ಕಾರ

(ಖಾರ ಇಂದ ಪುನರ್ನಿರ್ದೇಶಿತ)

ಖಾರ ಎಂದರೆ ಕಟುವಾದ, ತೀಕ್ಷ್ಣ ವಾಸನೆ ಅಥವಾ ರುಚಿ ಇರುವ ಸ್ಥಿತಿ, ಹಲವುವೇಳೆ ಇದು ಎಷ್ಟು ತೀಕ್ಷ್ಣವಾಗಿರುತ್ತದೆಂದರೆ ಇದು ಅಹಿತಕರವೆನಿಸುತ್ತದೆ. ಖಾರ ರುಚಿಯು ಆಹಾರದ ಒಂದು ಗುಣಲಕ್ಷಣವಾಗಿದೆ, ಮತ್ತು ಮೆಣಸಿನಕಾಯಿಯಂತಹ ಆಹಾರದಲ್ಲಿ ಕಂಡುಬರುತ್ತದೆ.[]

ತರತರದ ಮೆಣಸಿನಕಾಯಿಗಳು

ಖಾರವನ್ನು ಹಲವುವೇಳೆ ಸೌಮ್ಯದಿಂದ ತೀಕ್ಷ್ಣದವರೆಗೆ ವ್ಯಾಪಿಸುವ ಮಾಪಕಗಳಲ್ಲಿ ಪರಿಮಾಣಿಸಲಾಗುತ್ತದೆ. ಸ್ಕೋವಿಲ್ ಮಾಪಕವು ಅವು ಹೊಂದಿರುವ ಕ್ಯಾಪ್ಸೇಯ್ಸಿನ್‍ನ ಪ್ರಮಾಣದಿಂದ ವ್ಯಾಖ್ಯಾನಿಸಲಾಗುವ ಮೆಣಸಿನಕಾಯಿಗಳ ಖಾರವನ್ನು ಅಳೆಯುತ್ತದೆ. ಮೆಣಸಿನಕಾಯಿಗಳು, ಕರಿಮೆಣಸು, ಮತ್ತು ಶುಂಠಿ ಹಾಗೂ ಕುದುರೆ ಮೂಲಂಗಿಯಂತಹ ಇತರ ಸಂಬಾರ ಪದಾರ್ಥಗಳು ನೀಡುವ ಖಾರದ ಸಂವೇದನೆಯು ಭಾರತೀಯ ಪಾಕಶೈಲಿ ಸೇರಿದಂತೆ ವಿಶ್ವಾದ್ಯಂತದ ವೈವಿಧ್ಯಮಯ ಪಾಕಶೈಲಿಗಳಲ್ಲಿ ಮುಖ್ಯವಾದ ಪಾತ್ರವಹಿಸುತ್ತದೆ.

ಖಾರವನ್ನು ತಾಂತ್ರಿಕ ಅರ್ಥದಲ್ಲಿ ಒಂದು ರುಚಿಯೆಂದು ಪರಿಗಣಿಸಲಾಗುವುದಿಲ್ಲ ಏಕೆಂದರೆ ಅದು ಮೆದುಳಿಗೆ ನರಗಳ ಬೇರೆ ಸಮೂಹಗಳಿಂದ ಸಾಗಿಸಲ್ಪಡುತ್ತದೆ. ಮೆಣಸಿನಕಾಯಿಗಳಂತಹ ಆಹಾರಗಳನ್ನು ಸೇವಿಸುವಾಗ ರುಚಿಯ ನರಗಳು ಸಕ್ರಿಯಗೊಳ್ಳುತ್ತಾವಾದರೂ, "ಖಾರ" ಎಂದು ಸಾಮಾನ್ಯವಾಗಿ ಅರ್ಥೈಸಲಾದ ಸಂವೇದನೆಯು ಬಾಯಿಯಲ್ಲಿನ ಸೊಮ್ಯಾಟೊಸೆನ್ಸರಿ ತಂತುಗಳ ಪ್ರಚೋದನೆಯಿಂದ ಉಂಟಾಗುತ್ತದೆ. ರುಚಿ ಗ್ರಾಹಕಗಳನ್ನು ಹೊಂದಿರದ ಒಡ್ಡಲ್ಪಟ್ಟ ಪೊರೆಗಳಿರುವ ದೇಹದ ಅನೇಕ ಭಾಗಗಳು (ಉದಾಹರಣೆಗೆ ಮೂಗಿನ ಕುಳಿ, ಜನನೇಂದ್ರಿಯಗಳು, ಅಥವಾ ಗಾಯ) ಖಾರದ ಪದಾರ್ಥಗಳಿಗೆ ಒಡ್ಡಲ್ಪಟ್ಟಾಗ ಬಿಸಿಯ ಸಮಾನವಾದ ಸಂವೇದನೆಯನ್ನು ತೋರಿಸುತ್ತವೆ.

ಉಲ್ಲೇಖಗಳು

ಬದಲಾಯಿಸಿ
  1. Tewksbury, J. J.; Reagan, K. M.; Machnicki, N. J.; Carlo, T. A.; Haak, D. C.; Penaloza, A. L. C.; Levey, D. J. (2008). "Evolutionary ecology of pungency in wild chilies". Proceedings of the National Academy of Sciences. 105 (33): 11808–11811. doi:10.1073/pnas.0802691105. PMC 2575311. PMID 18695236.
"https://kn.wikipedia.org/w/index.php?title=ಕಾರ&oldid=934437" ಇಂದ ಪಡೆಯಲ್ಪಟ್ಟಿದೆ