ಗಾಜಿನ ಮೀನು

ಮೀನುಗಳ ಪರಿವಾರ

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಗಾಜಿನ ಮೀನು ಬದಲಾಯಿಸಿ

ಆಕ್ಟಿನೋಪ್ಟೆರ್ಜಿಯೈ ವರ್ಗದ ಪರ್ಸಿಫಾರ್ಮೀಸ್ ಗಣದ ಅಂಬಾಸಿಡೀ ಕುಟುಂಬಕ್ಕೆ ಸೇರಿದ ಒಂದು ಸಿಹಿನೀರು ಮೀನು. ಅಂಬಾಸಿಸ್ ಇದರ ವೈಜ್ಞಾನಿಕ ನಾಮ ಅಲ್ಲದೆ ಇದಕ್ಕೆ ಸಿಪಾರಿ ಮೀನು ಎಂಬ ಹೆಸರೂ ಇದೆ. ಸುಮಾರು 7.5 ಸೆಂ.ಮೀ ಬೆಳೆಯುವ ಸಣ್ಣ ಮೀನು. ಬಲು ಪಾರದರ್ಶಕವಾಗಿ ಗಾಜಿನಂತೆಯೇ ಕಾಣುವುದರಿಂದ ಈ ಹೆಸರು. ಭಾರತ, ಬರ್ಮಾ, ಇಂಡೋನೇಶಿಯ, ಜಾವಾ, ಮಲಯ, ತೈಲಾಂಡ್ ದೇಶಗಳ ನದಿ ಕೆರೆ ಕುಂಟೆಗಳಲ್ಲಿ ಸಾಮಾನ್ಯವಾಗಿ ಕಾಣಸಿಗುವ ಮೀನು. ಪಾರದರ್ಶಕ, ದೇಹದ ಬಣ್ಣ ಹಳದಿ ಮಿಶ್ರಿತ ಆಲಿವ್, ಮಧ್ಯದಲ್ಲಿ ಬೆಳ್ಳಿ ಬಣ್ಣದ ಗೆರೆ. ದೊಡ್ಡ ತಲೆ, ಬಾಲದ ರೆಕ್ಕೆ ಸಮ ಭಾಗದ ಹಾಲೆಗಳಾಗಿ ಆಳವಾಗಿ ಕವಲೊಡಿದಿದೆ. ಮುಳ್ಳಿನ ಬೆನ್ನು ರೆಕ್ಕೆ ಮೇಲೆ ಕಪ್ಪು ಗುರುತು. ಭುಜದ ಮೇಲೆ ಚುಕ್ಕೆಗಳು ಧೀರ್ಘ ಚತರಸ್ರಾಕಾರದ ಮಚ್ಚೆಯಾಗಿ ಒಟ್ಟುಗೂಡಿವೆ. ತಲೆಯ ಮೇಲ್ಭಾಗ ಹಾಗೂ ಬೆನ್ನು ಭಾಗದ ಮೊದಲನೆಯ ಈಜುರೆಕ್ಕೆಯ ಅರ್ಧಭಾಗ ಕಪ್ಪು ಬಣ್ಣದವು. ಈಜುರೆಕ್ಕೆಗಳು ಕಿತ್ತಳೆ ಬಣ್ಣದವು. ಮೇಲಿನ ದವಡೆಗಿಂತ ಉದ್ದವಾಗಿರುವ ಕೆಳದವಡೆ, ಕೆಳದವಡೆಯ ಸಂಯೋಜನಾ ಸ್ಥಾನದ (ಸಿಂಪೈಸಿಸ್) ಎರಡು ಕಡೆಗಳಲ್ಲೂ ಮುಂದಕ್ಕೆ ಚಾಚಿರುವ ಡೊಂಕಾದ ಕೋರೆಹಲ್ಲುಗಳು., ಎರಡು ದವಡೆಗಳಲ್ಲೂ ಹಲ್ಲಿನ ಎರಡು ಪಂಕ್ತಿಗಳು, - ಇವು ಗಾಜಿನ ಮೀನನ್ನು ಗುರುತಿಸಲು ಇರುವ ಪ್ರಮುಖ ಲಕ್ಷಣಗಳು.