ಕ್ಲೆಮೆನ್ಸ್ ಆಫ್ ಬಾರ್ಕಿಂಗ್
ಕ್ಲೆಮೆನ್ಸ್ ಆಫ್ ಬಾರ್ಕಿಂಗ್ ಅವರು ೧೨ನೇ ಶತಮಾನದ ಸಂತ ಬೆನೆಡಿಕ್ಟನಿಗೆ ಸಂಬಂಧಿಸಿದ ಕ್ರೈಸ್ತ ಸನ್ಯಾಸಿನಿ.ಇವರು ಆಂಗ್ಲೋ ನಾರ್ಮನರಿಗೆ ಸೇರಿದವರು. ಬಾರ್ಕಿಂಗ್ ಅಬ್ಬೆ ಎಂಬ ಲಂಡನ್ ಅಲ್ಲಿರುವ ಮಠಕ್ಕೆ ಸಂಬಂಧಿಸಿದಂತೆ ಅನುವಾದಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಸಂತ ಕ್ಯಾಥರೀನ್ ಎಂಬುವವರ ಜೀವನ ಚರಿತ್ರೆಯ ಅನುವಾದದಲ್ಲಿ ಗಮನಾರ್ಹರಾಗಿದ್ದಾರೆ ಹಾಗು ಅವರಿಗೆ ಸಂಬಂಧಿಸಿದಂತೆ ಸಂತ ಚರಿತ್ರೆಯನ್ನೂ ಸಹ ರಚಿಸಿದ್ದಾರೆ.
ಬಾರ್ಕಿಂಗ್ ಅಬ್ಬೆಯಲ್ಲಿನ ಜೀವನ
ಬದಲಾಯಿಸಿಕ್ಲೆಮೆನ್ಸ್ ಅವರು ೧೨ನೇ ಶತಮಾನದಲ್ಲಿ ಬಾರ್ಕಿಂಗ್ ಅಬ್ಬೆ ಎಂಬ ಮಠದ ಸನ್ಯಾಸಿನಿಯಾಗಿದ್ದರು.ಬಾರ್ಕಿಂಗ್ ಅಬ್ಬೆ ಮಠವು ಇಂಗ್ಲೆಂಡಿನಲ್ಲಿದೆ.ವರ್ಜಿನ್ ಮೇರಿ ಅವರಿಗೆ ಸಮರ್ಪಿತಗೊಂಡ ಬಾರ್ಕಿಂಗ್ ಅಬ್ಬೆಯು ಮೂಲತಃ ೭ನೇ ಶತಮಾನದಲ್ಲಿ ನಿರ್ಮಿಸಲಾಗಿತ್ತು.ಅದು ಸಂತ ಬೆನೆಡಿಕ್ಟ್ ನಿಯಮವನ್ನು ಅನುಸರಿಸುತ್ತಿತ್ತು.ಬಾರ್ಕಿಂಗ್ ಅಬ್ಬೆಯು ಹಲವಾರು ಬ್ರಿಟನ್ ಮಠಗಳಲ್ಲಿ ಮೊದಲನೆಯದಾಗಿದೆ.ಕ್ಲೆಮೆನ್ಸ್ ಅವರು ಬಾರ್ಕಿಂಗ್ ಅಬ್ಬೆ ಮಠದ ಸೇವೆ ಸಲ್ಲಿಸುತ್ತಿರುವ ಸಮಯದಲ್ಲಿ ಥಾಮಸ್ ಬೆಕೆಟ್ ಅವರ ಸಹೋದರಿಯಾದ ಮೇರಿಯವರನ್ನು ಹೆನ್ರಿ ಅವರು ಮಠದ ಮುಖ್ಯಸ್ಥರಾಗಿ ನೇಮಕ ಮಾಡಿದರು.ಬಾರ್ಕಿಂಗ್ ಅಬ್ಬೆಯ ಹಲವಾರು ಮಠದ ಮುಖ್ಯಸ್ಥರು ಬ್ರಿಟಿಷ್ ಮನೆತನಕ್ಕೆ ಸೇರಿದ್ದವರಾಗಿದ್ದರು ಹಾಗು ಬ್ರಿಟಿಷ್ ರಾಜನಿಂದಲೇ ಆಯ್ಕೆಗೊಂಡಿದ್ದವರಾಗಿದ್ದರು.ಬಾರ್ಕಿಂಗ್ ಅಬ್ಬೆಯ ಬ್ರಹ್ಮಚಾರಿಣಿಯರಿಗೆ ಸಾಮಾಜಿಕ,ರಾಜಕೀಯ ಹಾಗು ಆರ್ಥಿಕ ಸ್ವಾತಂತ್ರ್ಯವನ್ನು ಬ್ರಿಟಿಷರು ಮಂಜೂರು ಮಾಡಿದ್ದರು.ಈ ಸ್ವಾತಂತ್ರ್ಯವು ಸಾಮಾನ್ಯವಾಗಿ ಧಾರ್ಮಿಕ ಶಾಲೆಗಳಲ್ಲಿ ಅಂದರೆ ಸಾಮಾಜಿಕ ಹಾಗು ರಾಜಕೀಯ ಗಣ್ಯರಿಗೆ ಸಂಬಂಧಿಸಲಾಗಿತ್ತು.ಅಂದರೆ ಬ್ರಿಟಿಷರು ಬಾರ್ಕಿಂಗ್ ಅಬ್ಬೆಯು ಬ್ರಿಟೆನಿನ ಹಲವಾರು ಶ್ರೀಮಂತ ಮಠಗಳಲ್ಲಿ ಒಂದಾಗಿತ್ತು.ಬಾರ್ಕಿಂಗ್ ಅಬ್ಬೆಯು ಶ್ರೀಮಂತ ಮಠವಾಗಿದ್ದರಿಂದ ಅಲ್ಲಿನ ಬ್ರಹ್ಮಚಾರಿಣಿಯರಿಗೆ ಸಾಂಸ್ಕೃತಿಕ ಹಾಗು ಸಾಹಿತ್ಯ ಕ್ಷೇತ್ರಗಳಲ್ಲಿನ ಅವರ ಆಸಕ್ತಿಗಳನ್ನು ಪೂರೈಸಲು ಸಂಪೂರ್ಣ ಅವಕಾಶ ಮಾಡಿಕೊಡಲಾಗಿತ್ತು.ಅವರಿಗೆ ಮತಧರ್ಮಶಾಸ್ತ್ರದ ಸ್ವಾತ್ರಂತ್ರ್ಯವನ್ನೂ ಓದಗಿಸಲಾಗಿತ್ತು.ಬಾರ್ಕಿಂಗ್ ಅಬ್ಬೆಯ ಬ್ರಹ್ಮಚಾರಿಣಿಯರು ಸಾಮಾನ್ಯವಾಗಿ ಅವರ ಸ್ವಂತ ಪ್ರಾರ್ಥನೆಗಳನ್ನು ಸ್ಥಾಪಿಸುತ್ತಿದ್ದರು.ಚರ್ಚಿನ ಹಾಗು ಧರ್ಮಾಚರಣೆಯ ವಿಸ್ತರಣೆಯನ್ನು ತಮ್ಮ ಧಾರ್ಮಿಕ ಸಮುದಾಯದ ಕಡೆಯಿಂದ ಬೇರೆ ಬೇರೆ ಮಠಗಳಿಗೆ ಪತ್ರಗಳನ್ನು ಬರೆಯುವ ಮೂಲಕ ಹಲವಾರು ಕೊಡುಗೆಯನ್ನು ಮಾಡಿದ್ದಾರೆ. ಬಾರ್ಕಿಂಗ್ ಅಬ್ಬೆಯ ಬ್ರಹ್ಮಚಾರಿಣಿಯಾದ ಕ್ಲೆಮೆನ್ಸ್ ಅವರು ಬ್ರಿಟಿಷ್ ರಾಜಪ್ರಭುತ್ವದ ರಕ್ಷಣೆಯ ಅಡಿಯಲ್ಲಿ ಧಾರ್ಮಿಕ ಸಮುದಾಯದ ಗಣ್ಯರ ಭಾಗವಾಗಿದ್ದರು. ಕ್ಲೆಮೆನ್ಸ್ ಅವರ ಕೆಲಸದ ಜೊತೆಗೆ,ಬಾರ್ಕಿಂಗ್ ಅಬ್ಬೆಯ ಮಠದ ಕುರಿತಾಗಿ ಅನೇಕ ಇತರ ಗ್ರಂಥಗಳನ್ನು ರಚಿಸಲಾಗಿದೆ.ಸಂತ ಬೆನೆಡಿಕ್ಟರ ನಿಯಮದ ಅಡಿಯಲ್ಲಿ ದೈನಂದಿನ ಓದುವಿಕೆ ಅವಶ್ಯಕವಾಗಿತ್ತು. ಬಾರ್ಕಿಂಗ್ ಅಬ್ಬೆಯ ಗ್ರಂಥಾಲಯದ ಉಪಸ್ಥಿತಿ ಸೂಚಿಸುವುದೇನೆಂದರೆ ಸಾಹಿತ್ಯ ನಮ್ಮ ದೈನಂದಿನ ಜೀವನಕ್ಕೆ ಒಂದು ಮಹತ್ವದ ಘಟಕವಾಗಿದೆ.ಬ್ರಹ್ಮಚಾರಿಣಿಯರು ಮಠಗಳಲ್ಲಿ ಗ್ರಂಥಗಳ ಕೊಡುಗೆ ಮಾಡಿದ್ದಾರೆ.ಅವುಗಳಲ್ಲಿ ಮಧ್ಯಯುಗದ ಸನ್ಯಾಸಿನಿಗಳ ಹಸ್ತಪ್ರತಿಗಳು ಅತ್ಯಂತ ಕೆಲವು ಮಾತ್ರ ಉಳಿದಿವೆ.ಇದರ ಕಾರಣದಿಂದಾಗಿ ಸನ್ಯಾಸಿನಿಗಳ ಕೊಡುಗೆಗಳನ್ನು ಗ್ರಹಿಸಲು ಕಷ್ಟವಾಯಿತು.ಬಾರ್ಕಿಂಗ್ ಅಬ್ಬೆಯ ಬ್ರಹ್ಮಚಾರಿಣಿಯರು ತಮ್ಮ ಗ್ರಂಥಗಳನ್ನು ಇತರರೊಂದಿಗೆ ರಾಯಧನಕ್ಕೆ ಹಂಚಿಕೊಳ್ಳುತ್ತಿದ್ದರು.ಹನ್ನೊಂದು ಹಾಗು ಹನ್ನೆರಡನೆಯ ಶತಮಾನಗಳಲ್ಲಿ,ಪುಸ್ತಕ ಬರವಣಿಗೆಗಳನ್ನು ಪ್ರೋತ್ಸಾಹಿಸಲಾಗಿತ್ತು.ಆದ್ದರಿಂದ ಮಹಿಳೆಯರು ಹೆಚ್ಚಾಗಿ ಬರವಣಿಗೆಯಲ್ಲಿ ತಮ್ಮ ಕೊಡುಗೆ ನೀಡಿದ್ದಾರೆ. ಕ್ಲೆಮೆನ್ಸ್ ಅವರ ಬಗ್ಗೆ ತುಂಬ ಸೀಮಿತವಾದ ಮಾಹಿತಿಗಳು ಮಾತ್ರ ದೊರಕಿವೆ.ಅವರು ತುಲನಾತ್ಮಕವಾದ ಅನಾಮಧೇಯ ಬದುಕನ್ನು ಜೀವಿಸಿದ್ದಾರೆ.ಕ್ಲೆಮೆನ್ಸ್ ಅವರ ಸನ್ಯಾಸತ್ವ ಹಾಗು ಅದರ ಐತಿಹಾಸಿಕ ಮತ್ತು ರಾಜಕೀಯ ಸಂಪರ್ಕಗಳು ಅವರ ಬಗ್ಗೆ ಹೆಚ್ಚು ಮಾಹಿತಿಗಳನ್ನು ಬಹಿರಂಗ ಪಡಿಸುತ್ತದೆ.ಕ್ಲೆಮೆನ್ಸ್ ಅವರ ಜೀವನದ ಬಗೆಗೆ ಗುರುತಿಸಬಹುದಾದ ಕುರುಹು ಇದ್ದದ್ದೊಂದೆ ಅದು ಅವರ ಅನುವಾದದ'ಲೈಫ್ ಆಫ್ ಸೈಂಟ್ ಕ್ಯಾಥರೀನ್'.ಈ ಅನುವಾದದ ಗ್ರಂಥದಲ್ಲಿ ಅವರ ಸಹಿಯನ್ನು ಕಾಣಬಹುದಾಗಿತ್ತು.ಅದರಲ್ಲಿ ಅವರು ನಾನು ಈ ಗ್ರಂಥದ ಅನುವಾದಕಿ ಎಂದು ಅವರ ಹೆಸರು ಹಾಗು ಅವರು ಬಾರ್ಕಿಂಗ್ ಅಬ್ಬೆಯ ಬ್ರಹ್ಮಚಾರಿಣಿ ಎಂದೂ ಉಲ್ಲೇಖಿಸಿದ್ದಾರೆ.ಕ್ಲೆಮೆನ್ಸ್ ಅವರು ಸೇಂಟ್ ಕ್ಯಾಥರೀನ್ ಅವರ ಮೇಲೆ ತುಂಬಾ ಪ್ರೀತಿ ಅಭಿಮಾನಗಳನ್ನು ಇಟ್ಟುಕೊಂಡಿದ್ದರು.ಆದ್ದರಿಂದ ಅವರ ಮೇಲಿನ ಪ್ರೀತಿಯಿಂದ ಈ ಗ್ರಂಥವನ್ನು ರಚಿಸಿದ್ದಾರೆ ಎಂದು ಹೇಳಲಾಗಿದೆ.[೧]
ಅಲೆಕ್ಸಾಂಡ್ರಿಯಾದ ಸಂತ ಕ್ಯಾಥರೀನ್ ಅವರ ಜೀವನ
ಬದಲಾಯಿಸಿಕ್ಲೆಮೆನ್ಸ್ ಆಫ್ ಬಾರ್ಕಿಂಗ್ ಅಬ್ಬೆ ಅವರು ಗುರುತಿಸಿಕೊಂಡಿರುವುದು ತಮ್ಮ 'ಲೈಫ್ ಆಫ್ ಸೈಂಟ್ ಕ್ಯಾಥರೀನ್'ಎಂಬ ಅನುವಾದದ ಗ್ರಂಥದಿಂದ.ಕ್ಲೆಮೆನ್ಸ್ ಅವರ ಲ್ಯಾಟಿನ್ ಇಂದ ಫ್ರೆಂಚ್ ಭಾಷೆಗೆ ಅನುವಾದವು ವ್ಯಾಪಕ ವಶ್ಲೇಷಣೆಗೆ ನಾಂದಿಹಾಡಿದೆ ಎಂದು ಸಾಹಿತ್ಯ ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ.ಕ್ಲೆಮೆನ್ಸ್ ಅವರ ಅನುವಾದಗಳು ತಮ್ಮ ಉತ್ತರಾಧಿಕಾರಿಗಳ ಮೇಲೆ ಪ್ರಭಾವ ಬೀರಿರುವುದಕ್ಕೆ ಸ್ವಲ್ಪ ಸಾಕ್ಷಿಗಳಿದ್ದರೂ,ಅವರ ಅನುವಾದ ಗ್ರಂಥಗಳ ಮೇಲೆ ಪ್ರಸ್ತುತ ಆಸಕ್ತಿಗಳು ಗಮನಾರ್ಹವಾಗಿ ಹೆಚ್ಚಿದೆ.ಕ್ಲೆಮೆನ್ಸ್ ಅವರ ಗ್ರಂಥಗಳು ಸ್ತ್ರೀವಾದಿ ವಿಶ್ಲೇಷಣೆಗೆ ಪ್ರಸ್ತುತವಾಗಿ ಗಮನಾರ್ಹವಾಗಿವೆ.ಕ್ಲೆಮೆನ್ಸ್ ಅವರ ಭಾಷಾಂತರದ ಪ್ರತಿಗಳ ಕೊರತೆಯಿದ್ದರೂ,ಅದರ ಬಿಡುಗಡೆಯ ಸಮಯದಲ್ಲಿ ತುಲನಾತ್ಮಕವಾಗಿ ಜನಪ್ರಿಯವಾಗಿದೆ ಎಂದು ನಂಬಲಾಗಿದೆ.ಕ್ಲೆಮೆನ್ಸ್ ಅವರ ಅನುವಾದಗಳ ಖಾತೆಯು ಸಂತರ ಆರಂಭಿಕ ದೇಶಗಳಲ್ಲಿ ಒಂದಾಗಿದೆ ಎಂದು ಪರಿಗಣಿಸಲಾಗಿದೆ ಮತ್ತು ಮಹಿಳೆ ಬರೆದ ಏಕೈಕ ಖಾತೆಗಳಲ್ಲಿ ಒಂದಾಗಿದೆ.ಅನುವಾದಕರಾಗಿ ಕ್ಲೆಮೆನ್ಸ್ ಅವರ ಮಹತ್ವವನ್ನು ಇದು ಬಹಿರಂಗಪಡಿಸುತ್ತದೆ.ಕ್ಲೆಮೆನ್ಸ್ ಅವರ ಭಾಷಾಂತರ ಮತ್ತು ವಲ್ಗೇಟ್ ಚಿತ್ರಣದ ನಡುವೆ ಲಿಂಗಗಳ ನಡುವಿನ ವರ್ತನೆಯ ಭಿನ್ನತೆಗಳು ಪಾಂಡಿತ್ಯಪೂರ್ಣ ವಿಶ್ಲೇಷಣೆಯ ಪ್ರಮುಖ ಅಂಶವಾಗಿದೆ.ಕ್ಲೆಮೆನ್ಸ್ ಅವರ ಭಾಷಾಂತರವು ವಲ್ಗೇಟ್ ಚಿತ್ರಣದ ಲಿಂಗ ಸಕಾರಾತ್ಮಕ ಮರುವ್ಯಾಖ್ಯಾನವಾಗಿದೆ ಎಂದು ಅನೇಕ ವಿದ್ವಾಂಸರು ಸೂಚಿಸುತ್ತಾರೆ. ಅವರ ಭಾಷ್ಯಾಂತರವು ಆ ಸಮಯದಲ್ಲಿ ಮಹಿಳಾ ಪಾತ್ರದ ಬಗ್ಗೆ ಸಾಮಾಜಿಕ ವ್ಯಾಖ್ಯಾನವಾಗಿ ಕಾರ್ಯನಿರ್ವಹಿಸುವ ಉದ್ದೇಶವಿದೆ ಎಂದು ಹಲವಾರು ವಿದ್ವಾಂಸರು ಅಭಿಪ್ರಾಯಪಟ್ಟಿದ್ದರು.ಕ್ಲೆಮೆನ್ಸ್ ಅವರು ತಮ್ಮ ಪಠ್ಯದ ಆರಂಭದ ಸಾಲುಗಳಲ್ಲಿ ಅವರ ಉದ್ದೇಶವನ್ನು ಘೋಷಿಸಿದ್ದಾರೆ.ಆ ಸಾಲುಗಳಲ್ಲಿ,ಜೀವನವನ್ನು ಭಾಷಾಂತರಿಸಲು,ಲ್ಯಾಟಿನ್ ಭಾಷೆಯಲ್ಲಿ ದೇಶೀಯವಾಗಿ ವಿವರಿಸುವುದರಿಂದ ಅದನ್ನು ಕೇಳುವವರ ಮನಸ್ಸಿಗೆ ಸಂತೋಷವಾಗುತ್ತದೆ ಎಂದು ತಮ್ಮ ಮನಸ್ಸಿನ ಉದ್ದೇಶವನ್ನು ಹಂಚಿಕೊಂಡಿದ್ದಾರೆ.ಅನುವಾದದ ಈ ಭಾಗದಲ್ಲಿ,ಕ್ಲೆಮೆನ್ಸ್ ಅವರು ಸ್ವಯಂ-ದೃಡೀಕರಣವನ್ನು ಬಳಸಿಕೊಂಡಿದ್ದಾರೆ ಎಂದು ವಿದ್ವಾಂಸರು ವಾದಿಸಿದ್ದಾರೆ.ಯುರೋಪ್ ಅಲ್ಲಿ ಹನ್ನೆರಡನೆಯ ಶತಮಾನದ ಮಹಿಳೆಯರಿಗೆ ಬರಹದ ಕಾರ್ಯವು ಈಗಾಗಲೇ ವಿಪರೀತ ವಿನಾಶಕಾರಿ ಕಾರಣ,ಕ್ಲೆಮೆನ್ಸ್ ಅವರ ಸ್ವಯಂ-ದೃಡೀಕರಣದ ತಂತ್ರವು ಒಂದು ದಿಟ್ಟ ಕ್ರಮವೆಂದು ಪರಿಗಣಿಸಲ್ಪಟ್ಟಿದೆ.ಮಹಿಳೆಯರಿಗೆ ಮಹಿಳೆ ಎಂದು ಮರು ವ್ಯಾಖ್ಯಾನಿಸಲು ಸಾಹಿತ್ಯದಲ್ಲಿ ಮಹಿಳೆಯರ ಪಿತೃಪ್ರಭುತ್ವದ ಚಿತ್ರಣಗಳನ್ನು ಹಿಡಿದಿಟ್ಟುಕೊಳ್ಳುವುದಕ್ಕೆ ಕ್ಲೆಮೆನ್ಸ್ ಅವರು ಅಧಿಕಾರವನ್ನು ಪುನಃ ಪಡೆದುಕೊಳ್ಳುವ ತಂತ್ರ ಎಂದು ವಿದ್ವಾಂಸರು ಸೂಚಿಸಿದ್ದಾರೆ.[೨]
ಕೃತಿಗಳು
ಬದಲಾಯಿಸಿಲೈಫ್ ಆಫ್ ಸೇಂಟ್ ಕ್ಯಾಥರೀನ್,ವಿಲಿಯಮ್ ಮ್ಯಾಕ್ ಬೈನ್,ಆಂಗ್ಲೋ-ನಾರ್ಮನ್ ಟೆಕ್ಸ್ಟ್ ಸೊಸೈಟಿ,ಬ್ಯಾಕ್ವೆಲ್,೧೯೬೪.
ಉಲ್ಲೇಖಗಳು
ಬದಲಾಯಿಸಿ