ಗಂಜಲಘಟ್ಟವು ಭಾರತದ ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನಲ್ಲಿರುವ ಒಂದು ಸಣ್ಣ ಗ್ರಾಮ/ ಕುಗ್ರಾಮವಾಗಿದೆ. ಇದು ಮಸವನಘಟ್ಟ ಪಂಚಾಯತಿ ಅಡಿಯಲ್ಲಿ ಬರುತ್ತದೆ. ಇದು ಬೆಂಗಳೂರು ವಿಭಾಗಕ್ಕೆ ಸೇರಿದೆ. ಈ ಗ್ರಾಮವು ಉತ್ತರಕ್ಕೆ ತಿಪಟೂರು ತಾಲೂಕು, ಪೂರ್ವಕ್ಕೆ ತುರುವೇಕೆರೆ ತಾಲೂಕು, ದಕ್ಷಿಣಕ್ಕೆ ನಾಗಮಂಗಲ ತಾಲೂಕಿನಿಂದ ಸುತ್ತುವರೆದಿದೆ. ಈ ಗ್ರಾಮವು ಜಿಲ್ಲಾ ಕೇಂದ್ರವಾದ ತುಮಕೂರಿನಿಂದ 84 ಕಿಮೀ ಹಾಗೂ ತಿಪಟೂರಿನಿಂದ 28 ಕಿಮೀ ದೂರದಲ್ಲಿದೆ. ಗ್ರಾಮದ ಒಟ್ಟು ಭೌಗೋಳಿಕ ವಿಸ್ತೀರ್ಣ 225.42 ಹೆಕ್ಟೇರ್. 2011ರ ಜನಗಣತಿಯ ಪ್ರಕಾರ ಈ ಗ್ರಾಮವು ಒಟ್ಟು 439 ಜನಸಂಖ್ಯೆಯನ್ನು ಹೊಂದಿದೆ ಹಾಗೂ ಒಟ್ಟು 123 ಮನೆಗಳಿವೆ. ಮಹಿಳೆಯರ ಸಂಖ್ಯೆ ಒಟ್ಟು 223 ಇದ್ದು ಪುರುಷರ ಸಂಖ್ಯೆ 214 ಇದೆ ಮತ್ತು ಈ ಗ್ರಾಮದ ಸಾಕ್ಷರತೆ ಪ್ರಮಾಣ ಶೇಕಡ 57.6 ಇದ್ದು ಮಹಿಳಾ ಸಾಕ್ಷರತೆ ಪ್ರಮಾಣ ಶೇಕಡ 24.1ರಷ್ಠಿದೆ. ಈ ಗ್ರಾಮದಲ್ಲಿ ಒಂದು ಅಂಗನವಾಡಿ ಕೇಂದ್ರ ಹಾಗು ಸರ್ಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಪಾಠಶಾಲೆ ಇದೆ. ಈ ಗ್ರಾಮಕ್ಕೆ ತಲುಪಲು ರಸ್ತೆಯ ಮಾರ್ಗವಾಗಿ ತಲುಪಬೇಕಾಗುತ್ತದೆ.