ಗಾತ್ರಾನುಗುಣ ಪ್ರತಿಫಲ


ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಒಂದು ಉದ್ಯಮ ಸಂಸ್ಥೆಯ ಉತ್ಪಾದನ ಗಾತ್ರದಲ್ಲಿ (ಸ್ಕೇಲ್ ಆಫ್ ಪ್ರೊಡಕ್ಷನ್) ವ್ಯತ್ಯಾಸ ಮಾಡಿದಾಗ ಅದರಿಂದಾಗಿ ಆ ಸಂಸ್ಥೆಯ ಪ್ರದಾನದ ಮೇಲೆ (ಔಟ್ಪುಟ್ : ಉತ್ಪತ್ತಿ) ಆಗುವ ಪರಿಣಾಮ (ರಿಟನ್ಸ್ ಟು ಸ್ಕೇಲ್). ಒಂದು ಪದಾರ್ಥದ (ಕಮಾಡಿಟಿ) ಉತ್ಪಾದನೆಗೆ ಬಳಸಲಾಗುವ ಆದಾನಗಳಲ್ಲಿ (ಇನ್ಪುಟ್) ಸ್ಥಿರ (ಫಿಕ್ಸೆಡ್) ಮತ್ತು ಚರ (ವೇರಿಯ ಬಲ್) ಎಂಬ ಎರಡು ವಿಧಗಳಿವೆ. ಯಂತ್ರಸ್ಥಾವರ, ಸಲಕರಣೆ ಮುಂತಾದವು ಆದಾನಗಳು, ಶ್ರಮ, ವಿದ್ಯುತ್ತು, ಕಚ್ಚಾ ಸಾಮಗ್ರಿ (ರಾ ಮೆಟೀರಿಯಲ್ಸ್) ಮುಂತಾದವು ಚರ ಆದಾನಗಳು. ಎಷ್ಟು ಸ್ಥಿರ ಆದಾನಗಳನ್ನು ಬಳಸಬೇಕೆಂಬ ನಿರ್ಧಾರಗಳು ಒಂದು ಉದ್ಯಮ ಸಂಸ್ಥೆಯ ದೀರ್ಘಕಾಲಿಕ ಉತ್ಪಾದನ ಯೋಜನೆಗೂ ಎಷ್ಟು ಚರ ಆದಾನಗಳನ್ನು ಬಳಸಬೇಕೆಂಬ ನಿರ್ಧಾರಗಳು ಅಲ್ಪಕಾಲಿಕ ಉತ್ಪಾದನ ಯೋಜನೆಗಳಿಗೂ ಸಂಬಂಧಿಸಿದವು. ಸ್ಥಿರ ಆದಾನಗಳು ಬದಲಾಗದಿದ್ದು, ಒಂದೇ ಗುಣಗಳುಳ್ಳವು ಆಗಿದ್ದು, ಚರ ಆದಾನಗಳು ಬದಲಾಗುತ್ತಿದ್ದರೆ ಪ್ರದಾನದ ಪರಿಮಾಣ ಬದಲಾಗುತ್ತದೆ. ಒಂದು ಪ್ರಕ್ರಿಯೆಯಲ್ಲಿ (ಪ್ರೋಸೆಸ್) ಒಂದು ಕಾಲದ ಒಂದು ನಿರ್ದಿಷ್ಟ ಏಕಮಾನದಲ್ಲಿ (ಯೂನಿಟ್) ದೊರಕುವ ಪ್ರದಾನದ (ಔಟ್ಪುಟ್) ಪರಿಮಾಣ ಆಗಿದ್ದು, ಚರ ಆದಾನದ ಪರಿಮಾಣ ಆಗಿದ್ದರೆ ಎಂಬುದು ಪ್ರದಾನ ಮತ್ತು ಆದಾನ ಇವುಗಳ ಸಂಬಂಧವನ್ನು ನಿರೂಪಿಸುತ್ತದೆ. ಅದೇ ಕಾಲದ ಏಕಮಾನದಲ್ಲಿ ಪ್ರದಾನದ ಪರಿಮಾಣ ಆಗಿದ್ದು, ಇವು ಚರ ಆದಾನಗಳ ಪರಿಮಾಣಗಳಾಗಿದ್ದರೆ ಎಂಬುದು ಪ್ರದಾನ ಮತ್ತು ಆದಾನಗಳ ಸಂಬಂಧವನ್ನು ನಿರೂಪಿಸುತ್ತದೆ.

ಒಂದೇ ಕಾಲದಲ್ಲಿ ಎಲ್ಲ ಆದಾನಗಳಲ್ಲೂ ಒಂದೇ ಪ್ರಮಾಣದಲ್ಲಿ ಬದಲಾವಣೆಗಳನ್ನು ಮಾಡಿದಾಗ ಪ್ರದಾನದಲ್ಲಿ ಆಗುವ ಬದಲಾವಣೆಗಳೇ ಗಾತ್ರಾನುಗುಣ ಪ್ರತಿಫಲ. ಕೆಲವು ಪ್ರಕ್ರಿಯೆಗಳು ಏರುಮುಖದ, ಕೆಲವು ಸ್ಥಿರವಾಗಿರುವ, ಮತ್ತೆ ಕೆಲವು ಕಡಿಮೆಯಾಗುತ್ತಿರುವ ಗಾತ್ರಾನುಗುಣ ಪ್ರತಿಫಲಗಳನ್ನು ಪ್ರದರ್ಶಿಸುವುದು. ಇನ್ನೂ ಕೆಲವು ಪ್ರಕ್ರಿಯೆಗಳು ಉತ್ಪನ್ನದ ವಿವಿಧ ಹಂತಗಳಲ್ಲಿ ಮೂರು ಬಗೆಯ ಪ್ರತಿಫಲಗಳನ್ನೂ ಪ್ರದರ್ಶಿಸಬಹುದು. ಆದಾನಗಳನ್ನು (ಚಿ) ದರದಲ್ಲಿ ಬದಲಾಯಿಸಿದಾಗ ಪ್ರದಾನ (ಬಿ) ದರಲ್ಲಿ ಬದಲಾವಣೆ ಹೊಂದಿದರೆ ಅವಲಂಬಿತ ಪರಿಮಾಣ ಆಗುತ್ತದೆ.