ಗಂಟೆ ಹೂ
ಮರದ ಜಾತಿ
ಗುಣ ಲಕ್ಷಣ
ಬದಲಾಯಿಸಿಕಡು ಹಳದಿ ಬಣ್ಣದಿಂದ ಕಂಗೊಳಿಸುವ ಈ ಗೊಂಚಲು ಹೂಗಳು, “ಗಂಟೆ ಹೂ” ಎಂದೇ ಚಿರಪರಿಚಿತ. ಗಂಟೆಯಂತಹ ವಿಶೇಷ ರಚನೆ ಹೊಂದಿದ ಈ ಸುಂದರ ಹೂ ತನ್ನ ನಾನಾ ರೀತಿಯ ಪ್ರಯೋಜನಗಳಿಂದ ಅನೇಕರ ಮನೆಯಂಗಳದಲ್ಲಿ ಸ್ಥಾನ ಪಡೆದಿದೆ. ಪ್ಲಾಂಟೇ ರಾಜ್ಯದ “ಬೈಗ್ನೋನಿಯೆನ್ಸೀಸ್” ಕುಟುಂಬಕ್ಕೆ ಸೇರಿದ ಈ ಹೂ ‘ಟೆಕೋಮಾ ಸ್ಟಾನ್ಸ್’,’ಯೆಲ್ಲೋ ಟ್ರಂಪೆಡ್‍ಬುಶ್’,ಯೆಲ್ಲೋಬೆಲ್ಸ್’ ಎಂಬಿತ್ಯಾದಿ ಹೆಸರುಗಳಿಂದ ಕರೆಯಲ್ಪಡುತ್ತದೆ.
ಎಲೆಗಳು ಚೂಪಾದ ಆಕಾರದಲ್ಲಿದ್ದು ಅಂಚಿನಲ್ಲಿ ಕತ್ತರಿಸಿದ ರೀತಿಯ ರಚನೆಯನ್ನು ಹೊಂದಿವೆ. ಗಂಟೆ ಹೂ 5 ರಿಂದ 7 ಮೀಟರ್ ಎತ್ತರದ ಸಣ್ಣ ಮರದಲ್ಲಿ ಬಿಡುತ್ತದೆ. ಬಿಸಿಲಿನಿಂದ ಕೂಡಿದ ಬೆಚ್ಚನೆಯ ವಾತಾವರಣವು ಈ ಗಿಡದ ಉತ್ತಮ ಬೆಳವಣಿಗೆಗೆ ಸೂಕ್ತವಾಗಿದೆ. ಚಿಟ್ಟೆ, ಜೇನು ಹುಳಗಳನ್ನು ಹಾಗೂ ಬಿಸಿಲಹಕ್ಕಿಗಳನ್ನು ತನ್ನೆಡೆಗೆ ಆಕರ್ಷಿಸುವಲ್ಲಿ ಗಂಟೆ ಹೂ ಪ್ರಮುಖ ಪಾತ್ರ ವಹಿಸುತ್ತದೆ[೧].
ಉಪಯೋಗಗಳು
ಬದಲಾಯಿಸಿ- ಗಂಟೆ ಹೂವಿನ ಎಲೆಗಳಲ್ಲಿ ಕೆಲ ಔಷಧೀಯ ಗುಣಗಳೂ ಇವೆ. ಹೊಟ್ಟೆ ನೋವಿನ ನಿವಾರಣೆಗೆ ಗಂಟೆ ಹೂವಿನ ಎಲೆಗಳನ್ನು ಉಪಯೋಗಿಸುತ್ತಾರೆ.
- ಮೆಕ್ಸಿಕೋ ಹಗೂ ದಕ್ಷಿಣ ಅಮೇರಿಕಾ ದೇಶಗಳಲ್ಲಿ ಸಕ್ಕರೆಖಾಯಿಲೆಯ ನಿಯಂತ್ರಣಕ್ಕೆ ಈ ಗಂಟೆಹೂವನ್ನು ಉಪಯೋಗಿಸುತ್ತಾರೆ.
- ೮ಗಂಟೆಹೂ ಮರದ ತೊಗಟೆಯನ್ನು ನಾಯಿಗಳ ಚಲನಾಶಕ್ತಿಯನ್ನು ಹೆಚ್ಚಿಸುವ ಸಲುವಾಗಿ, ಔಷಧಿಯಾಗಿ ಬಳಸುತ್ತಾರೆ.
ಉಲ್ಲೇಖ
ಬದಲಾಯಿಸಿTecoma_stans ಸಂಬಂಧಿತ ಮೀಡಿಯಾ ವಿಕಿಮೀಡಿಯ ಕಾಮನ್ಸ್ನಲ್ಲಿ ಲಭ್ಯವಿದೆ.
Tecoma_stans: ಇದಕ್ಕೆ ಸಂಬಂಧಿಸಿದಂತೆ ವಿಕಿಸ್ಪೀಸೀಸ್ ಮಾಹಿತಿಯನ್ನು ಹೊಂದಿದೆ.
- ↑ ಸುಧಾ ವಾರಪತ್ರಿಕೆ, ಮಾರ್ಚ್ ೧೭,೨೦೧೬, ಪುಟಸಂಖ್ಯೆ-೮