ಕ್ರಾಸ್ ಮೈದಾನ್, ಮುಂಬಯಿ

ದಕ್ಷಿಣ ಮುಂಬಯಿನ ಹೆಸರುವಾಸಿಯಾದ ಸ್ಥಳದಲ್ಲಿ ನಿರ್ಮಿಸಲಾಗಿರುವ ಕ್ರಾಸ್ ಮೈದಾನ್, (ಪೆರೇಡ್ ಗ್ರೌಂಡ್ ಎಂದೇ ಪ್ರಸಿದ್ಧವಾದ)[] ಮುಂಬಯಿನ ದೊಡ್ಡ ಮೈದಾನಗಳಲ್ಲೊಂದು. ಈ ಮೈದಾನದ ವಿಸ್ತೀರ್ಣ ೨೩,೦೦೦ ಚ.ಮೀಟರ್ ಗಳು.[] ೧೬ ನೆಯ ಶತಮಾನದಲ್ಲಿ ಈ ಮೈದಾನದಲ್ಲಿ ಪೋಚುಗೀಸರಆಡಳಿತ ಕಾಲದಲ್ಲಿ ಕಟ್ಟಲಾದ ಒಂದು ಕ್ರೂಸಿಫಿಕ್ಸ್ ಇದ್ದದ್ದರಿಂದ ಕ್ರಾಸ್ ಮೈದಾನ್ ಎಂಬ ಹೆಸರುಬಂತು. ಈ ಪ್ರದೇಶ ಆಗಿನ ಡಿಸ್ಟ್ರಿಕ್ಟ್ ಕಲೆಕ್ಟರ್ ಅಧಿಕಾರದಲ್ಲಿತ್ತು.[] ೨೦೦೯ ರಲ್ಲಿ ಮಹಾತ್ಮ ಗಾಂಧಿಯವರ ಸ್ವಾತಂತ್ರ್ಯ ಆಂದೋಳನದಲ್ಲಿ ಒಂದು ಪ್ರಮುಖ ಭೂಮಿಕೆಯಲ್ಲಿ ನಿರ್ಮಿಸಿದ ಚರಕದ ಮಾದರಿಯ ೩೦ ಅಡಿ ಎತ್ತರದ ಕಬ್ಬಿಣದ ಶಿಲ್ಪ ವನ್ನು ಸ್ಥಾಪಿಸುವ ಆಶಯವಿತ್ತು. ಅದೇ ವರ್ಷದಲ್ಲಿ ಮಲಬಾರ್ ಹಿಲ್ ನಿಂದ ಕ್ರಾಸ್ ಮೈದಾನಕ್ಕೆ ನೀರಿನ ಕೊಳವೆಯನ್ನು ಸ್ಥಾಪಿಸುವ ಬಗ್ಗೆ ಒಂದು ಯೋಜನೆಯನ್ನು ಸರಕಾರ ಘೋಷಿಸಿತು.[] ೯೪ ಕೋಟಿ ರುಪಾಯಿನ ಯೋಜನೆಯಿಂದ ದಕ್ಷಿಣ ಮುಂಬಯಿ, ಮತ್ತು ಹತ್ತಿರದ ಸ್ಥಳಗಳಿಗೆ ಸಾಕಾದಷ್ಟು ಕುಡಿಯುವ ನೀರಿನ ಪೂರ್ತಿ ಆಗುವದೆಂದು ತಜ್ಞರು ಅಭಿಪ್ರಾಯಪಟ್ಟಿದ್ದರು.

ಆಗಿನ ಕಾಲದಲ್ಲಿ 'ಎಸ್ಪ್ಲನೇಡ್' ಎಂದು ಕರೆಯಲ್ಪಡುತ್ತಿದ್ದ ಭಾರಿ ಸುತ್ತಳತೆಯ ಮೈದಾನದ ಭಾಗದಲ್ಲಿ ಹಲವಾರು ಮೈದಾನಗಳು ಸೇರಿದ್ದವು.

  • 'ಓವಲ್ ಮೈದಾನ್',
  • 'ಆಝಾದ್ ಮೈದಾನ್',
  • 'ಕೋಪರೇಜ್ ಗ್ರೌಂಡ್ '
  • 'ಕ್ರಾಸ್ ಮೈದಾನ್.

ಕಾಲುದಾರಿ ಮತ್ತು ನಾಗರಿಕ ಸೌಲಭ್ಯಗಳ ಕೊರತೆ

ಬದಲಾಯಿಸಿ

ಇವೆಲ್ಲಾ ೨೦ ನೆಯ ಶತಮಾನದ ಮೊದಲನೆಯ ಭಾಗದ ಸಮಯಲ್ಲಿ ಸ್ಥಾಪಿಸಲ್ಪಟ್ಟಿದ್ದವು.[] ಈಗಿನ ಕ್ರಾಸ್ ಮೈದಾನ್ ಹಾಗೂ ಆಝಾದ್ ಮೈದಾನ್ ಬೇರ್ಪಡಿಸುವ ಮಹಾತ್ಮಾ ಗಾಂಧಿ ರೋಡ್ ನ್ನು ಎಸ್ಪ್ಲನೇಡ್ ಎಂಬ ಹೆಸರಿನಿಂದ ಗುರುತಿಸಲಾಗಿತ್ತು. ಈಗಲೂ ಬಾಂಬೆ ಹೈ ಕೋರ್ಟ್ ಎಂದು ಗುರುತಿಸಲ್ಪಡುವ ಎಸ್ಪ್ಲನೇಡ್ ಕೋರ್ಟ್ ಎನ್ನುವ ಹೆಸರನ್ನು ಬಿಟ್ಟರೆ,[] ಈಗ ಎಸ್ಪ್ಲನೇಡ್ ಎನ್ನುವ ಹೆಸರನ್ನು ಇತಿಹಾಸದ ಪುಟಗಳಿಂದ ತೆಗೆದುಹಾಕಲಾಗಿದೆ. ಈಗಿನ ಕ್ರಾಸ್ ಮೈದಾನದಿಂದ ಎಮ್.ಜಿ. ರೋಡ್ ಸಂಪರ್ಕಿಸುವ ಸ್ವಲ್ಪ ಭಾಗವನ್ನು ಅತ್ಯಂತ ಪ್ರಸಿದ್ಧವಾದ 'ಫ್ಯಾಶನ್ ಸ್ಟ್ರೀಟ್' ಎಂಬ ಹೆಸರಿನಿಂದ ಜನರು ಗುರುತಿಸುತ್ತಾರೆ. ಇಲ್ಲಿ ಆಧುನಿಕ ಮತ್ತು ಅತ್ಯಾಕರ್ಷಕವಾದ ಹೆಣ್ಣುಮಕ್ಕಳ, ಚಿಕ್ಕ ಮಕ್ಕಳ ಮತ್ತು ಎಳೆಯರು ಉಡುವ ಫ್ಯಾಶನ್ ಬಟ್ಟೆಬರೆಗಳು ಸ್ವಲ್ಪ ಕಡಿಮೆ ದರದಲ್ಲಿ ದೊರೆಯುತ್ತವೆ. ಬೇಸಗೆಯಲ್ಲಿ ಕ್ರಿಕೆಟ್ ಆಟಕ್ಕೆ ಈ ಮೈದಾನ ಮೀಸಲಾಗಿದೆ. ಹುಡುಗರು ಮಾನ್ ಸೂನ್ ನಲ್ಲಿ ಮಳೆ ಬರುತ್ತಿರುವಾಗಲೇ ಪುಟ್ಬಾಲ್ ಆಟವಾಡಲು ಇಚ್ಛಿಸುತ್ತಾರೆ. ದಕ್ಷಿಣದ ಕೊನೆಯಲ್ಲಿ ರಾಷ್ಟ್ರಮಟ್ಟದ ಮಹಿಂದ್ರ ಯುನೈಟೆಡ್ ಕ್ಲಬ್ ಇದೆ. ಇದು ಮೈದಾನದ ಸ್ವಲ್ಪಭಾಗವನ್ನು ಲೀಸ್ ಆಗಿ ಪಡೆದಿದೆ. ಹಿಂದೆ ಸಂಚಾರಿ ಸರ್ಕಸ್ ಕಂಪೆನಿಗಳು ಇಲ್ಲಿ ತಮ್ಮ ಟೆಂಟ್ ಹಾಕಿ ಪ್ರದರ್ಶನ ಕೊಡುತ್ತಿದ್ದವು.[] ಗ್ರೌಂಡ್ ನಲ್ಲಿ ೮ ಕ್ರಿಕೆಟ್ ಪಿಚ್ ಗಳಿವೆ.[] ಇವು ಹಲವು ಕ್ರಿಕೆಟ್ ಟೀಂಗಳಿಗೆ ಮ್ಯಾಚ್ ಆಡಲು ಅನುವುಮಾಡಿಕೊಡುತ್ತಿವೆ. ೧೯೮೬ ರಲ್ಲಿ ರೆಲಿಯನ್ಸ್ ಇಂಡಸ್ಟ್ರೀಸ್ ತಮ್ಮ ವಾರ್ಷಿಕ ಜನರಲ್ ಬಾಡಿ ಮೀಟಿಂಗ್ ಈ ಮೈದಾನದಲ್ಲಿ ಆಯೋಜಿಸಿತ್ತು. ಸಭೆಯಲ್ಲಿ ೩೦ ಸಾವಿರ ಶೇರ್ ಹೋಲ್ಡರ್ಸ್ ಉಪಸ್ಥಿತರಿದ್ದರು.[] ಸ್ವಾತಂತ್ರ್ಯ ಪೂರ್ವದ ಸಮಯದಲ್ಲಿ ಈ ಮೈದಾನದಲ್ಲಿ ಹಲವಾರು ದೊಡ್ಡ ಸಭೆಗಳು ರ್ಯಾಲಿಗಳು ಮತ್ತು ರಾಜಕೀಯ ಭಾಷಣಗಳನ್ನುಆಯೋಜಿಸಿದ ದಾಖಲೆಗಳಿವೆ.

ಖಾವ್ ಗಲ್ಲಿ

ಬದಲಾಯಿಸಿ

'ವಿಕ್ಟೋರಿಯಾ ಟರ್ಮಿನಸ್'(CST) ಮತ್ತು 'ಚರ್ಚ್ ಗೇಟ್' ರೈಲ್ವೆ ನಿಲ್ದಾಣಗಳನ್ನು ತಲುಪಲು ಮೇಲೆ ತಿಳಿಸಿದ ಮೈದಾನಗಳ ಮಧ್ಯದಲ್ಲೇ ಜನ ಕಾಲುದಾರಿಯನ್ನು ಹೊಂದಿಸಿಕೊಂಡಿದ್ದಾರೆ. ಇದಕ್ಕೆ 'ಖಾವ್ ಗಲ್ಲಿ' ಎಂಬ ಹೆಸರಿದೆ. (ಮರಾಠಿ ಭಾಷೆಯಲ್ಲಿ ತಿಂಡಿ ತಿನಸುಗಳನ್ನು ಮೆಲ್ಲುವ ಗಲ್ಲಿ ಎಂಬ ಅರ್ಥವಿದೆ) ಈ ಗಲ್ಲಿಯ ಮುಖಾಂತರ ಸಾವಿರಾರು ಜನ ತಮ್ಮ ಆಫೀಸುಗಳಿಗೆ ಹೋಗುವ ಮಾರ್ಗವನ್ನು ಕಂಡುಕೊಂಡಿದ್ದಾರೆ. 'ಫ್ಯಾಶನ್ ಸ್ಟ್ರೀಟ್ ನಲ್ಲಿನ ಹಾಕರ್ಸ್ ಗಳು, ಮತ್ತು ಗಾರ್ಬೇಜ್ ಸಮಸ್ಯೆಯಿಂದ ದಕ್ಷಿಣ ಮುಂಬಯಿನಲ್ಲಿ ವಾಸಿಸುತ್ತಿರುವ ನಗರದ ನಾಗರಿಕರು ಬೇಸತ್ತಿದ್ದಾರೆ. ಒಂದು ವಿಶೇಷ ಸಮಿತಿಯನ್ನು ನಿರ್ಮಿಸಲು ಒಂದು ಗಾರ್ಬೇಜ್ ನಿವಾರ ಣಾ ಸಮಿತಿಯನ್ನು ಸ್ಥಾಪಿಸಿದ್ದಾರೆ.. ಹೆರಿಟೇಜ್ ಸ್ಟೇಟಸ್ ಗಾಗಿ ಬೇಡಿಕೆಗಳು ಹೆಚ್ಚಾಗಿ ಬಂದಿವೆ.

ಕ್ರಾಸ್ ನಿರ್ಮಾಣ

ಬದಲಾಯಿಸಿ

ಈಗಿರುವ ಎಲ್ಫಿನ್ ಸ್ಟೋನ್ ಸ್ಕೂಲ್ ಹತ್ತಿರ ಮೈದಾನದ ಉತ್ತರ ಭಾಗದಲ್ಲಿ ಈ ಕ್ರಾಸ್ ನಿರ್ಮಿಸಲಾಗಿತ್ತು. ಮೇ ೨ ನೆಯ ತಾರೀಖಿನ ಹಬ್ಬದಂದು ರಾಷ್ಟ್ರದಾದ್ಯಂತ ಅದರಲ್ಲೂ ಗೋವಾ ಮತ್ತು ಮುಂಬಯಿನ ಶ್ರದ್ಧಾಳುಗಳು ಇಲ್ಲಿಗೆ ಬಂದು ಭಕ್ತೀಂದ ತಮ್ಮ ಪ್ರಾರ್ಥನೆ ಸಲ್ಲಿಸುತ್ತಾರೆ. ಕ್ರೈಸ್ತಮತದವರಲ್ಲೆ ಇತರ ಧರ್ಮೀಯರು ಇಲ್ಲಿ ಪ್ರಾರ್ಥನೆ ಸಲ್ಲಿಸಲು ಬರುತ್ತಾರೆ. ಗುಡ್ ಫ್ರೈಡೇ. ಮಂಡೇ ಮತ್ತು ಗುರುವಾರ ಸೇವೆಗಳು ನ ಡೆಯುತ್ತವೆ. ಕ್ರಾಸ್ ಬಳಿಯ ಸ್ಥಳ ಸ್ಥಾನೀಯ ಬಿಶಪ್ ಆಡಳಿತದ ಒಳಗಿರುವುದರಿಂದ ಇದರ ನಿರ್ವಹಣೆಯನ್ನೂ ಅವರೇ ನಡೆಸುತ್ತಾರೆ.

ಭಿಕ ಬೆಹ್ರಾಮ್ ವೆಲ್

ಬದಲಾಯಿಸಿ

ಮೈದಾನದ ದಕ್ಷಿಣ ತುದಿಯಲ್ಲಿ ಒಂದು ಪವಿತ್ರ ಭಾವಿ ಇದೆ. ಇದನ್ನು ಭಿಕ ಬೆಹ್ರಾಮ್ ಎನ್ನುವ ಪಾರ್ಸಿಮತದ ಸಂತರು, ಈ ದಾರಿಯಲ್ಲಿ ಸನ್. ೧೭೨೫ ರಲ್ಲಿ ಸಾಗುತ್ತಿದ್ದಾಗ, ಪ್ರವಾಸಿಗಳ ಅನುಕೂಲಕ್ಕೋಸ್ಕರ ನಿರ್ಮಿಸಿದರು. ಅರಬ್ಬೀ ಸಮುದ್ರದ ಬಳಿ ಇರುವ ಈ ಭಾವಿಯ ನೀರು ಸಕ್ಕರೆಯಷ್ಟು ಸಿಹಿಯಾಗಿರುತ್ತದೆ. ಪಾರ್ಸಿ ಮತಸ್ತರಿಗೆ ಇದು ಪವಿತ್ರ ಸ್ಥಳ. ಸರ್ಕಾರದಿಂದ ಇದು ಹೆರಿಟೇಜ್ ತಾಣವೆಂದು ಘೋಷಣೆ ಬರಲು ಕಾಯುತ್ತಿದ್ದಾರೆ.

ಉಲ್ಲೇಖಗಳು

ಬದಲಾಯಿಸಿ
  1. J. A. Mangan, Fan Hong (2003). Sport in Asian society: past and present. Routledge. p. 186. ISBN 0-7146-5342-X.
  2. "Cross Maidan is set for revamp". Daily News and Analysis. 22 November 2005. Retrieved 30 January 2012.
  3. "Replica of charkha at Cross Maidan". The Indian Express. 10 September 2009. Retrieved 30 January 2012.
  4. "Money flows in for vital water projects". ದಿ ಟೈಮ್ಸ್ ಆಫ್‌ ಇಂಡಿಯಾ. 7 July 2009. Archived from the original on 3 ಜನವರಿ 2013. Retrieved 30 January 2012.
  5. "Need more than 2L litre a day? No way". Daily News and Analysis. 12 December 2009. Retrieved 30 January 2012.
  6. Kelly Shannon, Janina Gosseye (2009). Reclaiming (the urbanism of) Mumbai Volume 3 of Explorations in/of urbanism. SUN Academia. p. 125. ISBN 90-8506-694-8.
  7. Irving, John (1994). A son of the circus. Anthos. p. 24. ISBN 90-414-0013-3.
  8. "Mumbai's maidans may soon vanish". Gulf Times. 22 October 2010. Retrieved 28 February 2012.
  9. Anjan, Raichaudhuri. Managing New Ventures. PHI Learning Pvt. Ltd. p. 85. ISBN 81-203-4156-2.