ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಗಾವಿಲಗಡ ಬದಲಾಯಿಸಿ

ಮಹಾರಾಷ್ಟ್ರ ರಾಜ್ಯದ ಅಮರಾವತಿ ಜಿಲ್ಲೆಯ ಮೇಳಘಾಟ್ ತಾಲ್ಲೂಕಿನಲ್ಲಿಯ ಒಂದು ಐತಿಹಾಸಿಕ ಕೋಟೆ. ಸು. 1220ಮೀ ಎತ್ತರದ ಸಾತ್ಪುರಾ ಬೆಟ್ಟದ ನೆತ್ತಿಯ ಮೇಲಿದೆ. ಅಹ್ಮದ್ ಶಹ ಬಹುಮನಿ ಇದನ್ನು ಕಟ್ಟಿಸಿದನೆನ್ನಲಾಗಿದೆ. (1425). ಅಕ್ಬರನ ಆಡಳಿತದ ಕಾಲದಲ್ಲಿ ಅಬುಲ್ಫಜಲ್ ಇದನ್ನು ಗೆದ್ದುಕೊಂಡ (1598). ಹಿಂದೆ ಈ ಭಾಗದಲ್ಲಿ ಗೋವಳರು ಹೆಚ್ಚಾಗಿ ವಾಸವಾಗಿದ್ದರಿಂದ ಇವಕ್ಕೆ ಗವಳೀಗಡ, ಗಾವಿಲಗಡ ಎಂದು ಹೆಸರು ಬಂತೆಂದು ಪ್ರತೀತಿ. ಮೊಗಲರಿಂದ ಭೋಸ್ಲೆ ವಂಶದವರ ವಶಕ್ಕೆ ಬಂದ ಅನಂತರ ಈ ಕೋಟೆ ವಿಶೇಷ ಪ್ರಸಿದ್ಧಿ ಪಡೆಯಿತು. ಭೋಸ್ಲೆ ವಂಶ ರಾಜ್ಯವನ್ನು ಕಳೆದುಕೊಂಡ ಮೇಲೆ ಇದು ಇಂಗ್ಲೀಷರ ಅಧಿಕಾರ ಕಕ್ಷೆಯಲ್ಲಿ ಬಂತು. ಕೋಟೆಯಲ್ಲಿ ಒಂದು ಸುಂದರವಾದ ಮಸೀದಿಯೂ ಕೆಲವು ಶಿಲಾಲೇಖನಗಳೂ ಇವೆ.

"https://kn.wikipedia.org/w/index.php?title=ಗಾವಿಲಗಡ&oldid=667265" ಇಂದ ಪಡೆಯಲ್ಪಟ್ಟಿದೆ