ಖರೋಷ್ಠಿ ಲಿಪಿ
ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ. |
ಖರೋಷ್ಠಿ ಲಿಪಿ[೧]ಯನ್ನು ಖರೋಷ್ಠ ಎಂಬುವನು ಬಳಕೆಗೆ ತಂದಿದ್ದಾನೆ ಎನ್ನಲಾಗಿದೆ. ಅರಾಮೇಯಿಕ್ ಭಾಷೆಯಲ್ಲಿನ 'ಖರೋಷ್ಠ' ಎಂಬ ಪದವು ಸಂಸ್ಕೃತದಲ್ಲೂ 'ಖರೋಷ್ಠಿ' ಎಂದಾಗಿದೆ ಎಂದು ಡಿರಿಂಜರ್ ಅಭಿಪ್ರಾಯ ಪಟ್ಟಿದ್ದಾರೆ. ಈ ಹೇಳಿಕೆಗಳನ್ನು ಗಮನಿಸಿದ ದಾಸಗುಪ್ತ ಎಂಬುವವರು, 'ಖರೋಷ್ಠಿ' ಎಂಬ ಪದವು ಇರಾನಿಯನ್ ಭಾಷೆಯ 'ಖರಪೂಸ್ತ' ಎಂಬ ಪದದಿಂದ ಬಂದಿದೆ. 'ಖರಪೂಸ್ತ' ಎಂದರೆ ಕತ್ತೆಯ ಚರ್ಮ ಎಂದರ್ಥ. ಪುಸ್ತಕ ಎಂಬ ಪದವು 'ಪೂಸ್ತ' ಎಂಬುದರಿಂದ ಬಂದಿರಬೇಕೆಂದು ಅಭಿಪ್ರಾಯ ಪಟ್ಟಿದ್ದಾರೆ.
ಇತಿವೃತ್ತ
ಬದಲಾಯಿಸಿಖರೋಷ್ಠಿ ಲಿಪಿಯನ್ನು ಹಾಗೆ ಕರೆಯಲು ಕಾರಣಗಳೇನು? ಎಂಬುದಕ್ಕೆ ಉತ್ತರ ಹುಡುಕುವುದು ಬಹಳ ಕಷ್ಟ. ಮೊದಲಿಗೆ ಇದು ಮ್ಲೇಚ್ಛರ ಲಿಪಿಯಾಗಿತ್ತು. ಇದನ್ನು ಕತ್ತೆಯ ಚರ್ಮದ ಮೇಲೆ ಬರೆಯುತ್ತಿದ್ದರು. ಇದು ಅಂಕುಡೊಂಕಾದ ಬರವಣಿಗೆಯಾದ್ದರಿಂದ, ಭಾರತೀಯರು 'ಕತ್ತೆಯ ತುಟಿ'(ಖರ-ಓಷ್ಠ) ಎಂದು ಕುಚೋದ್ಯದಿಂದ ಕರೆದಿರಬಹುದೆಂದು ಹೇಳಲಾಗುತ್ತಿದೆ. ಅರಾಮೇಯಿಕ್ ಲಿಪಿಗೂ ಖರೋಷ್ಠಿ ಲಿಪಿಗೂ ಬಹಳ ಹೋಲಿಕೆಗಳಿವೆ. ಖರೋಷ್ಠಿಲಿಪಿ ಸು. ಪ್ರ.ಶ..ಪು. 5ನೆಯ ಶತಮಾನದಲ್ಲಿ ಉಗಮ ವಾಗಿರಬೇಕು. ಭಾರತದಲ್ಲಿ ಈ ಲಿಪಿ ಇನ್ನೆಲ್ಲಿಯೂ ಬಳಕೆಗೆ ಬರದೆ, ಕೇವಲ ವಾಯುವ್ಯಗಡಿಯಲ್ಲಿ ಮಾತ್ರ ಉಪಯೋಗದಲ್ಲಿತ್ತು. ಅಶೋಕನ ಶಾಬಾಸ್ಗರಿ ಮುಂತಾದಲ್ಲಿನ ಶಾಸನಗಳು ಖರೋಷ್ಠಿ ಲಿಪಿಯಲ್ಲಿವೆ. ಮತ್ತೊಂದು ಹೇಳಿಕೆಯ ಪ್ರಕಾರ ಅರಾಮೇಯಿಕ್ ಲಿಪಿಗೂ ಖರೋಷ್ಠಿ ಲಿಪಿಗೂ ತುಂಬ ಹತ್ತಿರದ ಹೋಲಿಕೆ ಇರುವುದರಿಂದ, ಈ ಭಾಷೆ ಅರಾಮೇಯಿಕ್ ಲಿಪಿಯಿಂದ ಉಗಮಗೊಂಡಿರಬಹುದೆಂದು ಹೇಳಲಾಗಿದೆ. ಈ ಎರಡು ಲಿಪಿಗಳು ಬಲಭಾಗದಿಂದ ಎಡಭಾಗಕ್ಕೆ ಬರೆಯಲ್ಪಡುತ್ತಿದ್ದವು[೨]. ಆಧುನಿಕ ಖರೋಷ್ಠಿ ಲಿಪಿಯನ್ನು ಎಡಭಾಗದಿಂದ ಬಲಭಾಗದಲ್ಲಿ ಬರೆಯಲಾಗುತ್ತಿದೆ. ಖರೋಷ್ಠಿ ಲಿಪಿಯ ಶಾಸನಗಳನ್ನು ಮೊದಲಿಗೆ ಓದಿದ ಪಾಶ್ಚಾತ್ಯ ವಿದ್ವಾಂಸ ಅಲೆಗ್ಸಾಂಡರ್ ಕನ್ನಿಂಗ್ ಹ್ಯಾಮ್.