ಕೊರೊನಾವೈರಸ್ ಟೆಕ್ ಹ್ಯಾಂಡ್‌ಬುಕ್
ಕೊರೊನಾವೈರಸ್ ಟೆಕ್ ಹ್ಯಾಂಡ್‌ಬುಕ್ ಎಂಬುದು SARS-CoV-2 ಕೊರೊನಾವೈರಸ್ ಬಗ್ಗೆ ಮಾಹಿತಿಯನ್ನು ಕ್ರೌಡ್‌ಸೋರ್ಸ್[೧][೨] ಮಾಡಲು ವಿನ್ಯಾಸಗೊಳಿಸಲಾದ ಜಾಲತಾಣ ಆಗಿದೆ. ಇದನ್ನು ಇಂಗ್ಲೆಂಡ್ನ ಲಂಡನ್ನಲ್ಲಿನ[೩] ರಾಜಕೀಯದ ಹ್ಯಾಕ್ಸ್‌ಪೇಸ್‌ನ ನ್ಯೂಸ್‌ಪೀಕ್ ಹೌಸ್‌ನಲ್ಲಿ ಅಭಿವೃದ್ಧಿಪಡಿಸಲಾಗಿದೆ.[೪] ಮಾರ್ಚ್ ೨೦೨೦ ರಲ್ಲಿ ಪ್ರಾರಂಭವಾದ ಈ ಸೈಟ್ ಅನ್ನು ಗೂಗಲ್ ದಾಖಲೆಗಳ ಸರಣಿಯಾಗಿ ಹೋಸ್ಟ್ ಮಾಡಲಾಗಿದೆ. ಇದರ ಉದ್ದೇಶ : ಕೊರೊನಾವೈರಸ್ ಪ್ರಕೋಪ ಮತ್ತು ನಂತರದ ಪರಿಣಾಮಗಳಿಗೆ ತ್ವರಿತ ಮತ್ತು ಅತ್ಯಾಧುನಿಕ ಪ್ರತಿಕ್ರಿಯೆಗೆ ತಂತ್ರಜ್ಞರಿಗೆ ಸಹಕರಿಸಲು, ನಾಗರಿಕ ಸಂಸ್ಥೆಗಳು, ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳು, ಸಂಶೋಧಕರು ಮತ್ತು ಎಲ್ಲಾ ರೀತಿಯ ತಜ್ಞರಿಗೆ ಈ ಹ್ಯಾಂಡ್‌ಬುಕ್ ಅನ್ನು ತಯಾರಿಸಲಾಗಿದೆ.[೫]
ಕೊರೊನಾವೈರಸ್ ಟೆಕ್ ಹ್ಯಾಂಡ್‌ಬುಕ್‌ನಲ್ಲಿ ಏನೆಲ್ಲಾ ಒಳಗೊಂಡಿವೆ?
ಬದಲಾಯಿಸಿಕೊರೊನಾವೈರಸ್ ಟೆಕ್ ಹ್ಯಾಂಡ್‌ಬುಕ್‌ನಲ್ಲಿ ಸ್ವಯಂ-ಪ್ರತ್ಯೇಕಿಸುವ ಟೂಲ್‌ಕಿಟ್‌ಗಳು, ಕೊರೊನಾವೈರಸ್ ಪ್ರಕೋಪಕ್ಕೆ ಹೊಂದಿಕೊಳ್ಳಲು ಸಲಹೆಗಳು , ವೈರಸ್ ಹರಡುವಿಕೆಯನ್ನು ಪತ್ತೆಹಚ್ಚುವುದು, ಜೊತೆಗೆ ಸಾರ್ವಜನಿಕ ಜ್ಞಾನ ಮತ್ತು ಅಧಿಕೃತ ಮಾಹಿತಿ ಮತ್ತು ಸಮುದಾಯದ ಸಹಾಯವನ್ನು ಒಳಗೊಂಡಿದೆ. ಈ ಸಮಯದಲ್ಲಿ ಮನೆಯಿಂದ ಕೆಲಸ ಮಾಡುವ ಮತ್ತು ಸ್ವಯಂ-ಪ್ರತ್ಯೇಕಿಸುವ ಎಲ್ಲರಿಗೂ ಇದು ಸಹಾಯಕ ಮತ್ತು ಇದು ತಿಳಿವಳಿಕೆಯ ಸಂಪನ್ಮೂಲವಾಗಿದೆ.[೨]
ಉಲ್ಲೇಖಗಳು
ಬದಲಾಯಿಸಿ- ↑ Magee, Tamlin. "Technologists lead crowdsourced Coronavirus Tech Handbook response". Techworld. Retrieved 4 April 2020.
- ↑ Boran, Marie. "Coronavirus Tech Handbook guides you through the mayhem". The Irish Times (in ಇಂಗ್ಲಿಷ್). Retrieved 4 April 2020.
- ↑ "Crowdsourcing a "Coronavirus Tech Handbook" to help you get through self-isolation". World Pulse (in ಇಂಗ್ಲಿಷ್). 30 March 2020. Archived from the original on 29 ಸೆಪ್ಟೆಂಬರ್ 2020. Retrieved 4 April 2020.
- ↑ "Corona Virus Tech Handbook". Web Science Trust. 27 March 2020. Archived from the original on 20 ಜನವರಿ 2021. Retrieved 4 April 2020.