ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಕ್ರಿಪ್ಟೋಗ್ರಫಿ

ಬದಲಾಯಿಸಿ

ಕ್ರಿಪ್ಟೋಗ್ರಫಿ ಅಥವಾ ಕ್ರಿಪ್ಟೋಲಜಿ ಪದವು ಗ್ರೀಕ್ ಭಾಷೆಯ "ಕ್ರಿಪ್ಟೋಸ್" ಎಂಬ ಪದದಿಂದ ಹುಟ್ಟಿಕೊಂಡಿದೆ.ಎನ್‍ಕ್ರಿಪ್‍ಶಣ್‍ ಇದರ ಸಮಾನಾರ್ಥ. ಕ್ರಿಪ್ಟೋಸ್ ಎಂದರೆ "ನಿಗೂಡ ರಹಸ್ಯ",ಅಥವಾ ನಮ್ಮ ಸಂದೇಶವನ್ನು ಮೂರನೆಯ ವ್ಯಕ್ತಿಗೆ ತಿಳಿಯದಂತೆ ಇನ್ನೊಬ್ಬರಿಗೆ ರವಾನಿಸುವ ತಂತ್ರ. ಆಧುನಿಕ ಕ್ರಿಪ್ಟೋಗ್ರಫಿ ತಂತ್ರಜ್ಞಾನವನ್ನು ಗಣಿತ, ಗಣಕ- ವಿಜ್ಞಾನ, ವಿದ್ಯುತ್ ತಂತ್ರ ಹೀಗೆ ಹಲವಾರು ವೈಜ್ಞಾನಿಕ ವಿಷಯಗಳಡಿ ಕಲಿಯಲಾಗುತ್ತಿದೆ. ಈ ನವ ಶತಕದ ಮೊದಲು, ಕ್ರಿಪ್ಟೋಗ್ರಫಿಯನ್ನು ರಹಸ್ಯಮಯವಾಗಿ ಉಪಯೋಗಿಸಲಾಗುತ್ತಿತ್ತು. ಕಳುಹಿಸಿದ ಸಂದೇಶವನ್ನು ಬೇರೆ ರೂಪಕ್ಕೆ ಪರಿವರ್ತಿಸಿ ಪುನ: ಆ ಸಂದೇಶವನ್ನು ಮೂಲ ಸ್ಥಿತಿಗೆ ತರಲಾಗುತ್ತಿತ್ತು. ಈ ರೀತಿಯ ಸಂದೇಶಗಳನ್ನು ಕಳುಹಿಸಿದ ವ್ಯಕ್ತಿ ಹಾಗೂ ಕಳುಹಿಸಲ್ಪಟ್ಟ ವ್ಯಕ್ತಿ ಮಾತ್ರ ಓದಬಹುದು. ಈ ರೀತಿಯ ರಹಸ್ಯಮಯ ಸಂದೇಶ ರವಾನೆಯನ್ನು ರಕ್ಷಣಾ ಇಲಾಖೆಯವರು, ಗುಪ್ತಚರರು ಉಪಯೋಗಿಸುತ್ತಿದ್ದರು. ಇತ್ತೀಚೆಗೆ, ಈ ತಂತ್ರಜ್ಞಾನವನ್ನು ಅನೇಕ ಗಣಕ-ಯಂತ್ರದ ಕೆಲಸಗಳಲ್ಲಿ ಅಳವಡಿಸಲಾಗಿದೆ.