ಕೋಳಿ ತಾಳ್ (ಚಲನಚಿತ್ರ)

ಕೋಳಿ ತಾಳ್( ಇಂಗ್ಲೀಷ್ ನಲ್ಲಿ ' ಚಿಕನ್ ಕರಿ ' ) ಅಭಿಲಾಷ್ ಶೆಟ್ಟಿ ಬರೆದು ನಿರ್ದೇಶಿಸಿದ ಭಾರತೀಯ ಕನ್ನಡ ವಿಡಂಬನಾತ್ಮಕ ಚಲನಚಿತ್ರವಾಗಿದೆ. [] [] ಇ ದು ತನ್ನ ಮೊಮ್ಮಗ ಪಟ್ಟಣಕ್ಕೆ ಹೊರಡುವ ಮೊದಲು ಕಾಣೆಯಾದ ಹುಂಜವನ್ನು ಹುಡುಕಿ ಕೋಳಿ ತಾಳ್ ಮಾಡಿ ಬಡಿಸಲು ಅಜ್ಜ ಮಾಡುವ ಸಾಹಸದ ಕುರಿತಾಗಿದೆ. [] []

ಕೋಳಿ ತಾಳ್
ನಿರ್ದೇಶನಅಭಿಲಾಷ್ ಶೆಟ್ಟಿ
ನಿರ್ಮಾಪಕSachin Pattanshetty
ಲೇಖಕಅಭಿಲಾಷ್ ಶೆಟ್ಟಿ
ಪಾತ್ರವರ್ಗRadha Ramachandra, Prabhakar Kunder, Ganesh Mogaveera, Sharath Devadiga, Guruprasad Nairy
ಛಾಯಾಗ್ರಹಣSwaroop Yashwanth
ಸಂಕಲನಅಭಿಲಾಷ್ ಶೆಟ್ಟಿ
ಸ್ಟುಡಿಯೋGubbi Cinema
ಬಿಡುಗಡೆಯಾಗಿದ್ದು೪ ಜೂನ್ ೨೦೨೧
ಅವಧಿ೯೨ ನಿಮಿಷಗಳು
ದೇಶIndia
ಭಾಷೆKannada

ಈ ಚಲನಚಿತ್ರವು 21 ನೇ ನ್ಯೂಯಾರ್ಕ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಪ್ರಥಮ ಪ್ರದರ್ಶನಗೊಂಡಿತು. [] [] ನಂತರ ಇದನ್ನು ಸ್ಟಟ್‌ಗಾರ್ಟ್‌ನ 18 ನೇ ಭಾರತೀಯ ಚಲನಚಿತ್ರೋತ್ಸವ [] ಮತ್ತು ಮೆಲ್ಬೋರ್ನ್‌ನ 12 ನೇ ಭಾರತೀಯ ಚಲನಚಿತ್ರೋತ್ಸವ ಸೇರಿದಂತೆ ವಿವಿಧ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶಿಸಲಾಯಿತು. ಮತ್ತು ಇದು ಜಿಯೊ MAMI- ಮುಂಬೈ ಅಕಾಡೆಮಿ ಆಫ್ ದಿ ಮೂವಿಂಗ್ ಇಮೇಜ್ 22 ನೇ ಮುಂಬೈ ಚಲನಚಿತ್ರೋತ್ಸವದಲ್ಲಿ ಭಾರತೀಯ ಪ್ರಥಮ ಪ್ರದರ್ಶನವನ್ನು ಕಂಡಿತು. [] []

ಸಾರಾಂಶ

ಬದಲಾಯಿಸಿ

ಮೊಮ್ಮಗನ ಭೇಟಿಯಿಂದ ಉತ್ಸುಕರಾದ ವೃದ್ಧ ದಂಪತಿಗಳು ರಾತ್ರಿಯ ಊಟಕ್ಕೆ ಚಿಕನ್ ಕರಿ ಬೇಯಿಸಲು ಯೋಜಿಸಿದ್ದಾರೆ. ಆದರೆ, ಕೋಳಿ ನಾಪತ್ತೆಯಾದಾಗ ಪರಿಸ್ಥಿತಿ ಹದಗೆಡುತ್ತದೆ. ಆದ್ದರಿಂದ, ಅಜ್ಜ ತನ್ನ ಮೊಮ್ಮಗ ಪಟ್ಟಣಕ್ಕೆ ಹೊರಡುವ ಮೊದಲು ಹುಂಜವನ್ನು ಹುಡುಕಲು ಮತ್ತು ಚಿಕನ್ ಕರಿ ಮಾಡಿ ಬಡಿಸಲು ಸಾಹಸ ಮಾಡುತ್ತಾನೆ. [೧೦] [೧೧] [೧೨]

ಪಾತ್ರವರ್ಗ

ಬದಲಾಯಿಸಿ
  • ವನಜಾ ಪಾತ್ರದಲ್ಲಿ ರಾಧಾ ರಾಮಚಂದ್ರ
  • ಮಹಾಬಲ ಶೆಟ್ಟಿಯಾಗಿ ಪ್ರಭಾಕರ ಕುಂದರ್
  • ಮಂಜನಾಗಿ ಗಣೇಶ ಮೊಗವೀರ
  • ಸತೀಶನಾಗಿ ಶರತ್ ದೇವಾಡಿಗ
  • ಹಾಲ ಪಾತ್ರದಲ್ಲಿ ಗುರುಪ್ರಸಾದ್ ನಾಯರಿ
  • ಸುಮಂತ್ ಪಾತ್ರದಲ್ಲಿ ಅಭಿಲಾಷ್ ಶೆಟ್ಟಿ

ವಿಮರ್ಶೆಗಳು

ಬದಲಾಯಿಸಿ

ಸಿನೆಸ್ತಾನ್ ಚಿತ್ರಕ್ಕೆ 4 ರಲ್ಲಿ 3 ನಕ್ಷತ್ರಗಳನ್ನು ನೀಡಿ "ಚಲನಚಿತ್ರದ ಚೌಕಟ್ಟು ಮತ್ತು ವಿಷಯಗಳು ತುಂಬಾ ನೈಜವಾಗಿವೆ, ಆದ್ದರಿಂದ ನೀವು ಅವುಗಳನ್ನು ಅನುಭವ ಮಾಡಬಹುದು" ಎಂದು ಹೇಳಿತು. [೧೩] ಟೈಮ್ಸ್ ಆಫ್ ಇಂಡಿಯಾವು 5 ರಲ್ಲಿ 3.5 ನಕ್ಷತ್ರಗಳನ್ನು ನೀಡಿ ಹೇಳಿತು- "ಒಂದು ಹೃದಯಸ್ಪರ್ಶಿ ಕಥೆಯು ಲಘು ಹೃದಯದ ಕ್ಷಣಗಳಿಂದ ತುಂಬಿದೆ" [೧೪]. ಡೆಕ್ಕನ್ ಹೆರಾಲ್ಡ್ 5 ರಲ್ಲಿ 3.5 ಎಂದು ರೇಟ್ ಮಾಡಿದೆ. [೧೫] ಡಲ್ಲಾಸ್ ಮೂವೀ ಸ್ಕ್ರೀನಿಂಗ್ಸ್ ಚಿತ್ರಕ್ಕೆ "A-" ಗ್ರೇಡ್ ನೀಡಿತು ಮತ್ತು "ಚಿತ್ರವು ಅವರ ಕುಟುಂಬ ಜೀವನ ಮತ್ತು ಅವರ ಒಗ್ಗಿಕೊಂಡಿರುವ ಪೀಳಿಗೆಯ ಆಧಾರದ ಮೇಲೆ ಆಸಕ್ತಿದಾಯಕ ಪ್ರಾದೇಶಿಕ ಪದ್ಧತಿಗಳಿಂದ ಸಂಪೂರ್ಣವಾಗಿ ತುಂಬಿದೆ" ಎಂದು ಹೇಳಿದರು. [೧೬]

ಉಲ್ಲೇಖಗಳು

ಬದಲಾಯಿಸಿ
  1. ಸುದ್ದಿಜಾಲ, ವಿಜಯವಾಣಿ. "ನ್ಯೂಯಾರ್ಕ್ ಸಿನಿಮೋತ್ಸವಕ್ಕೆ ಕೋಳಿ ತಾಳ್; ಕುಂದಾಪ್ರ ಭಾಷಾ ಸೊಗಡಿನ ಚಿತ್ರ –".
  2. "Exclusive! Theatres, OTT platforms show no interest in festival films, says Koli Taal director Abhilash Shetty". 2 March 2022.
  3. "Film Review: The Chicken Curry (Koli Taal, 2021) by Abhilash Shetty". 4 September 2021.
  4. Zore, Suyog. "Every character in Koli Taal is based on people I have encountered, says director Abhilash Shetty". Cinestaan. Archived from the original on 2021-07-21. Retrieved 2022-07-27.
  5. "Kannada feature film 'Koli Taal' to be screened at the New York Indian Film Festival". www.udayavani.com.
  6. "ನ್ಯೂಯಾರ್ಕ್ ಸಿನಿಮೋತ್ಸವಕ್ಕೆ ಕುಂದಾಪ್ರ ಕನ್ನಡದ 'ಕೋಳಿ ತಾಳ್' ಚಿತ್ರ ಆಯ್ಕೆ".
  7. "Koli Taal: Kannada Indie Film Set to Screen at the 18th Indian Film Festival Stuttgart Is a Replication of My Childhood Memories, Says Director Abhilash Shetty". 24 June 2021.
  8. "Kannada film Koli Taal, which premiered at MAMI, explores universal love for food". 7 March 2022.
  9. "Abhilash Shetty's Koli Taal part of the Spotlight section at the MAMI Mumbai Film Festival". 23 February 2022.
  10. "Koli Taal movie review: Simple tale, set in a quaint village in Karnataka, which warms the cockles of the heart". ottplay.com.
  11. "Koli Taal movie review: Abhilash Shetty's debut explores a simplistic tale about village life-Entertainment News, Firstpost". Firstpost. 26 May 2022.
  12. "Independent Kannada films need a push: Abhilash Shetty". Deccan Herald. 20 May 2022.
  13. "Koli Taal review: Uncomplicated and moving tale about greed and trust". Archived from the original on 2021-06-10. Retrieved 2022-07-27.
  14. "Koli Taal Movie Review: A heartwarming tale filled with light-hearted moments".
  15. "'Koli Taal' review: Rooted and refreshing". Deccan Herald. 27 May 2022.
  16. "Koli Taal (The Chicken Curry)". 19 February 2022.


ಬಾಹ್ಯ ಕೊಂಡಿಗಳು

ಬದಲಾಯಿಸಿ