ಕಡಕ್‌ನಾತ್(ಖಡಕ್ನಾಥ್)
ಖಡಕ್ನಾಥ್ ಎಂಬುದು ಮಧ್ಯಪ್ರದೇಶದ ಜಬುವಾ ಹಾಗೂ ಧರ್ ಜಿಲ್ಲೆಗಳ ಆದಿವಾಸಿ, ಬುಡಕಟ್ಟು ಹಾಗು ಗ್ರಾಮೀಣ ಜನತೆಯ ಹೊಟ್ಟೆ ತಣಿಸುವ ಕೋಳಿ ತಳಿ.[೧] ಇವುಗಳ ಮಾಂಸವೂ ಕರ್ರಗಾಗಿರುವುದರಿಂದ ಕಾಳಿಮಸಿ ಎಂದೂ ಪ್ರಸಿದ್ಧ . ಈ ಕೋಳಿ ದೇಸಿ ತಳಿ . ಮಧ್ಯಪ್ರದೇಶಕ್ಕೇ ಸೇರಿದ ತಳಿ ಎಂಬುದೂ ಸಾಬೀತಾಗಿದೆ. ಮಧ್ಯಪ್ರದೇಶವಲ್ಲದೇ ರಾಜಸ್ಥಾನ ಹಾಗು ಗುಜರಾತಿನ ಕೆಲವು ಕಡೆ ಇದರ ಸಾಕಾಣಿಕಾ ಕಾರ್ಯ ಇತ್ತೀಚಿಗೆ ನಡೆಯುತ್ತಿದೆ. ಕೊಕ್ಕಿನಿಂದ ಹಿಡಿದು ಕಾಲು ಉಗುರು ಗರಿ ಎಲ್ಲವೂ ಕಪ್ಪು ಬಣ್ಣ , ಜೊತೆಗೆ ಹಸಿರಿನ ವರ್ಣವೈವಿಧ್ಯವೂ ಇದೆ. ಮೊಟ್ಟೆ ಕಂದು ಬಣ್ಣ ಮತ್ತು ಕೋಳಿ ಮರಿ ನೀಲಿ ಹಾಗು ಕಪ್ಪು ಬಣ್ಣ ಮಿಶ್ರಿತವಾಗಿರುತ್ತದೆ. ಮಧ್ಯಪ್ರದೇಶದಲ್ಲಿ ಈ ಕೋಳಿಗಳನ್ನು ಪವಿತ್ರವಾದ ಹಕ್ಕಿಯೆಂದೂ ಪರಿಗಣಿಸಿ ಪ್ರತೀ ದೀಪಾವಳಿಯ ನಂತರ ದೇವಿಗೆ ಬಲಿಯನ್ನಾಗಿ ನೀಡುತ್ತಾರೆ.
ಈ ಕೋಳಿ ಹೇಗೆ ಭಿನ್ನ?
ಬದಲಾಯಿಸಿಉಳಿದ ನಾಟಿ ಕೋಳಿಗಳಿಗೆ ಹೋಲಿಸಿದರೆ ‘ಕಾಳಿಮಸಿ’ಯು ಒಂದು ಕೈ ಮೇಲಿನದು ಎಂದು ಸಾಬೀತುಪಡಿಸಿದೆ
ಗುಣಗಳು | ಖಡಕನಾಥ್ ತಳಿ | ಇತರೆ ತಳಿ |
ಪ್ರೋಟೀನ್ | 25% | 18-20% |
ಕೊಬ್ಬಿನಾಂಶ | 0.73-1.035% | 13-25% |
ಲೀನೋಲಿನಿಕ್ ಆಮ್ಲ | 24% | 21% |
ಕೊಲೆಸ್ಟ್ರಾಲ್ | 184 ಮಿ.ಗ್ರಾಂ/100 ಗ್ರಾಂ | 218 ಮಿ.ಗ್ರಾಂ/100 ಗ್ರಾಂ |
- 6-7 ತಿಂಗಳಲ್ಲಿ ಕೋಳಿಯ ತೂಕ – 1.5 ಕೆ.ಜಿ
- ಪೂರ್ಣ ವಿಕಸನ – 180 ದಿನಗಳಲ್ಲಿ
- ವಾರ್ಷಿಕ ತತ್ತಿ ಉತ್ಪಾದನೆ – 105
- 40 ದಿನಗಳಲ್ಲಿ ಮೊಟ್ಟೆಯ ತೂಕ – 49 ಗ್ರಾಂ
- ಫಲವಂತಿಕೆ – 55%
ಉಪಯೋಗಗಳು
ಬದಲಾಯಿಸಿ- ರುಚಿಕರವಾದ ಮಾಂಸ
- ಮಾಂಸಕ್ಕೆ ಔಷಧೀಯ ಗುಣಗಳಿವೆ[೨]
- ಎಲ್ಲಾ ತರಹದ ಪರಿಸರಕ್ಕೂ ಇವು ಒಗ್ಗಿಕೊಳ್ಳುತ್ತವೆ
- ಮಾಂಸ ಹಾಗು ಮೊಟ್ಟೆ ಉತ್ತಮ ಕ್ರಯಕ್ಕೆ ಮಾರಲ್ಪಡುತ್ತದೆ
- ಮಾಂಸ : 600-800/ಕೆ.ಜಿ
- ಮೊಟ್ಟೆ : 40-50/ಮೊಟ್ಟೆ
- ಮಾಂಸ ಸೇವನೆಯಿಂದ ಹಿಮೊಗ್ಲೋಬಿನ್ ಹೆಚ್ಚಾಗುತ್ತದೆ
- ಮೊಟ್ಟೆಯನ್ನು ತಲೆನೋವು, ಆಸ್ತ್ಮಾ ಔಷಧಿಗಳಲ್ಲಿ ಬಳಸಲಾಗುತ್ತದೆ
- ಅಧಿಕ ರಕ್ತದೊತ್ತಡ, ಹೃದ್ರೋಗ, ನರರೋಗ, ಪಾರ್ಶ್ವವಾಯು, ರಕ್ತ ಹೆಪ್ಪುಗಟ್ಟುವಿಕೆ ಇರುವವರಿಗೆ ಪ್ರಯೋಜನಕಾರಿ[೩]
- ಹೋಮಿಯೋಪತಿ ಔಷಧಿ ಪದ್ಧತಿಯಲ್ಲಿ ಬಳಕೆಯಾಗುತ್ತಿದೆ[೪]
- ಇವುಗಳು ಅಡುಗೆಮನೆಯ ತ್ಯಾಜ್ಯಗಳಲ್ಲೂ ಬದುಕಬಲ್ಲದು
- ಸರಿಯಾದ ಮಾರುಕಟ್ಟೆಯ ಸಂಪರ್ಕದಾರಿ ಸಿಕ್ಕರೆ ಅತ್ತ್ಯುತ್ತಮ ಲಾಭ ತಂದುಕೊಡಬಲ್ಲದು
ಸಾಕಾಣಿಕೆ
ಬದಲಾಯಿಸಿಒಳ್ಳೆಯ ತಳಿಗಳನ್ನು ಆಯ್ದು, ಸರಿಯಾದ ಲಸಿಕೆಗಳನ್ನು ನೀಡಿ ಆರಂಭದ ದಿನಗಳಲ್ಲಿ ನಿಯಂತ್ರಿತ ಪರಿಸರದ ಅವಶ್ಯಕತೆ ಇದೆ. 30-40 ಮರಿಗಳಿಂದ ಆರಂಭಿಸುವುದು ಸೂಕ್ತ. ಅನುಭವವಾದಂತೆ ಮರಿಗಳ ಸಂಖ್ಯೆ ಹೆಚ್ಚಿಸತಕ್ಕದ್ದು . ಆಹಾರದ ಕುರಿತ ಮಾಹಿತಿಯನ್ನು ಕೋಳಿ ಸಾಕಾಣಿಕಾ ಮಾಹಿತಿ ಕೇಂದ್ರದಿಂದ ಪಡೆದುಕೊಳ್ಳುವುದು. ಕೆಲ ರಾಜ್ಯಗಳು ಇವುಗಳ ಸಂಖ್ಯೆ ಶಮನಗೊಳ್ಳುತ್ತಿರುವುದರಿಂದ ಪ್ರೋತ್ಸಾಹ ಧನಗಳನ್ನೂ ಘೋಷಿಸುತ್ತಿವೆ.
ನ್ಯೂನತೆ
ಬದಲಾಯಿಸಿ- ಅಸಮರ್ಪಕ ತಳಿ ಸಂಖ್ಯೆ
- ಆರ್ಥಿಕ ಸಹಾಯದ ದುರ್ಲಭ
- ಈ ತಳಿಗಳ ಸಾಕಾಣಿಕೆಗೆ ಉತ್ತಮ ಅನುದಾನ ಹಾಗು ಸಾಲಗಳು ದೊರಕದೆ ಇರುವುದು