ಖಾಂಡವಿ
ಖಾಂಡವಿ (ಸುರಳೀಚಿ ವಡಿ) ಮಹಾರಾಷ್ಟ್ರ ಮತ್ತು ಗುಜರಾತ್ ನ ಪಾಕಶೈಲಿಯಲ್ಲಿನ ಒಂದು ಖಾರದ ಲಘು ಆಹಾರ.[೨][೩] ಇದು ಹಳದಿ, ಬಿಗಿಯಾಗಿ ಸುತ್ತಲಾದ ತುತ್ತು ಗಾತ್ರದ ತುಂಡುಗಳನ್ನು ಹೊಂದಿರುತ್ತದೆ ಮತ್ತು ಇದನ್ನು ಪ್ರಧಾನವಾಗಿ ಕಡಲೆಹಿಟ್ಟು ಮತ್ತು ಮೊಸರಿನಿಂದ ತಯಾರಿಸಲಾಗುತ್ತದೆ.
ಮೂಲ | |
---|---|
ಮೂಲ ಸ್ಥಳ | ಭಾರತ |
ಪ್ರಾಂತ್ಯ ಅಥವಾ ರಾಜ್ಯ | ಗುಜರಾತ್, ಮಹಾರಾಷ್ಟ್ರ |
ವಿವರಗಳು | |
ಮುಖ್ಯ ಘಟಕಾಂಶ(ಗಳು) | ಕಡಲೆ ಹಿಟ್ಟು, ಮೊಸರು[೧] |
ಖಾಂಡವಿ ಭಾರತದಾದ್ಯಂತ ಸುಲಭವಾಗಿ ಲಭ್ಯವಿದೆ ಮತ್ತು ಸಾಮಾನ್ಯವಾಗಿ ಕ್ಷುಧಾವರ್ಧಕ ಅಥವಾ ಲಘು ಆಹಾರವಾಗಿ ತಿನ್ನಲ್ಪಡುತ್ತದೆ. ಅನೇಕ ಜನರು ಇದನ್ನು ಮನೆಯಲ್ಲಿ ತಯಾರಿಸುವ ಬದಲು ಸ್ಥಳೀಯ ಅಂಗಡಿಗಳಿಂದ ಖರೀದಿಸಲು ಇಷ್ಟಪಡುತ್ತಾರೆ. ಇದನ್ನು ಕೆಲವೊಮ್ಮೆ ಬೆಳ್ಳುಳ್ಳಿ ಚಟ್ನಿಯೊಂದಿಗೆ ಬಡಿಸಲಾಗುತ್ತದೆ.[೪]
ತಯಾರಿಕೆ
ಬದಲಾಯಿಸಿಖಾಂಡವಿಯನ್ನು ಸಾಮಾನ್ಯವಾಗಿ ಕಡಲೆಹಿಟ್ಟು ಮತ್ತು ಮೊಸರು ಸೇರಿಸಿದ ಹಿಟ್ಟಿನಿಂದ ತಯಾರಿಸಲಾಗುತ್ತದೆ. ಇದಕ್ಕೆ ಶುಂಠಿ ಪೇಸ್ಟ್, ಉಪ್ಪು, ನೀರು, ಅರಿಶಿನ, ಮತ್ತು ಕೆಲವೊಮ್ಮೆ ಹಸಿರು ಮೆಣಸಿನಕಾಯಿಯನ್ನು ಸೇರಿಸಲಾಗುತ್ತದೆ. ಈ ಹಿಟ್ಟನ್ನು ಗಟ್ಟಿ ಪೇಸ್ಟ್ ಆಗುವವರೆಗೆ ಬೇಯಿಸಲಾಗುತ್ತದೆ ಮತ್ತು ಆಮೇಲೆ ಚಪ್ಪಟೆ ಮೇಲ್ಮೈ ಮೇಲೆ ತೆಳುವಾಗಿ ಹರಡಲಾಗುತ್ತದೆ.[೫] ಆಮೇಲೆ ಖಾಂಡವಿಗಳನ್ನು ೨-೩ ಸೆ.ಮಿ. ಗಾತ್ರದ ತುಂಡುಗಳಾಗಿ ಬಿಗಿಯಾಗಿ ಸುತ್ತಲಾಗುತ್ತದೆ.[೩] ಖಾಂಡವಿ ಸಾಮಾನ್ಯವಾಗಿ ತುತ್ತು ಗಾತ್ರದ್ದಾಗಿರುತ್ತದೆ. ಇದನ್ನು ಸಂಬಾರ ಪದಾರ್ಥಗಳು ಮತ್ತು ತುರಿದ ಗಿಣ್ಣು, ಚಟ್ನಿ, ಅಥವಾ ಕೆಚಪ್‍ನಂತಹ ವ್ಯಂಜನಗಳಿಂದ ಅಲಂಕರಿಸಬಹುದು. ಇದನ್ನು ಬಿಸಿಯಾಗಿ ಅಥವಾ ತಣ್ಣಗೆ ಬಡಿಸಬಹುದು.
ಉಲ್ಲೇಖಗಳು
ಬದಲಾಯಿಸಿ- ↑ Laveesh, Bhandari (1 January 2009). "Indian States at a Glance 2008-09: Performance, Facts and Figures - Gujarat". Pearson Education India. Retrieved 6 May 2017 – via Google Books.
- ↑ "Suralichi Vadi|Maharashtrian Recipes". Maharashtrian Recipes (in ಅಮೆರಿಕನ್ ಇಂಗ್ಲಿಷ್). 2016-04-14. Retrieved 2017-11-27.
- ↑ ೩.೦ ೩.೧ MySpicyKitchen. "A snack from Gujarat, Khandvi". MySpicyKitchen. Retrieved October 21, 2011.
- ↑ Laveesh, B. (2009). Indian States at a Glance 2008-09: Performance, Facts and Figures - Gujarat. Pearson Education. p. 36. ISBN 978-81-317-2342-5. Retrieved October 26, 2017.
- ↑ "Masala Cook:: Indian Food, Indian Cooking, Indian Recipes & More. (n.d.)". Retrieved April 1, 2014.