ಕಾರ್ಪ್ ಬಾಲ್
ಕೋರ್ಫ್ಬಾಲ್ ಯೂರೋಪ್ನಲ್ಲಿ ಒಂದು ಶತಮಾನಕ್ಕೂ ಹಿಂದೆ ಆರಂಭವಾದ ಜನಪ್ರಿಯ ಕ್ರೀಡೆ. ಪುರುಷ ಮತ್ತು ಮಹಿಳಾ ಕ್ರೀಡಾಳುಗಳು ಒಂದೇ ತಂಡದಲ್ಲಿ ಜೊತೆಯಾಗಿ ಆಡುವ ಕೆಲವೇ ಆಟಗಳಲ್ಲಿ ಕೋರ್ಫ ಬಾಲ್ ಒಂದಾಗಿದೆ.ಈ ಆಟದಲ್ಲಿ ಆಟದ ಚೆಂಡನ್ನು ಪ್ರತಿಸ್ಪರ್ಧಿಯ ವಲಯದ ಬಾಸ್ಕೆಟ್ ನಲ್ಲಿ ಎಸೆದು ಅಂಕಗಳನ್ನು ಗಳಿಸಲಾಗುತ್ತದೆ. ಈ ಆಟ ಸಾಮಾನ್ಯವಾಗಿ ನೆಟ್ ಬಾಲ್ ಮತ್ತು ಬಾಸ್ಕೆಟ್ ಬಾಲ್ ನ್ನು ಹೋಲುತ್ತದೆ.

ಚರಿತ್ರೆ ಬದಲಾಯಿಸಿ


ಕೋರ್ಫ್ ಬಾಲ್ ಆಟವನ್ನು ೧೯೦೨ ರಲ್ಲಿ ನೆದರ್ ಲ್ಯಾಂಡ್ ದೇಶದಲ್ಲಿ ನಿಕೋ ಬ್ರೋಖ್ಯುಸೆನ್ ಎಂಬ ಕ್ರೀಡಾಪಟು ಆರಂಭಿಸಿದ. ಕೋರ್ಫ್ ಎಂದರೆ ಡಚ್ ಭಾಷೆಯಲ್ಲಿ ಬಾಸ್ಕೆಟ್ ಎಂದು ಅರ್ಥ. ಈ ಆಟವನ್ನು ೧೯೨೦ ಮತ್ತು ೧೯೨೮ರ ಒಲಂಪಿಕ್ಸ್ ಕ್ರೀಡಾಕೂಟಗಳಲ್ಲಿ ಪ್ರದರ್ಶಿಸಲಾಗಿತ್ತು. ಇಂದು ಈ ಆಟ ನೆದರ್ಲ್ಯಾಂಡ್,ಬೆಲ್ಜಿಯಂ ಮತ್ತು ತೈವಾನ್ ದೇಶಗಳ ಸಹಿತ ೫೪ ದೇಶಗಳಲ್ಲಿ ಪ್ರಸಿದ್ಧವಾಗಿದೆ. ಭಾರತದಲ್ಲಿ ಕೂಡ ಇದೊಂದು ಜನಪ್ರಿಯ ಕ್ರೀಡೆಯಾಗಿದೆ.

ಆಟದ ಮೈದಾನ ಬದಲಾಯಿಸಿ


ಈ ಆಟವನ್ನು ಒಳಾಂಗಣ ಅಥವಾ ಹೊರಾಂಗಣ ಕ್ರೀಡೆಯಾಗಿ ಆಡಬಹುದು. ಇದರ ಆಟದ ಮೈದಾನಕ್ಕೆ ಕೋರ್ಫ್ ಬಾಲ್ ಕೋರ್ಟ್ ಎಂದು ಹೆಸರು. ಇದು ೨೦ ಮೀಟರ್ ಅಗಲ, ೪೦ ಮೀಟರ್ ಉದ್ದವಾಗಿರುತ್ತದೆ.ಆಟದ ಮೈದಾನವನ್ನು ಎರಡು ಝೋನ್ ಗಳಾಗಿ ವಿಭಾಗಿಸಲಾಗುತ್ತದೆ.ಎರಡು ಝೋನ್ಗಳ ನಡುವೆ,ಮಧ್ಯರೇಖೆಯಿಂದ ೧೨.೬ ಮೀಟರ್ ದೂರದಲ್ಲಿ ತಲಾ ಒಂದೂಂದು ಸ್ತಂಭ ಇರುತ್ತದೆ.ಇದನ್ನು ಹಿಡಿಯಲು ಸುಲಭವಾಗಿದ್ದು ಇದು ಹೆಚ್ಚು ಎತ್ತರಕ್ಕೆ ಪುಟಿಯುತ್ತದೆ. ಈ ಆಟ ಒಟ್ಟು ೬೦ ನಿಮಿಷಗಳ ಕಾಲ ನಡೆಯುತ್ತದೆ.೩೦ ನಿಮಿಷದ ಆಟದ ಬಳಿಕ ಹತ್ತು ನಿಮಿಷಗಳ ಮಧ್ಯಮಾವಧಿ ಇರುತ್ತದೆ.

ಆಟದ ನಿಯಮಗಳು ಬದಲಾಯಿಸಿ


ಪ್ರತಿಯೊಂದು ಕೋರ್ಫ್ ಬಾಲ್ ತಂಡದಲ್ಲಿ ತಲಾ ೮ ಆಟಗಾರರು ಇರುತ್ತಾರೆ.ಇವರಲ್ಲಿ ನಾಲ್ವರು ಪುರುಷರು ಮತ್ತು ನಾಲ್ವರು ಮಹಿಳೆಯರಾಗಿರುತ್ತಾರೆ.ಆಟಗಾರರು ತಮ್ಮ ವಿರೋಧಿ ತಂಡದ ಝೋನ್ ನಲ್ಲಿರುವ ಬಾಸ್ಕೆತ್ ನ ಒಳಗೆ ಬೀಳುವಂತೆ ಆಟದ ಚೆಂಡನ್ನು ಎಸೆದಾಗ ಅವರ ತಂಡಕ್ಕೆ ಅಂಕಗಳು ಸಿಗುತ್ತದೆ.ಆರಂಭದಲ್ಲಿ ಟಾಸ್ ಗೆದ್ದ ತಂಡ ಆಟದ ಮೈದಾನದಲ್ಲಿ ತನಗೆ ಬೇಕಾದ ಝೋನ್ ಆರಿಸುತ್ತದೆ.ಪ್ರತಿಯೊಂದು ತಂಡದ ಸ್ವಂತ ಝೋನ್ ಅವರ ರಕ್ಷಣಾ ಝೋನ್ ಆಗಿದ್ದರೆ,ಪ್ರತಿಸ್ಪರ್ಧಿಗಳ ಝೋನ್ ಅವರ ಆಕ್ರಮಣದ ಝೋನ್ ಆಗುತ್ತದೆ.ಪ್ರತಿಯೊಂದು ತಂಡದ ನಾಲ್ವರು ಆಟಗಾರರು ರಕ್ಷಣಾ ಝೋನ್ನಲ್ಲಿದ್ದು,ಉಳಿದ ನಾಲ್ವರು ಆಕ್ರಮಣದ ಝೋನ್ ನಲ್ಲಿ ಇರುತ್ತಾರೆ.ಎರಡು ಗೋಲ್ಗಳದ ಬಳಿಕ ಇವರು ತಮ್ಮ ಝೋನ್ ಬದಲಾಯಿಸಿಕೊಳ್ಳುತ್ತಾರೆ.ಆಗ ಆಕ್ರಮಣಕಾರಿ ಆಟಗಾರರು ರಕ್ಷಣೆಯ ಆಟಗಾರರು ಆಗುತ್ತಾರೆ.ರಕ್ಷಣೆಯ ಆಟಗಾರರು ಆಕ್ರಮಣದ ಆಟಗಾರರು ಆಗುತ್ತಾರೆ.ಈ ಝೋನ್ ಬದಲಾವಣೆಯ ಹೊರತು ಬೇರೆ ಸಮಯದಲ್ಲಿ ಆಟಗಾರರು ತಮ್ಮ ಝೋನ್ ಬದಲಾಯಿಸುವಂತಿಲ್ಲ. ಮಧ್ಯಾವಧಿಯಲ್ಲಿ ತಂಡಗಳು ಝೋನ್ ಬದಲಾಯಿಸಿಕೊಳ್ಳುತ್ತವೆ.
ಪುರುಷರು ಮತ್ತು ಮಹಿಳೆಯರೂ ಒಟ್ಟಿಗೆ ಆಡುತ್ತಿದ್ದರೂ,ಚೆಂಡಿನ ಹತೋಟಿಗಾಗಿ ಸೆಣಸುವಾಗ ಪುರುಷರು ಪುರುಷರೊಡನೆ ಮಾತ್ರ ಸೆಣಸಬಹುದು. ಮಹಿಳಾ ಕ್ರೀಡಾಳು ಮಹಿಳೆಯರೊಡನೆ ಮಾತ್ರ ಸೆಣಸಬಹುದು. ಈ ಆಟದಲ್ಲಿ ಕ್ರೀಡಾಳು ಚೆಂಡನ್ನು ನೆಲಕ್ಕೆ ತಟ್ಟುತ್ತ ಮುಂದೆ ಸಾಗಬಾರದು.ಅವನು ನಿಂತಲ್ಲೆ ಅಥವಾ ಒಂದು ಕಾಲುನ್ನು ಮಾತ್ರ ಮುಂದೆ ಇರಿಸಿ ತನ್ನ ಸಂಗಾತಿಗೆ ಎಸೆಯಬೇಕು. ಒಬ್ಬರಿಂದ ಒಬ್ಬರಿಗೆ ಚೆಂಡನ್ನು ಎಸೆಯವ ಮೂಲಕ ಮಾತ್ರ ಅದನ್ನು ಮುಂದೆ ಸಾಗಿಸಲು ಸಾಧ್ಯ. ಹೀಗಾಗಿ ಆಟದಲ್ಲಿ ಕ್ರೀಡಾಳುಗಳ ಮಧ್ಯೆ ಹೊಂದಾಣಿಕೆ ಅಗತ್ಯ.