ಕ್ಯಾಪ್ಸೂಲ್‌ ಎಂಡೋಸ್ಕೊಪಿ

ಕ್ಯಾಪ್ಸೂಲ್‌ ಎಂಡೋಸ್ಕೋಪಿ ಇಡಿಯ ಸಣ್ಣ ಕರುಳು, ಅನ್ನನಾಳ ಮತ್ತು ಗುದನಾಳವನ್ನು ಸಂಪೂರ್ಣವಾಗಿ ನೋಡಲು ಸಾಧ್ಯವಾಗುವಂತೆ ವಿನ್ಯಾಸ ಮಾಡಲಾದ, ಆಸ್ಪತ್ರೆಗೆ ದಾಖಲಾಗದೆ ಹೊರರೋಗಿಯ ನೆಲೆಯಲ್ಲಿ ನಡೆಸಿಕೊಳ್ಳಲು ಸಾಧ್ಯವಾಗುವ, ಛೇದನಾ ರಹಿತ, ರೋಗಿ-ಸ್ನೇಹಿ ಮತ್ತು ಆಂಬ್ಯುಲೇಟರಿ ಪ್ರಕ್ರಿಯೆ. ಕ್ಯಾಪ್ಸೂಲ್‌ ಅಂದರೆ ಒಂದು ಸಣ್ಣ ಕ್ಯಾಪ್ಸೂಲ್‌ ಆಕಾರದಲ್ಲಿ ಇರುವ ಒಂದು ಸಾಧನ. ಇದನ್ನು ರೋಗಿಗಳು ಒಂದು ಗುಟುಕು ನೀರಿನ ಜತೆಗೆ ನುಂಗಬೇಕಾಗುವುದು. ಈ ಕ್ಯಾಪ್ಸೂಲ್‌ ಪ್ರತಿ ಸೆಕೆಂಡಿಗೆ ದೇಹದ ಒಳಗಿನ ಭಾಗಗಳ 4 ರಿಂದ 5 ಬಿಂಬಗಳನ್ನು ತೆಗೆಯುತ್ತದೆ.

ಕ್ಯಾಪ್ಸೂಲ್‌ನ ರಚನೆ ಹೇಗಿರುತ್ತದೆ?

ಬದಲಾಯಿಸಿ

ಅದು ಒಂದು ಕ್ಯಾಪ್ಸೂಲ್‌ ಮಾತ್ರೆಯಂತಿದ್ದು , ಅದರ ಸಂರಚನೆ ಯನ್ನು ಚಿತ್ರದಲ್ಲಿ ತೋರಿಸಲಾಗಿದೆ.

ಕ್ಯಾಪ್ಸೂಲ್‌ ಎಂಡೋಸ್ಕೊಪಿಯ ಉಗಮ ಹೇಗೆ ಆಯಿತು?

ಬದಲಾಯಿಸಿ

ಇದನ್ನು ಗೆವ್ರಿಲಿಡಾನ್‌ ಎಂಬ ಇಲೆಕ್ಟ್ರೋ ಆಪ್ಟಿಕಲ್‌ ಎಂಜಿನಿಯರ್‌ ಮೊತ್ತ ಮೊದಲನೆಯ ಬಾರಿಗೆ ಅಭಿವೃದ್ಧಿ ಪಡಿಸಿದರು. ಇವರಿಗೆ ಅವರ ನೆರೆಯವರಾದ ಜಠರ - ಕರುಳಿನ ತಜ್ಞ ವೈದ್ಯರೊಬ್ಬರು ಸಹಾಯ ಮಾಡಿದ್ದರು. 1998ರಲ್ಲಿ ವಿಯೆನ್ನಾದಲ್ಲಿ ಜಠರ ತಜ್ಞರ ಜಾಗತಿಕ ಸಮ್ಮೇಳನದಲ್ಲಿ ಮೊದಲ ಬಾರಿಗೆ ಮೊದಲ ಕ್ಯಾಪ್ಸೂಲ್‌ ಅನ್ನು ಪ್ರದರ್ಶಿಸಲಾಯಿತು.

ವಿರೋಧಾಭಾಸಗಳು

ಬದಲಾಯಿಸಿ

ಈ ಕೆಳಗಿನ ತೊಂದರೆಗಳಿರುವವರಲ್ಲಿ ಕ್ಯಾಪ್ಸೂಲ್‌ ಎಂಡೊಸ್ಕೋಪಿ ತಪಾಸಣೆ ಮಾಡುವುದು ಅಪೇಕ್ಷಿತವಲ್ಲ.

1. ಕರುಳಿನಲ್ಲಿ ಅಡಚಣೆ ಆಗಿರುವ ಅಥವಾ ಸಂರಚನೆಯ ಅಡಚಣೆಯ ಸಂದೇಹ ಇರುವಾಗ

2. ನುಂಗುವಿಕೆಯ ಅಸಹಜತೆ ತೊಂದರೆ ಇರುವವರಲ್ಲಿ

3 .ಗರ್ಭಧಾರಣೆ ಆಗಿರುವವರಲ್ಲಿ

4 ಪೇಸ್‌ ಮೇಕರ್‌ ಅಳವಡಿಸಲಾಗಿರುವವರಲ್ಲಿ

ರೋಗಿ ತಯಾರಿ

ಬದಲಾಯಿಸಿ

1. ಕ್ಯಾಪ್ಸೂಲ್‌ ಅನ್ನು ತೆಗೆದುಕೊಳ್ಳುವ 12 ಗಂಟೆಗಳ ಮೊದಲಿನಿಂದ ರೋಗಿಗಳು ಯಾವುದೇ ಆಹಾರ ತೆಗೆದುಕೊಳ್ಳದೆ ಉಪವಾಸವಿರುವುದು ಆವಶ್ಯಕ.

2. ತಪಾಸಣೆಗೆ ಮೊದಲು, ರೋಗಿಗಳು ಸಿಮಿಥಿಕಾನ್‌ ದ್ರಾವಣವನ್ನು ಕುಡಿಯಬೇಕು

3. ಮೂರನೆಯದಾಗಿ, ರೋಗಿಯ ಸೊಂಟದ ಸುತ್ತಲೂ ಒಂದು ವಿಶೇಷ ಬೆಲ್ಟ್ ಅನ್ನು ಸುತ್ತಲಾಗುವುದು. ಈ ಬೆಲ್ಟ್ ನಲ್ಲಿ ಒಂದು ಸೆನ್ಸರ್‌ ಇರುತ್ತದೆ.

4. ಆ ಬಳಿಕ ಅವರು ಕ್ಯಾಪ್ಸೂಲ್‌ ಅನ್ನು ನುಂಗುತ್ತಾರೆ. ಅವರು ಅದನ್ನು ನುಂಗಿದ ಬಳಿಕ 4 ಗಂಟೆಗಳವರೆಗೆ, ಅವರು ತಮ್ಮ ಬಾಯಿಯ ಮೂಲಕ ಏನನ್ನೂ ಸೇವಿಸುವಂತಿಲ್ಲ.

ಕಾಯಿಲೆಯ ಸೂಚಕಗಳು

ಬದಲಾಯಿಸಿ

ಈ ಕೆಳಗಿನ ತೊಂದರೆಗಳಿರು ವವರಲ್ಲಿ, ಕ್ಯಾಪ್ಸೂಲ್‌ ಎಂಡೊಸ್ಕೋಪಿ ತಪಾಸಣೆ ರೋಗ ಪತ್ತೆಗೆ ಬಹಳ ಸಹಾಯಕವಾಗುತ್ತದೆ.

1)ಅಸ್ಪಷ್ಟ ಜಠರ-ಕರುಳಿನ ರಕ್ತ ಸ್ರಾವ

2)ಕೊಯಾಲಿಕ್‌ ಕಾಯಿಲೆ

3)ಅಕಾರಣ ಕಬ್ಬಿಣದ ಕೊರತೆಯ ರಕ್ತಹೀನತೆ

4)ದೊಡ್ಡ ಕರುಳಿನ ಅಸ್ವಸ್ಥತೆಯ ಸ್ಥಿತಿ - ಫೆಮಿಲಿಯರ್‌ ಪಾಲಿಪೊಸಿಸ್‌