ಗಾಜ಼ಾ

ಪ್ಯಾಲೇಸ್ಟಿನಿಯನ್ ನಗರ
(ಗಾಜಂ ಇಂದ ಪುನರ್ನಿರ್ದೇಶಿತ)

ದಕ್ಷಿಣ ಪ್ಯಾಲಸ್ತೀನಿನ ಒಂದು ನಗರ. ಮೆಡಿಟರೇನಿಯನ್ ಕರಾವಳಿಯಿಂದ ಸು. 5 ಕಿ.ಮೀ ಮತ್ತು ಟೆಲ್-ಅವಿವ್ನ ನೈಋತ್ಯಕ್ಕೆ 64 ಕಿಮೀ ದೂರದಲ್ಲಿದೆ. ಪ್ರ.ಶ.ಪು. 62ರ ಹೊತ್ತಿಗೆ ಪಾಂಪೇಯ ಆಡಳಿತಕ್ಕೆ ಈ ನಗರ ಒಳಗಾದಾಗ ಇದಕ್ಕೆ ಗಾಜ಼ ಮಿನೋವ ಎಂಬ ಹೆಸರನ್ನು ಕೊಡಲಾಗಿತ್ತು. ಪ್ರ.ಶ. 331ರಲ್ಲಿ ಚಕ್ರವರ್ತಿ ಕಾನ್ಸ್ಟೆಂಟೈನ್ ತನ್ನ ಸೋದರಿಯ ಗೌರವಾರ್ಥವಾಗಿ ಈ ನಗರಕ್ಕೆ ಕಾನ್್ಸಟ್ಯಾಂಟಿಯ ಎಂದು ಮರುನಾಮಕರಣಮಾಡಿದ. ಇಷ್ಟಾದರೂ ಇಂದಿಗೂ ಇದಕ್ಕೆ ಗಾಜಂ ಎಂಬ ಹೆಸರೇ ವಿಶೇಷವಾಗಿ ಬಳಕೆಯಲ್ಲಿದೆ. ಇದು ಭೌಗೋಳಿಕ ಹಾಗೂ ಆಯಕಟ್ಟಿನ ದೃಷ್ಟಿಯಿಂದ ಅತ್ಯಂತ ಮಹತ್ವದ ಸ್ಥಾನ ಗಳಿಸಿರುವುದರಿಂದ ಪ್ರಾಚೀನ ಕಾಲದಿಂದಲೂ ಈ ನಗರಕ್ಕೆ ಐತಿಹಾಸಿಕ ಪ್ರಾಮುಖ್ಯವಿದೆ. ಇಲ್ಲಿಯ ದಗೋನ್ ದೇವಾಲಯವನ್ನು ಸ್ಯಾಂಸನ್ ನಿರ್ನಾಮಗೊಳಿಸಿದನೆಂದು ಬೈಬಲಿನಲ್ಲಿ ಉಲ್ಲೇಖವಿದೆ. ಗಾಜಂ ಹೆಸರು ಮೊಟ್ಟಮೊದಲಿಗೆ ಕಾಣವುದು ಈಜಿಪ್ಟಿನ ಚಕ್ರವರ್ತಿ ಮೂರನೆಯ ಥೂಟ್ಮೋಸೆಯ ಸ್ಮಾರಕದಲ್ಲಿ. ಈತ ಪ್ರ.ಶ.ಪು. 1480ರಲ್ಲಿ ಸಿರಿಯದ ಮೇಲೆ ಆಕ್ರಮಣ ನಡೆಸಲು ಗಾಜ಼ವನ್ನು ಸೈನಿಕನೆಲೆಯಾಗಿ ಬಳಸಿದುದಾಗಿ ತಿಳಿದುಬಂದಿದೆ. ಕ್ಯಾನಾನ್ ಪ್ರಾಂತ್ಯ ಗಾಜ಼ದಿಂದ ಸಿದೋನ್ವರೆಗೆ ವಿಸ್ತರಿಸಿತ್ತೆಂದು ಹೇಳಲಾಗಿರುವುದರಿಂದ ಗಾಜó ಅದರ ದಕ್ಷಿಣ ಗಡಿಯಾಗಿದ್ದಿರಬೇಕು. ಗಾಜಂದ ಸಮೀಪದಲ್ಲಿದ್ದ ನಗರಗಳನ್ನು ಜೋಷುವ ವಶಪಡಿಸಿಕೊಂಡನಾದರೂ ಗಾಜ಼ ಇಸ್ರೇಲಿನ ಗಡಿಯಿಂದ ಹೊರಗೇ ಉಳಿದಿತ್ತು. ಪ್ರ.ಶ.ಪು. ಸು. 1200ರ ವೇಳೆಗೆ ಫಿಲಿಸ್ಟೀನರು ಪ್ಯಾಲೆಸ್ಟೀನ್ ಕರಾವಳಿಯನ್ನು ಪ್ರವೇಶಿಸಿದರು. ಆಗ ಇದು ಅವರ ಪಂಚ ಮಹಾ ನಗರಗಳಲ್ಲಿ ಒಂದಾಗಿ ಪರಿಣಮಿಸಿತು. ಯಹೂದ್ಯರಿಗೆ ಸತತವಾಗಿ ಕಿರುಕುಳ ನೀಡಿದ ನಗರವೂ ಇದಾಯಿತು. ಗುಲಾಮರ ವ್ಯಾಪಾರಕೇಂದ್ರವಾಗಿತ್ತೆಂಬ ಕಾರಣಕ್ಕಾಗಿ ಅಮೋಸ್ ಈ ನಗರವನ್ನು ಗೌರವಿಸಲಿಲ್ಲ. ಪ್ರ.ಶ.ಪು. 734ರಲ್ಲಿ ಮೂರನೆಯ ತಿಗ್ಲಾಥ್ ಪಿಲೇಸೆರ್ ಈ ನಗರದ ಮೇಲೆ ಆಕ್ರಮಣ ಮಾಡಿದ್ದ. ಆಗ ನಗರದ ರಾಜನಾಗಿದ್ದ ಹನೂನ್ ಈಜಿಪ್ಟಿಗೆ ಓಡಿಹೋದನಾದರೂ ಅಸ್ಸಿರಿಯನ್ನರ ಅಧಿಪತ್ಯವನ್ನು ಒಪ್ಪಿಕೊಂಡು ಗಾಜಂಕ್ಕೆ ಹಿಂದಿರುಗಿದ. ಆದರೆ ಪ್ರ.ಶ.ಪು. 720ರಲ್ಲಿ ಈಜಿಪ್ಷಿಯನರ ನೆರವನ್ನು ಪಡೆದು, ಎರಡನೆಯ ಸಾರ್ಗೊನನ ಆಡಳಿತಾವಧಿಯಲ್ಲಿ ಅಸ್ಸಿರಿಯಕ್ಕೆ ವಿರುದ್ಧವಾಗಿ ದಂಗೆಯೆದ್ದ. ಆಗ ನಡೆದ ಯುದ್ಧದಲ್ಲಿ ಹನೂನನನ್ನು ಸೋಲಿಸಿ ಸೆರೆಹಿಡಿದು ಅಸ್ಸಿರಿಯಕ್ಕೆ ಕೊಂಡೊಯ್ಯಲಾಯಿತು. ಪ್ರ.ಶ.ಪು. 332ರಲ್ಲಿ ಎರಡು ತಿಂಗಳುಗಳ ಹೋರಾಟದ ಕೊನೆಯಲ್ಲಿ ಅಲೆಗ್ಸಾಂಡರ್ ಇದನ್ನು ಪರ್ಷಿಯನ್ನರಿಂದ ಗೆದ್ದುಕೊಂಡ. ಪ್ರ.ಶ.ಪು. 3ನೆಯ ಶತಮಾನದಿಂದ 1ನೆಯ ಶತಮಾನದ ವರೆಗಿನ ಅವಧಿಯಲ್ಲಿ ಈಜಿಪ್ಟ್, ಸಿರಿಯ ಮತ್ತು ಯಹೂದ್ಯ ಸೈನ್ಯಗಳು ಈ ನಗರದ ಮೇಲೆ ತಮ್ಮ ಆಧಿಪತ್ಯವನ್ನು ಸ್ಥಾಪಿಸುವ ಸಲುವಾಗಿ ಪರಸ್ಪರ ಹೋರಾಡುತ್ತಿದ್ದುವು. ಪ್ರ.ಶ.ಪು. 62ರಲ್ಲಿ ಪಾಂಪೇ ಈ ನಗರವನ್ನು ಗೆದ್ದುಕೊಂಡಾಗ ಇದು ವ್ಯಾಪಾರಕೇಂದ್ರವಾಗಿ ಅಭಿವೃದ್ಧಿ ಹೊಂದಿತು. ಈ ದಿಕ್ಕಿನಲ್ಲಿ ರೋಮನ್ನರು ನಡೆಸಿದ ಪ್ರಯತ್ನಗಳು ಉಲ್ಲೇಖಾರ್ಹವಾಗಿವೆ. ಪ್ರ.ಶ.ಪು. 30ರಲ್ಲಿ ಆಗಸ್ಟಸ್ ಚಕ್ರವರ್ತಿ ಈ ನಗರವನ್ನು ಹೆರದ್ಗೆ ಬಳುವಳಿಯಾಗಿ ಕೊಟ್ಟ. ಪ್ರ.ಶ.ಪು. 4ರಲ್ಲಿ ಹೆರದ್ ಕಾಲವಾದಾಗ ಇದನ್ನು ಮತ್ತೆ ಸಿರಿಯದ ಚಕ್ರಾಧಿಪತ್ಯಕ್ಕೇ ಸೇರಿಸಿಕೊಳ್ಳಲಾಯಿತು.

ಕ್ರೈಸ್ತರ ನಂಬಿಕೆಯ ಪ್ರಕಾರ ಫಿಲೋಮೆನ್ ಗಾಜ಼ಕ್ಕೆ ಬಂದ ಮೊಟ್ಟಮೊದಲ ಧರ್ಮಾಧಿಕಾರಿ. ಪ್ರ.ಶ. 331ರಲ್ಲಿ ಗಾಜಂದ ರೇವುಪಟ್ಟಣವಾಗಿದ್ದ ಮುಯಿ-ಔಮಸ್ (ಇಂದಿನ ಅಲ್-ಮೀನ) ಉಪನಗರ ಸಂಪೂರ್ಣವಾಗಿ ಕ್ರೈಸ್ತಧರ್ಮಕ್ಕೆ ಧರ್ಮಾಂತರ ಹೊಂದಿತು. ಈ ಚರಿತ್ರಾರ್ಹ ಘಟನೆಯ ಸ್ಮರಣಾರ್ಥ ಹಾಗೂ ತನ್ನ ಸೋದರಿಯ ಗೌರವಾರ್ಥ ಚಕ್ರವರ್ತಿ ಕಾನ್್ಸಟೆಂಟೈನ್ ಈ ನಗರಕ್ಕೆ ಕ್ಯಾನ್ಸ್ಸಟ್ಯಾಂಟಿಯ ಎಂದು ನಾಮಕರಣ ಮಾಡಿದ. ಪ್ರ.ಶ. 5ನೆಯ ಶತಮಾನದ ಆರಂಭದಲ್ಲಿ ಕ್ರೈಸ್ತಧರ್ಮ ಇಲ್ಲಿ ವಿಜೃಂಭಿಸತೊಡಗಿತ್ತು. ಪ್ರ.ಶ. 500ರ ಸುಮಾರಿಗೆ ಇಲ್ಲಿ ಒಂದು ರ್ಹೆಟೊರಿಕ್ ಶಾಲೆಯೂ ಆರಂಭಗೊಂಡಿತ್ತು.

634ರಲ್ಲಿ ಅರಬ್ಬರು ಗಾಜ಼ವನ್ನು ವಶಪಡಿಸಿಕೊಂಡರು. ಆದರೆ, ಅವರು ಇಲ್ಲಿಗೆ ಅಪರಿಚಿತರೇನೂ ಆಗಿರಲಿಲ್ಲ. ಎರಡನೆಯ ಖಲೀಫನಾದ ಉಮರ ಇಲ್ಲಿ ರಾಜ್ಯವಾಳಿ ಪ್ರಸಿದ್ಧಿ ಗಳಿಸಿದ್ದ. ಪ್ರವಾದಿ ಮಹಮ್ಮದನ ಮುತ್ತಜ್ಜ ಹಾಷಿಮನ ಸಮಾಧಿ ಗಾಜ಼ದಲ್ಲೇ ಇತ್ತೆಂದು ಇಸ್ಲಾಂ ಸಂಪ್ರದಾಯ ಹೇಳುತ್ತದೆ. ಇಸ್ಲಾಂ ಕಾನೂನಿಗೆ ವ್ಯವಸ್ಥಿತ ರೂಪವನ್ನಿತ್ತ ಕೀರ್ತಿಗೆ ಪಾತ್ರನಾಗಿರುವ ಅಲ್-ಶಫಿ ಹುಟ್ಟಿದ್ದೂ ಇಲ್ಲೇ (767). ಮುಂದೆ 12ನೆಯ ಶತಮಾನದಲ್ಲಿ ಧರ್ಮಯೋಧರು ಇದನ್ನು ವಶಪಡಿಸಿಕೊಂಡಾಗ ಇದು ಬಹು ಮಟ್ಟಿಗೆ ಪಾಳು ನೆಲವಾಗಿತ್ತು. ಅವರು ಈ ನಗರವನ್ನು ಸಾಕಷ್ಟು ಅಭಿವೃದ್ಧಿಪಡಿಸಿದ ರಾದರೂ ಇದಕ್ಕೆ ಮತ್ತೆ ಹಿಂದಿನ ಮಹತ್ತ್ವ ದೊರೆಯಲಿಲ್ಲ.

1187ರಲ್ಲಿ ಸಲಾದೀನ್ ಇದನ್ನು ಮತ್ತೆ ವಶಪಡಿಸಿಕೊಂಡಾಗ ಈ ನಗರ ಮತ್ತೆ ಮುಸ್ಲಿಮರ ಕೈವಶವಾದಂತಾಯಿತು. 1577ರಲ್ಲಿ ತುರ್ಕರು, 1799ರಲ್ಲಿ ನೆಪೋಲಿಯನ್ ಬೋನಾಪಾರ್ಟೆ ಈ ನಗರದ ಮೇಲೆ ತಮ್ಮ ಪ್ರಭುತ್ವ ಸ್ಥಾಪಿಸಿದ್ದರು. 1831ರಲ್ಲಿ ಇದು ಈಜಿಪ್ಟಿನ ಗವರ್ನರ್ ಮೊಹಮ್ಮದಾಲಿಯ ಕೈವಶವಾಯಿತು. ಆದರೆ 1840ರಲ್ಲಿ ಇದು ಮತ್ತೆ ತುರ್ಕರ ಆಡಳಿತಕ್ಕೆ ಒಳಗಾಯಿತು. 1917ರಲ್ಲಿ ಇದು ಬ್ರಿಟಿಷ್ ಮತ್ತು ತುರ್ಕಿ ಸೇನೆಗಳ ನಡುವಣ ಕದನದ ಕ್ಷೇತ್ರವಾಗಿ ಪರಿಣಮಿಸಿತು. ಪ್ಯಾಲೆಸ್ಟೀನಿನ ಬ್ರಿಟಿಷ್ ನಿಯೋಗಿ ಆಡಳಿತದಲ್ಲಿ ಗಾಜ಼ ನಗರ ಇದೇ ಹೆಸರಿನ ಪ್ರಾಂತ್ಯದ ಆಡಳಿತ ಕೇಂದ್ರವಾಗಿ ಪರಿಣಮಿಸಿತು. 1947ರ ನವೆಂಬರ್ 20ರಂದು ವಿಶ್ವಸಂಸ್ಥೆಯ ಮಹಾಸಭೆ ಪ್ಯಾಲಿಸ್ಟೀನ್ ವಿಭಜನೆಯ ನಿರ್ಣಯವನ್ನು ಅಂಗೀಕರಿಸಿದ್ದರಿಂದ ಗಾಜ಼ ಮತ್ತು ಅದರ ಸುತ್ತಮುತ್ತಣ ಪ್ರದೇಶಗಳು ಪ್ಯಾಲೆಸ್ಟೀನ್ ಅರಬ್ ಪ್ರದೇಶದ ಭಾಗಗಳಾಗಿ ಪರಿಣಮಿಸಿದುವು. 1948ರಲ್ಲಿ ಬ್ರಿಟಿಷ್ ಒಪ್ಪಂದದ ಅವಧಿ ಕೊನೆಗೊಂಡ ದಿವಸವೇ ಇದು ಇಸ್ರೇಲ್-ಈಜಿಪ್ಟ್ ನಡುವಣ ಕದನದ ಕೇಂದ್ರವೂ ಪ್ಯಾಲೆಸ್ಟೀನ್ ಅರಬ್ ನಿರಾಶ್ರಿತರ ನೆಲೆಯೂ ಆಗಿ ಪರಿಣಮಿಸಿತು. 1949ರ ಕದನ ವಿರಾಮ ಒಪ್ಪಂದ ಗಾಜ಼ದ ಕೆಲವು ಭಾಗಗಳ ಮೇಲೆ ಈಜಿಪ್ಟಿನ ಸೈನ್ಯಾಧಿಕಾರವನ್ನು ಮಾನ್ಯಮಾಡಿತು. 1956ರಲ್ಲಿ ಇಸ್ರೇಲ್ ಗಾಜ಼ದ ಒಂದು ಭಾಗವನ್ನು ವಶಪಡಿಸಿಕೊಂಡಿತ್ತಾದರೂ ಮತ್ತೆ ಅದನ್ನು ಈಜಿಪ್ಟಿಗೆ ಹಿಂದಿರುಗಿಸಲಾಯಿತು. 1967ರಲ್ಲಿ ಇಸ್ರೇಲ್-ಈಜಿಪ್್ಟಗಳ ನಡುವೆ ನಡೆದ ಆರು ದಿನಗಳ ಯುದ್ಧದಲ್ಲಿ ಇದನ್ನು ಇಸ್ರೇಲ್ ಮತ್ತೆ ಆಕ್ರಮಿಸಿಕೊಂಡಿತು.

ಈ ನಗರದ ಬಳಿ ಟೆಲ್-ಎಲ್-ಅಜ್ಜುಲ್ನಲ್ಲಿ ಫ್ಲಿಂಡರ್ಸ್ ಪೆಟ್ರಿಯೇ ಉತ್ಖನನಗಳನ್ನು ನಡೆಸಿದ್ದಾನೆ. ಈತನ ಅಭಿಪ್ರಾಯದ ಪ್ರಕಾರ ನವಶಿಲಾಯಗದಿಂದ ಕಂಚಿನ ಯುಗದ ವರೆಗೆ ಇಲ್ಲಿ ಜನರು ವಾಸವಾಗಿದ್ದರು. ಇದೇ ಪ್ರಾಚೀನ ಗಾಜ಼ದ ನಿವೇಶನವಾಗಿತ್ತು. ಈ ಭೂಭಾಗ ವಡಿಗುಹ್ಜೇಡ್ ನದೀಮುಖಜಭೂಮಿಯ ಬಳಿ ಇದ್ದು, ಇದರ ಅಳವೆ ಮಲೇರಿಯ ಪೀಡಿತವಾಗಿದ್ದುದರಿಂದ ಶಾಶ್ವತ ನೆಲೆಸಿಕೆ ಅಸಾಧ್ಯವಾಗಿದ್ದಿರಬೇಕೆಂದು ಹೇಳಲಾಗಿದೆ. ಈ ಕಾರಣದಿಂದಾಗಿ ಈ ನಿವೇಶನ ವಜವಾಗಿರಬೇಕು. ಗಾಜ಼ದ ಪ್ರಮುಖ ಸ್ಮಾರಕಗಳೆಂದರೆ ಸಂತ ಪೋರ್ಫಿರಿಯ ಚರ್ಚ್, ಜಮೀ-ಅಲ್-ಕಬೀರ್ ಬೃಹತ್ ಮಸೀದಿ, ಜಮೀ-ಅಲ್-ಸಯೀದ್ ಹಾಷಿಮ್ ಸಮಾಧಿ ಮತ್ತು ಅಬು-ಅಲ್-ಅಜಮ್ ಸಮಾಧಿ. ಇಲ್ಲಿ ಕ್ರೈಸ್ತಧರ್ಮ ಪ್ರಚಾರ ಸಂಸ್ಥೆಯೊಂದಿದೆ. ಅದು ಕೆಲವು ಶಾಲೆಗಳನ್ನೂ ಆಸ್ಪತ್ರೆಗಳನ್ನೂ ನಡೆಸುತ್ತಿದೆ. ಈಚೆಗೆ ಈ ಸುತ್ತಿನಲ್ಲಿ ಬಾರ್ಲಿ ವ್ಯವಸಾಯವನ್ನು ಕೈಗೊಂಡಿದ್ದರಿಂದ ಇದು ಆಂಶಿಕವಾಗಿಯಾದರೂ ಮತ್ತೆ ಸಮೃದ್ಧಿಯತ್ತ ಹೆಜ್ಜೆ ಹಾಕಿದಂತಾಗಿದೆ. ಎತ್ತರವಾದ ಪ್ರದೇಶದಲ್ಲಿ ನೆಲೆಗೊಂಡಿರುವುದರಿಂದಲೂ ಅನೇಕ ಗುಮ್ಮಟ ಹಾಗೂ ಮಿನಾರುಗಳಿರುವು ದರಿಂದಲೂ ಆಲಿವ್ ಮತ್ತು ಖರ್ಜೂರದ ಗಿಡಗಳು ಅಲ್ಲಲ್ಲಿ ಬೆಳೆದು ನಿಂತಿರುವದ ರಿಂದಲೂ ಈ ನಗರ ತುಂಬಾ ರಮಣೀಯವಾಗಿದೆ.

ಗಾಜ಼ ಭೂಪಟ್ಟೆ: ಪ್ಯಾಲೆಸ್ಟೀನಿನ ನೈಋತ್ಯಕ್ಕೆ, ಈಜಿಪ್ಟಿನ ಗಡಿಯಿಂದ ಈಶಾನ್ಯ ದಿಕ್ಕಿನತ್ತ ಹರಡಿಕೊಂಡಿರುವ, ಸುಮಾರು 9 ಕೀ.ಮೀ. ಅಗಲ, 40ಕಿ.ಮೀ. ಉದ್ದವಿರುವ ಭೂಭಾಗ, ಭೌಗೋಳಿಕವಾಗಿ ಇದು ನೆಗೆಬ್ ಪ್ರಾಂತ್ಯದ ಒಂದು ಭಾಗ, 1948ಕ್ಕೆ ಮೊದಲು ಇದು ಬ್ರಿಟಿಷ್ ನಿಯೋಗಿ ಆಡಳಿತಕ್ಕೆ ಒಳಪಟ್ಟಿದ್ದ ಪ್ಯಾಲೆಸ್ಟೀನಿನ ಒಂದು ಭಾಗವಾಗಿತ್ತು. ಆದರೆ, ಒಪ್ಪಂದದ ಅವಧಿ ಕೊನೆಗೊಂಡ ದಿವಸವೇ- ಅಂದರೆ, ಮೇ 15, 1948ರಂದೇ ಅರಬ್-ಇಸ್ರೇಲ್ ಯುದ್ಧ ಪ್ರಾರಂಭವಾಯಿತು. ಈಜಿಪ್ಟಿನ ಸೈನ್ಯ ಗಾಜ಼ವನ್ನು ಪ್ರವೇಶಿತು. ಗಾಜ಼ ಆಗ ಈಜಿಪ್ಟಿನ ಸೈನಿಕ ಕಾರ್ಯಾಚರಣೆ ಕೇಂದ್ರವೂ ಆಗಿ ಪರಿಣಮಿಸಿತು. ಕದನದ ಪರಿಣಾಮವಾಗಿ ಅರಬ್ಬರ ವಶದಲ್ಲಿದ್ದ ಈ ಪ್ರದೇಶದ ವಿಸ್ತೀರ್ಣ ಮೇಲೆ ಹೇಳಿದ ಅಳತೆಗೆ ಸೀಮಿತ ಗೊಂಡಿತು. ಇದಕ್ಕೆ ಗಾಜ಼ ಭೂಪಟ್ಟೆ ಎಂದು ಹೆಸರಾಯಿತು. ಅಧಿಕೃತವಾಗಿ ಇದರ ಮೇರೆಗಳು ನಿರ್ಧರಿಸಲ್ಪಟ್ಟು ಇದು ಅಸ್ತಿತ್ವಕ್ಕೆ ಬಂದದ್ದು 1949ರ ಫೆಬ್ರುವರಿ 24ರಂದು. 1949-1954ರಲ್ಲಿ ಒಟ್ಟಾರೆ ಶಾಂತಿ ಸ್ಥಿತಿಯಿತ್ತಾದರೂ ಆಗಿಂದಾಗ್ಗೆ ಸಣ್ಣಪುಟ್ಟ ಗಡಿ ಘರ್ಷಣೆಗಳು ನಡೆಯುತ್ತಲೇ ಇದ್ದುವು. 1955ರ ಫೆಬ್ರುವರಿಯಲ್ಲಿ ಇಸ್ರೇಲ್ ಈ ಭೂಪಟ್ಟೆಯ ಮೇಲೆ ತೀವ್ರಧಾಳಿ ನಡೆಸಿತು. ಈಜಿಪ್್ಟ ಪ್ರತಿ ಧಾಳಿ ನಡೆಸಿತು. 1956ರ ನವೆಂಬರಿನಲ್ಲಿ ಇಸ್ರೇಲಿನ ಸೈನ್ಯ ಇದನ್ನು ಆಕ್ರಮಿಸಿ ಕೊಂಡಿತು. ಈ ಮಧ್ಯೆ ಈ ಅವಧಿಯಲ್ಲಿ ಸೂಯೆಜ್ ಕಾಲುವೆಯ ರಾಷ್ಟ್ರೀಕರಣ ನಡೆದದ್ದರಿಂದ ಈ ಭೂಪಟ್ಟೆಯಲ್ಲಿ ಸ್ವಲ್ಪಕಾಲ ಶಾಂತಿ ಏರ್ಪಟ್ಟಿತು. ವಿಶ್ವಸಂಸ್ಥೆ ಅಂಗೀಕರಿಸಿದ ನಿರ್ಣಯಗಳಿಂದಾಗಿ 1957ರ ಮಾರ್ಚ್ ತಿಂಗಳಲ್ಲಿ ಇಸ್ರೇಲಿ ಪಡೆಗಳು ಈ ಪ್ರದೇಶವನ್ನು ತೆರವು ಮಾಡಿದುವು. ಈಜಿಪ್ಟ್ ಮತ್ತೆ ನಾಗರಿಕ ಆಡಳಿತ ವ್ಯವಸ್ಥೆಯ ಹೊಣೆಯ ವಹಿಸಿಕೊಂಡಿತು. ಘರ್ಷಣೆಗಳನ್ನು ನಿವಾರಿಸುವ ಸಲುವಾಗಿ ವಿಶ್ವಸಂಸ್ಥೆಯ ಪಡೆಗಳನ್ನು ಇರಿಸಲಾಯಿತು. 1967ರಲ್ಲಿ ಆರು ದಿನಗಳ ಯುದ್ಧದಲ್ಲಿ ಇದನ್ನು ಇಸ್ರೇಲ್ ಮತ್ತೆ ವಶಪಡಿಸಿಕೊಂಡಿತು. ==ಆರ್ಥಿಕ ಪರಿಸ್ಥಿತಿ== ಸಣ್ಣ ಕೈಗಾರಿಕೆಗಳು, ವ್ಯವಸಾಯ ಹಾಗೂ ಕೆಲಸಗಾರರಿಂದ ಕೂಡಿದೆ. ಪ್ರಮುಖವಾಗಿ ಸ್ಟ್ರಾಬೆರಿ, ಸಿಟ್ರಸ್, ಖರ್ಜೂರ, ಆಲಿವ್ ಹಾಗೂ ಹಣ್ಣುಗಳು. ವಿವಿಧ ತರಕಾರಿಗಳನನು ಬೆಳೆಯುತ್ತಾರೆ. ಸಣ್ಣ ಕೈಗಾರಿಕೆಗಳು: ಪ್ಲಾಸ್ಟಿಕ್, ಬಟ್ಟೆ, ಉಪಕರಣಗಳು, ಮಡಕೆಗಳು, ತಾಮ್ರ, ಹಾಗೂ ಕಾರ್ಪೆಟ್ ಕೈಗಾರಿಕೆಗಳಿವೆ.

ಸಂಸ್ಕೃತಿ

ಬದಲಾಯಿಸಿ

ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ರಶಾದ-ಶಾನ ಸಾಂಸ್ಕೃತಿಕ ಕೇಂದ್ರ ಪ್ರಮುಖವಾಗಿದೆ. ಮಕ್ಕಳಿಗಾಗಿ ಮಕ್ಕಳ ಸಾಂಸ್ಕೃತಿಕ ಕೇಂದ್ರ ಸ್ಥಾಪಿಸಿದ್ದು.. ಎಲ್ಲ ಬಗೆಯ ಕಲೆಗಳನ್ನು ಕಲಿಸಲಾಗುತ್ತದೆ. ಗಾeóÁ ಪ್ರಾಚೀನ ವಸ್ತು ಸಂಗ್ರಹಾಲಯ ಹಾಗೂ ಕ್ರೇಜಿûವಾಲರ ಪಾರ್ಕ್ಗಳನ್ನು ನೋಡಬಹುದು.

ಜನಸಂಖ್ಯೆಯ 90 ಭಾಗ ಶಿಕ್ಷಿತರು. ಇದನ್ನು ನಾಲ್ಕು ವಿಶ್ವವಿದ್ಯಾಲಯಗಳಿವೆ. 1. ಆತ-ಅಭರ ವಿಶ್ವವಿದ್ಯಾನಿಲಯ, 2. ಆಲ್ ಕ್ವುಕ್್ಸ ಮುಕ್ತ ವಿಶ್ವವಿದ್ಯಾನಿಲಯ 3. ಆಲ್ ಆಕ್ಸ್ ವಿಶ್ವವಿದ್ಯಾನಿಲಯ 4. ಇಸ್ಲಾಮಿಕ ವಿಶ್ವವಿದ್ಯಾನಿಲಯ ಗಾಭ

ಮುಖ್ಯವಾಗಿ ಸುನ್ನಿ ಇಸ್ಲಾಂ ಅನುಕರಿಸುವವರು ಇದ್ದಾರೆ. ಗಾeóÁದಲ್ಲಿ ಶಿಷ್ಯ ಇನ್ನೊಂದು ಅಧಿಕವಾಗಿತಂತೆ. ನಗರ ಜನಸಂಖ್ಯೆ: 2009ಕ್ಕೆ 449,221.

"https://kn.wikipedia.org/w/index.php?title=ಗಾಜ಼ಾ&oldid=1254677" ಇಂದ ಪಡೆಯಲ್ಪಟ್ಟಿದೆ