ಕೋಗಿಲೆಕೀಚುಗ
Large cuckooshrike | |
---|---|
Female (Gujarat) | |
Conservation status | |
Scientific classification | |
Unrecognized taxon (fix): | Coracina |
ಪ್ರಜಾತಿ: | C. macei
|
Binomial name | |
Coracina macei (Lesson, 1830)
| |
Synonyms | |
Graucalus macei Lesson, 1831 |
ಕೋಗಿಲೆಕೀಚುಗ | |
---|---|
Female (Gujarat) | |
Scientific classification | |
Kingdom: | Animalia |
Phylum: | Chordata |
Class: | Aves |
Order: | Passeriformes |
Family: | Campephagidae |
Genus: | Coracina |
Species: | C. macei
|
Binomial name | |
Coracina macei (Lesson, 1830)
| |
Synonyms | |
Graucalus macei Lesson, 1831 |
ಕೋಗಿಲೆಕೀಚುಗ ( ಕೊರಾಸಿನಾ ಮಾಸಿ ), ಲಾರ್ಜ್ ಕುಕೂಶ್ರೈಕ್ ಹಕ್ಕಿ ಭಾರತೀಯ ಉಪಖಂಡದಲ್ಲಿ ಕಂಡುಬರುವ ಕೋಗಿಲೆಕೀಚುಗದ ಜಾತಿಯೆಂದು ಆಗ್ನೇಯ ಏಷ್ಯಾ ದಲ್ಲಿ ಅನುಕರಿಸಿದ ವರ್ಗೀಕರಣಶಾಸ್ತ್ರ ಧೃಡೀಕರಿಸಿದೆ. ಆಗ್ನೇಯ ಏಷ್ಯಾದ ಉದ್ದಗಲಕ್ಕೂ ವೈವಿಧ್ಯಮಯ ರೂಪಗಳಿದ್ದು, ತಕ್ಕಂತೆ ವರ್ಗೀಕರಣವೂ ಪಲ್ಲಟಗೊಳ್ಳುತ್ತಿದ್ದು, ಹಲವೆಡೆ ಇಂಡಿಯನ್ ಕುಕೂಶ್ರೈಕ್ ಎಂಬ ಹೆಸರನ್ನು ಬಳಸುತ್ತಾರೆ (ಇದು ಭಾರತೀಯ ಪರ್ಯಾಯದ್ವೀಪದಲ್ಲಿನ C. m. macei ಮತ್ತು ಶ್ರೀಲಂಕಾದ C. m. layardi ರೂಪಗಳಿಗೆ ಸೀಮಿತ). ಮೂಲ ಜಾತಿ ಮತ್ತು ಉಪಜಾತಿಗಳ ವರ್ಗೀಕರಣ ವ್ಯಾಪಕವಾಗಿ ಬದಲಾಗುತ್ತಿದ್ದು, ನಿಸ್ಸಂದಿಗ್ಧವಾಗಿ ಈ ಹಕ್ಕಿಯ ವರ್ಗೀಕರಣವನ್ನು ಸಾಬೀತುಪಡಿಸಬೇಕಾಗಿದೆ.
ಗಂಡು ಹಕ್ಕಿಗಳಿಗೆ ಎದ್ದು ಕಾಣುವ ಕಪ್ಪಾದ ಕಣ್ಣಿನ ಪಟ್ಟಿ ಇದ್ದು, ಹೆಣ್ಣುಗಳಲ್ಲಿ ಇದು ತೆಳುವಾಗಿರುತ್ತದೆ. ಗಂಡಿನ ಕಂಠ ಮತ್ತು ಎದೆಯ ಭಾಗ ಬೂದು ಬಣ್ಣವಿದ್ದು, ಹೊಟ್ಟೆ ಮತ್ತು ಅದರ ಪಾರ್ಶ್ವ ದಲ್ಲಿ ಅಡ್ಡ ಸೂಕ್ಷ್ಮ ಗೀರುಗಳಿರುತ್ತದೆ. ಹೆಣ್ಣುಗಳಲ್ಲಿ ಈ ಗೀರುಗಳು ಕಂಠದಿಂದ ಆರಂಭಗೊಂಡು ಕೆಳ ಹೊಟ್ಟೆಯವರೆಗೆ ಆವರಿಸಿರುತ್ತದೆ. ಇವು ಹೆಚ್ಚಾಗಿ ಕೀಟಾಹಾರಿಗಳು ಆದರೆ ಆಲ ಅರಳಿ ಅತ್ತಿ ಹಣ್ಣುಗಳು ಮತ್ತು ಇತರೆ ಕಾಡಿನ ಹಣ್ಣುಗಳನ್ನು ಸಹ ತಿನ್ನುತ್ತವೆ. ಸಾಮಾನ್ಯವಾಗಿ ಸಣ್ಣ ಗುಂಪಿನಲ್ಲಿ ಕಾಡಿನ ಮರಗಳ ಹಸುರು ಛಾವಣಿಯ ಮೇಲಾವರಣದಲ್ಲಿ ಹಾರುತ್ತವೆ. ಭಾರತೀಯ ಹಕ್ಕಿಗಳು ಕ್ಲೂ-ಈಪ್ ಎಂದು ಜೋರಾಗಿ ಕರೆ ಮಾಡುತ್ತವೆ. ಹಾರಾಟದ ನಂತರ ಕುಳಿತಾಗ ಮುಚ್ಚಿದ ರೆಕ್ಕೆಗಳನ್ನು, ಒಂದರ ನಂತರ ಮತ್ತೊಂದನ್ನು ಮೇಲೆ ಕೆಳಗೆ ಅಲ್ಲಾಡಿಸುವ ವಿಶಿಷ್ಟ ಅಭ್ಯಾಸವನ್ನು ಹೊಂದಿವೆ. ಪ್ರಣಯದ ಸಮಯದಲ್ಲಿ ಸಹ ಇದೇ ರೀತಿ ರೆಕ್ಕೆಗಳನ್ನು ಅಲ್ಲಾಡಿಸುತ್ತವೆ. [೨]
ವ್ಯವಸ್ಥಾಶಾಸ್ತ್ರ ಮತ್ತು ವರ್ಗೀಕರಣಶಾಸ್ತ್ರ
ಬದಲಾಯಿಸಿಹಲವಾರು ಉಪಜಾತಿಗಳನ್ನು ಗುರುತಿಸಲಾಗಿದೆಯಾದರೂ ಸಾಕಷ್ಟು ಗೊಂದಲವಿದೆ ಹಾಗೂ ಗುಂಪಿನ ವರ್ಗೀಕರಣವನ್ನು ಸಂಪೂರ್ಣವಾಗಿ ಪರಿಹರಿಸಲಾಗಿಲ್ಲ. [೩] IOC ವರ್ಗೀಕರಣವು ಈ ಕೆಳಗಿನ ಉಪಜಾತಿಗಳನ್ನು ಮ್ಯಾಸಿ ಜಾತಿಯೊಳಗೆ ಪರಿಗಣಿಸುತ್ತದೆ:
- C. m. nipalensis (Hodgson, 1836) ಹಿಮಾಲಯವಾಸಿಗಳು (ಕೆಲವಿಜ್ಞಾನಿಗಳು ಇವನ್ನು C. javensis ನ ಉಪಜಾತಿಗಳನ್ನಾಗಿ ಪರಿಗಣಿಸುತ್ತಾರೆ)
- C. m. macei (Lesson, R, 1831) ಭಾರತೀಯ ಪರ್ಯಾಯದ್ವೀಪ ವಾಸಿಗಳು
- C. m. layardi (Blyth, 1866) ಶ್ರೀಲಂಕಾದ ವಾಸಿಗಳು
- C. m. andamana (Neumann, 1915) ಅಂಡಮಾನ್ ದ್ವೀಪವಾಸಿಗಳು
- C. m. rexpineti (Swinhoe, 1863) of ಆಗ್ನೇಯ ಚೀನಾ, ಟೈವಾನ್, ಲಾವೂಸ್ ಮತ್ತು ವಿಯಟ್ನಾಂನ ವಾಸಿಗಳು
- C. m. larvivora (Hartert, 1910) ಚೀನಾ ಹೊರತಾದ ಹೈನಾನ್ ದ್ವೀಪವಾಸಿಗಳು
- C. m. siamensis (Baker, ECS, 1918) ಮೈನಮ್ಮಾರ್ ನಿಂದ ದಕ್ಷಿಣ ಚೀನಾ ಮತ್ತು ದಕ್ಷಿಣ ಇಂಡೋಚೀನಾದವರೆಗಿನ ವಾಸಿಗಳು
- C. m. larutensis (Sharpe, 1887) ಮಲಯಾ ಪರ್ಯಾಯದ್ವೀಪ ವಾಸಿಗಳು (ಕೆಲವಿಜ್ಞಾನಿಗಳು ಇವನ್ನು C. javensis ನ ಉಪಜಾತಿಗಳನ್ನಾಗಿ ಮತ್ತೆ ಕೆಲವರು ಬೇರೆಯೇ ಜಾತಿಯೆಂದು ಪರಿಗಣಿಸುತ್ತಾರೆ)
ಹಿಂದೊಮ್ಮೆ ಇವೆಲ್ಲವನ್ನೂ ಒಟ್ಟಿಗೆ caledonica ಮಹತ್ವಜಾತಿಯ Coracina novaehollandiae ಉಪಜಾತಿಯಾಗಿ ಪರಿಗಣಿಸಿದ್ದರು. [೪]
ಸಂತಾನೋತ್ಪತ್ತಿ
ಬದಲಾಯಿಸಿಮಾರ್ಚ್ - ನವೆಂಬರ್ ಸಂತಾನೋತ್ಪತ್ತಿಯ ಸಮಯ. ಗೂಡು ಬಟ್ಟಲಿನಂತಿದ್ದು, ನೆಲದಿಂದ ಸ್ವಲ್ಪ ಎತ್ತರದಲ್ಲಿ ಸಮತಲವಾದ ರೆಂಬೆಯ ಕವೆಯಲ್ಲಿ ನಿರ್ಮಿಸುತ್ತವೆ. ಗೂಡಿಗೆ ಸಣ್ಣಕಡ್ಡಿ ಮತ್ತು ಹುಲ್ಲನ್ನು ಉಪಯೋಗಿಸುತ್ತವೆ, ಹೊರಭಾಗವನ್ನು ಜೇಡರಬಲೆಯಿಂದ ಶೃಂಗರಿಸುತ್ತವೆ. ಪ್ರತಿಗೂಡಿನಲ್ಲಿ ಸಾಮಾನ್ಯವಾಗಿ ಎರಡು ಮೊಟ್ಟೆಗಳನ್ನು ಬಂಗಾಳ ಪ್ರದೇಶದಲ್ಲಿ, ಮಿಕ್ಕೆಡೆ ಮೂರು ಮೊಟ್ಟೆಗಳನ್ನಿಟ್ಟು ಮರಿಮಾಡುತ್ತವೆ. [೨]
ಉಲ್ಲೇಖಗಳು
ಬದಲಾಯಿಸಿ- ↑ ೧.೦ ೧.೧ BirdLife International (2020). "Coracina macei". IUCN Red List of Threatened Species. 2020: e.T183458017A173326100. doi:10.2305/IUCN.UK.2020-3.RLTS.T183458017A173326100.en. Retrieved 25 September 2021. ಉಲ್ಲೇಖ ದೋಷ: Invalid
<ref>
tag; name "iucn status 25 September 2021" defined multiple times with different content - ↑ ೨.೦ ೨.೧ Ali, Salim; Ripley, S. Dillon (1996). Handbook of the Birds of India and Pakistan. Volume 6. Cuckoo-shrikes to Babaxes (2 ed.). Delhi: Oxford University Press. pp. 14–18.
- ↑ Voous, K.H.; Van Marle, J.G. (1949). "The distributional history of Coracina in the Indo-Australian archipelago". Bijdragen tot de Dierkunde. 28: 513–529. doi:10.1163/26660644-02801056.
- ↑ Ripley, S. Dillon (1941). "Notes on the genus Coracina" (PDF). Auk. 58 (3): 381–395. doi:10.2307/4078957. JSTOR 4078957. Archived from the original (PDF) on 2022-12-26. Retrieved 2023-06-29.