Caesalpinia
Caesalpinia pulcherrima
Scientific classification
ಸಾಮ್ರಾಜ್ಯ:
Plantae
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
Eudicots
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಉಪಕುಟುಂಬ:
ಪಂಗಡ:
ಕುಲ:
Caesalpinia

Type species
Caesalpinia brasiliensis
Species

See text.

Synonyms

Biancaea Tod.
Brasilettia (DC.) Kuntze
Denisophytum R.Vig.
Poinciana L.
Ticanto Adans.[]

ಗಜ್ಜುಗ

ಗಜ್ಜುಗ ಇದು ಆಯುರ್ವೇದ ಔಷಧ ಪದ್ಧತಿಯಲ್ಲಿ ಬಳಕೆಯಲ್ಲಿರುವ ಒಂದು ಸಸ್ಯ. ಇದರ ಸಸ್ಯ ಶಾಸ್ತ್ರೀಯ ಹೆಸರು ಕ್ಯಾಸಲ್ಪೀನಿಯ ಕ್ರಿಸ್ತ (Caesalpinia crista}.ಈ ಸಸ್ಯದಿಂದ ತಯಾರಿಸುವ ಔಷಧವು ಮಧುಮೇಹ ಹಾಗು ಮಲೇರಿಯ ದಂತಹ ಕಾಯಿಲೆಗಳಿಗೆ ರಾಮಬಾಣ.

ಗಜ್ಜುಗ

ಬದಲಾಯಿಸಿ

ವರ್ಣನೆ

ಬದಲಾಯಿಸಿ
  • ಈ ಬಳ್ಳಿಯು ಇತರೆ ಗಿಡಗಳನ್ನು ಆಶ್ರಯಿಸಿ ಬೆಳೆಯುವುದು. ಆಸರೆಯಿಲ್ಲದಾಗ ನೆಲದ ಮೇಲೆ ಪೂದೆಯಾಗಿ ಬೆಳೆಯುತ್ತದೆ. ಇದರ ಎಲೆಗಳು ಚಿಕ್ಕವು ಮತ್ತು ಹುಣಸೆ ಎಲೆಗಳಂತೆ ಎದರು-ಬದುರು ಆಗಿ ಬೆಳೆಯುತ್ತವೆ, ಬಳ್ಳಿ ತುಂಬಾ ಮುಳ್ಳುಗಳೀರುತ್ತವೆ, ಇದರ ಕಾಯಿ ಗಟ್ಟಿಯಾಗಿರುತ್ತದೆ. ಒಣಗಿದಾಗ ಹೊದಿಕೆಯ ಒಳಗಡೆ ತಿಳಿನೀಲ ವರ್ಣ ಹೊಂದಿರುತ್ತದೆ. ಇದನ್ನು ಒಡೆದರೆ ಒಳಗಡೆ ನಯನವಾದ ಬೀಜವಿರುತ್ತದೆ. ಎಲೆ, ಬೀಜ, ಕಾಯಿ ಎಲ್ಲವೂ ಕಹಿಯಗಿರುತ್ತದೆ. ಮೇ, ಆಗಸ್ಟ್, ನವೆಬರ್ ತಿಂಗಳಲ್ಲಿ ಹೂವು, ಕಾಯಿ ಬಿಡುತ್ತದೆ.

ಸರಳ ಚಿಕಿತ್ಸೆಗಳು

ಬದಲಾಯಿಸಿ

ವೃಷಣಗಳ ಊತ ಮತ್ತು ನೋವು

ಬದಲಾಯಿಸಿ

ಗಜ್ಜುಗದ ಸೊಪ್ಪನ್ನು ನೀರಿನಲ್ಲಿ ನುಣ್ಣಗೆ ಅರೆದು ಸರಿಯಂತೆ ಮಾಡುವುದು. ಈ ಸರಿಯನ್ನು ಸ್ವಲ್ಲಪ ಬಿಸಿ ಮಾಡಿ ಅಂಡಗಳಿಗೆ ಲೇಪಿಸುವುದು, ಮತ್ತು ಅದರ ಮೇಲೆ ಹರಳು ಎಲೆಗಳನ್ನು ಸುತ್ತುವುದು.

  • ರಕ್ತ ಶುದ್ದಿ ಕರುಳಿನ ಕ್ರಿಮಿಗಳ ನಾಶ

ಆಗತಾನೆ ಕಿತ್ತು ತಂದ ಒಂದು ಹಿಡಿ ಗಜ್ಜುಗದ ಎಲೆಗಳನ್ನು ನೀರಿನಲ್ಲಿ, ನುಣ್ಣಗೆ ಅರೆದು ಬಟ್ಟೆಯಲ್ಲಿ ಸೋಸಿಕೊಳ್ಳುವುದು, ಇದರಲ್ಲಿ ದಿನಕ್ಕೆ ಒಂದು ವೇಳೆಗೆ ಟೀ ಚಮಚ ಕುಡಿಯುವುದು.

ಆಸ್ತಮ ಮತ್ತು ಗೊರಲು ವ್ಯಾಧಿ

ಬದಲಾಯಿಸಿ

ನಾಲ್ಕು ಗಜ್ಜುಗದ ಕಾಯಿಯನ್ನು ಬಿಸಿ ಬೂದಿಯಲ್ಲಿ ಇಟ್ಟು ಸುಡುವುದು. ತಣ್ಣಗಾದ ಮೇಲೆ ನಯವಾಗಿ ಚೊರ್ಣಿಸುವುದು. ವೇಳೆಗೆ ಒಂದು ಚಿಟಿಕ ಬೂದಿಯನ್ನು ನೀರಿನಲ್ಲಿ ಕದಡಿ ಸೇವಿಸುವುದು. ಹೊಟ್ಟೆ ನೋವಿನಲ್ಲಿ (ವಾಯು ತುಂಬಿಕೊಂಡು) 10 ಗ್ರಾಂ ಗಜ್ಜುಗದ ಸಿಪ್ಪೆಯನ್ನು ಮತ್ತು 10 ಗ್ರಾಂ ಶುಂಠಿಯನ್ನು ನಯವಾಗಿ ಚೊರ್ಣಿಸುವುದು, ಈ ಚೊರ್ಣದ ಅರ್ಧ ಚಮಚದಷ್ಟನ್ನು ಬಿಸಿ ನೀರಿನಲ್ಲಿ ಕದಡಿ ಕುಡಿಸುವುದು.

ಕಜ್ಜಿ ಮತ್ತು ತುರಿಯಲ್ಲಿ

ಬದಲಾಯಿಸಿ

ಗಜ್ಜುಗದ ಎಲೆ ಮತ್ತು ಕಾಳುಮೆಣಸನ್ನು ನಯವಾಗಿ ಅರೆದು ಒಂದು ಅರ್ಧ ಟೀ ಚಮಚದಷ್ಟನ್ನು ನೀರಿನಲ್ಲಿ ಹಾಕಿ ಕುಡಿಸುವುದು. ಗಜ್ಜುಗದ ಕಾಯಿಯ ಸಿಪ್ಪೆಯನ್ನು ನುಣ್ಣಗೆ ಅರೆದು ಎಳ್ಳೆಣ್ಣೆಯಲ್ಲಿ ಹಾಕಿ ತಣ್ಣಗಾದ ಮೇಲೆ ಕಜ್ಜಿ ಮತ್ತು ತುರಿಕೆ ಇರುವು ಜಾಗದಲ್ಲಿ ಸವರುವುದು.

ಆನೆಕಾಲು ವ್ಯಾಧಿಯಲ್ಲಿ

ಬದಲಾಯಿಸಿ

ಹೊಸದಾಗಿ ಕಿತ್ತು ತಂದ ಒಂದು ಹಿಡಿ ಗಜ್ಜುಗದ ಹಸಿರು ಎಲೆಗಳನ್ನು ಕುಟ್ಟಿ ರಸ ತೆಗೆಯುವುದು. ರಸವನ್ನು ಬಟ್ಟೆಯಲ್ಲಿ ಸೋಸಿ ದಿನಕ್ಕೆ ಎರಡು ವೇಳೆ ಒಂದೊಂದು ಟೀ ಚಮಚ ಕುಡಿಸುವುದು.

ಕಿವಿ ನೋವಿನಲ್ಲಿ

ಬದಲಾಯಿಸಿ

ಗಜ್ಜುಗದ ಗಿಡದ ಕಾಂಡದ ತಿರುಳನ್ನು ಚೆನ್ನಾಗಿ ಜಜ್ಜಿ ರಸವನ್ನು ತೆಗೆದು ಒಂದು ಬಟ್ಟಲು ಎಳ್ಳೆಣ್ಣೆಯಲ್ಲಿ ಹಾಕಿ ಕಾಯಿಸುವುದು, ತಣ್ಣಗಾದ ಮೇಲೆ ಒಂದೆರಡು ತೊಟ್ಟು ತೈಲವನ್ನು ಸ್ವಲ್ಪ ಬಿಸಿ ಮಾಡಿ ನೋವಿರುವ ಕಿವಿಗೆ ಹಾಕುವುದು.

ಹೊಟ್ಟೆ ಶೊಲೆಯಲ್ಲಿ

ಬದಲಾಯಿಸಿ

ಒಂದು ಗಜ್ಜುಗದ ಬೀಜದ ಸೊಪ್ಪನ್ನು ನೀರಿನಲ್ಲಿ ತೇದು, ಕಾಲು ಟೀ ಚಮಚ ಗಂಧವನ್ನು ಕಾದಾರಿದ ನೀರಿನಲ್ಲಿ ಕದಡಿ ಕುಡಿಸುವುದು.

ಚೇಳಿನ ವಿಷದಲ್ಲಿ

ಬದಲಾಯಿಸಿ

ಗಜ್ಜುಗದ ಬೇರನ್ನು ನೀರಿಲ್ಲಿ ತೇದು ಚೇಳು ಕುಟುಕಿರುವ ಕಡೆ ಹಚ್ಚುವುದು.

ಶೋಭೆಯಲ್ಲಿ

ಬದಲಾಯಿಸಿ

ಗಜ್ಜುಗದ ಕಾಯಿಯನ್ನು ಒಡೆದು ಬೀಜಗಳನ್ನು ಬೇರ್ಪಡಿಸುವುದು. ಈ ಕಾಯಿಯ ನೀಲಿ ತಿರುಳನ್ನು ನುಣ್ಣಗೆ ಅರೆದು, ಅರ್ಧ ಟೀ ಚಮಚದಷ್ಟನ್ನು ಅಕ್ಕಿ ಗಂಜಿಯಲ್ಲಿ ಸೇರಿಸಿ ಕುಡಿಸುವುದು.

ಮಲೇರಿಯಾ ಜ್ವರದಲ್ಲಿ

ಬದಲಾಯಿಸಿ

ಗಜ್ಜುಗದ ಎಲೆಗಳನ್ನು ನಾಲ್ಕು ಕಾಳು ಮೆನಸಿನ ಜೊತೆ ನೀರಿನಲ್ಲಿ ನುಣ್ಣಗೆ ಅರೆದು ಬಟ್ಟೆಯಲ್ಲಿ ಸೋಸಿ 1/2 ಟೀ ಚಮಚ ದಿನಕ್ಕೆ ಎರಡು ಬಾರಿ ಕುಡಿಸುವುದು.

ಜ್ವರದಲ್ಲಿ

ಬದಲಾಯಿಸಿ

ಗಜ್ಜುಗದ ಸೊಪ್ಪನ್ನು ಜಜ್ಜಿ ಕಷಾಯ ಮಾಡಿ ವೇಳೆಗೆ ಅರ್ಧ ಟೀ ಚಮಚದಷ್ಟನ್ನು, ಜೇನು ತುಪ್ಪ ಕೂಡಿಸಿ ದಿನಕ್ಕೆರಡು ವೇಳೆ ಸೇವಿಸುವುದು.

ಉಲ್ಲೇಖ

ಬದಲಾಯಿಸಿ
  1. ೧.೦ ೧.೧ "Genus: Caesalpinia L." Germplasm Resources Information Network. United States Department of Agriculture. 2007-04-03. Retrieved 2010-12-03.
  2. "Caesalpinia L." TROPICOS. Missouri Botanical Garden. Retrieved 2009-10-19.


ಪುಸ್ತಕದ ಹೆಸರು: ಬಾಬಾ ಬುಡನ್ ಗಿರಿ ಮತ್ತು ಸಿದ್ದರ ಬೆಟ್ಟದ ಅಪೂರ್ವ ಗಿಡಮೂಲಿಕೆಗಳು ಹಾಗೂ ಸರಳ ಚಿಕಿತ್ಸೆಗಳು

ಸಂಪಾದಕರು: ವೈದ್ಯ ಎ. ಆರ್. ಎಂ. ಸಾಹೇಬ್

ಪ್ರಕಾಶಕರು: ಮಠಾಧೀಶರು, ಸದ್ಗುರು ದಾದಾ ಹಯಾತ್ ಮೀರ್ ಖಲಂದರ್ ಪೀಠ, ಬಾಬಾಬುಡನ್ ಗಿರಿ, ಚಿಕ್ಕಮಗಳೂರು

ಬಾಹ್ಯ ಸಂಪರ್ಕಗಳು

ಬದಲಾಯಿಸಿ
"https://kn.wikipedia.org/w/index.php?title=ಗಜ್ಜುಗ&oldid=1250324" ಇಂದ ಪಡೆಯಲ್ಪಟ್ಟಿದೆ