ಸಸ್ಯ ಪರಿಚಯ ಬದಲಾಯಿಸಿ

ಇದು ಒಂದು ಜಾತಿಯ ಮರ.ಇದು ಅಪೊಸೈನೇಸಿ ಕುಟುಂಬಕ್ಕೆ ಸೇರಿದೆ[೧].ಇದು ಭಾರತದ ಎಲ್ಲ ಅರಣ್ಯಗಳಲ್ಲಿ ಬೆಳೆಯುತ್ತದೆ.ಇದು ಸಾಮಾನ್ಯವಾಗಿ ಮೂರು ಮೀಟರ್‍ಗಳಷ್ಟು ಎತ್ತರಕ್ಕೆ ಬೆಳೆಯಬಲ್ಲದು.ಕಾಂಡವು ತಿಳಿ ಬೂದು ಬಣ್ಣದ ತೊಗಟೆಯಿಂದ ಸೀಳಿರುತ್ತದೆ.ಅಭಿಮುಖ ಜೋಡಣೆಯ ದೊಡ್ಡ ಎಲೆಗಳನ್ನು ಹೊಂದಿದೆ.ಎಲೆಗಳು ಸಾಮನ್ಯವಾಗಿ ೧೦-೨೦ಸೆ.ಮೀ.ಉದ್ದವಾಗಿರುತ್ತದೆ.೫-೧೧.೫ಸೆ.ಮೀ.ನಷ್ಟು ಅಗಲವಾಗಿರುತ್ತದೆ.ಜಾಲಬಂಧ ನಾಳ ವಿನ್ಯಾಸವನ್ನು ಹೊಂದಿದೆ.ಇದರ ತುದಿ ಚೂಪಾಗಿದೆ.ಬಹುಬದಿಗೆ ಮಧ್ಯಾರಂಭಿ ಪುಷ್ಪಮಂಜರಿಯು ಕವಲೊಡೆದಿದೆ.ಇದರ ಹೂವುಗಳು ಬಿಳಿ ಬಣ್ಣದಾಗಿರುತ್ತದೆ.ಬಿಳಿ ಹೂವುಗಳಲ್ಲಿ ಬಾಣದ‍ಂತಿರುವ ಕೆಂಪು ಕಲೆಗಳಿವೆ. ಇದು ಮಾರ್ಚ್‍ -ಮೇ ತಿಂಗಳಲ್ಲಿ ಹೂ ಬಿಡುತ್ತದೆ. ಇದರ ಬೀಜದ ಮೇಲೆ ರೇಷ್ಮೆಯಂತೆ ಕೂದಲುಗಳಿವೆ.ಇದರ ಬೀಜಗಳು ಸಾಮಾನ್ಯವಾಗಿ ೮ಮಿ.ಮೀ ಉದ್ದವಾಗಿದೆ.ಕಂದು ಬಣ್ಣದಿಂದ ಬೀಜಗಳು ರಚಿತವಾಗಿದೆ.ಇದು ಬೀಜದಿಂದ ತನ್ನ ವಂಶವನ್ನು ವೃದ್ದಿಸಿಕೊಳ್ಳುತ್ತದೆ.

ಇತರ ಹೆಸರುಗಳು ಬದಲಾಯಿಸಿ

ಕೋಡ ಮರಕ್ಕೆ ಇಂಗ್ಲೀಷ್‍ನಲ್ಲಿ ದಿ ಈಸ್ಟರ್ ಟ್ರೀ,ಕೊನೆಸ್ಸಿ ಬಾರ್ಕ ಎಂಬುದಾಗಿ ಕರೆಯುತ್ತಾರೆ.ಕನ್ನಡದಲ್ಲಿ ಹಲಗತ್ತಿ ಮರ,ತೊಡಚಗ,ಬೆಪ್ಪಲೆ,ಕೊದಸಾಲು,ಕೊರ್ಚಿ,ಹಾಬೆ ಎಂಬುದಾಗಿ ಕರೆಯುತ್ತಾರೆ.ಹಿಂದಿಯಲ್ಲಿ ಕುರ್ಚಿ,ಧುದಿ,ತೆಲುಗಿನಲ್ಲಿ ಕೊಡಗ,ತಮಿಳಿನಲ್ಲಿ ವೆಪಲಿ,ಮರಾಠಿಯಲ್ಲಿ ಕುಡ,ಕೊದಗ,ಘಂಢರಕುಡ ಎಂಬುದಾಗಿ ಕರೆಯುತ್ತಾರೆ.ಮಲಯಾಳಂನಲ್ಲಿ ಕುಟ್ಟು ಕಪ್ಪುಲ ಕುಡಿಜಿ,ಸಂಸ್ಕ್ರತದಲ್ಲಿ ಗಿರಿಮಲ್ಲಿಕಾ, ಇಂದ್ರ ಎಂದು ಕರೆಯುತ್ತಾರೆ.


ಉಪಯೋಗಗಳು ಬದಲಾಯಿಸಿ

ಕೋಡ ಮುರುಕವನ್ನು ಉದ್ಯಾನವನಗಳಲ್ಲಿ ಬೆಳೆಸುತ್ತಾರೆ.ಈ ಮರವನ್ನು ಔಷಧಿಗೆ ಬಳಸುತ್ತಾರೆ.ಕುರ್ಚಿ ಎಂದು ಕರೆಯುವ ತೊಗಟೆಯನ್ನು ಟಾನಿಕ್‍ನಂತೆ ಉಪಯೋಗಿಸುತ್ತಾರೆ.ಇದರ ಬೀಜವನ್ನು ಮತ್ತು ತೊಗಟೆಯನ್ನು ಅಸ್ತಮಾ ಮತ್ತು ಕಾಮಾಲೆಗೆ ಉಪಯೋಗಿಸುತ್ತಾರೆ.ಇದರ ತೊಗಟೆ ಹಾಗು ಬೇರನ್ನು ಭೇಧಿಗೆ ಉಪಯೋಗಿಸುತ್ತಾರೆ.ಅಲ್ಲದೆಜ್ವರ,ಪೈಲ್ಸ್,ಹುಳುನಾಶಕದಂತೆ ಬೀಜಗಳನ್ನು ಉಪಯೋಗಿಸುತ್ತಾರೆ.


ಉಲ್ಲೇಖ ಬದಲಾಯಿಸಿ

  1. ಮರಗಳ ಪರಿಚಯ-ಪ್ರೊ.ಸಿ.ಡಿ.ಪಾಟೀಲ್. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಬೆಂಗಳೂರು. ೨೦೧೧. ಪುಟ ಸಂಖ್ಯೆ, ೫೬-೫೭
"https://kn.wikipedia.org/w/index.php?title=ಕೋಡ_ಮುರಕ&oldid=667843" ಇಂದ ಪಡೆಯಲ್ಪಟ್ಟಿದೆ