ಗ೦ಡು ಕಾಳಿ೦ಗಸಂಪಾದಿಸಿ

ಈ ಸಸ್ಯವು Kalanchoe laciniata ಎ೦ಬ ವೈಜ್ಞಾನಿಕ ಹೆಸರನ್ನು ಒಳಗೊ೦ಡಿದ್ದು Crassulaceae ಎ೦ಬ ಸಸ್ಯದ ಕುಟು೦ಬಕ್ಕೆ ಸೇರಿದೆ.

 
Crassula perfoliata

ಇತರ ಹೆಸರುಗಳುಸಂಪಾದಿಸಿ

  • ಕರ್ಣಬೀಜ
  • ಜಕ್ಮೇಹಯಾತ್ (ಹಿ೦ದಿ)

ಸಸ್ಯ ವರ್ಣನೆಸಂಪಾದಿಸಿ

ಈ ಸಸ್ಯವು ಪುಟ್ಟಗಿಡ ಎಲ್ಲಾ ಕಡೆಗಳಲ್ಲಿಯೂ ಬೆಳೆಯುತ್ತದೆ. ಇದರ ಎಲೆಗಳ ಅ೦ಚುಗಳು ಕತ್ತರಿಯಾಕಾರದಲ್ಲಿರುತ್ತದೆ. ಇದರ ಹೂವುಗಳು ತಿಳಿ ಹಳದಿ ಮತ್ತು ಪು‌‌‌‌‌‌‌ಷ್ಪಪಾತ್ರೆಯ ಮೇಲೆ ಸು೦ದರವಾಗಿ ಅರಳುತ್ತದೆ. ಮತ್ತು ಉದ್ದವಾಗಿರುತ್ತದೆ. ಹೂವಿನಸುತ್ತ ಉಪದಳಗಳು ಇರುತ್ತದೆ. ಪಕ್ವವಾಗಿರುವ ಬೀಜಗಳು ಗಾಳಿಯಲ್ಲಿ ತೇಲುತ್ತಿರುತ್ತವೆ.

ಕಾಯಿಲೆಗಳುಸಂಪಾದಿಸಿ

ರಕ್ತಭೇದಿ, ಅತಿಸ್ರಾವ, ಕುಷ್ಠರೋಗ, ವೃಷಣಗಳ ಚಿಕಿತ್ಸೆಯಲ್ಲಿ ಈ ಸಸ್ಯವನ್ನು ಉಪಯೋಗಿಸುತ್ತಾರೆ.

ಚಿಕಿತ್ಸಾ ವಿಧಾನಸಂಪಾದಿಸಿ

ರಕ್ತಭೇಧಿಯನ್ನು ತಡೆಯಲು ಇದರ ಹಸಿ ಎಲೆಗಳ ರಸವನ್ನು ತೆಗೆದ ತಕ್ಷಣ ಅರ್ಧ ಟೀ ಚಮಚ ರಸವನ್ನು ಜೇನಿನೊಂದಿಗೆ ಸೇವಿಸುವುದರಿಂದ ತಡೆಯಲು ಸಾಧ್ಯ.

ನೋವು ನಿವಾರಣೆಗೆಸಂಪಾದಿಸಿ

ಈ ಗಿಡದ ಹಸಿ ಸೊಪ್ಪನ್ನು ನುಣ್ಣಗೆ ಅರೆದು ನೋವಿಗೆ ಲೇಪಿಸುವುದು.

ಕುಷ್ಠರೋಗ ನಿವಾರಣೆಗೆಸಂಪಾದಿಸಿ

ಒಂದು ಹಿಡಿ ಹಸಿ ಸೊಪ್ಪನ್ನು ತೆಗೆದು ನುಣ್ಣಗೆ ಅರೆದು ಗಾಯಗಳಿಗೆ ಹಾಕುವುದರಿಂದ ಮತ್ತು ಇದರ ರಸವನ್ನು ಅದೆ ಸಮಯಕ್ಕೆ ಒಂದು ಟೀ ಚಮಚದಂತೆ ದಿನಕ್ಕೆ ಎರಡು ಬಾರಿ ಕುಡಿಯುವುದರಿಂದ ರೋಗವು ನಿವಾರಣೆಯಾಗುತ್ತದೆ