ಖಳನಾಯಕನು ಒಂದು ಕಥೆಯಲ್ಲಿನ "ದುಷ್ಟ" ಪಾತ್ರವಾಗಿರುತ್ತಾನೆ, ಅದು ಐತಿಹಾಸಿಕ ಕಥೆ ಅಥವಾ, ವಿಶೇಷವಾಗಿ, ಕಲ್ಪಿತ ಕೃತಿಯಾಗಿರಬಹುದು.

ಖಳನಾಯಕರು ಸಾಮಾನ್ಯವಾಗಿ ಪ್ರತಿನಾಯಕರಾಗಿರುತ್ತಾರೆ, ಆದರೆ ಇದು ಯಾವಾಗಲೂ ಅಲ್ಲ. ಆ ದುಷ್ಟ ವ್ಯಕ್ತಿಯು ಹೆಂಗಸಾಗಿದ್ದರೆ ಅವಳನ್ನು ಖಳನಾಯಕಿ ಎಂದು ಕರೆಯಲಾಗುತ್ತದೆ. ರ‍್ಯಾಂಡಮ್ ಹೌಸ್ ನಿಘಂಟು ಖಳನಾಯಕನನ್ನು "ದುಷ್ಟತನ ಅಥವಾ ಅಪರಾಧದಲ್ಲಿ ಸೇರಿರುವ ಅಥವಾ ಅದಕ್ಕೆ ಸಮರ್ಪಿಸಿಕೊಂಡಿರುವ ಕ್ರೂರವಾಗಿ ದ್ವೇಷಪೂರ್ಣ ವ್ಯಕ್ತಿ; ಪುಂಡ/ನೀಚ; ಅಥವಾ ಒಂದು ನಾಟಕ, ಕಾದಂಬರಿ, ಅಥವಾ ಅವುಗಳಿಗೆ ಹೋಲುವ ಕೃತಿಗಳಲ್ಲಿನ, ಕಥಾವಸ್ತುವಿನ ಮುಖ್ಯವಾದ ದುಷ್ಟ ಪ್ರಭಾವ ಎನಿಸಿಕೊಳ್ಳುವ ಪಾತ್ರ" ಎಂದು ವ್ಯಾಖ್ಯಾನಿಸುತ್ತದೆ.[೧]

ವೈದೃಶ್ಯ ಗುಣಸಂಪಾದಿಸಿ

ಕಲ್ಪಿತ ಕಥನದಲ್ಲಿ, ಖಳನಾಯಕರು ಸಾಮಾನ್ಯವಾಗಿ ಕಥೆಯ ನಾಯಕರಿಗೆ ವಿರೋಧಿ ಪಾತ್ರ ಮತ್ತು ವೈದೃಶ್ಯ ಗುಣದ ಪಾತ್ರ, ಹೀಗೆ ದ್ವಿಪಾತ್ರದಲ್ಲಿ ಕಾರ್ಯನಿರ್ವಹಿಸುತ್ತಾರೆ. ವೈದೃಶ್ಯ ಗುಣದ ಪಾತ್ರದಲ್ಲಿ, ಖಳನಾಯಕನು ನಾಯಕನಿಗೆ ಸಂಪೂರ್ಣವಾಗಿ ವಿರುದ್ಧವಾದ ಗುಣಲಕ್ಷಣಗಳಿಗೆ ಉದಾಹರಣೆಯಾಗಿರುತ್ತಾನೆ. ಹಾಗಾಗಿ, ನಾಯಕನ ಲಕ್ಷಣಗಳನ್ನು ಖಳನಾಯಕನ ಲಕ್ಷಣಗಳಿಂದ ವ್ಯತ್ಯಾಸ ಮಾಡುವ ವೈದೃಶ್ಯ ಸೃಷ್ಟಿಯಾಗುತ್ತದೆ.

ಉಲ್ಲೇಖಗಳುಸಂಪಾದಿಸಿ

  1. "villain". Dictionary.com (in ಇಂಗ್ಲಿಷ್). Wayback Machine. Archived from the original on 2014-04-02. Retrieved October 11, 2018.
"https://kn.wikipedia.org/w/index.php?title=ಖಳನಾಯಕ&oldid=893237" ಇಂದ ಪಡೆಯಲ್ಪಟ್ಟಿದೆ