ಕೋಟೆ ಕಲ್ಲಪ್ಪ ಸ್ವಾಮಿ ದೇವಸ್ಥಾನ, ಹೊಸಹಳ್ಳಿ


ಮಧುಗಿರಿ_ತಾಲ್ಲೂಕು_ಡಿ.ವಿ ಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ತುಗೋಟಿ ಹಾಗೂ ತಾಯಿಗೊಂಡನಹಳ್ಳಿ . ಹೊಸಹಳ್ಳಿ ಗ್ರಾಮಗಳಿಗೆ ಹತ್ತಿರವಿರುವ #ಶ್ರೀ ಕೋಟೆ ಕಲ್ಲಪ್ಪ ದೇವರ_ಬಗ್ಗೆ_ಒಂದಿಷ್ಟು_ಮಾಹಿತಿ. ಶ್ರೀ ಕೋಟೆ ಕಲ್ಲಪ್ಪ ಬೆಟ್ಟವು ಮಧುಗಿರಿ- ಸಿರಾ ಮುಖ್ಯರಸ್ತೆಯಿಂದ 6km ದೂರದಲ್ಲಿದ್ದು ದಕ್ಷಿಣ ದಿಕ್ಕಿನಲ್ಲಿದೆ. ಇದು ಭೂಮಿಗಿಂತ ಎತ್ತರ ಪ್ರದೇಶ, ಒಳ್ಳೆಯ ತಂಪಾದ ಗಾಳಿಯ ವಾತಾವರಣ , ಬೆಟ್ಟದ ಮೇಲೆ ನಿಂತು ನೋಡಿದರೆ ಪ್ರಕೃತಿ ಸೌಂದರ್ಯದ ಸೊಬಗು ಮನಸ್ಸನ್ನು ತಲ್ಲಣಗೊಳಿಸುತ್ತದೆ.

ಶ್ರೀ ಕೋಟೆ ಕಲ್ಲಪ್ಪ ಸ್ವಾಮಿ ದೇವಸ್ಥಾನ ಕ್ಕೆ# ಮಧುಗಿರಿ ಹಾಗೂ ರಾಜ್ಯದ ಹಲವಾರು ಭಾಗದಿಂದ ಜನರು ಆಗಮಿಸುತ್ತಾರೆ ಹೆಚ್ಚಾಗಿ ಶ್ರಾವಣ ಮಾಸದಲ್ಲಿ ವಿಶೇಷವಾಗಿ ಪೂಜೆ ಮತ್ತು ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತೆ ಸಿಹಿ ಹಾಗೂಹೆಚ್ಚಾಗಿ ಕುರಿ, ಕೋಳಿಗಳನ್ನು ಬಲಿಕೊಟ್ಟು ಹರಕೆ ಪೂಜೆಗಳನ್ನ ತೀರಿಸುತ್ತಾರೆ.ಈ ಕೋಟೆ ಕಲ್ಲಪ್ಪ ನಿಗೆ ದಂತಕಥೆಗಳು ಹಾಗೂ ಸತ್ಯಾಂಶ ನಿದರ್ಶನಗಳಿವೆ. ಇಲ್ಲಿನ ಅರ್ಚಕರು ಶ್ರೀಮಾನ್ ವೆಂಕಟರಂಗಯ್ಯನವರು ದೇವರನ್ನು ಪೂಜಿಸುತ್ತ ಬಾದ್ದಿರುತ್ತಾರೆ . ಸೂತ್ತ ಮೂತ್ತಲಿನ ಜನರು ತಮ್ಮ ಕೋರಿಕೆ ನೇರವೆರಲು ದೇವರಲ್ಲಿ ಹೂ ಬೇಡುವ ಕಾರ್ಯ ನಂಬಿಕೆ ಇದೆ ಸುತ್ತ ಮುತ್ತ ಜನರು ಹಿಂದೆ ತಿರುಪತಿ ತಿಮ್ಮಪ್ಪ ನನ್ನು ಆರಾಧಿಸುತ್ತಿದ್ದರಂತೆ. ಇದಕ್ಕೆ ನಿದರ್ಶನವಾಗಿ ಹಿಂದಿನವರ ಹೆಸರುಗಳನ್ನ ಗಮನಿಸಬಹುದು.

ತಿಮ್ಮಪ್ಪನು_ಕೋಟೆ_ಕಲ್ಲಪ್ಪನಾದುದು. ಈ ದೇವಸ್ಥಾನವು ಕಟ್ಟಡ ಕಟ್ಟುವುದರೊಂದಿಗೆ ನಿರ್ಮಿತವಾಗಿಲ್ಲ. ಪ್ರಕೃತಿದತ್ತವಾಗಿದೆ. ಒಂದು ದೊಡ್ಡ ಬಂಡೆಯೂ ಪಶ್ಚಿಮದಿಂದ ಪೂರ್ವಕ್ಕೆ ಭಾಗಿ ಒಂದು ಬಂಡೆಯ ಮೇಲೆ ಕೂತಿರುತ್ತದೆ. ಗರ್ಭಗುಡಿಯು ಬಂಡೆ ಸಿಡಿದು ನಿರ್ಮಿತವಾಗಿದೆ. ಗರ್ಭಗುಡಿಗೆ ಛಾವಣಿ ನಿರ್ಮಿಸಿರುವುದಿಲ್ಲ. ಇದು ಸ್ವಾಮಿ ಅಪ್ಪಣೆ ಎಂದು ದಂತಕಥೆಯಿಂದ ತಿಳಿದುಬಂದ ವಿಚಾರ. ಈಗಲೂ ಸಹ ಇದೇ ಮಾದರಿಯಲ್ಲಿ ಇದೆ. #ಭಾಗಿರುವ_ಬಂಡೆಯ ಉತ್ತರ ಭಾಗದಲ್ಲಿ ಕಲ್ಲಿನಿಂದ ನಿರ್ಮಿಸಿದ ಸುಮಾರು 5.5 ಅಡಿ ಎತ್ತರದ

ಬಾಗಿಲು_ಚೌಕಟ್ಟು ಇಟ್ಟಿದ್ದಾರೆ. ಹಿಂದೆ ಇದಕ್ಕೆ ಆಲದ_ಮರದ_ಹಲಗೆಯ ಭಾಗಿಲನ್ನ ಇಟ್ಟಿದ್ದರಂತೆ. ಭಕ್ತಳೊಬ್ಬಳು #ದಬ್ಬೆಗಟ್ಟದಿಂದ ಬೆಟ್ಟದ ಮಾರ್ಗವಾಗಿ ಗಂಡನ ಮನೆಯಲ್ಲಿ ಕಿರುಕುಳವನ್ನ ತಾಳಲಾರದೆ ಇದೆ ಬೆಟ್ಟದ ಮಾರ್ಗವಾಗಿ ತನ್ನ ತವರೂರಾದ #ತಾಯಗೊಂಡನಹಳ್ಳಿ ಗೆ ಹೋಗುತ್ತಿದ್ದಾಗ ಸ್ವಾಮಿಯು ಆ ಭಾಗಿಲನ್ನ ಒದ್ದು ಆ ಭಕ್ತಳ ಸಲುಹಿ ಬುದ್ದಿ ಹೇಳಿ ಗಂಡನ ಮನೆಗೆ ಕಳುಹಿಸಿದಳಂತೆ. ಆಗ ಒದ್ದ ಭಾಗಿಲು ಮಧುಗಿರಿ ಸಿರಾ ರಸ್ತೆಯಲ್ಲಿರುವ

ಬೆಟ್ಟದ_ತಿಮ್ಮನಹಳ್ಳಿಯ ಈಗಿನ #ಹರಿಹರಪುರದ ಹತ್ತಿರ ಬಿದ್ದ ಭಾಗಿಲು #ಮರವಾಗಿ ಬೆಳೆದಿರುತ್ತದೆ. ಈಗಲೂ ಸಹ ನಾವು ಕಣ್ಣಾರೆ ನೋಡಬಹುದು. ಈ ಮರ ಇರುವ ಹೊಲದ ಎಲ್ಲೆಗೆ #ದ್ಯಾವರು_ದಿನ್ನೆ ಎಂದು ಕರೆಯುತ್ತಾರೆ. ಈಗಲೂ ಸಹ ದಬ್ಬೆಗಟ್ಟ ಗ್ರಾಮದವರು ಅಂದಿನಿಂದಲೂ ಬೆಟ್ಟದ ಮೇಲೆ ಪ್ರತಿವರ್ಷ #ಶ್ರಾವಣಮಾಸದಲ್ಲಿ_ಹರಿಸೇವೆ ಮಾಡುತ್ತಾರೆ.ಇಂದಿಗೂ ಸಹ ಈಗಿನವರು ಮುಂದುವರೆಸಿಕೊಂಡು ಬರುತ್ತಿದ್ದಾರೆ.

ಕೋಟೆ_ಕಲ್ಲಪ್ಪನೆಂದು_ಹೆಸರು_ಬರಲು_ಕಾರಣ ತಿಮ್ಮಪ್ಪ ನೆಲಸಿದ ಈ ಬೆಟ್ಟದ ಮೇಲೆ ಕೋಟೆ ಇದೆ. ಈಗ ಅದು ಶಿಥಿಲವಾಗಿದ್ದು ಕೋಟೆಯ ಗೋಡೆಗಳ ಅವಶೇಷವನ್ನ ನಾವೂ ಈಗಲೂ ಕಾಣಬಹುದು. ಈಗ ಅವಶೇಷಗಳ ನಿದರ್ಶನವಾಗಿ ಅಂದು ಅವರು ರಾಗಿ, ಜೋಳ ಇತ್ಯಾದಿ ದವಸಗಳನ್ನ ಹಿಟ್ಟು ಮಾಡಲು ಬಳಸುತ್ತಿದ್ದ ಸಾಧನ ಎಂದರೆ #ರಾಗಿಬೀಸುವ_ಕಲ್ಲು ಈಗ ಈ ದೇವಸ್ಥಾನದಲ್ಲಿ ಇದೆ. ಈ ದೇವಸ್ಥಾನದ ಬೆಟ್ಟದಲ್ಲಿರುವ ಕೋಟೆಗೆ ಹೊಂದಿಕೊಂಡು ಕಲ್ಲು ಬಂಡೆಗಳ ಮಧ್ಯೆ ನೆಲಸಿರುವುದರಿಂದ #ಕೋಟೆಕಲ್ಲಪ್ಪ ಎಂಬ ಹೆಸರಿನಿಂದ ಪ್ರಸಿದ್ದಿ ಪಡೆದು ಭಕ್ತರನ್ನ ಸಲಹುತ್ತಿದ್ದಾನೆ. 2016/17ನೇ ಸಾಲಿನಲ್ಲಿ ಸ್ಥಳೀಯ ಶಾಸಕರು ಆದ ಶ್ರೀಮಾನ್ ಕೆ.ಎನ್ ರಾಜಣ್ಣನವರ ಪರಿಶ್ರಮದಿಂದ ಡಿ.ವಿ ಹಳ್ಳಿ ಯಿಂದ ತಿಮ್ಮಾಪುರ ಕ್ಕೆ ಹೋಗುವ ರಸ್ತೆ ಗೆ ಹೊಂದಿಕೊಂಡ ಹಾಗೆ ಹೊಸಹಳ್ಳಿ ಯಿಂದ ಉತ್ತಮವಾದ ರಸ್ತೆ ಮತ್ತು ನೀರಿನ ವ್ಯವಸ್ಥೆ ಮಾಡಲಾಗಿದೆ ಈ ಮೊದಲು ಬಂಡೆಯ ಮಧ್ಯದಲ್ಲಿನ ಚಿಲುಮೆಯಲ್ಲಿ ನೀರು ಪೂಜೆಗೆ ಮತ್ತೆ ಅಡುಗೆಗೆ ಬಳಸಲಾಗುತ್ತಿತ್ತು ಹಾಗೆ ಪ್ರಸ್ತುತ ಶಾಸಕರು ಆದ ಶ್ರೀಮಾನ್ ಎಂ.ವಿ ವೀರಭದ್ರಯ್ಯ ನವರು ಶೌಚಾಲಯಕ್ಕೆ ಅನುದಾನ ಬಿಡುಗಡೆ ಮಾಡಲಾಗಿದೆ ಸದರಿ ಕಾಮಗಾರಿ ಪೂರ್ಣ ಹಂತದಲ್ಲಿ ಇದೆ ಇನ್ನು ಹೆಚ್ಚಿನ ಪ್ರಮಾಣದಲ್ಲಿ ಶಾಸಕರು ಹಾಗೂ ದೇವಸ್ಥಾನದ ಆಡಳಿತ ಮಂಡಳಿ ಇನ್ನು ಹೆಚ್ಚಿನ ಅನುದಾನ ಹಾಕಿಸಿ ಅಭಿವೃದ್ಧಿ ಕಾರ್ಯ ಮಾಡಲು ವಿನಂತಿಸುತ್ತೇವೆ. ಇನ್ನು ಕೆಲವು ಅಭಿವೃದ್ಧಿ ಕಾರ್ಯ ಆದ್ದಲ್ಲಿ ಇದು ಒಂದು ದಿನದ ಪ್ರವಾಸಿ ತಾಣ ಆಗುವುದರಲ್ಲಿ ಅನುಮಾನವಿಲ್ಲ . ದೇವರು ಕೃಪೆ ಯೊಂದಿಗೆ. ಮಾಹಿತಿ_ಪತ್ರಿಕೆಗಳಲ್ಲಿ_ದೊರೆತಿದೆ. ಸತ್ಯ ಹಾಗೂ ಅಸತ್ಯದ ಬಗ್ಗೆ ಮಾಹಿತಿ ಇಲ್ಲ.