ಕ್ಲಾಡ್ ಬ್ಯಾಟ್ ಲಿ

Claude Batley

'ಕ್ಲಾಡ್ ಬ್ಯಾಟ್ ಲಿ'

ಜನನ : ೧೮೭೯, ಇಪ್ ಸ್ವಿಚ್, ಇಂಗ್ಲೆಂಡ್

ಮರಣ : ಮಾರ್ಚ್ ೨೦, ೧೯೫೬, ಮುಂಬಯಿ, ಭಾರತ.

ಪ್ರೊ. ಕ್ಲಾಡ್ ಬ್ಯಾಟ್ ಲಿ ಯವರು, ಆಗಿನ ಬೊಂಬಾಯಿನ ಹಲವಾರು ಭವ್ಯ ಕಟ್ಟಡಗಳ ನಿರ್ಮಾಪಕರೆಂದು ಪ್ರಸಿದ್ಧರಾದರುಸಂಪಾದಿಸಿ

ಕಟ್ಟಡ ನಿರ್ಮಾಣ ಶಾಸ್ತ್ರದಲ್ಲಿ ಪದವಿಗಳಿಸಿದ ತರುವಾಯ, ೧೯೧೧ ರಲ್ಲಿ, ಭಾರತಕ್ಕೆ ಬಂದರು. ೧೯೧೭ ರಲ್ಲಿ ತಮ್ಮ ಕಾರ್ಯಾರಂಭವನ್ನುಗ್ರೆಗ್ ಸನ್ ಅಂಡ್ ಕಿಂಗ್ ಕಂ. ಯಲ್ಲಿ, ಶುರುಮಾಡಿದರು. ಅದು ಮುಂದೆ 'Gregson, Batley and King', ಎಂದು ಹೆಸರುವಾಸಿಯಾಯಿತು. ಕ್ಲಾಡ್ ಬ್ಯಾಟ್ ಲಿ ಯವರು ನಿರ್ಮಿಸಿದ ಬೊಂಬಾಯಿನ ವಿಶಿಷ್ಠ ಕಟ್ಟಡಗಳು.

ಅವರು ೧೯೧೪ ರಲ್ಲಿ, ಸರ್. ಜೆ.ಜೆ.ಸ್ಕೂಲ್ ಆಫ್ ಆರ್ಕಿಟೆಕ್ ಚರ್, ನ ವಿಸಿಟಿಂಗ್ ಪ್ರಾಧ್ಯಾಪಕರಾಗಿ ಕೆಲಸಮಾಡಿದರು. ಮುಂದೆ, ೧೯೨೩ ರಲ್ಲಿ ಸರ್. J. J. School of Arts ಕಾಲೇಜಿನ ಪ್ರಾಂಶುಪಾಲರಾದರು. ೧೯೨೩ ರಿಂದ ೨೦ ವರ್ಷ ಅದೇ ಹುದ್ದೆಯಲ್ಲಿದ್ದರು. ಆ ಸಮಯದಲ್ಲಿ, ಅವರ ವಿದ್ಯಾರ್ಥಿಗಳನ್ನು ದೇಶದುದ್ದಕ್ಕೂ ಕರೆದುಕೊಂಡು ಹೋಗಿ, ಅವರಿಗೆ ಭಾರತದ ವಾಸ್ತು ಶಿಲ್ಪದ ಬಗ್ಗೆ ಟಿಪ್ಪಣಿಗಳನ್ನು, ರೇಖಾಚಿತ್ರಗಳನ್ನು ರಚಿಸಲು,ಸಿದ್ಧಪಡಿಸಲು ಸಹಾಯಮಾಡಿದರು. ಜೈಪುರದ ಶೈಲಿಯ ಕಟ್ಟಡ ನಿರ್ಮಾಣ ದ ಅಧ್ಯಯನಕ್ಕೆ ತಮ್ಮ ಬಹುಪಾಲು ಸಮಯವನ್ನು ಮುಡುಪಾಗಿಟ್ಟರು. ಆ ಪದ್ಧತಿ ಅವರಿಗೆ ಬಹಳವಾಗಿ ಮೆಚ್ಚುಗೆಯಾಯಿತು. ಅದರಲ್ಲಿ ಗಣನೀಯ ಸಂಶೋಧನೆಯನ್ನು ಮಾಡಿದರು.

ಪ್ರೊಫೆಸರ್, ಕ್ಲಾಡ್ ಬ್ಯಾಟ್ ಲಿ, ಯವರು, ಬೊಂಬಾಯಿನಲ್ಲಿ ನಿಧನರಾದರುಸಂಪಾದಿಸಿ

೧೯೨೫ ನಿಂದ ೧೯೨೬, ರವರೆಗೆ, " Bombay Architectural Association " ನ ಅಧ್ಯಕ್ಷರಾಗಿದ್ದರು. (ಈಗ ಇದು, ದ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಅರ್ಕಿ ಟೆಕ್ ಚರ್ ಗೆ ಸೇರಿಕೊಂಡಿದೆ.) ಬೊಂಬಾಯಿನಲ್ಲಿ ತಾವೇ ನಿರ್ಮಿಸಿದ, ಮುಂಬಯಿ ಕ್ಲಬ್ ನಲ್ಲಿ ತಮ್ಮ ೫೦ ರ ಹರೆಯದ ವಯಸ್ಸಿನಲ್ಲೇ, ನಿಧನರಾದರು.