ಕ್ಷಿತಿಜವು (ದಿಗಂತ) ಭೂಮಿಯನ್ನು ಆಕಾಶದಿಂದ ಪ್ರತ್ಯೇಕಿಸುವ ಸ್ಪಷ್ಟವಾದ ರೇಖೆ.[] ಈ ರೇಖೆಯು ಎಲ್ಲ ಗೋಚರ ದಿಕ್ಕುಗಳನ್ನು ಎರಡು ವರ್ಗಗಳಾಗಿ ವಿಭಜಿಸುತ್ತದೆ: ಭೂಮಿಯ ಮೇಲ್ಮೈಯನ್ನು ಛೇದಿಸುವ ದಿಕ್ಕುಗಳು ಮತ್ತು ಛೇದಿಸದ ದಿಕ್ಕುಗಳು. ಕ್ಷಿತಿಜವು ಸಮತಲವಾಗಿರುತ್ತದೆ. ಅನೇಕ ಸ್ಥಳಗಳಲ್ಲಿ, ನಿಜವಾದ ಕ್ಷಿತಿಜವು ಮರಗಳು, ಕಟ್ಟಡಗಳು, ಪರ್ವತಗಳು, ಇತ್ಯಾದಿಗಳಿಂದ ಅಸ್ಪಷ್ಟವಾಗಿರುತ್ತದೆ, ಮತ್ತು ಭೂಮಿ ಹಾಗೂ ಆಕಾಶದ ಪರಿಣಾಮಸ್ವರೂಪ ಛೇದನವನ್ನು ಗೋಚರ ಕ್ಷಿತಿಜವೆಂದು ಕರೆಯಲಾಗುತ್ತದೆ. ಕಡಲತೀರದಿಂದ ಸಮುದ್ರವನ್ನು ನೋಡುವಾಗ, ಕ್ಷಿತಿಜಕ್ಕೆ ಅತ್ಯಂತ ಹತ್ತಿರವಿರುವ ಸಮುದ್ರದ ಭಾಗವನ್ನು ಆಫ಼ಿಂಗ್ ಎಂದು ಕರೆಯಲಾಗುತ್ತದೆ.

ಕ್ಷಿತಿಜ

ಐತಿಹಾಸಿಕವಾಗಿ, ಗೋಚರ ಕ್ಷಿತಿಜದ ದೂರವು ದೀರ್ಘ ಕಾಲದಿಂದ ಬದುಕುಳಿಯುವಿಕೆ ಮತ್ತು ಯಶಸ್ವಿ ಸಂಚಾರಕ್ಕೆ ಮಹತ್ವದ್ದಾಗಿದೆ, ವಿಶೇಷವಾಗಿ ಸಮುದ್ರದಲ್ಲಿ, ಏಕೆಂದರೆ ಇದು ಒಬ್ಬ ವೀಕ್ಷಕನ ಗರಿಷ್ಠ ದೃಷ್ಟಿವ್ಯಾಪ್ತಿಯನ್ನು ಮತ್ತು ಹಾಗಾಗಿ ಸಂವಹನದ ವ್ಯಾಪ್ತಿಯನ್ನು ನಿರ್ಧರಿಸುತ್ತಿತ್ತು. ಈ ವ್ಯಾಪ್ತಿಯು ಸುರಕ್ಷತೆ ಹಾಗೂ ಮಾಹಿತಿ ಪ್ರಸಾರಕ್ಕೆ ಸ್ಪಷ್ಟ ಪರಿಣಾಮಗಳನ್ನು ಸೂಚಿಸುತ್ತಿತ್ತು.

ಉಲ್ಲೇಖಗಳು

ಬದಲಾಯಿಸಿ


"https://kn.wikipedia.org/w/index.php?title=ಕ್ಷಿತಿಜ&oldid=1258532" ಇಂದ ಪಡೆಯಲ್ಪಟ್ಟಿದೆ