ಗಾಂಠಿಯಾ ಎಣ್ಣೆಯಲ್ಲಿ ಕರಿದ ಒಂದು ಭಾರತೀಯ ಖಾದ್ಯ. ಇದನ್ನು ಕಡಲೆ ಹಿಟ್ಟಿನಿಂದ ತಯಾರಿಸಲಾಗುತ್ತದೆ.[] ಇದು ಗುಜರಾತ್‍ನಲ್ಲಿ ಒಂದು ಜನಪ್ರಿಯ ಚಹಾ ಸಮಯದ ಲಘು ಆಹಾರವಾಗಿದೆ.[][] ಇವು ಬಹುತೇಕ ಇತರ ಭಾರತೀಯ ಲಘು ಆಹಾರಗಳಂತೆ ಗರಿಗರಿಯಾಗಿರದೇ ಮೃದುವಾಗಿರುತ್ತವೆ.[] ಇದರ ಸಿಹಿ ರೂಪವನ್ನು ಮೀಠಾ ಗಾಂಠಿಯಾ ಎಂದು ಕರೆಯಲಾಗುತ್ತದೆ.[ಸೂಕ್ತ ಉಲ್ಲೇಖನ ಬೇಕು] ಗಾಂಠಿಯಾ ಗುಜರಾತ್‍ನಲ್ಲಿ ಎಷ್ಟು ಜನಪ್ರಿಯವಾಗಿದೆಯೆಂದರೆ, ಗುಜರಾತ್‍ನ ಅತಿ ದೊಡ್ಡ ಪಕ್ಷಿಧಾಮವಾದ ನಳ್ ಸರೋವರ್‌ಗೆ ವಲಸೆ ಬರುವ ಪಕ್ಷಿಗಳು ಬಹಳ ಬೇಗನೇ ಪ್ರವಾಸಿಗರು ನೀಡುವ ಗಾಂಠಿಯಾ ತಿಂಡಿಯನ್ನು ತಿನ್ನಲು ಕಲಿಯುತ್ತವೆ.[][] ಇದು ಪಕ್ಷಿಗಳಿಗೆ ಅಪಾಯಕಾರಿ ಆಗಬಹುದು ಎಂದು ತಜ್ಞರು ಹೇಳುತ್ತಾರೆ.

ಭಾವ್‍ನಗರಿ ಗಾಂಠಿಯಾ

ಉಲ್ಲೇಖಗಳು

ಬದಲಾಯಿಸಿ
  1. ೧.೦ ೧.೧ ೧.೨ "KapilDave" (13 December 2011). "Tourists use ganthiya to lure birds at Nal Sarovar". The Indian Express. Archived from the original on 8 November 2015. Retrieved 8 November 2015.
  2. Kavoor, Rekha (13 October 2010). "Dandiya nights light up city life". The Times Of India. TNN. Archived from the original on 3 ಡಿಸೆಂಬರ್ 2013. Retrieved 8 November 2015.
  3. Elias, Esther (14 November 2013). "On the Kutch food trail". ದಿ ಹಿಂದೂ. Retrieved 8 November 2015.
  4. Varu, Shantilal (28 November 2010). "Brown-headed Gull feeding on ganthiya[made from bason]". Photograph. Internet Bird Collection (http://ibc.lynxeds.com). Archived from the original on 8 November 2015. Retrieved 8 November 2015.
"https://kn.wikipedia.org/w/index.php?title=ಗಾಂಠಿಯಾ&oldid=1081035" ಇಂದ ಪಡೆಯಲ್ಪಟ್ಟಿದೆ