ಕೌಶಲ

ಕೆಲಸ ಮಾಡಬೇಕಾದ ಸಾಮರ್ಥ್ಯ

ಕೌಶಲ ಎಂದರೆ ಒಂದು ಕಾರ್ಯವನ್ನು ನಿರ್ಧಾರಿತ ಪರಿಣಾಮಗಳಿರುವಂತೆ ಕೈಗೊಳ್ಳುವ ಸಾಮರ್ಥ್ಯ, ಹಲವುವೇಳೆ ಒಂದು ನಿರ್ದಿಷ್ಟ ಪ್ರಮಾಣದ ಸಮಯ, ಶಕ್ತಿ, ಅಥವಾ ಎರಡನ್ನೂ ಹೊಂದಿರುವಂತೆ. ಕೌಶಲಗಳನ್ನು ಹಲವುವೇಳೆ ಕಾರ್ಯಕ್ಷೇತ್ರ-ಸಾಮಾನ್ಯ ಮತ್ತು ಕಾರ್ಯಕ್ಷೇತ್ರ-ನಿರ್ದಿಷ್ಟ ಕೌಶಲಗಳೆಂದು ವಿಭಾಗಿಸಬಹುದು. ಉದಾಹರಣೆಗೆ, ಕೆಲಸದ ಕ್ಷೇತ್ರದಲ್ಲಿ, ಕೆಲವು ಸಾಮಾನ್ಯ ಕೌಶಲಗಳಲ್ಲಿ ಸಮಯ ನಿರ್ವಹಣೆ, ಕೂಡುಗೆಲಸ ಹಾಗೂ ನಾಯಕತ್ವ, ಸ್ವಯಂ ಪ್ರೇರಣೆ ಮತ್ತು ಇತರ ಕೌಶಲಗಳು ಸೇರಿರುತ್ತವೆ. ಕಾರ್ಯಕ್ಷೇತ್ರ ನಿರ್ದಿಷ್ಟ ಕೌಶಲಗಳನ್ನು ಕೇವಲ ಒಂದು ನಿರ್ದಿಷ್ಟ ಕೆಲಸಕ್ಕೆ ಬಳಸಲಾಗುತ್ತದೆ. ತೋರಿಸಲಾಗುತ್ತಿರುವ ಮತ್ತು ಬಳಸಲಾಗುತ್ತಿರುವ ಕೌಶಲದ ಪ್ರಮಾಣವನ್ನು ಮೌಲ್ಯಮಾಪನ ಮಾಡಲು ಕೌಶಲಕ್ಕೆ ಸಾಮಾನ್ಯವಾಗಿ ಕೆಲವು ಪಾರಿಸರಿಕ ಪ್ರಚೋದನೆಗಳು ಮತ್ತು ಪರಿಸ್ಥಿತಿಗಳ ಅಗತ್ಯವಿರುತ್ತದೆ. ಒಂದು ಆಧುನಿಕ ಅರ್ಥವ್ಯವಸ್ಥೆಗೆ ಕೊಡುಗೆ ನೀಡಲು ಜನರಿಗೆ ಕೌಶಲಗಳ ವಿಶಾಲ ವ್ಯಾಪ್ತಿಯು ಬೇಕಾಗುತ್ತದೆ. ಕೌಶಲಗಳ ಮೂರು ವಿಶಾಲ ವರ್ಗಗಳನ್ನು ಸೂಚಿಸಲಾಗಿದೆ, ಅವುಗಳೆಂದರೆ ತಾಂತ್ರಿಕ, ಮಾನವ, ಮತ್ತು ಪರಿಕಲ್ಪನಾತ್ಮಕ.[]

ಉಲ್ಲೇಖಗಳು

ಬದಲಾಯಿಸಿ
  1. Sommerville, Kerry (2007). Hospitality Employee Management and Supervision: Concepts and Practical Applications. Hoboken, NJ: John Wiley & Sons, Inc. p. 328. ISBN 9780471745228.


"https://kn.wikipedia.org/w/index.php?title=ಕೌಶಲ&oldid=890320" ಇಂದ ಪಡೆಯಲ್ಪಟ್ಟಿದೆ