ಕ್ರೀಮ್ ಕ್ಯಾರಮೆಲ್

ಕ್ರೀಮ್ ಕ್ಯಾರಮೆಲ್ ಪಾರದರ್ಶಕವಾದ ಕ್ಯಾರಮೆಲ್ ಸಾಸ್‍ನ ಪದರವನ್ನು ಹೊಂದಿರುವ ಒಂದು ಕಸ್ಟರ್ಡ್ ಡಿಜ಼ರ್ಟ್ ಆಗಿದೆ.

ಹೋಟೆಲುಗಳಲ್ಲಿ ಕ್ರೀಮ್ ಕ್ಯಾರಮೆಲ್

ಕ್ರೀಮ್ ಕ್ಯಾರಮೆಲ್ ಸಾದಾ ಕಸ್ಟರ್ಡ್‌ನ ಒಂದು ಪರ್ಯಾಯ ರೂಪವಾಗಿದ್ದು ಇದರಲ್ಲಿ ಸಕ್ಕರೆ ಪಾಕವನ್ನು ಕ್ಯಾರಮೆಲ್ ಹಂತದವರೆಗೆ ಕುದಿಸಿ ಅಚ್ಚಿನಲ್ಲಿ ಸುರಿಯಲಾಗುತ್ತದೆ. ಆಮೇಲ್ ಕಸ್ಟರ್ಡ್‌ನ ತಳವನ್ನು ಸೇರಿಸಲಾಗುತ್ತದೆ. ಇದನ್ನು ಸಾಮಾನ್ಯವಾಗಿ ಒಲೆ ಮೇಲ್ಭಾಗದ ಮೇಲೆ ಬೇನ್-ಮ್ಯಾರಿಯಲ್ಲಿ ಬೇಯಿಸಲಾಗುತ್ತದೆ. ಇದನ್ನು ತಿರುಗಿಸಿ ಮೇಲೆ ಕ್ಯಾರಮೆಲ್ ಸಾಸ್‍‍ನ್ನು ಹಾಕಿ ಬಡಿಸಲಾಗುತ್ತದೆ.

ಕ್ರೀಮ್ ಕ್ಯಾರಮೆಲ್ ವಿಶೇಷವಾಗಿ ಹೆಚ್ಚು ದೊಡ್ಡ ಕರಾವಳಿ ನಗರಗಳಲ್ಲಿ ಮತ್ತು ಗೋವಾ, ದಮನ್ ಮತ್ತು ದಿಯುದಂತಹ ಹಿಂದಿನ ಪೋರ್ಚುಗೀಸ್ ವಸಾಹತುಗಳಲ್ಲಿ ಜನಪ್ರಿಯವಾಗಿದೆ. ಕೆಲವೊಮ್ಮೆ ಜೊತೆಗೆ ಮಸಾಲಾ ಚಹಾವನ್ನು ಸೇರಿಸಲಾಗುತ್ತದೆ. ಇದು ಭಾರತದ ಕರಾವಳಿಯ ಉದ್ದಕ್ಕಿರುವ ಬೀಚ್ ರಿಜ಼ಾರ್ಟ್‌ಗಳಲ್ಲಿನ ಹೊಟೆಲು ಖಾದ್ಯಪಟ್ಟಿಗಳಲ್ಲಿ ಮುಖ್ಯ ಆಹಾರವಾಗಿದೆ. ಆಂಗ್ಲೋ-ಇಂಡಿಯನ್‌, ಗೋವನ್, ಮಲಯಾಳಿ, ಮಂಗಳೂರಿಯನ್ ಮತ್ತು ಪಾರ್ಸಿ ಸಮುದಾಯಗಳ ಮನೆಯ ಅಡುಗೆ ಮನೆಗಳಲ್ಲಿ ಕೂಡ ನಿಯತವಾಗಿ ತಯಾರಿಸಲ್ಪಡುತ್ತದೆ.

ಉಲ್ಲೇಖಗಳು

ಬದಲಾಯಿಸಿ
  • Alan Davidson, The Oxford Companion to Food, 1999.  ISBN 0-19-211579-0.