ಗಂಗಾಧರ ಎಸ್. ಶೆಟ್ಟಿ

ಮುಂಬೈನ ಉದ್ಯಮಿಯಾಗಿ, 'ॐ ಸಾಯಿ ಗ್ರೂಪ್ ಆಫ್ ಕಂಪೆನಿ'ಯ 'ಸಿ.ಇ.ಒ' ಆಗಿರುವ 'ಗಂಗಾಧರ ಎಸ್. ಶೆಟ್ಟಿ' ಯವರು ತಮ್ಮ ಕಂಪೆನಿಯ ೧೫ ರ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಅವರು ಗಳಿಸಿದ ಪ್ರಶಸ್ತಿಗಳು ಹಲವು. ಅವೆಲ್ಲಾ 'ಗಂಗಾಧರ ಎಸ್. ಶೆಟ್ಟಿಯವರ ಸೇವಾಮನೋಭಾವ, ಮತ್ತು ಜೀವನ ಮೌಲ್ಯಗಳನ್ನು ಮೈಗೂಡಿಸಿಕೊಂಡು, ಪ್ರಾಮಾಣಿಕತೆ, ಹಾಗೂ ಪಾರದರ್ಶಕತೆಗಳನ್ನು ತಮ್ಮ ಕಾರ್ಯಕ್ಷೇತ್ರದಲ್ಲಿ ಬಳಕೆಗೆತಂದ ಫಲವಾಗಿ ಅವರು ಜನಪ್ರಿಯರಾಗಿದ್ದಾರೆ. ದೇಶದ ಪ್ರತಿಷ್ಠಿತ ಕೈಗಾರಿಕೋದ್ಯಮಿ, ಮತ್ತು ಹಲವು ಕಂಪೆನಿಗಳ ರುವಾರಿಗಳು, ಗುರುತಿಸಲ್ಪಟ್ಟು ಪ್ರಗತಿಯದಾರಿಯಲ್ಲಿ ಸಾಗುತ್ತಿರುವ, 'ಶೆಟ್ಟಿಯವರ ಜೀವನಗಾಥೆ,' ರೋಚಕವಾಗಿದೆ.

ಜನನ, ಬಾಲ್ಯ, ಹಾಗೂ ನಡೆದುಬಂದ ದಾರಿಸಂಪಾದಿಸಿ

'ಗಂಗಾಧರ ಶಿವರಾಮ ಶೆಟ್ಟಿಯವರು', ಸನ್, ೧೯೬೮ ರ, ಮೇ, ೮ ರಂದು, ಜನಿಸಿದರು. ಮುದ್ರಾಡಿಯ ಶಾಲೆಯಲ್ಲಿ ೫ನೇ ತರಗತಿಯಲ್ಲಿದ್ದಾಗಲೇ ಜೀವನದಲ್ಲೇನಾದರೂ ಸಾಧಿಸಬೇಕೆಂಬ ಅದಮ್ಯ ಛಲ, ಅವರ ಮನಸ್ಸಿನಲ್ಲಿ ಚಿಗರೊಡೆಯಿತು. ಸನ್, ೧೯೮೪ ರಲ್ಲಿ 'ಬೊಂಬಾಯಿ'ಗೆ ಪಾದಾರ್ಪಣೆಮಾಡಿದ ಗಂಗಾಧರ್, 'ನೈಟ್ ಸ್ಕೂಲ್' ಒಂದರಲ್ಲಿ ಸೇರಿ, ಹಾಗೆಯೇ ತಮ್ಮ 'ಜೀವನಶೈಲಿ'ಯನ್ನೂ ಕಂಡುಕೊಂಡರು. ಮೊದಲು ಪುಟ್ಟ 'ಹೋಟೆಲ್' ಒಂದರಲ್ಲಿ ಸಹಾಯಕರಾಗಿ ಸೇರಿದ ಅವರಿಗೆ ಬರುತ್ತಿದ್ದ ಸಂಬಳ, ೩೬೦ ರೂಗಳು. ಹಾಗೆ ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿದ ಬಳಿಕ,ಬೊಂಬಾಯಿನ ಉಪನಗರ, ಅಂಧೇರಿಯಲ್ಲಿ 'ಬೀಡಿ ಅಂಗಡಿ'ಯೊಂದನ್ನು ತೆರೆದರು. ಸನ್, ೧೯೮೯ ರಲ್ಲಿ ಓರ್ವ ವೆಹಿಕಲ್ ರೈಡರ್ ಆಗಿ, 'ಎನ್ಪಾಕ್ ಮೋಟರ್ಸ್,'ಯೆಂಬ ಹೊಸ ವೃತ್ತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. 'ಗ್ರಾಹಕ'ರ ಮನಸ್ಸನ್ನು ಒಲಿಸಿ, ಆ ವಲಯದಲ್ಲಿ 'ಆತ್ಮಸ್ಥೈರ್ಯ'ವನ್ನು ಕಂಡುಕೊಂಡು, ಆ ಯಶಸ್ಸಿನ ಬಲದಮೇಲೆ ತಮ್ಮದೇ ಸ್ವಂತ ಉದ್ಯೋಗವೊಂದನ್ನು ಹುಟ್ಟುಹಾಕುವ ಯೋಚನೆ ತಲೆಯಲ್ಲಿ ಮೂಡಿಬಂತು.

'ॐ ಸಾಯಿಗ್ರೂಪ್ ಆಫ್ ಕಂಪೆನಿ' ಆರಂಭವಾದದ್ದು ಹೀಗೆಸಂಪಾದಿಸಿ

ಸನ್, ೧೯೯೪ ರ, ಡಿ. ೩೦ ರಂದು, ಬೊರಿವಲಿಯಲ್ಲಿ 'ಆಟೋಮೊಬೈಲ್ ನ ಕಚೇರಿ'ಯನ್ನು ಸ್ಥಾಪಿಸಿದರು. 'ಪಯ್ಯಡೆ ಗ್ರೂಪ್ ಆಫ್ ಹೋಟೆಲ್ಸ್ ನ ಸ್ಥಾಪಕ', 'ರಾಮನಾಥ್ ಪಯ್ಯಡೆ'ಯವರು, 'ಕಚೇರಿಯ ಉದ್ಘಾಟನಾ ಕಾರ್ಯ'ವನ್ನು ನೆರವೇರಿಸಿದರು. ಗ್ರಾಹಕರ ಒಲವನ್ನು ಪಡೆಯಲು ಅವರು ಹಲವಾರು ಯೋಜನೆಗಳನ್ನು ಹಮ್ಮಿಕೊಂಡು ಬಹಳಶ್ರಮಿಸಿ, ಅದರಲ್ಲಿ ಸಂಪೂರ್ಣ ಯಶಸ್ಸನ್ನು ಕರಗತಮಾಡಿಕೊಂಡರು.

'ಬಹು ಆಯ್ಕೆ ಬ್ರಾಂಡ್ ಗಳ, ಶೋರೂಂ ಸ್ಥಾಪನೆ'ಸಂಪಾದಿಸಿ

ಸನ್, ೨೦೦೦ ದಲ್ಲಿ, ಕಾಂದಿವಲಿಯಲ್ಲಿ 'ಮಾರಾಟದ ಶೋರೂಂ', ಗ್ರಾಹಕರ ಮನಸ್ಸಿನಲ್ಲಿ ವಿಶ್ವಾಸ, ನಂಬಿಕೆಗಳನ್ನು ಮೂಡಿಸಿ ಹೊಸಮಾದರಿಯ ಸೇವಗಳನ್ನು ಕೊಡುವುದರಮೂಲಕ ತಮ್ಮ ವ್ಯಾಪಾರವನ್ನು ವೃದ್ಧಿಸಿಕೊಂಡರು. ಇದು ಮುಂದೆ, ’ಟಾಟ ಮೋಟರ್ಸ್ ಸರ್ವೀಸ್ ಕೇಂದ್ರ,' ದ ಸ್ಥಾಪನೆಗೆ ನಾಂದಿಯಾಯಿತು.

ಗ್ರಾಹಕರ ಆದ್ಯತೆಗಳಿಗೆ ಸ್ಪಂದಿಸಿದರುಸಂಪಾದಿಸಿ

'ಗಂಗಾಧರ ಎಸ್. ಶೆಟ್ಟಿ', 'ಗ್ರಾಹಕನೇ ದೇವರು,' ಎನ್ನುವ ಸಂಕೇತವನ್ನು ಚೆನ್ನಾಗಿ ಅರಿತರು, ಗ್ರಾಹಕಸ್ನೇಹಿಯಾಗಲು ಬಹಳವಾಗಿ ತಮ್ಮನ್ನು ಸಿದ್ಧಪಡಿಸಿಕೊಂಡರು. ಸನ್, ೨೦೦೧ ರಲ್ಲಿ, 'ಹೊಂಡಾ ಮೋಟಾರ್ ಸೈಕಲ್ಸ್ ಅಂಡ್ ಸ್ಕೂಟರ್ (ಇಂಡಿಯ) ಪ್ರೈವೇಟ್ ಲಿಮಿಟೆಡ್', ನ 'ಡೀಲರ್ ಶಿಪ್,' ದೊರೆಯಿತು. ಜಾಗತಿಕವಾಗಿ ವಿಶ್ವದ ಅತ್ಯುತ್ತಮವಾದ ಮೋಟರ್ ಸೈಕಲ್ಲುಗಳಲ್ಲೊಂದಾದ, ಗುರುತಿಸಲ್ಪಟ್ಟ ಜಪಾನಿನ ಸುಪ್ರಸಿದ್ಧ ಕಂಪೆನಿ, 'ಹೊಂಡಾ.ಕಂ' ಗಂಗಾಧರ ಶೆಟ್ಟರಿಗೆ ಡೀಲರ್ ಶಿಪ್ ಕೊಟ್ಟ ಸಂಗತಿ, 'ಇಂಡಸ್ಟ್ರಿ ವಲಯ'ದಲ್ಲಿ ಹುಬ್ಬೇರಿಸುವಂತಾಯಿತು. ಗಂಗಾಧರ ಎಸ್. ಶೆಟ್ಟಿ, ಇದೇರೀತಿ ಮೇಲೆ ಸಾಗಿದರು. 'ಕಾಂದಿವಲಿ'ಯಲ್ಲಿ 'ಪ್ಯಾಸೆಂಜರ್ ಕಾರುಗಳಿಗೆ ಡೀಲರ್' ಆಗಿನೇಮಕವಾದರು. ೫೦ ಜನರ ಮಧ್ಯೆ, ಗಂಗಾಧರ ಎಸ್. ಶೆಟ್ಟಿಯವರಿಗೆ ಒಂದುಸ್ಥಾನ ದೊರೆತದ್ದು ಅವರ ಆತ್ಮಸ್ಥರ್ಯವನ್ನು ನೂರುಪಟ್ಟು ಹೆಚ್ಚಿಸಿತು. ಗಂಗಾಧರ ಎಸ್. ಶೆಟ್ಟಿ, 'ಟಾಟಾ ಮೋಟಾರ್ಸ್ ಸರ್ವೀಸ್ ಕೇಂದ್ರ' ಆರಂಭಿಸಿದರು. ವ್ಯವಹಾರದಲ್ಲಿ ಪ್ರಗತಿಯಾಗಿ, ಮಾಹಿಮ್ ನಲ್ಲಿ ಶಾಖೆಯ ಆರಂಭವಾಯಿತು. ಸ್ವಾವಲಂಭನೆಯನ್ನು ಅವರು ಪ್ರೀತಿಸುತ್ತಿದ್ದರು. ಜೋಗೇಶ್ವರಿಯ (ಪೂ) ದಲ್ಲಿ, 'ಹೋಂಡಾ ಮೋಟಾರ್ ಸೈಕಲ್ ಹೊಸ ಆವೃತ್ತಿಯ ಶಾಖೆ'ಯ ಆರಂಭ.

ಪ್ರಶಸ್ತಿಗಳ ಮಹಾಪೂರಸಂಪಾದಿಸಿ

 • ಮಲಾಡ್’ ನಲ್ಲಿ ’ಓಂ ಸಾಯಿ ಹೊಂಡಾ’ದ ವತಿಯಿಂದ, ೪ ಸೆಟ್-ಅಪ್(ಸೇಲ್ಸ್,ಸರ್ವೀಸ್,ಸ್ಪೇರ್ ಅಂಡ್ ಸೇಫ್ಟಿ) ಆರಂಭಿಸಿದರು. ’ಟಾಟಾ ಮೋಟಾರ್ಸ್ ಲಿಮಿಟೆಡ್’ ನಲ್ಲಿ ’ಜಪಾನ್ ಕಂಪೆನಿ’ಯ ಮೂಲಕ ’೩ ಬಾರಿ ಹ್ಯಾಟ್ರಿಕ್’ ಪ್ರಶಸ್ತಿ-ವಿಜೇತರಾದರು.
 • ಸನ್, ೨೦೦೫-೦೬ ರಲ್ಲಿ ಸೇಲ್ಸ್ ಸೇಟಿಸ್ ಫಾಕ್ಷನ್, ’ವೆಸ್ಟರ್ನ್ ರೀಜನ್ ನಂ.೧’ ಗಾಗಿ ಪ್ರಶಸ್ತಿ, ಮತ್ತು
 • ಸನ್, ೨೦೦೬-೦೭ ರಲ್ಲಿ ’ಕಸ್ಟಮರ್ ಸ್ಯಾಟಿಸ್ ಫ್ಯಾಕ್ಷನ್’ ಗಾಗಿ ಪ್ರಶಸ್ತಿ,
 • 'ಆಲ್ ಇಂಡಿಯಾ ನಂ ೧.ಪ್ರಶಸ್ತಿ’ಯನ್ನು’ರತನ್ ಟಾಟಾ’ರವರ ಹಸ್ತದಿಂದ ಪಡೆದರು.
 • ೨೦೦೭-೦೮ ರಲ್ಲೂ ಇದೇ ಪ್ರಶಸ್ತಿ ದೊರೆಯಿತು.
 • ೨೦೦೫-೧೦ ವರೆಗೆ ಸತತವಾಗಿ ೫ ಬಾರಿ ಅತ್ಯುತ್ತಮ ವ್ಯವಹಾರ, ಹಾಗೂ ಅತ್ಯುತ್ತಮ ಗ್ರಾಹಕಸೇವೆಯ ಎಲ್ಲ ಹಂತಗಳಲ್ಲಿ ಮಾಡಿದ ಅದ್ಭುತ ಸಾಧನೆಗಳನ್ನು ಗುರುತಿಸಿ,'ರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ'ಗಳನ್ನು ವಿತರಿಸಲಾಯಿತು.
 • ಥೈವಾನ್ ಮತ್ತು ಜಪಾನ್ ನ ಪ್ರತಿಷ್ಠಿತ ಉದ್ಯೋಗಪತಿಗಳು, ಗಂಗಾಧರ ಶೇಟ್ಟಿಯವರನ್ನು ಗೌರವಿಸಿ ಪ್ರಶಸ್ತಿಗಳನ್ನು ನೀಡಿದ್ದಾರೆ.
 • ಗಂಗಾಧರ್ ರವರ, ವ್ಯವಹಾರ ಕುಶಲತೆಯಿಂದ ಪ್ರಭಾವಿತರಾದ, ರತನ್ ಟಾಟಾ ಮತ್ತು ಇತರ ಉದ್ಯಮಿಗಳು ಅವರಿಗೆ ’ಐಡಿಯಲ್ ಶೋರೂಂ’ ಆರಂಭಿಸಲು ಕರೆಯಿತ್ತರು.

ಪ್ರಶಸ್ತಿಗಳುಸಂಪಾದಿಸಿ

 • ಪಶ್ಚಿಮವಲಯದ ನಂಬರ್ ೧ ಡೀಲರ್, ಅತ್ಯುತ್ತಮ ಸೇವೆಗಾಗಿ
 • ರಾಷ್ಟ್ರಮಟ್ಟದಲ್ಲಿ ನಂಬರ್ ೧ ಡೀಲರ್, ೧,೫೦೦ ಡೀಲರ್ ಪೈಕಿ
 • ೨೦೦೫-೬, ಓಂ ಸಾಯಿ ಮೋಟಾರ್ಸ್ ಗೆ ಪ್ರಶಸ್ತಿ, ಮತ್ತು ಟಾಟಾ ಮೋಟಾರ್ಸ್ ಕಡೆಯಿಂದ ನಂಬರ್ ೧ ಡೀಲರ್ ಪ್ರಶಸ್ತಿ.
 • ಹ್ಯಾಟ್ರಿಕ್ ಸಾಧನೆ.

ಭವಿಷ್ಯದಲ್ಲಿ ವಿಸ್ತರಿಸಲು ಹಲವಾರು ಯೋಜನೆಗಳುಸಂಪಾದಿಸಿ

'ಇಚ್ಛಾ ಶಕ್ತಿ', 'ಆತ್ಮ ವಿಶ್ವಾಸ', ಸರಿಯಾದ ಸಮಯದಲ್ಲಿ ತೆಗೆದುಕೊಳ್ಳುವ ಸರಿಯಾದ ನಿರ್ಧಾರಗಳು, ಅವರ ಯಶಸ್ಸಿನ ಮೂಲ ಮಂತ್ರಗಳು. 'ಟೀಮ್ ವರ್ಕ್' ಬಗ್ಗೆ ಅಪಾರ ವಿಶ್ವಾಸ ಹೊಂದಿರುವ 'ಗಂಗಾಧರ ಶೆಟ್ಟಿಯವರ' ಜೊತೆ, ೫೩೪ ನೌಕರರ ಪಡೆಯಿದೆ. ಕಳೆದ ೧೫ ವರ್ಷಗಳಿಂದ ೪೦೦ ಜನ ಜೊತೆಗೇ ಇದ್ದಾರೆ. ಮಾರಾಟ ಹಾಗೂ ಅದರೊಟ್ಟಿಗೆ ಸಂಬಂಧಿಸಿದ ಸೇವೆಯಲ್ಲಿ ಅತ್ಯಧಿಕ ಸಂಖ್ಯೆಯ ಗ್ರಾಹಕರ ವಿಶ್ವಾಸವನ್ನು ಗಂಗಾಧರ ಎಸ್. ಶೆಟ್ಟಿಯವರು, ಸಂಪಾದಿಸಲು ಸಮರ್ಥರಾಗಿದ್ದಾರೆ.

ಸಮಾಜಸೇವೆ, ಅವರ ಜೀವನದ ಪ್ರಮುಖ ಧ್ಯೇಯಗಳಲ್ಲೊಂದುಸಂಪಾದಿಸಿ

ಆರ್ಥಿಕವಾಗಿ ದುರ್ಬಲರಾದ ಮಕ್ಕಳ ಶಿಕ್ಷಣಕ್ಕೆ ಗಂಗಾಧರ ಎಸ್. ಶೆಟ್ಟಿಯವರು, ನೆರವಾಗಿದ್ದಾರೆ. ಸನ್, ೨೦೦೪ ರಿಂದಲೇ ಈ ಅಭಿಯಾನ ಜಾರಿಯಲ್ಲಿದೆ. ದಕ್ಷಿಣ ಕನ್ನಡ ಜಿಲ್ಲೆಯ, ಉಡುಪಿ-ಮಂಗಳೂರಿಗೆ ಸೇರಿದ ೧೦ ಮಕ್ಕಳಿಗೆ ೧ ರಿಂದ ೧೦ ನೇ ಇಯತ್ತೆಯವರೆಗೆ, ವಿದ್ಯಾಭ್ಯಾಸದ ವೆಚ್ಚವನ್ನು 'ॐ ಸಾಯಿ ಗ್ರೂಪ್ ಆಫ್ ಕಂಪೆನಿ,' ವಹಿಸಿಕೊಳ್ಳುತ್ತಿದೆ.

ಸೋದರ, ಉದಯ್ ರವರ ಸಹಕಾರಸಂಪಾದಿಸಿ

'ಸೋದರ, 'ಉದಯ್ ಶೆಟ್ಟಿ'ಯವರು ಅವರ ನೆರಳಿನಂತಿದ್ದು, ಕಂಪೆನಿಯ ಎಲ್ಲಾ ವ್ಯವಹಾರಗಳನ್ನೆಲ್ಲಾ ಸಂಭಾಳಿಸಿಕೊಂಡು ಹೋಗುತ್ತಿದ್ದಾರೆ. ಕಂಪೆನಿಯ ಪ್ರಾಮಾಣಿಕತೆ ಪಾರದರ್ಶಕತೆ ಕಾಣುವುದರಿಂದ ಗ್ರಾಹಕರ ಹೆಚ್ಚುತ್ತಿದೆ. (೧,೪೦,೦೦೦ ಗ್ರಾಹಕರು) ಮುಂಬೈನಲ್ಲಿ, ಗಂಗಾಧರ ಎಸ್. ಶೆಟ್ಟಿಯವರ, ೭ ಶೋರೂಂ ಗಳಿವೆ. 'ಗಂಗಾಧರ ಎಸ್. ಶೆಟ್ಟಿಯವರ',ಶಿಸ್ತಿನ ಜೀವನ ಹಾಗೂ ಕನಸುಗಳಿಗೆ ಸ್ಪಂದಿಸುವ ಅವರ ಕಂಪೆನಿಯ ಬೆನ್ನೆಲುಬಾಗಿರುವ ಎಲ್ಲಾ ನೌಕರರಿಗೆ ಅವರು ವಂದಿಸುತ್ತಾರೆ.