ಖೇತ್ ರಾಮ್, ಖೇತಾ ರಾಮ್ / ಖೇತ್‌ರಾಮ್ (ಜನನ: ೨೦ ಸೆಪ್ಟೆಂಬರ್ ೧೯೮೬) ೨೦೧೬ ಬೇಸಿಗೆ ಒಲಿಂಪಿಕ್ಸ್ ನಲ್ಲಿ ಭಾರತವನ್ನು ಮ್ಯಾರಥಾನ್ ಸ್ಪರ್ಧೆಯಲ್ಲಿ ಪ್ರತಿನಿಧಿಸಲು ಅರ್ಹತೆ ಹೊಂದಿರುವ ಕ್ರೀಡಾಪಟು. ಇವರು ಭಾರತೀಯ ಸೇನೆಯಲ್ಲಿ ಸಹ ಕೆಲಸ ಮಾಡುತ್ತಾರೆ[].

ಖೇತ್ ರಾಮ್ ಭಾರತವನ್ನು ೨೦೧೬ ಬೇಸಿಗೆ ಒಲಿಂಪಿಕ್ಸ್, ರಿಯೊನಲ್ಲಿ  ಪ್ರತಿನಿಧಿಸುತ್ತಿರುವ  ಮ್ಯಾರಥಾನ್ ಕ್ರೀಡಾಪಟು

ವೃತ್ತಿ

ಬದಲಾಯಿಸಿ

ಖೇತ್‌ರಾಮ್ ಒಂದು ಸ್ಥಿರ ಆದಾಯ ಪಡೆಯಲು ಸಾಮಾನ್ಯ ಕೋಟಾ ಮೂಲಕ ಭಾರತೀಯ ಸೇನೆಗೆ ಸೇರಿದರು ಮತ್ತು ಸಾಂಬಾ, ಜಮ್ಮುನಲ್ಲಿ ಕೆಲಸಕ್ಕೆ ಕಳುಹಿಸಲಾಯಿತು. ಇವರು ವಿಶ್ವದ ಮಿಲಿಟರಿ ಆಟಗಳು ಸೇರಿದಂತೆ, ವಿವಿಧ ಸ್ಪರ್ಧೆಗಳಲ್ಲಿ, ಪರಿಣಾಮಕಾರಿಯಾದ ಸರಣಿ ಓಟಗಳು ಮತ್ತು ಸಾಧನೆಯೋಂದಿಗೆ ಭಾರತವನ್ನು ಪ್ರತಿನಿಧಿಸಿದ್ದಾರೆ ಇತ್ತೀಚೆಗೆ, ಇವರ್ ಕೋಚ್ ಸುರೇಂದ್ರ ಸಿಂಗ್ ರವರು, ಖೇತ್‌ರಾಮ್ ರವರು ಸ್ಪರ್ಧಿಸುತ್ತಿರುವ ಮಧ್ಯಂತರ ದೂರದ ಟ್ರ್ಯಾಕ್ ಮತ್ತು ಫೀಲ್ಡ್ ಸ್ಪರ್ಧೆಗಳನ್ನು ಬಿಟ್ಟು ಬದಲಿಗೆ ಮ್ಯಾರಥಾನ್ ದೂರ ಸ್ಪರ್ಧೆಗಳ ತರಬೇತಿ ಪಡೆಯಬೇಕು ಎಂದು ನಿರ್ಧರಿಸಿದರು []. ಅವರು ಹೃದಯ ಮತ್ತು ಶ್ವಾಸಕೋಶದ ಸಾಮರ್ಥ್ಯ ಹೆಚ್ಚಿಸಲು ಇವರಿಗೆ ಸೇನೆ ಕ್ರೀಡಾ ಸಂಸ್ಥೆ ಪುಣೆ, ತಾಂಗರಾಜ್ ಕ್ರೀಡಾಂಗಣದಲ್ಲಿ ವೆಲ್ಲಿಂಗ್ಟನ್ ನ ತೆಳುಗಾಳಿಯಲ್ಲಿ / ನೀಲಗಿರಿಯ ಕೂನೂರ್ ನಲ್ಲಿ ಮತ್ತು ಇತ್ತೀಚೆಗೆ ಸಾಯಿ ಸಂಕೀರ್ಣ ಬೆಂಗಳೂರು, ಭಾರತದಲ್ಲಿ ತರಬೇತಿಯನ್ನು ನೀಡಲಾಯಿತು. ಇವರ ವಿಓ೨ ಗರಿಷ್ಠ ಸುಮಾರು ೮೪ (ಲ್ಯಾನ್ಸ್ ಆರ್ಮ್ಸ್ಟ್ರಾಂಗ್ ಹೋಲಿಸದರೆ,ಮಿಲಿ ಆಮ್ಲಜನಕ ಬಳಕೆ, ಒಂದು ನಿಮಿಷಕ್ಕೆ, ಪ್ರತಿ ಕೆಜಿ ದೇಹತೂಕಕ್ಕೆ), ೪೫ ಬಿ.ಪಿ.ಎಮ್. ಹೃದಯದ ವಿರಾಮದ ಬಡಿತದ ಜೊತೆ [].

ಇವರು ೨೦೧೬ ಮುಂಬಯಿ ಮ್ಯಾರಥಾನ್ನಲ್ಲಿ ೦೨:೧೭:೨೩ ಮ್ಯಾರಥಾನ್ ಸಮಯದ ಮುಗಿಸಿ, ಇತರ ಮ್ಯಾರಥಾನ್ ಓಟಗಾರರಾದ ಗೋಪಿ ಟಿ ಮತ್ತು ನಿತೇಂದ್ರ ಸಿಂಗ್ ರ ಜೊತೆ ೨೦೧೬ರ ಬೇಸಿಗೆ ಒಲಿಂಪಿಕ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಲು ಅರ್ಹತೆ ಪಡೆದರು.

ಸ್ಪರ್ಧೆಯಲ್ಲಿ ದಾಖಲೆ

ಬದಲಾಯಿಸಿ
ವರುಷ ಸ್ಪರ್ಧೆ ಸ್ಥಳ ಸ್ಥಾನ ಸ್ಪರ್ಧೆ ಸಮಯ ಉಲ್ಲೇಖಗಳು
೨೦೧೧ ಬೆಂಗಳೂರು ಅಂತರರಾಜ್ಯ ಬೆಂಗಳೂರು, ಭಾರತ ತಿಳಿದಿಲ್ಲ ೧೦,೦೦೦ ಮೀ ೨೯:೩೦:೩೫ []
೨೦೧೧ ಸನ್‌ಪೀಸ್ಟ್ ವಿಶ್ವ ೧೦ ಕೆ ಬೆಂಗಳೂರು, ಭಾರತ ೨೨ನೇ ಒಟ್ಟಾರೆ/ ೩ ನೇ ಭಾರತೀಯ ೧೦ ಕೀ.ಮೀ ರಸ್ತೆ ೩೦:೩೪ []

[]

೨೦೧೧ ಹೊಸ ದಹಲಿ ಅರ್ಧ ಮ್ಯಾರಥಾನ್ ಹೊಸ ದೆಹಲಿ ಭಾರತ ೨೨ನೇ ಒಟ್ಟಾರೆ/ ೨ ನೇ ಭಾರತೀಯ ಅರ್ಧ ಮ್ಯಾರಥಾನ್ ೧:೦೪:೪೪ []
೨೦೧೨ ವಡೋದರ ೧೫ಎಮ್ ವಡೋದರ ಭಾರತ ತಿಳಿದಿಲ್ಲ ೧೫ ಮೈಲಿ ರಸ್ತೆ ೪೭:೧೧ []
೨೦೧೩ ಭಾರತೀಯ ಗ್ರ್ಯಾಂಡ್ ಪ್ರಿಕ್ಸ್ ಪಟಿಯಾಲ, ಭಾರತ ೧ ನೇ ೫೦೦೦ ಮೀ ೧೩:೧೫:೩೨

(೧ ಸುತ್ತು ಕಡಿಮೆ)

[]
೨೦೧೩ ಭಾರತೀಯ ಗ್ರ್ಯಾಂಡ್ ಪ್ರಿಕ್ಸ್ ಪಟಿಯಾಲ, ಭಾರತ ತಿಳಿದಿಲ್ಲ ೩೦೦೦ ಮೀ ೦೮:೦೬:೩೩ []
೨೦೧೩ ಏಷ್ಯನ್ ಗ್ರ್ಯಾಂಡ್ ಪ್ರಿಕ್ಸ್, ೧ ನೇ ಲೆಗ್ ಬ್ಯಾಂಕಾಕ್, ಥೈಲ್ಯಾಂಡ್ ೨ ನೇ ೫೦೦೦ ಮೀ ೧೪:೫೫:೧೨ []

[] []

೨೦೧೩ ಏಷ್ಯನ್ ಅಥ್ಲೆಟಿಕ್ ಚಾಂಪಿಯನ್ಶಿಪ್ ಪುಣೆ, ಭಾರತ ೪ ನೇ ೧೦೦೦೦ ಮೀ ೨೯:೩೫:೭೨
೨೦೧೪ ಫೆಡರೇಷನ್ ಕಪ್ ರಾಷ್ಟ್ರೀಯ ಹಿರಿಯ ಅಥ್ಲೆಟಿಕ್ ಚಾಂಪಿಯನ್ ಪಟಿಯಾಲ, ಭಾರತ ೧ ನೇ ೫೦೦೦ ಮೀ ೧೩:೪೯:೧೭ []

[೧೦] [೧೧] [೧೨]

೨೦೧೪ ರಾಷ್ಟ್ರೀಯ ಮುಕ್ತ ಅಥ್ಲೆಟಿಕ್ ಚಾಂಪಿಯನ್ ಹೊಸ ದಹಲಿ ಭಾರತದ ೨ ನೇ ೧೦೦೦೦ ಮೀ ೨೯:೩೨:೭೫ [೧೩]

[೧೪]

೨೦೧೪ ಏಷ್ಯನ್ ಗೇಮ್ಸ್ ಇಂಚೆಯೋನ್, ದಕ್ಷಿಣ ಕೊರಿಯ ೭ ನೇ ೫೦೦೦ ಮೀ ೧೩:೨೭:೪೦ []
೨೦೧೫ ವಸಾಯಿ ವಿರಾರ್ ಮೇಯರ್ ಮ್ಯಾರಥಾನ್ ವಿರಾರ್, ಮುಂಬಯಿ ಮೆಟ್ರೋ ಪ್ರದೇಶ, ಭಾರತ ೧ ನೇ ಮ್ಯಾರಥಾನ್ ೦೨:೨೨:೩೨ [೧೫]

[೧೬]

೨೦೧೬ ಮುಂಬಯಿ ಮ್ಯಾರಥಾನ್ ಮುಂಬಯಿ, ಭಾರತ ೧೫ ನೇ ಒಟ್ಟಾರೆ/ ೩ ನೇ ಭಾರತೀಯ ಮ್ಯಾರಥಾನ್ ೦೨:೧೭:೨೩ [೧೭][೧೮]

[೧೯] [೨೦] [೨೧]

೨೦೧೬ ದಕ್ಷಿಣ ಏಷ್ಯಾದ ಕ್ರೀಡೆಗಳು ಗೌಹಾತಿ, ಭಾರತ ೩ ನೇ ಮ್ಯಾರಥಾನ್ ೦೨:೨೧:೧೪ [೨೨]

ವೈಯಕ್ತಿಕ ಜೀವನ

ಬದಲಾಯಿಸಿ

ಇವರು ಜನಿಸಿದ್ದು ರಾಜಸ್ಥಾನದ ಬಾರ್ಮರ್ ಜಿಲ್ಲಯ ಖೊಕ್ಸಾರ್ ನಲ್ಲಿ, ಖೇತ್‌ರಾಮ್ ರವರು ಜಾಟ್ ರೆಜಿಮೆಂಟ್ನ ಮೂಲದ ವಿನಮ್ರ ನಾಯಕ್ ಸುಬೇದಾರ್. ಇವರಿಗೆ ಒಬ್ಬಳು ಸಹೋದರಿ ಮತ್ತು ನಾಲ್ಕು ಸಹೋದರರು ಇದ್ದಾರೆ. ಇವರು ದಿನವು ೮ನೇ ತರಗತಿ ವರೆಗೆ ಮಾತ್ರವಿದ್ದ ಶಾಲೆಗೆ ಮರುಭೂಮಿಯ ಮೂಲಕ ಓಡಿಹೋಗುತ್ತಿದ್ದರು. ಅನೇಕ ಓಟಗಾರುರು ಗುಡ್ಡಗಾಡು ಪ್ರದೇಶದಿಂದ ಬಂದವರು, ಗುಡ್ಡಗಾಡು ಪ್ರದೇಶದಿಂದ ಬಂದವರಾಗಿದ್ದರಿಂದ ಇವರಲ್ಲಿ ಕೆಂಪು ರಕ್ತ ಕಣಗಳು, ಶ್ವಾಸಕೋಶದ ಸಾಮರ್ಥ್ಯ ಮತ್ತು ಸಹಿಷ್ಣುತೆ ಹೆಚ್ಚು ಇರುತ್ತದೆ. ಇದಕ್ಕೆ ವಿರುದ್ಧವಾಗಿ, ಖೇತ್‌ರಾಮ್ ರವರು ಸಾಮರ್ಥ್ಯಗಳಾದ ಕಣಕಾಲಿನ ಹಿ೦ಭಾಗ ಮತ್ತು ಮಂಡಿರಜ್ಜು, ಮರುಭೂಮಿಯಲ್ಲಿ ಮರಳಿನಲ್ಲಿ ಓಡಿದ್ದರಿಂದ ಬಂದಿದೆ.

ಸ್ಥಿರ ಆದಾಯಕ್ಕಾಗಿ ೧೮ ವಯಸ್ಸಿನಲ್ಲಿ ಭಾರತ ಸೇನೆ ಸೇರಿದರು, ಮತ್ತು ತನ್ನ ಅಥ್ಲೆಟಿಕ್ ಸಾಮರ್ಥ್ಯದಿಂದ ಸೇನೆಯಲ್ಲಿ ಗುರುತಿಸಿಕೊಂಡರು. ಭಾರತೀಯ ಸೇನೆಯ ವಿಶ್ವ ದರ್ಜೆಯ ಕ್ರೀಡಾ ಪಟ್ಟುಗಳನ್ನು ಸಕ್ರಿಯ ಕರ್ತವ್ಯದಿಂದ ಕ್ಷಮಾಪಾಣೆ ಕೊಟ್ಟು, ಪೂರ್ಣ ಕ್ರೀಡಾಪಟುವಾಗಿ ತರಬೇತಿ ಪಡೆಯಲು ಅವಕಾಶ ಮಾಡಿಕೊಡುತ್ತಾದೆ. ತನ್ನ ಕ್ರೀಡಾಪಟುವಿನ ಸೌಲಭ್ಯಗಳನ್ನು ತನ್ನ ಹಳ್ಳಿಯ ತೀವ್ರ ನೀರಿನ ಸಮಸ್ಯೆಗಳನ್ನು ಬಗ್ಗೆಹರಿಸಲು ಬಳಸಬೇಕು ಎಂದು ಬಯಸುತ್ತಾರೆ. ಇವರ ಪೋಷಕರು ಮತ್ತು ಪತ್ನಿ ವಿದ್ಯಾವಂತರಲ್ಲ ಮತ್ತು ಒಲಿಂಪಿಕ್ಸ್ ನಲ್ಲಿ ದೇಶವನ್ನು ಪ್ರತಿನಿಧಿಸಲಿದ್ದಾರೆ ಎಂದು ಅರ್ಥಮಾಡಿಕೊಳ್ಳಲು ಸಾಧ್ಯವಾಗಿಲ್ಲ []. ಅವರು ತಮ್ಮ ಕುಟುಂಬದ ಏಕಮಾತ್ರ ದುಡಿಯುವ ಸದಸ್ಯ ಮತ್ತು ಇವರು ತಮ್ಮ ಉಳಿತಾಯದ ಹಣವನ್ನು, ಅವರ ಪೋಷಕರು, ಪತ್ನಿ ಮತ್ತು ಇಬ್ಬರು ಮಕ್ಕಳಿಗಾಗಿ ಮನೆಗೆ ಕಳುಹಿಸಿಕೊಡುತ್ತಾರೆ.ಅವರು ತಿಂಗಳಿಗೆ ಓಡುವ ಮೈಲಿ ದೂರವನ್ನು ಸರಿಹೊಂದಿಸಲು, ಅವರು ಮಾಡುವ ಮಾಸಿಕ ಶೂಗಳ ಖರೀದಿ ಅವರ ದುಡಿಮೆಯಲ್ಲಿ ಅತಿ ದೊಡ್ಡ ವೆಚ್ಚ (ಪ್ರತಿ ಜೋಡಿಗೆ ಬೆಲ ಸುಮಾರು ೧೦.೦೦೦ರೂ), ೨೦೧೬ರ ಮಧ್ಯದ ವರೆಗೆ, ಅವರು ಯಾವುದೇ ಕಾರ್ಪೊರೇಟ್ ಪ್ರಾಯೋಜಕತ್ವದ ಹೊಂದಿಲ್ಲ ಮತ್ತು ಅವರು ತನ್ನ ಶೂಗಳನ್ನು ಅವರೆ ಖರೀದಿ ಮಾಡುತಿದ್ದಾರೆ [].

ಅವರು ಮತ್ತು ಅವರ ಸಹವರ್ತಿ ಕ್ರೀಡಾಪಟುಗಳು ವರ್ಷದಲ್ಲಿ ೧೨ ರಲ್ಲಿ ೧೧ ತಿಂಗಳುಗಳು ಕಾಲ ತಮ್ಮ ಕುಟುಂಬವನ್ನು ಬೇಟಿಯಾಗದೆ ಮನೆಯಿಂದ ದೂರ ಇರುತ್ತಾರೆ, ವಿಶ್ವ ವೇದಿಕೆಯಲ್ಲಿ ಪೈಪೋಟಿ ಮಾಡವ ಸಲುವಾಗಿ ಅವರು ಮಾಡಲೇ ಬೇಕಾಡ ಒಂದು ತ್ಯಾಗ[].

ಉಲ್ಲೇಖಗಳು

ಬದಲಾಯಿಸಿ
  1. "Indian Marathoners – Bharat at Rio '16 – Track and Field Sports News". trackfield.in. Archived from the original on 2018-04-07. Retrieved 2016-07-29.
  2. ೨.೦ ೨.೧ "Kheta Ram: 10 things to know about India's long-distance runner heading to Rio Olympics 2016". 2016-07-24. Retrieved 2016-08-01.
  3. ೩.೦ ೩.೧ ೩.೨ "Cool Runnings: India's marathon men".
  4. ೪.೦ ೪.೧ ೪.೨ ೪.೩ ೪.೪ ೪.೫ ೪.೬ "Profile of Ram KHETA | All-Athletics.com". www.all-athletics.com. Archived from the original on 2016-08-18. Retrieved 2016-08-01.
  5. "- Deccan Herald". m.deccanherald.com. Archived from the original on 2016-08-06. Retrieved 2016-08-01.
  6. "Kheta Ram wins 5000m amid controversy". The Hindu. 2013-04-01. ISSN 0971-751X. Retrieved 2016-08-01.
  7. "Asian Grand Prix 2013 | Singapore Athletics". www.singaporeathletics.org.sg. Retrieved 2016-08-01.
  8. "2013 Asian Grand Prix Results" (PDF). Archived from the original (PDF) on 2016-08-14.
  9. "Kheta Ram sets meet record in 5000m to qualify for Asian Games". 2014-08-16. Retrieved 2016-08-01.
  10. "Kheta Ram shatters event record in 5,000m at National Athletics Championships". 2014-08-16. Retrieved 2016-08-01.
  11. "Kheta Ram breaks 7-year-old meet record, qualifies for Asian Games". Retrieved 2016-08-01.
  12. "Kheta Ram sets new meet record in men's 5000m to qualify for Asian Games 2014". 2014-08-17. Retrieved 2016-08-01.
  13. "ಆರ್ಕೈವ್ ನಕಲು". Archived from the original on 2016-03-14. Retrieved 2016-08-14.
  14. "20th Asian Athletics Championships | Athletics Federation of India". indianathletics.in. Archived from the original on 2016-08-17. Retrieved 2016-08-01.
  15. "Marathon: Never expected to win on debut, says Kheta Ram". Retrieved 2016-08-01.
  16. "Debutant Kheta Ram wins Marathon 2015 - Mumbai Messenger - The Local Weekly Newspaper, Mumbai Local Newspaper, Local Newspaper of Mumbai". 2015-11-27. Archived from the original on 2016-08-20. Retrieved 2016-08-01.
  17. "Gopi, Kheta Ram qualify for Olympics; Rawat sets course record - Times of India". Retrieved 2016-08-01.
  18. "Gopi, Kheta Ram qualify for Olympics; Rawat sets course record". The Hindu. 2016-01-17. ISSN 0971-751X. Retrieved 2016-08-01.
  19. "More than 40,000 people participate in the Mumbai Marathon 2016 - Firstpost". 2016-01-17. Retrieved 2016-08-01.
  20. "Rawat sets course record; Gopi, Kheta Ram qualify for Rio". Retrieved 2016-08-01.
  21. "Gopi T, Kheta Ram seal Rio berths | The Asian Age". Retrieved 2016-08-01.
  22. "2016 South Asian Games Results" (PDF). Archived from the original (PDF) on 2016-02-23.