ಗಾಳಗಾರ ಮೀನು
(Angler fish)
ಮೆಲನೊಸೆಟಸ್ ಜಾನ್ಸನಿ ಪ್ರಜಾತಿಯ ಗಾಳಗಾರ ಮೀನು
Scientific classification
ಸಾಮ್ರಾಜ್ಯ:
ವಿಭಾಗ:
Superclass:
ಆಸ್ಟಿಯೊಇಕ್ತಿಸ್ (ಮೂಳೆಯುಳ್ಳ ಮೀನು)
ವರ್ಗ:
ಆಕ್ಟಿನೊಟೆರಿಜಿ
ಗಣ:
ಲೊಫ್ಲಿಫೊರ್ಮೆಸ್
Suborders

Antennarioidei
Lophioidei
Ogcocephalioidei
See text for families.

ಸಾಗರದಾಳದಲ್ಲಿ ಜೀವಿಸುವ ಅನೇಕ ಮೀನುಗಳಿಗೆ ಬಹಳ ದೊಡ್ಡ ತಲೆ ಮತ್ತು ಚಿಕ್ಕ ದೇಹಗಳಿರುತ್ತವೆ. ಆ್ಯಂಗ್ಲರ್ ಫಿಶ್ ಅಥವಾ ಗಾಳಗಾರ ಮೀನು ಮತ್ತು ಅದರ ಸಂಬಂಧಿಕ ಮೀನುಗಳು ಇವುಗಳಲ್ಲಿ ಪ್ರಮುಖವಾದವು. ಲೋಫೀಫಾರ್ಮೀಸ್ ಗಣದ ಲೋಫಿಯಿಡೀ ಕುಟುಂಬಕ್ಕೆ ಸೇರಿದ ಲೋಫಿಯಸ್ ಜಾತಿಯ ಸಮುದ್ರವಾಸಿ ಮೀನುಗಳ ಸಾಮಾನ್ಯ ಬಳಕೆಯ ಹೆಸರು ಇದು. ಕೆಲವು ಮೀನುಗಳು ತಮಗಿಂತಲೂ ದೊಡ್ಡದಾದ ಮೀನುಗಳನ್ನು ನುಂಗಬಲ್ಲವು! ಗಾಳಗಾರ ಮೀನು ತಾನು ಬೇಟೆಯಾಡುವ ವಿಚಿತ್ರ ರೀತಿಯಿಂದ ಈ ಹೆಸರು ಸಂಪಾದಿಸಿದೆ. ಈ ಮೀನಿಗೆ ತಲೆಯ ಮೇಲೆ ಮೀನು ಹಿಡಿಯುವ ಉದ್ದವಾದ ಗಾಳದಂತಿರುವ ಮೂಲೆಯ ಕಡ್ಡಿಯೊಂದಿದೆ. ಈ ಕಡ್ಡಿಯ ತುದಿಯಲ್ಲಿ ಆಕರ್ಷಕವಾದ ಗಾಳಕ್ಕೆ ಸಿಕ್ಕಿಸಿದ ಹುಳುವಿನಂಥ ಮಾಂಸದ ತುಂಡಿದೆ. ತನ್ನ ಅಗಲವಾದ ಬಾಯ ಸನಿಹ ಈ ಗಾಳವನ್ನು ಆಡಿಸುತ್ತಾ ಸುಮ್ಮನೆ ನಿಲ್ಲುತ್ತದೆ. ಇತರ ಸಣ್ಣ ಮೀನುಗಳು ಮೋಸಹೋಗಿ ಗಾಳವನ್ನು ನುಂಗಲು ಬಂದಾಗ, ಗಾಳಗಾರ ಮೀನು ಅವನ್ನು ಹಿಡಿದು ನುಂಗುತ್ತದೆ.

ಇವುಗಳಲ್ಲಿ ಸುಮಾರು 12 ಪ್ರಭೇದಗಳಿವೆ. ಇವುಗಳಲ್ಲೆಲ್ಲ ಬಹು ಮುಖ್ಯವಾದುದು ಲೋಫಿಯಸ್ ಪಿಸ್ಕಟೋರಿಯಸ್ ಎಂಬುದು. ಇದು ಪೂರ್ವ ಅಟ್ಲಾಂಟಿಕ ಸಾಗರದ, ಬಾರೆಂಟ್ಸ ಸಮುದ್ರ, ಗಿಬ್ರಾಲ್ಟರ್ ಜಲ ಸಂಧಿ, ಭೂಮಧ್ಯ ಸಮುದ್ರ, ಮತ್ತು ಕಪ್ಪು ಸಮುದ್ರಗಳಲ್ಲಿ ಕಂಡು ಬರುತ್ತವೆ. ಐಸ್ಲೆಂಡ್ ಮತ್ತು ಮಾರಿಷಿಯಾನಾಗಳಲ್ಲೂ ಇರುವುದಾಗಿ ವರದಿಯಾಗಿದೆ. ಇವು ಸು. 200 ಸೆಂಮೀ.ವರೆಗೆ ಹಾಗೂ 57 ಕೆ.ಜಿ ವರೆಗೆ ಬೆಳಯುತ್ತವೆ. ಸುಮಾರು 24 ವರ್ಷಗಳವರೆಗೆ ಬದುಕಬಲ್ಲದೆಂದು ವರದಿಯಾಗಿದೆ. ಮಣ್ಣು ಅಥವಾ ಮರಳಿನಿಂದ ಕೂಡಿದ ಕಡಲ ತಳದಲ್ಲಿ ತೀರದಿಂದ 20 ಮೀ ಆಳದಿಂದ ಹಿಡಿದು 1000 ಮೀ ಆಳದವರೆಗೆ ಇವು ವಾಸಿಸುತ್ತವೆ. ವಿಲಕ್ಷಣ ರೂಪಿಯಾಗಿದ್ದು ಚಪ್ಪಟೆ ದೇಹ, ಅಗಲವಾದ ತಲೆ, ದೇಹದ ಗಾತ್ರಕ್ಕೆ ಹೋಲಿಸಿದರೆ ಬಲುದೊಡ್ಡದಾದ ಬಾಯಿ. ಹಿಂದಕ್ಕೆ ಬಾಗಿರುವ ಮೋಟು ಹಲ್ಲುಗಳ ಪಂಕ್ತಿ, ಮೈಮೇಲೆ ಹುರುಪೆಗಳಿಲ್ಲದಿರುವುದು, ಚರ್ಮ ತೆಳು ಹಾಗೂ ಸಡಿಲವಾಗಿರುವುದು, ಉರುಟಾದ ಮತ್ತು ಮುಳ್ಳುಗಳಿಂದ ಕೂಡುದ ದೇಹದ ಮುಂಭಾಗ, ಉದ್ದವಾದ ಗಾಳವಾಗಿ ಮಾರ್ಪಟ್ಟ ಬೆನ್ನುಭಾಗದ ಈಜುರೆಕ್ಕೆಯ ಮೊದಲೆನೆ ಮುಳ್ಳು - ಇವು ಈ ಮೀನಿನ ಮುಖ್ಯ ಲಕ್ಷಣಗಳು. ಬಹಳ ಬಳುಕುವ ಈ ಗಾಳ ಕಣ್ಣುಗಳ ನಡುವೆ ನೆತ್ತಿಯ ಮೇಲೆ ಇದ್ದು ಬಾಯಿಯ ಮುಂದೆ ಚಾಚಿಕೊಂಡಿರುತ್ತದೆ. ಅದರ ತುದಿಯಲ್ಲಿ ಮಾಂಸಲವಾದ ಉಪಾಂಗಗಳೂ ಇವೆ. ಆಹಾರ ಮೀನುಗಳನ್ನು ತನ್ನೆಡೆ ಸೆಳೆೆಯಲು ಬಲು ಚಾಣಾಕ್ಷತನದಿಂದ ತನ್ನ ಗಾಳವನ್ನು ಬಳಸುತ್ತದೆ. ತನ್ನ ದೇಹವನ್ನೆಲ್ಲ ಸಮುದ್ರದ ತಳ ಭಾಗದಲ್ಲಿ ಹುದುಗಿಸಿಕೊಂಡು ಗಾಳವನ್ನು ಮಾತ್ರ ಹೊರಗೆ ಮೇಲಕ್ಕೆ ಚಾಚಿ ಅಲುಗಾಡಿಸುತ್ತಿರುತ್ತದೆ. ಇದರ ಆಕಾರ ಮತ್ತು ಚಲನೆಗಳಿಂದ ಸೆಲೆ ಹುಳುವಿನಂತೆ ಕಾಣುತ್ತದೆ. ಇದರಿಂದ ಆಕರ್ಷಿತಗೊಂಡ ಮೀನುಗಳು ಇದರ ಬಳಿಗೆ ಬಂದಾಗ ಅವುಗಳ ಮೇಲೆರಗಿ ಕಬಳಿಸುತ್ತದೆ. ಇದರ ಬಾಯಿ ದೊಡ್ಡದಿರುವುದರಿಂದ ಇದು ತನ್ನಷ್ಟೇ ದೊಡ್ಡದಾದ ಮೀನನ್ನು ನುಂಗಬಲ್ಲದು.

ಗಾಳಗಾರ ಮೀನುಗಳು ಪ್ರಪಂಚದ ಎಲ್ಲಾ ಸಮುದ್ರಗಳಲ್ಲೂ ಕಂಡುಬರುತ್ತದೆ. ಕೆಲವು ಜಾತಿಗಳಲ್ಲಿ, ಗಂಡುಮೀನು ಹೆಣ್ಣಿನ ದೇಹಕ್ಕೆ ತನ್ನ ದವಡೆಗಳ ಸಹಾಯದಿಂದ ಸದಾ ಅಂಟಿಕೊಂಡೇ ಇರುತ್ತದೆ! ಇದು ಆಹಾರಕ್ಕಾಗಿ. ಹೆಣ್ಣಿನ ದೇಹದಿಂದ ಆಹಾರ ಪಡೆಯುವ ಗಂಡು, ಪ್ರತಿಯಾಗಿ ಅದರ ಮೊಟ್ಟೆಗಳನ್ನು ಫಲವಂತಿಸುತ್ತದೆ. ಗಾಳದ ಮೀನುಗಳಲ್ಲಿ ಸಾಮಾನ್ಯವಾಗಿ ಹೆಣ್ಣಿಗಿಂತ ಗಂಡು ಮೀನುಗಳು ಚಿಕ್ಕ ಗಾತ್ರದಾಗಿದ್ದು ಸಂತಾನೋತ್ಪತ್ತಿಯ ಕಾಲದಲ್ಲಿ ಹೆಣ್ಣಿಗೆ ಅಂಟಿಕೊಂಡಿದ್ದು ಪರಾವಲಂಬಿ ಜೀವನ ನಡೆಸುತ್ತವೆ. ಇದೇ ರೀತಿಯ ಗಾಳದ ಮೀನುಗಳನ್ನು ಹೋಲುವ ಇನ್ನಿತರ ಗಾಳದ ಮೀನುಗಳೂ ಉಂಟು. 525ಮೀ ರಿಂದ 5250ಮೀ ಆಳದಲ್ಲಿ ವಾಸಿಸುವ ಆಳ ಕಡಲಿನ ಗಾಳದ ಮೀನು (ಡೀಪ್ ಸೀ ಆಂಗ್ಲರ್ ಫಿಶ್) ಕೂಡ ಒಂದು. ಸೆರಿಯಾಟಸ್ ಇದರ ವೈಜ್ಞಾನಿಕ ನಾಮ. ಈ ಮೀನುಗಳು ಕಡಲ ಗಾಢಾಂಧಕಾರದಲ್ಲಿರುವುದರಿಂದ ಇವುಗಳ ಗಾಳದ ತುದಿ ನೀಲು ಊದಾ ಮುಂತಾದ ಬೆಳಕನ್ನು ಚೆಲ್ಲಬಲ್ಲದು. ಹೀಗೆ ಬೆಳಕು ಉತ್ಪತ್ತಿಯಾಗಲು ಕೆಲವು ರೀತಿಯ ವಿಶೇಷ ಬ್ಯಾಕ್ಟೀರಿಯಗಳು ಕಾರಣವೆಂದು ತಿಳಿದು ಬಂದಿದೆ. ಇದರಿಂದ ಇತರೆ ಮೀನುಗಳು ಆಕರ್ಷಿತವಾಗಿ ಹತ್ತಿರ ಬಂದಾಗ ಅವನ್ನು ಸುಲಭವಾಗಿ ಹಿಡಿಯಬಲ್ಲದು. ಹೆಣ್ಣು ಮೀನುಗಳಲ್ಲಿ ಮಾತ್ರ ಇಂತಹ ಗಾಳ ಇರುವುದು ಸೂಜಿಗದ ಸಂಗತಿ. ಗಂಡುಗಳಲ್ಲಿ ಗಾಳವೇ ಇರುವುದಿಲ್ಲ. ಇವುಗಳಲ್ಲೂ ಗಂಡು ಮೀನು ಹೆಣ್ಣು ಮೀನನ್ನು ಅನುಸರಿಸಿ ಜೀವನ ನಡೆಸುತ್ತದೆ.

ಬೇಸಗೆಯಲ್ಲಿ ಗಾಳದ ಮೀನುಗಳು ಸಂತಾನೋತ್ಪತ್ತಿ ನಡೆಸುತ್ತವೆ. ಮೊಟ್ಟೆಯೊಡೆದು ಬರುವ ಮರಿಗಳು ಪ್ರಬುದ್ಧಾವಸ್ಥೆಗೆ ಬರುವವರೆಗೂ ಸಮುದ್ರದ ಮೇಲ್ಪದರದಲ್ಲಿ ಈಜಾಡುತ್ತಿದ್ದು ಸಣ್ಣ ಪುಟ್ಟ ಪ್ರಾಣಿಗಳನ್ನು ತಿಂದು ಬದುಕುತ್ತದೆ. ಆನಂತರ ಕಡಲಾಳಕ್ಕಿಳಿದು ಪ್ರೌಢ ಜೀವನ ಆರಂಭಿಸುತ್ತವೆ.

ಉಲ್ಲೇಖಗಳು

ಬದಲಾಯಿಸಿ