ಕ್ರೈಸ್ಟ್ ವಿಶ್ವವಿದ್ಯಾಲಯ ಎನ್ ಸಿ ಸಿ

ಕ್ರೈಸ್ಟ್ ವಿಶ್ವವಿದ್ಯಾಲಯ ಎನ್ ಸಿ ಸಿ

ಬದಲಾಯಿಸಿ

ಕ್ರೈಸ್ಟ್ ವಿಶ್ವವಿದ್ಯಾಲಯ ,ಎನ್.ಸಿ.ಸಿ ನೊ ೨ ಕಾಯ್ ೯ ಕರ್ನಾಟಕ ಬಿನ್ ಹೊಸುರು ರಸ್ತೆ ಬೆಂಗಳೂರು

ನ್ಯಾಷನಲ್ ಕ್ಯಾಡೆಟ್ ಕಾರ್ಪ್ಸ್ (ಎನ್.ಸಿ.ಸಿ) ಕ್ರೈಸ್ಟ್ ಯುನಿವೆರ್ಸಿಟಿ ಯಲ್ಲಿ ಶುರುವಾಗಿ ೨೦೧೩ ರ ವೇಳೆಗೆ ೪೪ ವರ್ಷಗಳು ಪೂರೈಸಿವೆ. ೪೫ರ ಹರೆಯದ ಎನ್.ಸಿ.ಸಿ ಕ್ರೈಸ್ಟ್ ಯುನಿವೆರ್ಸಿಟಿ ಕಂಪನಿ ಇಂದಿಗು,ಎಂದೆದಿಗು ಸೇವೆ ,ಸಾಧನೆ ಮಾಡಬೇಕೆಂದು ಬರುವ ಯುವ ಮನಸ್ಸಿನ ಯುವಕ ಯುವತಿಯರಿಗೆ ನೇರ ಹಾಗು ದಿಟ್ಟ ಹೆಜ್ಜೆಯಾಗಿ ಸ್ಪೂರ್ತಿಯಾಗುತದ್ದೆ.೧೯೬೯ರಲ್ಲಿ ಸ್ಥಾಪಿತ ಗೊಂಡ ಎನ್ಸಿಸಿ ಇಲ್ಲಿಯವರೆಗು ಪ್ರತಿ ಹೆಜ್ಜೆಯಲ್ಲು ಮೈಲಿಗಲ್ಲನ್ನು ಸಾಧಿಸುತ್ತ ಬಂದಿದೆ.ಎನ್ಸಿಸಿ ಕಂಪನಿ ಇಷ್ಟು ಎತ್ತರಕ್ಕೆ ಬೆಳೆಯಲು ಅಧಿಕಾರಿಗಳು ವಹಿಸಿದ್ದ ಶ್ರಮ ಶ್ಲಾಘನೀಯಾ.

ಕ್ರೈಸ್ಟ್ ಯುನಿವೆರ್ಸಿಟಿ ಯಲ್ಲಿ ಇಲ್ಲಿಯವರೆಗು ಅಧಿಕಾರ ವಹಿಸಿದ್ದ ಎ.ಎನ್.ಒ ಗಳು,

  • ಕ್ಯಾಪ್ಟನ್ ಶ್ರೀನಿವಾಸ್
  • ಲೆಫ಼್ಟಿನೆಂಟ್ ಶ್ರೀನಿವಾಸ್
  • ಮೆಜರ್ ಜೇಮ್ಸ್ ಅಲುಕರ
  • ಲೆಫ಼್ಟಿನೆಂಟ್ ಜ಼ೇವಿಯರ್ ವಿನ್ಸೆನ್ಟ್
  • ಕ್ಯಾಪ್ಟನ್ ಅಜಯ್ .ಪಿ
  • ಲೆಫ಼್ಟಿನೆಂಟ್ ಫಿನು ಜೊಸ್

ಕ್ರೈಸ್ಟ್ ವಿಶ್ವವಿದ್ಯಾಲಯದ ಇತಿಹಾಸ

ಬದಲಾಯಿಸಿ

೧೯೬೯ರ ಕಾಲೇಜು ಶುರುವಾದ ಹೊಸ್ತರಲ್ಲಿ ಒಬ್ಬ ಮಧ್ಯಮ ವಯಸ್ಸಿನ ಸ್ಮಾರ್ಟ್ ಆರ್ಮಿ ಅಧಿಕಾರಿ ತರಗತಿಗೆ ಬಂದು "ಜಂಟಲ್ಮ್ಯಾನ್", ನಾನು ಲೆಫ್ಟಿನೆಂಟ್ಕರ್ನಲ್ ಜೆ ಡಬ್ಲು ಶೊರ್ಸ್ ಎಂದು ಆರಂಭಿಸಿದರು,ನಾನು 14ನೇ ಮೈಸೂರು ಬೆಟಾಲಿಯನ್ ನ ಕಮಂಡರ್. ನನ್ನ ಬೆಟಾಲಿಯನ್ ನಲ್ಲಿ ಈ ಕಾಲೇಜಿನ (ಅಂದರೆ ಕ್ರೈಸ್ಟ್ ಕಾಲೇಜು) ವಿದ್ಯಾರ್ಥಿಗಳನ್ನು ತೆಗೆದುಕೊಳ್ಳಲು ನಿಮ್ಮ ಪ್ರಾಂಶುಪಾಲರು ಆಮಂತ್ರಿಸಿದ್ದಾರೆ. ಹಾಗೆ ಹೇಳುತ್ತ ತಮ್ಮಅಪ್ಲಿಕೇಶನ್ಫಾರ್ಮ್ಗಳನ್ನು ತುಂಬಿಸಿಕೊಂಡು ಹೋದರು. ಮುಂದಿನ ಶನಿವಾರ ಅವರು ಕೆಲವು ಆರ್ಮಿ ಒಫ಼ಿಸೆರ್ ಗಳ ಜೊತೆ ಬಂದು ಎನ್ಸಿಸಿ ಎಂದರೆ ಏನು ಅಂತಾ ಹೇಳುತ್ತ ಕ್ರೈಸ್ಟ್ ಕಾಲೇಜಿನಲ್ಲಿ ಎನ್ಸಿಸಿ ಕೇಂದ್ರ ಒಂದನ್ನು ತೆರೆದರು. ಸುಮಾರು ೪ ದಶಕಗಳಿಂದ ಎನ್ಸಿಸಿ ಕಂಪನಿ ಕ್ರೈಸ್ಟ್ ಯುನಿವೆರ್ಸಿಟಿ ಯಲ್ಲಿ ಮಾತ್ರ ಅಲ್ಲದೆ ಇಡೀ ರಾಜ್ಯದಲ್ಲಿ ತನ್ನದೆ ಆದ ಛಾಪು ಮುಡಿಸಿದೆ. ೧೯೬೯-೭೦ರಲ್ಲಿ ನಮ್ಮ ಕಂಪನಿಯಲ್ಲಿ ೨೦ ಕ್ಯಾಡೆಟ್ಸ್ ಇದ್ದರು . ೧೯೭೦-೭೨ ಈ ಎರಡು ವರ್ಷಗಳಾ ಅವಧಿಯಲ್ಲಿ ಅಮೋಘ ಸಾಧನೆಯನ್ನುಮಾಡಿವೆ.ಆಗಿನ ರಾಜ್ಯ ಪಾಲ ಧರ್ಮವಿರ್ ಅವರಿಗೆ ಗಾರ್ಡ್ ಒಫ಼್ ಹಾನೊರ್ ಕೊಟ್ಟಿದ್ದರು.ಹಾಗು ರಾಶ್ತ್ಟ್ರ ಪತಿ "ವಿವಿ ಗಿರಿ"ಅವರಿಂದ ಆಗಿನ ಸಿಯುಒ ಪ್ರಶಸ್ತಿಯನ್ನು ಪಡೆದಿದ್ದರು. ೧೯೭೯-೮೦ ರಲ್ಲಿ ಲೆಫ಼್ಟಿನೆಂಟ್ ಜೇಮ್ಸ್ ಅಲುಕರ ಅವರಿಗೆ ಭಾರತದ ಸೇನೆ ಯಿಂದ ಕ್ಯಾಪ್ಟನ್ ಯಂದು ಬಡ್ಥಿ ಯಾಗಿ,ಕರ್ನಾಟಕ ಹಾಗು ಗೋವಾ ಡೈರೆಕ್ತ್ರಟ್ ನ ಪರೇಡ್ ಕಮಂಡರ್ ಆದರು. ೧೯೮೦-೮೨ ರಲ್ಲಿ ಕರ್ನಾಟಕ ಹಾಗು ಗೋವಾ ಡೈರೆಕ್ತ್ರಟ್ ದೀ ಬೆಸ್ಟ್ ಡೈರೆಕ್ತ್ರಟ್ ಎಂದು ಪ್ರಶಸ್ತಿ ಪಡೆಯಿತು ಹಾಗು ಕರ್ನಾಟಕ ಸರ್ಕಾರದ ಅಂದಿನ ಮಾನ್ಯ ಮುಖ್ಯ ಮಂತ್ರಿ ಗಳುನಮ್ಮ ಕ್ರೈಸ್ಟ್ ಕಾಲೇಜೆಗೆ ದೀ ಬೆಸ್ಟ್ ಇನ್ಸ್ಟಿಟ್ಯುಟ್ ಟ್ರೊಫೀ ಯನ್ನು ಕೊಟ್ಟು ಪುರಸ್ಕರಿಸಿತು. ೧೯೮೩-೮೫ ರಲ್ಲಿ ಕ್ಯಾಪ್ಟನ್ ಜೇಮ್ಸ್ ಅಲುಕರ ಸತತ ಮೂರನೆ ಬಾರಿ ಪರೇಡ್ ಕಮಂಡರ್ ಆಗಿ ಆಯ್ಕೆಗೊಂಡರು. ವನ ಮಹೊತ್ಸವದ ಅಂಗವಾಗಿ ಕೆಡೆಟ್ಸ್ ಗಳು ಗಿಡ ನೆಡುವ ಕಾರ್ಯ ಕ್ರಮವನ್ನು ಹೊಂದಿಕೊಂಡಿದ್ದರು. ೧೯೮೫-೮೬ ರಲ್ಲಿ ೫ ನೇ ಬಾರಿಗೆ ಪರೇಡ್ ಕಮಂಡರ್ ಆಗಿ ಆಯ್ಕೆ ಗೊಂಡರು ಹಾಗು ಮುಖ್ಯಮಂತ್ರಿ ಗಳಿಂದ ಎರಡನೇ ಬಾರಿ ಪದಕ ವನ್ನು ಪಡೆದರು. ೧೯೮೮-೯೦ ರಲ್ಲಿ ಕ್ಯಾಪ್ಟನ್ ಜೇಮ್ಸ್ ಅಲುಕರ ಅವರಿಗೆ ಮತ್ತೆ ಬಡ್ಥಿಯಾಗಿ ಮೆಜರ್ ಆದರು.ರಾಜ್ಯದ ಎರಡನೆ ಕಮಂಡರ್ ಆಗಿ ನೇಮಕಗೊಂಡರು. ನಮ್ಮ ಕಾಲೇಜಿನ ಕ್ಯಾಡೆಟ್ಸ್ ಗಳು ಎನ್ಸಿಸಿ ನಡೆಸಿದ ವಿವಿಧ ಶಿಬಿರಗಳಲ್ಲಿ ಫ಼ಯರಿಂಗ್ನಲ್ಲಿ ಮೊದಲ ಸ್ಥಾನ ಗಳಿಸಿದರೆ ,ಡ್ರಿಲ್ ಸ್ಪರ್ಧೆ ಹಾಗು ಆರ್.ಡಿ ಪರೇಡ್ ನಲ್ಲಿ ದ್ವಿತೀಯಾ ಸ್ಥಾನ ಗಳಿಸಿರುತ್ತದೆ.

೧೯೯೨-೧೯೯೩

ಬದಲಾಯಿಸಿ

ಟ್ರಾಫಿಕ್ ಪೊಲೀಸರು ಆಯೋಜಿಸಿದ್ದ `ರಸ್ತೆಗಳಲ್ಲಿ ಸೇಫ್ಟಿ’ ಕಾರ್ಯಕ್ರಮಕ್ಕೆ ೭೦ ಕೆಡೆಟ್‍ಗಳು ಭಾಗವಹಿಸಿದ್ದರು. ಇಮ್ಯುನೈಸೇಷನ್ ಕಾರ್ಯಕ್ರಮದಲ್ಲೂ ಯಶಸ್ವಿಯಾಗಿ ನಡೆಸಿಕೊಟ್ಟರು.

೧೯೯೬-೧೯೯೭

ಬದಲಾಯಿಸಿ

ಕನಕಪುರದಲ್ಲಿ ಸಿ.ಐ.ಟಿ.ಸಿ ಕ್ಯಾಂಪ್ ಅನ್ನು ಆಯೋಜಿಸಿದ್ದರು. ಆರ್ಮಿ ಆಫೀಸರ್ ಆಗಿ ಶ್ರೀಯುತ ರಂಜಿತ್ ಬಂಗೇರ ಅವರು ಅಧಿಕಾರ ಸ್ವೀಕರಿಸಿದರು. ಕ್ಯಾಂಪ್‍ನಲ್ಲಿ ಕೆಡೆಟ್‍ಗಳು `ಸೆಕ್ಷನ್ ಇನ್ ಅಟ್ಯಾಕ್’ ಅನ್ನು ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದರು.

೧೯೯೭-೧೯೯೮

ಬದಲಾಯಿಸಿ

ಕ್ಯಾಪ್ಟನ್ ಕೆ.ಸಿ. ಪ್ರೇಮಕುಮಾರ್‍ರವರು ದೈವಾಧೀನರಾದರು. ಅವರು ಹಲವು ವರ್ಷಗಳ ಹಿಂದೆ ಕೆಡೆಟ್ ಆಗಿ ಕಾರ್ಯ ನಿರ್ವಹಿಸಿದ್ದರು. ೧೯೯೭ರಲ್ಲಿ ಕಾಶ್ಮೀರ ಕಣಿವೆಯಲ್ಲಿ ಅವರು ಎನ್‍ಕೌಂಟರ್‍ನಲ್ಲಿ ಅಸುನೀಗಿದರು.

೧೯೯೮-೧೯೯೯

ಬದಲಾಯಿಸಿ

ಕುಮಾರಿ ಗಾಯತ್ರಿ ಹಟೀಲ್ ಕೆ. ಅವರು ದೆಹಲಿಯಲ್ಲಿ ಗಣರಾಜ್ಯೋತ್ಸವದ ಪೆರೇಡ್‍ನಲ್ಲಿ ಭಾಗವಹಿಸಿದ್ದರು.

೧೯೯೯-೨೦೦೦

ಬದಲಾಯಿಸಿ

ಜೆ.ಯು.ಓ. ಅಭಿಲಾಷ್ ವರ್ಗೀಸ್ ಅವರ ನೇತೃತ್ವದಲ್ಲಿ ೧೫ ಜನರ ತಂಡ ಪಶ್ಚಿಮ ಘಟ್ಟಗಳ ಮೂಲಕ ಮಂಗಳೂರಿಗೆ ೭೦೦ ಕಿ.ಮೀ.ಗಳ ಅಂತರವನ್ನು ಸೈಕ್ಲಿಂಗ್ ಮೂಲಕ ಕ್ರಮಿಸಿದರು. ಶಾಂತಿಯುತ ಪ್ರಪಂಚ, ಹಸಿರಿನ ಸಿರಿ ಹಾಗೂ ಸಮಗ್ರತೆಯ ಧ್ಯೇಯಗಳೊಂದಿಗೆ ಅದನ್ನು ಪೂರ್ತಿಗೊಳಿಸಿದರು. ಬೆಂಗಳೂರಿನ ವಿಧಾನ ಸೌಧದ ಬಳಿ ಏರ್ ಕಾಂಗ್ರೆಟ್ ಎಂ.ಎಂ. ಅಲಿ ಅವರು ಚಾಲನೆ ನೀಡಿದರು. ಕೆಡೆಟ್‍ಗಳು ನಂದಿಬೆಟ್ಟಕ್ಕೆ ಟ್ರೆಕ್ಕಿಂಗ್‍ಗೆ ಹೋಗಿದ್ದರು. ಆನರಿಗೆ `ಆಪರೇಷನ್ ವಿಜಯ್’ ಬಗ್ಗೆ ತಿಳುವಳಿಕೆ ಮೂಡಿಸಲು ಇದನ್ನು ಹಮ್ಮಿಕೊಳ್ಳಲಾಗಿತ್ತು. ಎಸ್.ಇ.ಓ. ಅಭಿಲಾಷ್ ವರ್ಗೀಸ್ ಹಾಗೂ ಜೆ.ಯು.ಓ. ಸತ್ಯಪ್ರಸಾದ್ ಅವರು ಅತ್ಯುತ್ತಮ ಕೆಡೆಟ್‍ಗಳಾಗಿ ಆಯ್ಕೆಯಾದರು.

೨೦೦೦-೨೦೦೧

ಬದಲಾಯಿಸಿ

ಕಂಪನಿಯನ್ನು `ಓಪನ್ ಯೂನಿಟ್’ ಆಗಿ ೩೨ ಕೆಲಸಗಳಿಗೆ ವೇಕೆಂನ್ಸಿ ಘೋಷಿಸಿದರು. ಎಸ್.ಎಮ್. ಗಣಪತಿ ಹಾಗೂ ಸಿ.ಎಸ್.ಎಮ್. ನಿತಿನ್ ಉಮೇಶ್ ಅವರು ಗಣರಾಜ್ಯೋತ್ಸವದ ಕಾರ್ಯಕ್ರಮಕ್ಕೆ ಆಯ್ಕೆಯಾದರು. ಅತ್ಯುತ್ತಮ ಕೆಡೆಟ್‍ಗಳಿಗಾಗಿ ಸಿ.ಎಸ್.ಯು.ಓ. ಬೇಬಿ ಕೃಷ್ಣ ಹಾಗೂ ಸಿ.ಜೆ.ಯು.ಓ. ರಾಕೇರ್ಶ ಜಾರ್ಜ್ ಅವರು ಆಯ್ಕೆಯಾದರು.

೨೦೦೧-೨೦೦೨

ಬದಲಾಯಿಸಿ

ಅಭಿಲಾಷ್ ವರ್ಗೀಸ್ ಅವರು ಓ.ಟಿ.ಎ. ಆಗಿ ಆಯ್ಕೆಯಾದರು ಹಾಗೂ ಅತ್ಯುತ್ತಮ ಕೆಡೆಟ್‍ಗಳಾಗಿ ಎಸ್.ಯು.ಓ. ಬಿನು ಮತ್ತು ಜೆ.ಯು.ಓ. ಚೇತನ್ ದೇವಯ್ಯ ಅವರು ಆಯ್ಕೆಯಾದರು.

೨೦೦೨-೨೦೦೩

ಬದಲಾಯಿಸಿ

ಸೀನಿಯರ್ ವಿಂಗ್’ ಅನ್ನು ಉದ್ಘಾಟಿಸಲಾಯಿತು ಹಾಗೂ 55 ವಿದ್ಯಾರ್ಥಿಗಳು ನೋಂದಾಯಿಸಿಕೊಂಡರು. ಗಣರಾಜ್ಯೋತ್ಸವದ ಪೆರೇಡ್‍ಗೆ ಸಾರ್ಜೆಂಟ್ ಯಶಸ್ವಿನಿ ಹಾಗೀ ಸಿ.ಎಸ್.ಎಂ. ಬೆನ್ನಿ ಥಾಮಸ್ ಅವರು ಆಯ್ಕೆಯಾದರು. ಸಿ.ಎಸ್.ಎಂ. ಬೆನ್ನಿ ಥಾಮಸ್ ಅವರು `ಇಂಡೋ-ಯು.ಕೆ. ಯೂತ್ ಎಕ್ಸ್‍ಚೇಂಜ್’ ಕಾರ್ಯಕ್ರಮಕ್ಕೆ ಆಯ್ಕೆಯಾದರು. ಅತ್ಯುತ್ತಮ ಕೆಡೆಟ್‍ಗಳಾಗಿ ಎಸ್.ಯು.ಓ. ಮಂಜಿತ್ ಹಾಗೂ ಜೆ.ಯು.ಓ. ಅನುಪಮ ಅವರು ಆಯ್ಕೆಯಾದರು.

೨೦೦೩-೨೦೦೪

ಬದಲಾಯಿಸಿ

ಸೀನಿಯರ್ ವಿಂಗ್ ಅನ್ನು ೧೦೫ ಕೆಡೆಟ್‍ಗಳಿಗೆ ವಿಸ್ತರಿಸಲಾಯಕಿತು. ಜೆ.ಯು.ಓ. ಸಂದೀಪ್ ಹೆಗ್ಡೆ, ಸಿ.ಎಸ್.ಎಂ. ಮೋಹನ್ ಆರ್., ಸಿ.ಎಸ್.ಎಂ. ನಾಗೇಂದ್ರ ಎನ್. ಅವರು ಗಣರಾಜ್ಯೋತ್ಸವ ಪೆರೇಡ್‍ಗೆ ಆಯ್ಕೆಯಾದರು. ಎಸ್.ಯು.ಓ. ಸ್ವಾತಿ ನಾರಾಯಣ ಅವರು ಇಂಡೋ-ಶ್ರೀಲಂಕಾ ವೈ.ಇ.ಪಿ. ಹಾಗೂ ಜೆ.ಯು.ಓ. ಸುಚೇತ ಬಲ್ಲಾಳ್ ಆಯ್ಕೆಯಾದರು. ಅತ್ಯುತ್ತಮ್ ಕೆಡೆಟ್‍ಗಳಾಗಿ ಜೆ.ಯು.ಓ. ಸಂದೀಪ್ ಹೆಗ್ಡೆ, ಎಸ್.ಯು.ಓ. ಸ್ವಾತಿ ನಾರಾಯಣ್ ಅವರು ಆಯ್ಕೆಯಾದರು.

೨೦೦೫-೨೦೦೬

ಬದಲಾಯಿಸಿ

ಜೆ.ಯು.ಓ. ಶರೂನ್ ಗ್ರೆವಾಲ್, ಸಿ.ಎಸ್.ಎಂ. ಶುಭ್ರ ಜಿ. ಆಚಾರ್ಯ, ಸಿ.ಎಸ್.ಎಮ್. ರಾಕೇಶ್ ನಾಯಕ್ ಅವರು ಆರ್.ಡಿ. (ಗಣರಾಜ್ಯೋತ್ಸವ) ಪೆರೇಡ್‍ನಲ್ಲಿ ಭಾಗವಹಿಸಿದ್ದರು. ಇಂಡೋ-ಸಿಂಗಪೂರ್‍ನಲ್ಲಿ ನಡೆದ ಯುವ-ವಿಚಾರ ವಿನಿಮಯ (ಯೂತ್ ಎಕ್ಸ್‍ಚೇಂಜ್) ಕಾರ್ಯಕ್ರಮದಲ್ಲಿ ಜೆ.ಯು.ಓ. ಶರೂನ್ ಗ್ರೆವಾಲ್, ಸಿ.ಎಸ್.ಎಂ. ರಾಕೇಶ್ ನಾಯರ್ ಮತ್ತು ಸಿ.ಎಸ್.ಎಮ್. ಅಭಿಷೇಕ್ ಕೆ.ಆರ್. ಅವರು ಆಯ್ಕೆಯಾಗಿದ್ದರು. ಲಾನ್ಸ್ ಕಾರ್ಪೋರಲ್ ಅಖಿಲಾ ವಿ. ಅವರು 2006 ರಲ್ಲಿ ತಾಲ್-ಸೈನಿಕ್ ಕ್ಯಾಂಪ್‍ಗೆ ದೆಹಲಿಗೆ ಹೋಗಲು ಆಯ್ಕೆಯಾಗಿದ್ದರು. ಅವರು ಎಸ್.ಡಬ್ಲ್ಯು. ಆಗಿ ಆಬ್ಸ್‍ಕಲ್ ಕೋರ್ಸ್ ಕಾಂಪಿಟೇಶನ್‍ಗೆ ಆಯ್ಕೆಯಾಗಿದ್ದರು. ೨೦೦೫-೨೦೦೬ ವರ್ಷದಲ್ಲಿ ನಡೆದ ಇತರ ಕಾರ್ಯಕ್ರಮಗಳು ಡಬ್ಲ್ಯು.ಓ.ಟಿ.ಎ. ಗ್ವಾಲಿಯರ್, ಎಸ್.ಎಸ್.ಬಿ. ಟ್ರೈನಿಂಗ್ ಕ್ಯಾಂಪ್, ಎನ್.ಐ.ಸಿ. ಜಮ್‍ನಗರ್, ಎನ್.ಐ.ಸಿ. ಅಂಡಮಾನ್, ಎನ.ಐ.ಸಿ. ಲಕ್ಷದ್ವೀಪ, ಎನ್.ಐ.ಸಿ. ಕುಫ್ರೀ, ನೀಲಗಿರಿ ಟ್ರೆಕ್, ಎಂ.ಇ.ಜಿ. ಆರ್ಮಿ ಅಟ್ಯಾಚ್‍ಮೆಂಟ್ ಕ್ಯಾಂಪ್, ಶಿಖರಾರೋಹಣ, ಓ.ಟಿ.ಎ. ಅಟ್ಯಾಚ್‍ಮೆಂಟ್ ಕ್ಯಾಂಪ್, ಆರ್.ಸಿ.ಇಟಿ.ಸಿ. ಗ್ವಾಲಿಯರ್.

೨೦೦೬-೨೦೦೭

ಬದಲಾಯಿಸಿ

೨೦೦೭ರ ಗಣರಾಜ್ಯೋತ್ಸವ ಪೆರೇಡ್‍ನಲ್ಲಿ ಜೆ.ಯು.ಓ. ಆಶಾ ಕೃಷ್ಣನ್ ಅವರು ಆಯ್ಕೆಯಾಗಿದ್ದರು. `ಯೂತ್ ಎಕ್ಸ್‍ಚೇಂಜ್’ ಕಾರ್ಯಕ್ರಮಕ್ಕೆ ಭಾರತದಿಂದ ಪ್ರತಿನಿಧಿಸಿದ್ದರು.ಕಾರ್ಪೋರಲ್ ನೀತ್ ಕುಂಜಪ್ಪ ಅವರು `ತಾಲ್ ಸೈನಿಕ್ ಕ್ಯಾಂಪ್’ಗೆ ದೆಹಲಿಗೆ ಹೋಗಿದ್ದರು. ಎನ್.ಐ.ಸಿ. ಗಾಜಿûಯಾಬಾದ್, ಎನ್.ಐ.ಸಿ. ಮಥುರ, ಆರ್.ಸಿ.ಟಿ.ಸಿ. ಗ್ವಾಲಿಯರ್, ಎನ್.ಐ.ಸಿ. ಮಡಿಕೇರಿ, ಓಷನ್ ಟು ಸ್ಕೈ ಟ್ರೆಕ್ಕಿಂಗ್ ಕ್ಯಾಂಪ್, ಪುರಾ ಜಂಪ್ (ಆಗ್ರಾ) ಇವು ೨೦೦೭ರಲ್ಲಿ ಆಯೋಜಿಸಲಾಗಿದ್ದ ಇತರೆ ಕ್ಯಾಂಪ್‍ಗಳು.

೨೦೦೭-೨೦೦೮

ಬದಲಾಯಿಸಿ

೭ ಕೆಡೆಟ್‍ಗಳು '೨' ಕಾಯ್‍ನಿಂದ ಆರ್.ಡಿ. ಪೆರೇಡ್‍ಗೆ ಆಯ್ಕೆಯಾಗಿದ್ದರು. ಎಸ್.ಯು.ಓ. ಅನುಷ ಆರ್. ಮತ್ತು ಜೆ.ಯು.ಓ. ಗ್ಲೆನ್ ಎನ್. ಎಬೆನ್ಸಾರ್ ಅವರು `ಯೂತ್ ಎಕ್ಸ್‍ಚೇಂಜ್’ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದರು.ಈ ವರ್ಷದಲ್ಲಿ ಆಯೋಜಿಸಿದ್ದ ಇತರೆ ಕ್ಯಾಂಪ್‍ಗಳು ಪ್ಯಾರಾ ಜಂಪ್ ಕ್ಯಾಂಪ್, ಗುಜರಾಜ್ ಟ್ರೆಕ್, ಎನ್.ಐ.ಸಿ. ದೆಹಲಿ ಮತ್ತು ಮಾಲ್‍ವಂಕರ್ ಕ್ಯಾಂಪ್