ಕ್ಯಾಥರೀನ್ ಆನ್ ಬಿಗೆಲೊ
೮೨ ವರ್ಷಗಳ 'ಹಾಲಿವುಡ್ ಚಲನಚಿತ್ರದ ಆಸ್ಕರ್ ಪ್ರಶಸ್ತಿ ಮಾಲೆ' ಯಲ್ಲಿ, ಒಬ್ಬ ಮಹಿಳಾ ನಿರ್ದೇಶಕಿಗೆ, ಪ್ರತಿಷ್ಠಿತ ಆಸ್ಕರ್ ಸನ್ಮಾನ ದೊರೆತಿರುವುದು ಇದೇ ಮೊದಲು. ನೂರನೆಯ ಅಂತಾರಾಷ್ಟ್ರೀಯ ಮಹಿಳಾದಿನದ ಆಚರಣೆಯ ಸಂದರ್ಭದಲ್ಲಿ, ಈ ಐತಿಹಾಸಿಕ ಕ್ಷಣವನ್ನು ನಿರ್ಮಿಸಿದ ೫೮ ವರ್ಷ ಹರೆಯದ ಖ್ಯಾಥರೀನ್ ಬಿಗೆಲೊ, ಈ ವರ್ಷದ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ತಮ್ಮ ಚಿತ್ರ ’ದ ಹರ್ಟ್ ಲಾಕರ್,’ ಗಾಗಿ ಆಸ್ಕರ್ ಪ್ರಶಸ್ತಿಪಡೆದು ಒಂದು ದಾಖಲೆ ನಿರ್ಮಿಸಿದರು.
'ದ ಹರ್ಟ್ ಲಾಕರ್ ಚಿತ್ರಕಥೆಯ ಸಾರ'
ಬದಲಾಯಿಸಿಅಮೆರಿಕ ಇರಾಕ್ ದೇಶದಲ್ಲಿ ನಿಯೋಜಿಸಿದ್ದ ಬಾಂಬ್ ನಿಷ್ಕ್ರಿಯ ದಳದ ಕುರಿತಾದ ಚಲನಚಿತ್ರ. ವಿಭಿನ್ನವಾದ ಸುಲಭವಲ್ಲದ ಕಥಾವಸ್ತುವನ್ನು ಆರಿಸಿಕೊಂಡು ಅದನ್ನು ಸಮರ್ಥವಾಗಿ ತೆರೆಯೆಮೇಲೆ ತರುವ ಸಾಹಸ ಒಬ್ಬ ಮಹಿಳೆಗೆ ಸವಾಲಾಗಿತ್ತು. ೭ ವರ್ಷಗಳ ಸತತ ಯುದ್ಧದಿಂದ ಝರ್ಝರಿತವಾಗಿದ್ದ ಇರಾಕ್ ದೇಶದ ಶೋಚನೀಯ ಪರಿಸ್ಥಿತಿಯ ದರ್ಶನವನ್ನು ಸಮರ್ಥವಾಗಿ ಮತ್ತು ಅರ್ಥಪೂರ್ಣವಾಗಿ ಚಿತ್ರ ರಸಿಕರಿಗೆ ತೋರಿಸುವುದರ ಮೂಲಕ ಹೃದಯಗಳನ್ನು ಗಿದ್ದಿದ್ದಾರೆ. ಅವರ ವೃತ್ತಿಜೀವನದಲ್ಲಾದ ಕೆಲವು ವಿಪರ್ಯಾಸಗಳನ್ನು ದಾಖಲಿಸುವುದು ಹೀಗಿವೆ. ೨೦೦೭ ರಲ್ಲಿ ತಯಾರಾದ ಈ ಚಲನಚಿತ್ರದ ಬಿಡುಗಡೆಗೆ ಆರಂಭದಲ್ಲಿ ವಿತರಕರು ಸಿಗಲಿಲ್ಲ. ೨೦೦೯ ರ ಜೂನ್ ತಿಂಗಳಲ್ಲಿ ಹೇಗೋ ತೆರೆಕಂಡ'ದ ಹರ್ಟ್ ಲಾಕರ್,’ ಗಲ್ಲಾ ಪೆಟ್ಟಿಗೆಯಲ್ಲಿ ಹೇಳುವಂತಹ ಜನಪ್ರಿಯತೆಯನ್ನು ಹಾಸಿಲ್ ಮಾಡಿರಲಿಲ್ಲ. ಕೆಲವೊಂದು ವರ್ಗದ ಪ್ರೇಕ್ಷಕರು ಅದನ್ನು ಮೆಚ್ಚಿಕೊಂಡಿದ್ದು, ಕೆಲವು ಹೊಗಳಿಕೆಯ ಮಾತುಗಳನ್ನಾಡಿದ್ದರು. ಆದರೆ ಒಂದು ಘಟನೆ ಅವರ ಯಶಸ್ಸಿಗೆ ದಾರಿಮಾಡಿಕೊಟ್ಟಿತು. ಆನ್ ಬಿಗೆಲೊರ ಮಾಜಿ ಪತಿ, ಜೇಮ್ಸ್ ಕ್ಯಾಮರೂನ್,ರ ಅವತಾರ್ ಎಂಬ ಚಿತ್ರ ಆಸ್ಕರ್ ನ ಕೊನೆಯ ಘಟ್ಟದ ಸ್ಪರ್ಧೆಯಲ್ಲಿ ಜೊತೆಗೆ ಪಾಲ್ಗೊಂಡಿತ್ತು. ಹೀಗೆ ಏರ್ಪಟ್ಟ ತೀವ್ರವಾದ ಸ್ಪರ್ಧೆಯಲ್ಲಿ,ಅವತಾರ್, ಅತಿ ಹೆಚ್ಚು ಹಣವೆಚ್ಚಮಾಡಿ ತಾಂತ್ರಿಕ ವಲಯದಲ್ಲಿ ಅದ್ಭುತ ಭ್ರಮೆ ಮತ್ತು ಕಲ್ಪನಾಲೋಕದಲ್ಲಿ ವಿಹರಿಸುತ್ತಾ ಪ್ರೇಕ್ಷಕರನ್ನೂ ಕರೆದೊಯ್ಯುವ ಒಂದು ಮೈಲಿಗಲ್ಲನ್ನು ಸಾಧಿಸಿದ ಚಿತ್ರ, ಆದರೆ, ಕೊನೆಗೆ ಜಯಲಭಿಸಿದ್ದು ಕ್ಯಾಥರೀನ್ ರವರ ಚಿತ್ರದ ನೈಜತೆಗೆ, ವಾಸ್ತವಶೈಲಿಯ ಪ್ರದರ್ಶನಕ್ಕೆ.
ಕ್ಯಾಥರೀನ್ ಬೆಳೆದುಬಂದ ಪಥ
ಬದಲಾಯಿಸಿಕ್ಯಾಥರೀನ್ ರ ತಂದೆ ಬಣ್ಣದ ಕಾರ್ಖಾನೆಯ ಮ್ಯಾನೇಜರ್, ತಾಯಿ ಗ್ರಂಥಪಾಲಕಿ. ಇವರ ಏಕೈಕ ಪ್ರೀತಿಯಪುತ್ರಿಯಾಗಿ ಕ್ಯಾಥರಿನ್ ೧೯೫೧ ರ ನವೆಂಬರ್, ೨೭ ರಂದು ಅಮೆರಿಕದ ಕ್ಯಾಲಿಫೋರ್ನಿಯ ಪ್ರಾಂತ್ಯದಲ್ಲಿ ಜನಿಸಿದರು. ಬಾಲ್ಯದಿಂದಲೂ ಕ್ಯಾಥರಿನ್ ಚಿತ್ರಕಲಾಸಕ್ತೆಯಾಗಿದ್ದರು. ತಮ್ಮ ೨೦ ರ ಹರೆಯದಲ್ಲೇ ನ್ಯೂಯಾರ್ಕ್ ನ ’ವಿಟ್ನೀ ಮ್ಯೂಸಿಯೆಮ್ ಆಫ್ ಅಮೆರಿಕನ್ ಆರ್ಟ್ಸ್ ನ ಸ್ಕಾಲರ್ಶಿಪ್ ಗಳಿಸಿದ ಹೆಗ್ಗಳಿಕೆ ಅವರದು. ಮುಂದೆ ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಚಲನಚಿತ್ರೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು, ಸ್ವಲ್ಪ ಕಾಲ ಕ್ಯಾಲಿಫೋರ್ನಿಯ ಇನ್ಸ್ ಟಿ ಟ್ಯೂಟ್ ಆಫ್ ಆರ್ಟ್ಸ್ ನಲ್ಲಿ ಅಧ್ಯಾಪಕಿಯಾಗಿ ದುಡಿದರು.ಕ್ಯಾಥರೀನ್ ರವರ ಚೊಚ್ಚಲ ಚಿತ್ರ, ೧೯೭೮ ರಲ್ಲಿ ನಿಮಿಸಿದ ’ ದ ಸೆಟ್ ಅಪ್’ ಕೇವಲ ೨೦ ನಿಮಿಷಗಳ ಕಿರುಚಿತ್ರವಾಗಿತ್ತು. ಅವರ ಮುಂದಿನ ಕೊಡುಗೆ, ೧೯೮೨ ರಲ್ಲಿ ತಯಾರಿಸಿದ, ’ ದ ಲವ್ ಲೆಸ್’ ಸಹನಿರ್ದೇಶಕರಾಗಿ ಕೆಲಸಮಾಡಿದ ಪೂರ್ಣ ಪ್ರಮಾಣದ ಚಿತ್ರ. ಇದರ ಬಳಿಕ ತಾವೇ ಸ್ವಂತ್ರವಾಗಿ ನಿರ್ದೇಶಕ್ಕೆ ಕೈಹಾಕಿದರು.
- ನಿಯರ್ ಡಾರ್ಕ್-೧೯೮೭ ರಲ್ಲಿ(ಭಯಾನಕ ಚಿತ್ರ)
- ಬ್ಲ್ಯೂ ಸ್ಟೀಲ್- ೧೯೯೦ ರಲ್ಲಿ
- ಪಾಯಿಂಟ್ ಬ್ರೇಕ್-೧೯೯೧ ಜನಪ್ರಿಯತೆಯನ್ನು ತಂದುಕೊಟ್ಟವು.
ಪತಿ ನಿರ್ದೇಶಿಸಿದ ಚಿತ್ರ
ಬದಲಾಯಿಸಿ೧೯೯೫ ರಲ್ಲಿ ಸ್ಟ್ರೇಂಜ್ ಡೇಸ್’ ಚಿತ್ರದ ಕಥೆ ಹಾಗೂ ನಿರ್ಮಾಣ ಅವರ ಮಾಜಿ ಪತಿ ಜೇಮ್ಸ್ ಕ್ಯಾಮರೂನ್ ರದ್ಧಾಗಿದ್ದವು.
ಕ್ಯಾಥರೀನ್ ಚಲನಚಿತ್ರಮಾಧ್ಯಮದಲ್ಲಿ ತಮ್ಮದೇ ಛಾಪುತಂದರು
ಬದಲಾಯಿಸಿಅವರ ಆವರೆಗಿನ ಚಿತ್ರಗಳ ಚಲನಾತ್ಮಕೆತೆ ಹಾಗೂ ತಾಂತ್ರಿಕ ಅಬ್ಬರಗಳಿಂದ ದೂರಸರಿದು ದೂರನಿಂತ ' ದ ವೈಟ್ ಆಫ್ ವಾಟರ್' (೨೦೦೦) ಅವರ ವೃತ್ತಿಬದುಕಿನಲ್ಲೊಂದು ಮೈಲಿಗಲ್ಲೆಂದೇ ಪರಿಗಣಿತವಾದ ಚಿತ್ರ. ೨೦೦೨ ರಲ್ಲಿ ಕೆ-೧೯ ಮತ್ತು ದ ವಿಡೋ ಮೇಕರ್, ಆಕ್ಷನ್ ಚಿತ್ರಗಳಾಗಿದ್ದು, ವಿಮರ್ಶಕರ ಮಿಶ್ರಪ್ರತಿಕ್ರಿಯೆಗಳಿಗ ಪಾತ್ರವಾಗಿವೆ. ಗಮನಾರ್ಹ.ಒಂದೆರಡು ಟೆಲಿವಿಶನ್ ದಾರಾವಾಹಿಗಳನ್ನು ಮ್ಯೂಸಿಕ್ ವೀಡಿಯೊ ಗಳನ್ನು ನಿರ್ದೇಶಿಸಿ ತಯಾರಿಸಿದ್ದಾರೆ. ನಟಿಯಾಗಿ ಮತ್ತು ರೂಪದರ್ಶಿ ಯಾಗಿಯೂ ಹೆಸರುಮಾಡಿದ ಅನುಭವಿ. ಮತ್ತೊಂದು ಸಾಧನೆಯೆಂದರೆ, ಆಫ್ರಿಕದ ಉನ್ನತ ಶಿಖರ,ಕಿಲಿಮಂಜಿರೊ ಪರ್ವತ ವನ್ನು ಎರಿದ ಧೀರ ಮಹಿಳೆಯಲ್ಲೊಬ್ಬರು.
ಈಗಾಲೇ ಹೆಸರುಮಾಡಿದ ಮತ್ತು ಅತಿಯಾದ ನಿರೀಕ್ಷೆಗಳಿಗೆ ಗುರಿಯಾಗಿರುವ ಚಿತ್ರಗಳಿಗೆ ಸವಾಲು
ಬದಲಾಯಿಸಿ'ಟೈಟಾನಿಕ್' ಎಂಬ ಅತ್ಯಂತ ಸೊಗಸಾದ ಚಿತ್ರವನ್ನು ನಿರ್ಮಿಸಿ ವಿಶ್ವದಾದ್ಯಂತ ದುಂಧುಭಿ ಬಾರಿಸಿ ಯಶಸ್ವಿಯಾದ ಕ್ಯಾಮರೂನ್ ಈಬಾರಿಯೂ ಅವತಾರ್ ಚಿತ್ರದ ಮೂಲಕ ಒಂದು ಹೊಸ ಇತಿಹಾಸವನ್ನು ಪುನರ್-ನಿರ್ಮಿಸುವರೆಂಬ ವಿಷಯವನ್ನು ಸುಳ್ಳಾಗಿಸಿದ್ದು. ಅವತಾರ್ ಶ್ರೇಷ್ಟ ದೃಷ್ಯ ಪರಿಣಾಮ, ಉತ್ತಮ ಛಾಯಾಗ್ರಹಣ ಮತ್ತು, ಕಲಾನಿರ್ದೇಶ ನ ಗಳಿಂದ, ಕೇವಲ ೩ ಆಸ್ಕರ್ ಪ್ರಶಸ್ತಿಗೆ ಭಾಜನವಾಗಿದೆ.
ಕ್ಯಾಥರೀನ್ ರವರ ಚಿತ್ರ,ಗಳಿಸಿದ ಅರ್ಹತಾಪತ್ರ ಈರೀತಿಯಿದೆ
ಬದಲಾಯಿಸಿ- ಶ್ರೇಷ್ಟ ಚಿತ್ರ,
- ಶ್ರೇಷ್ಟ ಚಿತ್ರಕಥೆ
- ಶ್ರೇಷ್ಟ ಸಂಕಲನ
- ಶ್ರೇಷ್ಟ ಧ್ವನಿ ಸಂಕಲನ
- ಶ್ರೇಷ್ಟ ಧ್ವನಿ ಸಂಯೋಜನೆ ಹೀಗೆ ಒಟ್ಟು ೬ ವಲಯಗಳಲ್ಲಿ ಅತಿಶ್ರೇಷ್ಟಮಟ್ಟದ
- 'ಬ್ರಿಟಿಷ್ ಅಕಾಡೆಮಿ ಫಿಲ್ಮ್ ಅವಾರ್ಡ್', ಅತ್ಯುತ್ತಮ ಚಿತ್ರ ಪ್ರಶಸ್ತಿ
- 'ಗೋಲ್ಡನ್ ಗ್ಲೋಬ್ ಅವಾರ್ಡ್ ಗೆ ನಾಮ ನಿರ್ದೇಶನ'ಗೊಂಡಿದೆ.
Television
ಬದಲಾಯಿಸಿHomicide: Life on the Street (1993-99) TV series Episodes: "Fallen Heroes" Parts 1 & 2, "Lines of Fire" Wild Palms (1993) TV series Episode#4