ಖುಷಿ ರವಿ (ನಟಿ)
ಖುಷಿ ರವಿ(English:Khushi Ravi), ಕನ್ನಡ ಚಲನಚಿತ್ರಗಳಲ್ಲಿ ನಟಿಸುತ್ತಿರುವ ನಟಿ. ಖುಷಿ ನಟಿಸಿದ "ದಿಯಾ"(2020) ಚಿತ್ರವು ಅವರಿಗೆ ಜನಪ್ರಿಯತೆ ತಂದುಕೊಟ್ಟಿತು[೨].
ಖುಷಿ ರವಿ | |
---|---|
ಜನನ | ಖುಷಿ 31 ಜನವರಿ, 1993[೧] |
ಇತರೆ ಹೆಸರು | ದಿಯಾ |
ವೃತ್ತಿ | ನಟಿ |
ಸಕ್ರಿಯ ವರ್ಷಗಳು | 2016–ಈವರೆಗೆ |
ಸಂಗಾತಿ | ರಾಕೇಶ್ |
ಮಕ್ಕಳು | 1 |
ಪೋಷಕ(ರು) | ಶೋಭಾ ರವಿ |
ವೈಯಕ್ತಿಕ ಜೀವನ
ಬದಲಾಯಿಸಿಬೆಂಗಳೂರಿನಲ್ಲಿ, ಮದ್ದೂರು ಮೂಲದ ರವಿ ಮತ್ತು ಶೋಭಾ ದಂಪತಿಗಳಿಗೆ ಜನಿಸಿದ ಖುಷಿ, ಬಯೋಟೆಕ್ನಾಲಜಿ ಪದವೀಧರೆ. ರಾಕೇಶ್ ಎಂಬುವರನ್ನು ಮದುವೆಯಾದ ಇವರು, ಹೆಣ್ಣು ಮಗುವೊಂದರ ತಾಯಿ.
ನಟಿಯಾಗಿ
ಬದಲಾಯಿಸಿರಂಗಭೂಮಿಯಲ್ಲಿ ತೊಡಗಿಕೊಂಡ ಖುಷಿ, ಮಂಡ್ಯ ರಮೇಶ್ ನಡೆಸುವ ನಟನ ರಂಗಸಂಸ್ಥೆಯ ಜೊತೆಗೆ ಗುರುತಿಸಿಕೊಂಡವರು. ರಂಗಭೂಮಿಯಿಂದ ಸಿನಿಮಾ ಜಗತ್ತಿಗೆ ಬಂದ ಖುಷಿ ಅವರ ಮೊದಲ ಚಿತ್ರ 2016ರ, ಜ್ಯೋತಿರಾವ್ ಮೋಹಿತ್ ನಿರ್ದೇಶಿಸಿದ "ದಿ ಗ್ರೇಟ್ ಸ್ಟೋರಿ ಆಫ್ ಸೋಡಾಬುಡ್ಡಿ".
ಖುಷಿ ಅವರ ಎರಡನೇ ಚಿತ್ರ 2020ರಲ್ಲಿ ತೆರೆಕಂಡ, ಕೆ. ಎ. ಅಶೋಕ ನಿರ್ದೇಶಿಸಿದ, "ದಿಯಾ"[೩]. ಚಿತ್ರದ ಶೀರ್ಷಿಕೆಯ ಪಾತ್ರ ಮಾಡಿದ ಖುಷಿ, ಪ್ರೇಕ್ಷಕವರ್ಗದಿಂದ 'ದಿಯಾ' ಎಂದೇ ಗುರುತಿಸಿಕೊಂಡರು. ಈ ಚಿತ್ರದ ಮೂಲಕ ಜನಮನ್ನಣೆಗೆ ಪಾತ್ರರಾದರು[೪]. 2020ನೇ ವರ್ಷದಲ್ಲಿ, ಅಂತರ್ಜಾಲದಲ್ಲಿ ಬಳಕೆದಾರರು ಅತಿಹೆಚ್ಚು ಹುಡುಕಾಡಿದ ಕಲಾವಿದರಲ್ಲಿ ಒಬ್ಬರಾಗಿ ಟ್ರೆಂಡಿಂಗ್ ನಲ್ಲಿದ್ದರು.
ಚಿತ್ರಗಳು
ಬದಲಾಯಿಸಿDenotes films that have not yet been released |
ವರ್ಷ | ಚಿತ್ರ | ಪಾತ್ರ | ಸಹನಟರು | ವಿವರ |
---|---|---|---|---|
2016 | ದಿ ಗ್ರೇಟ್ ಸ್ಟೋರಿ ಆಫ್ ಸೋಡಾಬುಡ್ಡಿ | ಉತ್ಪಲ್ | ಮೊದಲ ಚಿತ್ರ | |
2020 | ದಿಯಾ | ದಿಯಾ ಸ್ವರೂಪ್ | ದೀಕ್ಷಿತ್ ಶೆಟ್ಟಿ, ಪೃಥ್ವಿ ಅಂಬರ್ | |
2020 | ನಕ್ಷೆ[೫] | ಅರ್ಚನಾ ಎಸ್. ಜೋಯಿಸ್ |
ಉಲ್ಲೇಖಗಳು
ಬದಲಾಯಿಸಿ- ↑ "ನಟಿ ಖುಷಿ ರವಿ". filmifeed.com. Archived from the original on 2020-06-27. Retrieved 2020-08-29.
- ↑ "ಪತ್ರಕರ್ತೆ ಪಾತ್ರದಲ್ಲಿ ದಿಯಾ ಚಿತ್ರದ ನಾಯಕಿ ಖುಷಿ ರವಿ". filmibeat.com.
- ↑ "ದಿಯಾ ಚಿತ್ರ". filmibeat.com.
- ↑ "ದಿಯಾ ಗೆಲುವಿನ ನಂತರದ ಜೀವನ:ಖುಷಿ ರವಿ". The New Indian Express.
- ↑ "'ನಕ್ಷೆ' ಚಿತ್ರಕ್ಕೆ ನಾಯಕಿಯಾಗಿ ಖುಷಿ ರವಿ". Times of India.