ಆವರ್ತಿಸುತ್ತಿರುವ ಎರಡು ತಾಳುಗಳ (ಷ್ಯಾಫ್ಟ್ಸ್) ಕೇಂದ್ರದೂರ ಅತಿ ಹೆಚ್ಚಾಗಿಲ್ಲದಿರುವಾಗ ಅವುಗಳ ನಡುವೆ ಚಲನೆಯನ್ನು ವರ್ಗಾಯಿಸಲು ಬಳಸುವ ಒಂದು ಯಾಂತ್ರಿಕಾಂಶ. ಅಂದರೆ ತಾಳುಗಳು ಪರಸ್ಪರ ಸಮೀಪವಾಗಿರುವಲ್ಲಿ ಮಾತ್ರ ಗಿಯರಿನ ಉಪಯೋಗ. ಗಿಯರ್ ಎಂದರೆ ಸ್ಥೂಲವಾಗಿ ಒಂದು ದಂತಚಕ್ರ. ಪಟ್ಟಿ ಚಾಲನೆ (ಬೆಲ್ಟ್ ಡ್ರೈವ್), ರಜ್ಜು ಚಾಲನೆ ಮತ್ತು ಘರ್ಷಣ ಚಕ್ರ-ಇವುಗಳಿಗೆ ಹೋಲಿಸಿದಂತೆ ಗಿಯರ್ ಚಾಲನೆಯಲ್ಲಿ ಜಾರುವಿಕೆ ಅಥವಾ ಸರ್ಪಣಕ್ರಿಯೆಯಿಲ್ಲದೆ ಶಕ್ತಿ ಸಾಗಣೆ ಧನಾತ್ಮಕವೂ ವೇಗಾನುಪಾತ ಖಚಿತವೂ ಆಗಿರುತ್ತದೆ. ತಾಳುಗಳು ಕೊಂಚ ದೂರವಾಗಿರುವಾಗ ಇಂಥದೇ ಧನಾತ್ಮಕ ಚಾಲನೆ ಬೇಕಾದರೆ ಸರಪಣಿಯನ್ನು ಉಪಯೋಗಿಸಬೇಕಾಗುತ್ತದೆ. ತಾಳುಗಳು ಪರಸ್ಪರ ಸಮಾಂತರವಾಗಿರುವುದು, ಛೇದಿಸುವಂತಿರುವುದು, ಅಥವಾ ಸಮಾಂತರವೂ ಅಲ್ಲದೆ ಛೇದಕವೂ ಅಲ್ಲದೆ ಇರುವುದು ಇಂಥ ಸಂದರ್ಭಗಳಿಗೆ ಅನುಗುಣವಾಗಿ ಗಿಯರುಗಳ ರೂಪ ವ್ಯತ್ಯಾಸವಾಗುತ್ತದೆ. ಅನುಕ್ರಮವಾಗಿ ಇವನ್ನು ಸ್ಪರ್ ಗಿಯರ್, ಬೆವೆಲ್ ಗಿಯರ್ ಮತ್ತು ವರ್ಮ್ ಗಿಯರುಗಳಿಂದ ಉದಾಹರಿಸಬಹುದು. ಕೂಡಿಕೆಗೊಂಡ ಎರಡು ಗಿಯರುಗಳಿಂದ ವರ್ಗಾವಣೆಗೊಳ್ಳುವ ಚಲನೆ ಶುದ್ಧಗತೀಯವಾಗಿ (ಕೈನ್ಮೆಟಿಕಲಿ) ಗಿಯರ್ ಸೂತ್ರಾಂತರ ಮೈಗಳಿಗೆ (ಗಿಯರ್ ಪಿಚ್ ಸರ್ಫೇಸಸ್) ಸರ್ವಸಮವಾಗಿರುವ ಉರುಳುವ ಮೈಗಳ ಚಲನೆಗೆ ಸಮಾನವಾಗಿದ್ದರೂ ಒಂದು ಗಿಯರ್ ಹಲ್ಲಿನ ಮೇಲೆ ಇನ್ನೊಂದು ಗಿಯರ್ ದಂತ ಕ್ರಿಯೆ ಸಾಮಾನ್ಯವಾಗಿ ಉರುಳು ಹಾಗೂ ಜಾರು ಚಲನೆಗಳ ಒಂದು ಸಂಯೋಜನೆ.


ಎರಡು ಸಾದಾ ಚಕ್ರಗಳಲ್ಲಿ ಒಂದರ ಅಂಚು ಮತ್ತೊಂದಕ್ಕೆ ಒತ್ತಿ ಹಿಡಿದಂತೆ ಇರುವಾಗ ಒಂದನ್ನು ತಿರುಗಿಸಿದಾಗ ಮತ್ತೊಂದು ತಿರುಗುವುದಷ್ಟೆ. ಶಕ್ತಿಯ ಅಥವಾ ಚಾಲನೆಯ ಸಾಗಣೆಗೆ ಇಲ್ಲಿ ಎರಡು ಮೈಗಳ ನಡುವಣ ಘರ್ಷಣೆ ಮಾತ್ರ ಕಾರಣ. ಚಕ್ರಗಳ ಅಂಚಿನ ಮೇಲ್ಮೈಯಲ್ಲಿ ದಂತಗಳನ್ನು ಎಂದರೆ ಹಲ್ಲುಗಳನ್ನು ಕೊರೆದರೆ ಅವು ಗಿಯರ್ ಚಕ್ರಗಳಾಗುತ್ತವೆ. ದಂತಗಳು ಕೊಂಚ ಭಾಗ ಈ ಸಾದಾ ಚಕ್ರದ ಅಂಚಿನ ಮೇಲುಗಡೆಗೂ ಉಳಿದ ಭಾಗ ಕೆಳಗಡೆಗೂ ಇರುತ್ತವೆ. ದಂತದ ನಡುವಣ ಹಿಡಿತದಿಂದಾಗಿ ಶಕ್ತಿಯ ಸಾಗಣೆ ಹೆಚ್ಚು ಭದ್ರವಾಗುತ್ತದೆ. ಗಿಯರ್ ಚಕ್ರಕ್ಕೆ ಸಂಬಂಧಿಸಿದಂತೆ ಈ ಕಲ್ಪಿತ ಸಾದಾ ಚಕ್ರವನ್ನು ಪ್ರತಿನಿಧಿಸುವ ವೃತ್ತಕ್ಕೆ ಸೂತ್ರಾಂತರ ವೃತ್ತ (ಪಿಚ್ ಸರ್ಕಲ್) ಎಂದು ಹೆಸರು. ಗಿಯರ್ ಚಕ್ರದ ಈ ಕಲ್ಪಿತ ಸೂತ್ರಾಂತರ ವೃತ್ತ ಅಡೆಂಡಂ ವೃತ್ತ ಎಂಬ ಹೆಸರಿನ ದಂತಗಳ ಹೊರ ವೃತ್ತಕ್ಕೂ ಇರುವ ಅರೀಯ (ರೇಡಿಯಲ್) ಅಂತರಕ್ಕೆ ಅಡೆಂಡಂ ಎಂದು ಹೆಸರು. ಸ್ಪರ್ ಗಿಯರುಗಳಲ್ಲಿ (ದುಂಡು ಚಕ್ರದ ಮೇಲೆ ದಂಶ ಕೊರೆದಿರುವಂಥವು) ಅಡೆಂಡಂ ಒಂದೇ ಅಳತೆಯದಾಗಿದ್ದರೆ, ಬೆವೆಲ್ ಗಿಯರುಗಳಲ್ಲಿ (ಶಂಕು ಭಾಗದ ಮೇಲೆ ದಂತ ಕೊರೆದಿರುವಂಥವು) ಚಕ್ರದ ಒಳ ಮುಖದಿಂದ ಹೊರಮುಖದ ವರೆಗೆ ಅಡೆಂಡಂ ಅಳತೆ ಹೆಚ್ಚುತ್ತ ಹೋಗುತ್ತದೆ. ಒಳಮುಖದ ಅಡೆಂಡಂ ವೃತ್ತದ ಮತ್ತು ಹೊರಮುಖದ ಅಡೆಂಡಂ ವೃತ್ತದ ವ್ಯಾಸಗಳ ವ್ಯತ್ಯಾಸದ ಅರ್ಧದಷ್ಟಕ್ಕೆ ಅಡೆಂಡಂ ಏರಿಕೆ ಎಂದು ಹೆಸರು. ಸೂತ್ರಾಂತರ ಮೈಯ ಶಂಕುವಿಗೂ ಹೊರ ಅಥವಾ ಅಡೆಂಡಂ ಮೈಯ ಶಂಕುವಿಗೂ ಇರುವ ಕೋನಾಂತರಕ್ಕೆ ಅಡೆಂಡಂ ಕೋನ ಎಂದು ಹೆಸರು. ಬೆವೆಲ್ ಗಿಯರ್ ಚಕ್ರದ ಅಗಲ ಜಾಸ್ತಿಯಾದಂತೆ ಅಡೆಂಡಮಿನ ಅಳತೆ ಹೆಚ್ಚುತ್ತ ಹೋದರೂ ಅಡೆಂಡಂ ಕೋನ ಒಂದೇ ಗಾತ್ರದ್ದಾಗಿರುತ್ತದೆ. ಅಡೆಂಡಂ ಸಾಮಾನ್ಯವಾಗಿ ಹಲ್ಲಿನ ಒಟ್ಟು ಎತ್ತರದ ಅರ್ಧದಷ್ಟೇ ಇರುವುದಾದರೂ ದಂತಕ್ರಿಯೆಯನ್ನು ನಿರ್ದಿಷ್ಟ ರೀತಿಯಲ್ಲಿ ಮಾರ್ಪಡಿಸಲೋಸುಗ ಅದನ್ನು ಕಡಿಮೆ ಅಥವಾ ಹೆಚ್ಚು ಎತ್ತರದ್ದನ್ನಾಗಿ ಮಾಡಿರುವುದೂ ಉಂಟು. ಇಂಥವಕ್ಕೆ ಕುಬ್ಜ ಅಡೆಂಡಂ ಮತ್ತು ನೀಳ ಅಡೆಂಡಂ ಎಂದೂ ಹೆಸರುಂಟು.


ಗಿಯರಿನ ಭಾಗಗಳ ನಾಮಾಂಕಿತಗಳನ್ನು (ಸರಳತೆಗಾಗಿ ಸ್ಪರ್ ಮಾದರಿಯನ್ನು ಉದಾಹರಿಸಿದೆ) ಚಿತ್ರಗಳು (1) ಮತ್ತು (2) ತಿಳಿಯಬಹುದು. ಕೂಡಿಕೆಗೊಂಡಿರುವ ಎರಡು ಗಿಯರುಗಳಲ್ಲಿ ಚಿಕ್ಕವನ್ನು ಪಿನಿಯನ್ ಎನ್ನುತ್ತಾರೆ. ಸೂತ್ರಾಂತರ ಮೈಯ ವೃತ್ತ ಸೂತ್ರಾಂತರ ವೃತ್ತವಾದರೆ ಇಲ್ಲಿಂದ ದಂತದ ತುದಿಯವರೆಗಿನ ಅರೀಯ ದೂರ ಅಡೆಂಡಂ. ಇಲ್ಲಿಂದಲೇ ಕೂಡಿಕೆಗೊಂಡ ಗಿಯರಿನ ದಂತಾಂತರ (ಟೂತ್ ಸ್ಪೇಸ್) ತಳದವರೆಗಿನ ಅರೀಯ ಆಳ ಅಡೆಂಡಂ. ದಂತದ ತುದಿಗೂ ದಂತಾಂತರದ ತಳಕ್ಕೂ ನಡುವಿನ ಅರೀಯ ದೂರ ದಂತಾಂತರಾಳ (ಕ್ಲಿಯೆರೆನ್ಸ್). ಎರಡೂ ಸೂತ್ರಾಂತರ ವೃತ್ತಗಳ ಸಂಸ್ಪರ್ಶ ಬಿಂದುವಿಗೆ ಸೂತ್ರಾಂತರ ಬಿಂದುವೆಂದೂ ಎರಡೂ ಸೂತ್ರಾಂತರ ಮೈಗಳ ಸಂಸ್ಪರ್ಶರೇಖೆಗೆ ಸೂತ್ರಾಂತರ ರೇಖೆಯೆಂದೂ ಹೆಸರು. ಈ ರೇಖೆಯಿಂದ ಮೈಯ ಮೇಲುಭಾಗಕ್ಕೆ ದಂತಫಲಕವೆಂದೂ ದಂತದ ತಳದವರೆಗಿನ ಮೈಗೆ ದಂತಪಾಶರ್್ವವೆಂದೂ ಹೆಸರು. ಫಲಕ ಪಾರ್ಶ್ವಗಳೆರಡೂ ಸೇರಿದಂತಮೈ ಆಗುತ್ತದೆ. ಸೂತ್ರಾಂತರ ವೃತ್ತದ ಪರಿಧಿಯಲ್ಲಿರುವುದನ್ನೇ ದಂತದ ದಪ್ಪ ಎನ್ನುವುದು. ಅಡೆಂಡಂ ಡಿಡೆಂಡಂ ಸೇರಿ ಒಟ್ಟು ಆಳವಾದರೆ ಇದರಲ್ಲಿ ದಂತಾಂತರಾಳವನ್ನು ಕಳೆದದ್ದು ಕಾರ್ಯಕಾರೀ ಆಳವಾಗುತ್ತದೆ. ದಂತದ ಮೇಲುಭಾಗದ ಮೈಗೆ ಪ್ರದೇಶವೆಂದೂ ದಂತಾಂತರದ ತಳ ಭಾಗದ ಮೈಗೆ ತಳಪ್ರದೇಶವೆಂದೂ ಹೆಸರು. ಸೂತ್ರಾಂತರ ವೃತ್ತದ ಪರಿಧಿಯ ಮೇಲೆ ಅಳೆದಂತೆ ಯಾವುದೇ ದಂತದ ಒಂದು ಬಿಂದುವಿಗೂ ಅದರ ಮುಂದಿನ ದಂತದ ಅಂಥದೇ ಬಿಂದುವಿಗೂ ಇರುವ ದೂರ ವರ್ತುಳೀಯ ಸೂತ್ರಾಂತರ. ಮಿಲಿಮೀಟರುಗಳಲ್ಲಿರುವ ಸೂತ್ರಾಂತರ ವ್ಯಾಸವನ್ನು ದಂತಗಳ ಸಂಖ್ಯೆಯಿಂದ ಭಾಗಿಸಿದ ಲಬ್ಧ ಮಾಡ್ಯೂಲ್ ಆದರೆ, ಬ್ರಿಟಿಷ್ ಪದ್ಧತಿಯಲ್ಲಿ ದಂತಗಳ ಸಂಖ್ಯೆಯನ್ನು ಸೂತ್ರಾಂತರ ವ್ಯಾಸದಿಂದ (ಅಂಗುಲಗಳಲ್ಲಿ) ಭಾಗಿಸಿ ಬರುವುದನ್ನು ವ್ಯಾಸೀಯ ಸೂತ್ರಾಂತರ ಎನ್ನುತ್ತಾರೆ. ಎರಡೂ ಸೂತ್ರಾಂತರ ವೃತ್ತಗಳ ಸಂಸ್ಪರ್ಶ ಬಿಂದುವಿನಲ್ಲಿ ಎಳೆದ ಉಭಯ ಸಾಮಾನ್ಯ ಸ್ಪರ್ಶರೇಖೆಯಿಂದ ಕೂಡಿಕೆಯಾಗಿರುವ ಎರಡೂ ದಂತಗಳ ಸಂಸ್ಪರ್ಶಬಿಂದುವಿನಲ್ಲಿ ಎಳೆದ ಉಭಯ ಸಾಮಾನ್ಯ ಲಂಬಕ್ಕೆ ಇರುವ ಕೋನಕ್ಕೆ ಒತ್ತಡದ ಕೋನ ಎಂದು ಹೆಸರು. ಶಿಷ್ಟಮಾನಕ ದಂತ ರೂಪವೆನ್ನಬಹುದಾದ ಅಂತರ್ವಲಿತ (ಇನ್ವೊಲ್ಯೂಟ್) ದಂತಗಳಲ್ಲಿ ಈ ಒತ್ತಡ ಕೋನ ಒಂದೇ ಸಮವಾಗಿರುತ್ತದೆ. ಗಿಯರ್ ತಯಾರಿಕೆಯಲ್ಲಿ ಏಕರೂಪ ಸಾಧನೆಗಾಗಿ ಒತ್ತಡ ಕೋನ 14 ಳಿ° ಮತ್ತು 20° ಗಳನ್ನು ಶಿಷ್ಟಮಾನಕವೆಂದು ಅಂಗೀಕರಿಸಿ ರುತ್ತದೆ. ದಂತರೂಪದಲ್ಲಿ ಇನ್ನೊಂದು ಚಕ್ರಜ (ಸೈಕ್ಲಾಯಿಡ್) ದಂತದಲ್ಲಿ ಈ ಒತ್ತಡ ಕೋನ ಸಂಸ್ಪರ್ಶಬಿಂದುವಿನೊಡನೆ ವ್ಯತ್ಯಾಸವಾಗುತ್ತ ಹೋಗುತ್ತದೆ.


ದಂತರೂಪಗಳು ಬದಲಾಯಿಸಿ

ಒಂದು ಆಧಾರವೃತ್ತದ ಮೇಲೆ ಬಿಗಿಯಾಗಿ ಸುತ್ತಿರುವ ದಾರವನ್ನು ಅಳಕ ಬಿಡದೆ ಬಿಚ್ಚುತ್ತ ಹೋದಾಗ ದಾರದ ಮೇಲಿನ ಒಂದು ಬಿಂದು ರೇಖಿಸುವ ವಕ್ರವೇ ಅಂತರ್ವಲಿತ. ಆಧಾರವೃತ್ತದಿಂದಾಚೆಗೆ ದಂತದ ಪರಿಧಿ ರೇಖೆಗಳಿರುವುದು ಈ ಆಕಾರದಲ್ಲಿ. ಆಧಾರವೃತ್ತದೊಳಗಡೆ ದಂತಪಾರ್ಶ್ವ ಸಾಮಾನ್ಯವಾಗಿ ಅರೀಯ ರೇಖೆಯಲ್ಲಿದ್ದು ತಳ ಪ್ರದೇಶಕ್ಕೆ ಒಂದು ಬಾಗು ರೇಖೆಯಿಂದ ಸೇರಿಸಲ್ಪಟ್ಟಿರುತ್ತದೆ.


ಅದೇ ರೀತಿ ಆಧಾರವೃತ್ತದ ಪರಿಧಿಯ ಮೇಲೆ ಅಥವಾ ಒಳಗೆ ಜಾರುವಿಕೆಯಿಲ್ಲದೆ ಉರುಳುತ್ತಿರುವ ಮತ್ತೊಂದು ಸಣ್ಣ ವೃತ್ತದ ಪರಿಧಿಯ ಮೇಲಿನ ಬಿಂದುವೊಂದು ರೇಖಿಸುವ ವಕ್ರವೇ ಚಕ್ರಜ. ಈ ಎರಡೂ ದಂತ ಆಕಾರಗಳ ಉತ್ಪಾದನೆಯನ್ನು ಚಿತ್ರದ(3)ರಲ್ಲಿ ತೋರಿಸಿದೆ. ಚಕ್ರಜ ದಂತಗಳು ಉಪಯೋಗದಲ್ಲಿರುವ ಗಡಿಯಾರಗಳು, ಮಾಪನಯಂತ್ರಗಳು ಮುಂತಾದ ಕೆಲವೆಡೆಗಳಲ್ಲುಳಿದು ಸರ್ವತ್ರ ಅಂತರ್ವಲಿತ ಗಿಯರುಗಳೇ ಬಳಕೆಯಲ್ಲಿವೆ ಎನ್ನಬಹುದು.


ವೇಗಾನುಪಾತ ಬದಲಾಯಿಸಿ

ಶಕ್ತಿಸಾಗಣೆಯ ಜೊತೆಗೆ ಗಿಯರುಗಳ ಮುಖ್ಯಕಾರ್ಯ ಪರಿಕ್ರಮಣ ವೇಗದ ಬದಲಾವಣೆ ಮಾಡುವುದು. ಈ ವೇಗಾನುಪಾತ ಗಿಯರುಗಳಲ್ಲಿನ ದಂತಗಳ ಸಂಖ್ಯೆಯನ್ನು ಅವಲಂಬಿಸಿದೆ. ಜಾರುವಿಕೆ ಇಲ್ಲದಿರುವುದರಿಂದ ಯಾವುದೇ ಅವಧಿಯಲ್ಲಿ ಎರಡೂ ಗಿಯರುಗಳ ಸೂತ್ರಾಂತರ ವೃತ್ತದ ಪರಿಧಿಯಲ್ಲಿ ಕ್ರಮಿಸುವ ದೂರ ಒಂದೇ ಸಮ. ಹೀಗಾಗಿ               (ಇಲ್ಲಿ   ಮತ್ತು   ಎರಡೂ ಗಿಯರುಗಳ ಸೂತ್ರಾಂತರ ವ್ಯಾಸ ಹಾಗೂ   ಮತ್ತು   ಅನುಕ್ರಮವಾಗಿ ಅವುಗಳ ಪ್ರತಿಮಿನಿಟ್ ಪರಿಕ್ರಮಣ-ಪ್ರ.ಮಿ.ಪ.) ಕೂಡಿಕೊಳ್ಳಬೇಕಾದರೆ ಎರಡೂ ಗಿಯರುಗಳ ವರ್ತುಳೀಯ ಸೂತ್ರಾಂತರ ಒಂದೇ ಇರಬೇಕಾದ್ದರಿಂದ ಗಿಯರುಗಳ ಸೂತ್ರಾಂತರ ಪರಿಧಿ ಅವುಗಳ ದಂತಸಂಖ್ಯೆ z ಗೆ ಅನುಗುಣವಾಗಿರುತ್ತದೆ. ಆದ್ದರಿಂದ          


ಗಿಯರುಗಳ ಹಿಂದೊದೆತ ಹಾಗೂ ಅಂತಃಕ್ಷೇಪ ಬದಲಾಯಿಸಿ

ಒಂದು ದಿಶೆಯಲ್ಲಿ ತಿರುಗುತ್ತಿರುವ ಗಿಯರುಗಳನ್ನು ವಿರುದ್ಧ ದಿಶೆಯಲ್ಲಿ ತಿರುಗಿಸಿದಾಗ ಕೊಂಚ ನಿಷ್ಕ್ರಿಯ ಅವಧಿಯಿದ್ದು ಅನಂತರ ಅವು ಕ್ರಿಯಾಶೀಲವಾಗುವುದನ್ನು ಗಮನಿಸಬಹುದು. ಇದಕ್ಕೆ ಹಿಂದೊದೆತ (ಬ್ಯಾಕ್ಲ್ಯಾಷ್) ಎಂದು ಹೆಸರು. ಗಿಯರಿನ ದಂತದ ದಪ್ಪಕ್ಕಿಂತ ಕೂಡಿಕೆಯ ಗಿಯರಿನ ದಂತಾಂತರ ಅಗಲವಾಗಿರುವುದೇ ಇದರ ಕಾರಣ. ಕೂಡಿರುವ ಗಿಯರುಗಳಲ್ಲಿ ಈ ಹಿಂದೊದೆತ ಪುರ್ಣವಾಗಿ ಇಲ್ಲದಿರಬೇಕಾದರೆ ಗಿಯರಿನ ಎಲ್ಲ ಭಾಗಗಳೂ ಅಳತೆ ಗಾತ್ರಗಳಲ್ಲಿ ಪರಿಪುರ್ಣವಾಗಿದ್ದು ಗಿಯರುಗಳ ಉಷ್ಣ ವಿಸರಣ ಗುಣಾಂಕವೂ ಒಂದೇ ಇರಬೇಕಾಗುತ್ತದೆ. ಇವನ್ನು ಸಾಧಿಸುವುದು ಕಷ್ಟವಾದ್ದರಿಂದಲೂ ಎಣ್ಣೆ ಹಚ್ಚಲು (ಲ್ಯೂಬ್ರಿಕೇಷನ್) ಅನುಕೂಲವಾಗಿರಲಿ ಎಂದೂ ಗಿಯರ್ ದಂತಗಳ ನಡುವೆ ಸ್ವಲ್ಪ ಅಂತರ ಉಳಿಸಿರುತ್ತದೆ. ನಿಯಂತ್ರಣ ವಿನ್ಯಾಸಗಳು ಮುಂತಾದ ಕರಾರುವಾಕ್ಕದ ಗಿಯರಣವಿರಬೇಕಾದಲ್ಲಿ (ಕಂಟ್ರೋಲ್ ಗಿಯರಿಂಗ್) ಸ್ಪ್ರಿಂಗು ಗಳು ಮುಂತಾದವುಗಳ ಉಪಯೋಗದಿಂದ ಹಿಂದೊದೆತ ವನ್ನು ತಪ್ಪಿಸಲಾಗುತ್ತದೆ. ಗಿಯರ್ ದಂತಗಳಲ್ಲಿ ಅಂತಃಕ್ಷೇಪವಿರುತ್ತದೆ (ಇಂಟರ್ಫಿಯರೆನ್ಸ್) ಎಂದರೆ ಒಂದು ದಂತದ ತುದಿ ಮತ್ತೊಂದು ಪಾಶರ್್ವದೊಳಕ್ಕೆ ಅಗೆಯುತ್ತದೆ. ಗಿಯರಿಗೆ ಹೋಲಿಸಿದಂತೆ ಪಿನಿಯನ್ನಿನಲ್ಲಿ ಅತಿ ಕಡಿಮೆ ಸಂಖ್ಯೆಯ ದಂತಗಳಿರುವಾಗ ಹೀಗಾಗುವ ಸಂಭವವುಂಟು. ಗಿಯರಿನ ಅಡೆಂಡಮ್ಮನನ್ನು ಕಡಿಮೆ ಮಾಡುವುದರಿಂದ, ಒತ್ತಡಕೋನ ವನ್ನು ಹೆಚ್ಚಿಸುವುದರಿಂದ, ಗಿಯರು ಗಳ ನಡುವಿನ ಕೇಂದ್ರಾಂತರವನ್ನು ಹೆಚ್ಚಿಸಿ ಹಿಂದೊದೆತವನ್ನು ಸ್ವಲ್ಪ ಜಾಸ್ತಿಮಾಡುವುದ ರಿಂದ. ಪಿನಿಯನ್ನಿನ ಪಾಶರ್್ವವನ್ನು ಕೆಳಗೆ ಕತ್ತರಿಸುವುದರಿಂದ ಈ ಅಂತಃಕ್ಷೇಪ ಆಗದಂತೆ ನೋಡಿಕೊಳ್ಳಬಹುದು.


ಸ್ಪರ್ ಗಿಯರುಗಳು ಬದಲಾಯಿಸಿ

ಅಕ್ಷಗಳು ಸಮಾಂತರವಾಗಿದ್ದು ದಂತಗಳು ಕೂಡ ಗಿಯರಿನ ಕೇಂದ್ರರೇಖೆಗೆ ಸಮಾಂತರವಾಗಿರುವ ಗಿಯರುಗಳಿವು. ಸೂಕ್ಷ್ಮ ಗಡಿಯಾರಗಳಿಂದ ಹಿಡಿದು ಭಾರಿ ಯಂತ್ರೋಪಕರಣಗಳು. ಮೋಟಾರುಕಾರು ಹಾಗೂ ವಾಯು ಎಂಜಿನ್ ಗಿಯರ್ ಪೆಟ್ಟಿಗೆಗಳ ವರೆಗೂ ಇವು ಬಹಳ ಉಪಯೋಗದಲ್ಲಿವೆ. (ಚಿತ್ರ.4 ನೋಡಿ)


ರ್ಯಾಕ ಮತ್ತು ಪಿನಿಯನ್ ಬದಲಾಯಿಸಿ

ಒಂದು ಗಿಯರಿನ ಸೂತ್ರಾಂತರ ವೃತ್ತದ ವ್ಯಾಸವನ್ನು ಹೆಚ್ಚಿಸುತ್ತ ಹೋಗಿ ಅದು ಅನಂತವಾಯಿತೆಂದಿಟ್ಟುಕೊಂಡರೆ ಆಗ ಅದರ ಪರಿಧಿ ಒಂದು ಸರಳರೇಖೆಯಾಗಿ ಸೂತ್ರಾಂತರ ಮೈ ಒಂದು ಸಮತಲ ಪಟ್ಟಿಯಾಗುತ್ತದೆ. ಆಗ ಅದಕ್ಕೆ ರ್ಯಾಕ್ ಎಂದು ಹೆಸರು. ಇನ್ನೊಂದು ಗಿಯರ್ ಪಿನಿಯನ್ ಆಗುತ್ತದೆ. ರ್ಯಾಕ್ ಮತ್ತು ಪಿನಿಯನ್ನಿಂದ ವರ್ತುಳೀಯ ಚಲನೆಯನ್ನು ರೇಖೀಯ ಚಲನೆಯಾಗಿ ಅಥವಾ ವಿಪರ್ಯವಾಗಿ ಪರಿವರ್ತಿಸಲು ಸಾಧ್ಯ ಉಂಟು.


ಆಂತರಿಕ ಗಿಯರ್ ಬದಲಾಯಿಸಿ

ಹೊರ ಮುಖದಲ್ಲಿ ಕೂಡಿಕೊಳ್ಳುವ ಎರಡು ಸ್ಪರ್ ಗಿಯರುಗಳು ವಿರುದ್ಧ ದಿಶೆಗಳಲ್ಲಿ ಓಡುತ್ತವೆ. ದೊಡ್ಡದಾದ ಗಿಯರ್ ಚಕ್ರದ ಹೊರಬದಿಯಲ್ಲಲ್ಲದೆ ಒಳಬದಿಯಲ್ಲಿ ದಂತಗಳು ರೂಪಿತವಾಗಿದ್ದು ಪಿನಿಯನ್ ಅದರ ಒಳಗಡೆ ಯಿಂದಲೇ ಕೂಡಿಕೊಳ್ಳುವ ವ್ಯವಸ್ಥೆಗೆ ಆಂತರಿಕ ಗಿಯರಣವೆಂದು ಹೆಸರು. (ಚಿತ್ರ.5 ನೋಡಿ)


ಇಲ್ಲಿ ಎರಡೂ ಒಂದೇ ದಿಶೆಯಲ್ಲಿ ತಿರುಗುವುದನ್ನು ಕಾಣಬಹುದು. ಎರಡೂ ತಾಳುಗಳ ಅಂತರ ಕಡಿಮೆಯಿದ್ದು ಘಟಕ ಅಡಕವಾಗಿಯೂ ದಂತಕ್ರಿಯೆ ದಕ್ಷವಾಗಿಯೂ ಇರುವುದರಿಂದ ವೇಗ ಕಡಿಮೆ ಮಾಡಲು ಉದ್ದೇಶಗಳಿಗೆ ಇದು ಬಹಳ ಸೂಕ್ತವಾದದ್ದಾಗಿರುತ್ತದೆ. (ಚಿತ್ರ.6 ನೋಡಿ)


ಕುಂಡಲಿನೀ (ಹೆಲಿಕಲ್) ಗಿಯರ್ ಬದಲಾಯಿಸಿ

ಸಮಾಂತರ ಅಕ್ಷಗಳ ಮೇಲೆಯೇ ಓಡುವ ಗಿಯರುಗಳ ದಂತಗಳು ಅಕ್ಷಕ್ಕೆ ಸಮಾಂತರವಾಗಿರುವುದನ್ನು ಬಿಟ್ಟು ಅಕ್ಷಕ್ಕೆ ಓರೆಯಾಗಿ ತಿರುಚಿದಂತಿದ್ದರೆ (ಅಥವಾ ಗಿಯರಿನ ಸುತ್ತ ಕುಂಡಲಿನಿಯಂತೆ ಸುತ್ತುವಂತಿದ್ದರೆ) ಕುಂಡಲಿನೀ ಗಿಯರ್ ಆಗುತ್ತದೆ. ಈ ತಿರುಚಿನಿಂದಾಗಿ ದಂತಗಳ ನಡುವಣ ಸಂಪರ್ಕ ಒಮ್ಮೆಗೇ ಆಗದೆ ಒಂದು ತುದಿಯಲ್ಲಿ ಪ್ರಾರಂಭಿಸಿ ದಂತಫಲಕದ ಅಡ್ಡವಾಗಿ ಮುಂದುವರಿಯುತ್ತ ಹೊಗುತ್ತದೆ. ಇದರಿಂದಾಗಿ ಅದರಲ್ಲೂ ಅಧಿಕ ವೇಗಗಳಲ್ಲಿ ಗಿಯರಣ ಕ್ರಿಯೆಯಲ್ಲಿನ ಆಘಾತ ಕಡಿಮೆಯಾಗಿ ಶಬ್ದವೂ ಅಷ್ಟಾಗಿ ಇರುವುದಿಲ್ಲ. ತಿರುಚು ಒಂದೇ ಕಡೆಗಿರದೆ ನಡುವಿನಿಂದ ಎರಡೂ ಕಡೆಗಿರುವಾಗ ಅದನ್ನು ದ್ವಿಕುಂಡಲಿನೀ ಗಿಯರ್ ಅಥವಾ ಹೆರ್ರಿಂಗ್ ಬೋನ್ ಗಿಯರ್ ಎನ್ನಲಾಗುತ್ತದೆ. (ಚಿತ್ರ.7 ನೋಡಿ)


ಇದರ ಕ್ರಿಯೆ ನಿಶ್ಯಬ್ದವಾಗಿರುವುದರ ಜೊತೆಗೆ ಅಕ್ಷೀಯ ನೂಕುಬಲವೂ (ಥ್ರಸ್ಟ್) ಸಮತುಲಿತಗೊಂಡು ಬಹಳ ಸಲೀಸಾಗಿ ಓಡುತ್ತದೆ. ಸಮಾಂತರವಲ್ಲದ ಹಾಗೂ ಪರಸ್ಪರ ಛೇದಿಸದೆಯೂ ಇರುವ ತಾಳುಗಳಿಗಾಗಿ ಸಹ ಕುಂಡಲಿನೀ ಗಿಯರುಗಳನ್ನು ಅಭಿಕಲ್ಪಿಸುವುದು ಸಾಧ್ಯ. ಇಲ್ಲಿನ ದಂತಕ್ರಿಯೆ ಸಮಾಂತರ ತಾಳುಗಳಲ್ಲಿನದಕ್ಕಿಂತ ಭಿನ್ನವಾಗಿರುತ್ತದೆ. ಹಾಗೂ ಇದು ಹೋಲಿಕೆಯಲ್ಲಿ ಲಘುವಾಗಿರುವ ಸೇವೆಗೆ ಮಾತ್ರ ಉಪಯೋಗಕ್ಕೆ ಬರುತ್ತದೆ.


ಬೆವೆಲ್ ಗಿಯರ್ ಬದಲಾಯಿಸಿ

ತಾಳುಗಳು ಸಮಾಂತರವಾಗಿರದೆ ಪರಸ್ಪರ ಛೇದಿಸುವಂತಿರುವಾಗ ಇವುಗಳ ಉಪಯೋಗ ಶಕ್ತಿಸಾಗಣೆಯಲ್ಲಿ ದಿಕ್ಕಿನ ಬದಲಾವಣೆಗಾಗಿ ಮಾತ್ರ. ಇವು ಬೇಕಾದರೆ ಎರಡು ಗಿಯರು ಗಳೂ ಸಮ ಅಳತೆಯವಾಗಿರುತ್ತವೆ. ದಿಕ್ಕಿನ ಬದಲಾವಣೆಯೊಡನೆ ವೇಗದ ವ್ಯತ್ಯಾಸವನ್ನು ಪಡೆಯ ಬೇಕಾಗಿರುವಾಗ ಗಿಯರುಗಳು ಭಿನ್ನ ಅಳತೆಯವಾಗಿರುತ್ತವೆ. ತಾಳು ಅಕ್ಷಗಳು ಪರಸ್ಪರ 900 ಯಲ್ಲಿ ಛೇಧಿಸುವಂತಿರುವ ಹಾಗೂ ಸಮ ಅಳತೆಯ ಬೆವೆಲ್ ಗಿಯರುಗಳ ಜೋಡಿಯನ್ನು ಮೈಟರ್ ಗಿಯರು ಗಳು ಎನ್ನುತ್ತಾರೆ. ಬೆವೆಲ್ ಗಿಯರುಗಳ ದಂತಗಳು ನೇರವಾಗಿರಬಹುದು, ಕುಂಡಲಿನೀಯವಾಗಿರಬಹುದು.(ಚಿತ್ರ.8 ನೋಡಿ) ಒಳಬಾಗಿರಬಹುದು. ಅಲ್ಲದೆ ಹೈಪಾಯಿಡ್ ಗಿಯರುಗಳೆಂಬ ಹೆಸರಿನ ಒಂದು ವಿಶೇಷ ರೀತಿಯ ಬೆವೆಲ್ ಸಾಮಾನ್ಯ ನೋಟಕ್ಕೆ ಕುಂಡಲಿನೀ ಗಿಯರಿನಂತೆಯೇ ಇರುವುದಾದರೂ ಅಸಮಾಂತರ ಅಛೇಧಕ, ಪರಸ್ಪರ ಲಂಬ ಕೋನದಲ್ಲಿ ಅಡ್ಡವಾಗಿರುವ ಹಾಗೂ ಅಂತರ ಹೆಚ್ಚಿಲ್ಲದ ತಾಳುಗಳನ್ನು ಕೂಡಿಸುವುದಾಗಿರುತ್ತದೆ. ವೇಗ ಅತಿಯಾಗಿ ಕಡಿಮೆಯಾಗಬೇಕಾದಾಗ (ಅನುಪಾತ 60:1 ಅಥವಾ ಇನ್ನೂ ಅಧಿಕ) ಇದನ್ನು ಉಪಯೋಗಿಸುತ್ತದೆ.


ವರ್ಮ್ ಗಿಯರ್ ಬದಲಾಯಿಸಿ

ಅಸಮಾಂತರ ಅಛೇದಕ ಅಂದರೆ ಅಸಮತಲೀಯವಾದ ತಾಳುಗಳನ್ನು ಸೇರಿಸುವ ಸಾಮಾನ್ಯ ವಿಧಾನ ವರ್ಮ್ ಗಿಯರಣದಿಂದ. ತಾಳುಗಳು ಸುಮಾರು ದೂರದಲ್ಲಿದ್ದು ವಾಸ್ತವ ಬಳಕೆಯಲ್ಲಿ ಲಂಬ ಕೋನವೆಂಬಂತೆ ಅಡ್ಡಡ್ಡವಾಗಿರುತ್ತವೆ. ಸಾಮಾನ್ಯವಾಗಿ ಚಾಲಕವಾಗಿರುವ ವರ್ಮ್ ಒಂದು ಸ್ಕ್ರೂ ಇದ್ದಂತೆ ಇರುತ್ತದೆ. ದೊಡ್ಡದಾಗಿರುವ ಚಕ್ರ ವರ್ಮ್ ಚಕ್ರವೆನ್ನಿಸಿಕೊಳ್ಳುತ್ತದೆ. ವರ್ಮ್ ಸುತ್ತುತ್ತಿರುವಾಗ ಅದರ ಸೂತ್ರಗಳು (ತ್ರೆಡ್ಸ್) ಚಕ್ರದ ಪರಿಧಿಯ ಮೇಲಿರುವ ದಂತಗಳ ಮೇಲೆ ಒತ್ತಿದಂತಾಗಿ ಅದು ತಿರುಗುವಂತೆ ಮಾಡುತ್ತದೆ. ವರ್ಮ್ ಗಿಯರಣವನ್ನು ಸಹ ಅಧಿಕವಾದ ವೇಗಾನುಪಾತಗಳಿಗೆ ಉಪಯೋಗಿಸುತ್ತಾರೆ.

"https://kn.wikipedia.org/w/index.php?title=ಗಿಯರ್&oldid=667469" ಇಂದ ಪಡೆಯಲ್ಪಟ್ಟಿದೆ