ಗಂಡ ಹೆಂಡತಿ ಆಟ
ಗಂಡ ಹೆಂಡತಿ ಆಟ: ಈ ಆಟವು ತುಳುನಾಡಿನ ಜಾನಪದ ಆಟಗಳಲ್ಲಿ ಒಂದು. ದಾಂಪತ್ಯದ ಅನುಕರಣೆಯನ್ನು ಈ ಆಟದಲ್ಲಿ ಮಾಡುವುದರಿಂದ ಇದನ್ನು ಗಂಡ-ಹೆ೦ಡತಿಯರ ಆಟವೆಂದು ಕರೆಯುತ್ತಾರೆ. ಇಬ್ಬರು ಆಟಗಾರರು ಈ ಆಟದಲ್ಲಿ ಭಾಗವಹಿಸುತ್ತಾರೆ. ಹೆಚ್ಚು ಆಟಗಾರರು ಈ ಆಟದಲ್ಲಿ ಭಾಗವಹಿಸಬಹುದು. ಇದೊಂದು ಹೊರಾಂಗಣ ಆಟವಾಗಿದೆ. [೧]
Genre(s) | ಹೊರಾಂಗಣ ಆಟ |
---|---|
ಆಟಗಾರರು | ಇಬ್ಬರು |
ವಯಸ್ಸಿನ ವ್ಯಾಪ್ತಿ | 3+ |
ಆಟದ ಸಮಯ | < 60 min |
ಆಟವಾಡಲು ಎಷ್ಟು ಜನ ಬೇಕು ?
ಬದಲಾಯಿಸಿಈ ಆಟದಲ್ಲಿ ಇಬ್ಬರು ಆಟಗಾರರ ಅವಶ್ಯಕತೆ ಇದೆ. ಹೆಚ್ಚು ಜನ ಬೇಕಾದರೂ ಬಾಗವಹಿಸಬಹುದು.
ಆಟ ಆಡುವುದು ಹೇಗೆ?
ಬದಲಾಯಿಸಿದಾಂಪತ್ಯ ಜೀವನದ ಅನುಕರಣೆಯನ್ನು ಈ ಆಟದಲ್ಲಿ ಕಾಣಬಹುದು. ಆಟಗಾರರಲ್ಲಿ ಒಬ್ಬನು ಗ೦ಡನ ಪಾತ್ರ ವಹಿಸುತ್ತಾನೆ ಇನ್ನೊಬ್ಬರು ಹೆ೦ಡತಿಯ ಪಾತ್ರ ವಹಿಸುತ್ತಾಳೆ. ಮಕ್ಕಳು ತಾವು ಗ್ರಹಿಸಿದ ರೀತಿಯಲ್ಲಿ ಗಂಡ-ಹೆಂಡತಿಯರನ್ನು ಅನುಕರಣೆ ಮಾಡುತ್ತಾರೆ. ಈ ಆಟದಲ್ಲಿ ಗಂಡು ಮಕ್ಕಳು ಗಂಡನಾಗುವುದು ಮತ್ತು ಹೆಣ್ಣು ಮಕ್ಕಳು ಹೆ೦ಡತಿಯಾಗುವುದು ಕಡ್ಡಾಯವಾಗಿದೆ. ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಗಂಡ-ಹೆಂಡಿರ ಸಂಬಂಧವನ್ನು ಮಕ್ಕಳು ಯತಾವತ್ತಾಗಿ ಅನುಕರಣೆ ಮಾಡುವುದನ್ನು ಕಾಣಬಹುದಾಗಿದೆ. ಹೆಂಡತಿ ಗಂಡನಿಗೆ ಊಟ ಬಡಿಸುವುದು, ಮಗುವನ್ನು ಸಮಾಧಾನ ಮಾಡುವುದು, ಗಂಡ ಹೆಂಡತಿಗೆ ಬೈಯುವುದು ಇತ್ಯಾದಿ ಚಟುವಟಿಕೆಗಳು ಆಟದಲ್ಲಿ ಬರುತ್ತದೆ. ಮಕ್ಕಳು ದಾಂಪತ್ಯ ಬದುಕಿನ ನೇರ ತರಬೇತಿಯನ್ನು ಈ ಆಟದ ಮೂಲಕ ಹೊಂದುತ್ತಾರೆ. ಆಟಗಳು ಸಾಮಾಜೀಕರಣದ ಕೂಡಾ ಮಾಧ್ಯಮಗಳಾಗಿಯೂ ಕಾರ್ಯನಿರ್ವಹಿಸುತ್ತವೆ ಎಂಬ ಅಭಿಪ್ರಾಯವನ್ನು ಈ ಆಟವು ಸಮರ್ಥಿಸುತ್ತದೆ.[೨]
ಬೇರೆ ಬಾಷೆಯಲ್ಲಿ ಆಟದ ಹೆಸರು
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ "ಗಂಡ ಹೆಂಡತಿ ಆಟ". Retrieved 8 July 2024.
- ↑ Thulunadina Janapada Atagalu (PDF). Shetty, Gananatha. Retrieved 8 July 2024.