ಖಡಕಲಾಟ
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಖಡಕಲಾಟ ಇದು ಭಾರತ ದೇಶದ ಕರ್ನಾಟಕ ರಾಜ್ಯದ ಒಂದು ಗ್ರಾಮವಾಗಿದೆ ಇದು ಸಕ್ಕರೆ ಜಿಲ್ಲೆ ಎಂದೆ ಖ್ಯಾತಿಯಾದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನಲ್ಲಿದೆ ಇದು ಜಿಲ್ಲಾ ಕೇಂದ್ರ ಬೆಳಗಾವಿಯಿಂದ 88 ಕಿಮೀ ದೂರದಲ್ಲಿದೆ, ತಾಲುಕಾ ಕೇಂದ್ರ ಚಿಕ್ಕೋಡಿಯಿಂದ 15ಕಿಮೀ (8.5 ಮೈಲುಗಳು) ದೂರದಲ್ಲಿದೆ, ಹತ್ತಿರದ ನಗರ ನಿಪ್ಪಾಣಿಯಿಂದ 14 ಕಿಮೀ (8 ಮೈಲುಗಳು) ಮತ್ತು ಮಹಾರಾಷ್ಟ್ರ ರಾಜ್ಯದ ಕೊಲ್ಲಾಪುರ ನಗರದಿಂದ 40 ಕಿಮೀ (24 ಮೈಲುಗಳು) ದೂರದಲ್ಲಿದೆ. ಈ ಗ್ರಾಮ ಹಿಂದೊಮ್ಮೆ ಮರಾಠಿಗರ ಕಾಪಶಿ ಸಂಸ್ಥಾನದ ಒಂದು ಭಾಗವಾಗಿತ್ತು ರಾಜ್ಯಗಳ ಭಾಷಾವಾರು ವಿಂಗಡಣೆಯಲ್ಲಿ ಅಪ್ಪಟ ಕನ್ನಡಿಗರ ಗ್ರಾಮವಾದ ಖಡಕಲಾಟ ಗ್ರಾಮವನ್ನು ಏಕೀಕೃತ ಕರ್ನಾಟಕದಲ್ಲಿ ಸೇರಿಸಲಾಯಿತು.ಆಗಲೂ ಈಗಲೂ ಇಲ್ಲಿ ಕನ್ನಡವೆ ಆಡಳಿತ ಹಾಗೂ ಅಧಿಕೃತವಾಗಿ ಮಾತನಾಡುವ ಭಾಷೆಯಾಗಿದೆ. ಈ ಗ್ರಾಮವು ಕೋಮು ಸೌಹಾರ್ದತೆಗೆ ಹೆಸರುವಾಸಿಯಾಗಿದೆ. ವಾರ್ಷಿಕ 'ಉರುಸ್' ಆಚರಣೆಯು ಹಿಂದೂ-ಮುಸ್ಲಿಂ ಭಾವೈಕ್ಯತೆಯ ಶ್ರೇಷ್ಠ ಸಂಕೇತವಾಗಿದೆ, ಎರಡೂ ಸಮುದಾಯಗಳು ಸಮಾನ ಉತ್ಸಾಹ ಮತ್ತು ಉತ್ಸಾಹದಿಂದ ಆಚರಿಸುತ್ತಾರೆ. ಖಡಕ್ಲಾಟ್‌ನಲ್ಲಿರುವ ಮುಖ್ಯ ದೇವಾಲಯ ಮಹಾದೇವ ಮಂದಿರ,ವಾಶಿಖಾನ ಮಂದಿರ, ಬೀರದೇವ್ ಮಂದಿರ,ಸಂತ ಸದ್ಗುರು ಬಾಳುಮಾಮಾ ಮಂದಿರ, ವಿರೂಪಾಕ್ಷಲಿಂಗ, ಮಹಾಲಕ್ಷ್ಮಿ ಮತ್ತು ವಿಠ್ಠಲ-ರಖುಮಾಯಿ ಮಂದಿರಗಳಿವೆ. ದರ್ಗಾವು ಆದಿಲ್ಶಾಹಿ ವಾಸ್ತುಶಿಲ್ಪದ ಮೇರುಕೃತಿಯಾಗಿದೆ.