಾಂತರವನ್ನು ಅಭ್ಯಾಸ ಮಾಡಲಾಗುತ್ತದೆ.[೫]
ಚಿತ್ರಗಳು
ಬದಲಾಯಿಸಿ-
ಮರದ ಕೆಳಗೆ ಕುಳಿತಿರುವ ಗಿಳಿ ಜ್ಯೋತಿಷಿ.
-
ಒಬ್ಬಳು ಪೋಷಕಳು ಅವಳ ಅದೃಷ್ಟವನ್ನು ಹುಡುಕುತ್ತಿರುವುದು.
-
ಗಿಳಿ ಕಾರ್ಡ್ ನ್ನು ಹುಡುಕುತ್ತಿರುವುದು
-
ಮಣಿ ಗಿಳಿ
ಉಲ್ಲೇಖಗಳು
ಬದಲಾಯಿಸಿ- ↑ "Hindus and their Prayers". Wesleyan Juvenile Offering. XXII. London: Wesleyan Mission House: 65. ಮೇ 1865. Retrieved 1 ಡಿಸೆಂಬರ್ 2015.
- ↑ ೨.೦ ೨.೧ ೨.೨ "Art of parrot predictions on verge of extinction". Deccan Chronicle. 17 ಅಕ್ಟೋಬರ್ 2011. Archived from the original on 6 ಮೇ 2012. Retrieved 23 ಡಿಸೆಂಬರ್ 2011.
- ↑ ೩.೦ ೩.೧ Naidu Ratnala, Thulaja. "Parrot astrologers". National Library Board Singapore. Archived from the original on 1 ಜನವರಿ 2012. Retrieved 23 ಡಿಸೆಂಬರ್ 2011.
- ↑ Hatton, Michael J (1999). Community-based tourism in the Asia-Pacific. School of Media Studies at Humber College. p. 60. ISBN 978-0-9682334-2-9.
- ↑ "Fortune tellers thrive on public hope". Daily Times. 11 ಅಕ್ಟೋಬರ್ 2004. Archived from the original on 25 ಮೇ 2006. Retrieved 23 ಡಿಸೆಂಬರ್ 2011.