ಕೊಟೋ (ವಾದ್ಯ)
ಕೊಟೋ (ುಮೆನ್ನ ಅಥವಾ ುಮೆನ್ನ) ಎಂಬುದು ಜಪಾನಿನ ಅರ್ಧ-ಕೊಳವೆ ಜಿಥರ್ ವಾದ್ಯವಾಗಿದ್ದು ಇದಕ್ಕೆ ಜಪಾನ್ನ ರಾಷ್ಟ್ರೀಯ ವಾದ್ಯದ ಸ್ಥಾನ ನೀಡಲಾಗಿದೆ . ಇದು ಚೀನೀ ಝೆಂಗ್ ಮತ್ತು ಸೆ ನಿಂದ ವ್ಯುತ್ಪನ್ನವಾಗಿದೆ. ಇದು ಇತರ ಏಷ್ಯಾದ ವಾದ್ಯಗಳಾದ ಮಂಗೋಲಿಯನ್ ಯಾಟ್ಗಾ, ಕೊರಿಯನ್ ಗಾಯಾಜಿಯಂ ಮತ್ತು ಅಜೆಂಗ್, ವಿಯೆಟ್ನಾಮೀಸ್ ಡಾನ್ ಟ್ರಾನ್ಹ್, ಸುಂದನೀಸ್ ಕಾಕಾಪಿ ಮತ್ತು ಕಝಕ್ ಜೆಟಿಜೆನ್ ಅನ್ನು ಹೋಲುತ್ತದೆ. ಕೊಟೋ ಸರಿಸುಮಾರು 180 ಸೆಂಟಿಮೀಟರ್ (71 ಇಂಚು ಉದ್ದ) ಉದ್ದವಿದ್ದು, ಪೌಲೋವನಿಯಾ ಮರದಿಂದ (ಪೌಲೋವನಿಯ ಟೊಮೆಂಟೋಸಾ, ಕಿರಿ ಎಂದು ಕರೆಯಲಾಗುತ್ತದೆ) ತಯಾರಿಸಲಾಗುತ್ತದೆ. ಅತ್ಯಂತ ಸಾಮಾನ್ಯ ವಿಧವು ಟ್ಯೂನಿಂಗ್ಗಾಗಿ ಬಳಸಲಾಗುವ ಚಲಿಸಬಲ್ಲ ಸೇತುವೆಗಳ ಮೇಲೆ ಕಟ್ಟಿದ 13 ತಂತಿಗಳನ್ನು ಬಳಸುತ್ತದೆ. ವಿಭಿನ್ನ ತುಣುಕುಗಳಿಗೆ ಬಹುಶಃ ವಿಭಿನ್ನ ಟ್ಯೂನಿಂಗ್ ಅಗತ್ಯವಿರುತ್ತದೆ. ಹದಿನೇಳು-ತಂತಿಗಳ ಕೊಟೋ ಸಹ ಸಾಮಾನ್ಯವಾಗಿದೆ. ಈ ವಾದ್ಯ ಮೇಳಗಳಲ್ಲಿ ಬಾಸ್ ವಾದ್ಯದಂತೆ ಕಾರ್ಯನಿರ್ವಹಿಸುತ್ತದೆ. ಕೋಟೋ ತಂತಿಗಳನ್ನು ಸಾಮಾನ್ಯವಾಗಿ ಬಲಗೈಯ ಮೊದಲ ಮೂರು ಬೆರಳುಗಳಲ್ಲಿ ಧರಿಸಲಾಗುವ ಮೂರು ಕಡ್ಡಿ(ತ್ಸುಮೆ)ಗಳನ್ನು ಬಳಸಿ ನುಡಿಸಲಾಗುತ್ತದೆ.
ಹೆಸರುಗಳು ಮತ್ತು ವಿಧಗಳು
ಬದಲಾಯಿಸಿಕೋಟೊದ ಅಕ್ಷರವು ′ ಆಗಿದೆ, ಆದರೂ ′ ಅನ್ನು ಹೆಚ್ಚಾಗಿ ಬಳಸಲಾಗುತ್ತದೆ. ಆದಾಗ್ಯೂ, ಕಿನ್ ನೊ ಕೊಟೋ, ಸೊ ನೊ ಕೊಟೋ (sō no koto), ಯಮಟೋ-ಗೊಟೋ, ವ್ಯಾಗನ್, ನ್ಯಾನಜೆನ್-ಕಿನ್ ಮುಂತಾದ ವಾದ್ಯಗಳನ್ನು ಒಳಗೊಂಡಂತೆ ಜಪಾನೀಸ್ ಭಾಷೆಯಲ್ಲಿ ಎಲ್ಲಾ ತಂತಿ ವಾದ್ಯಗಳಿಗೆ ′ (ಕೊಟೋ) ಎಂದು ಸಾಮಾನ್ಯವಾಗಿ ಕರೆಯುತ್ತಾರೆ [೧][೨]. ಇದನ್ನು ಕಿನ್ ಎಂದು ಓದುವಾಗ ಇದು ಚೀನೀ ವಾದ್ಯವಾದ ಗುಕ್ವಿನ್ [೩]ಅನ್ನು ಸೂಚಿಸುತ್ತದೆ. ಈ ಪದವನ್ನು ಇಂದು ಅದೇ ರೀತಿಯಲ್ಲಿ ಬಳಸಲಾಗುತ್ತದೆ.
ಪ್ರಾಚೀನ ತಂತಿ ವಾದ್ಯವನ್ನು ಉಲ್ಲೇಖಿಸಿ ಕೊಜಿಕಿ ಭಾಷೆಯಲ್ಲಿ ಕೊಟೋ ಎಂಬ ಪದವು ಕಂಡುಬರುತ್ತದೆ[೪]. ವಾದ್ಯದ ರೂಪಾಂತರಗಳನ್ನು ನಂತರದಲ್ಲಿ ರಚಿಸಲಾಯಿತು. ಅವುಗಳಲ್ಲಿ ಕೆಲವು ಆಧುನಿಕ ಕೋಟೊಗೆ ಪ್ರಮಾಣಿತ ರೂಪಾಂತರಗಳಾಗಿದ್ದವು. ನಾಲ್ಕು ವಿಧದ ಕೊಟೋ (ಗಕುಸೊ, ಚಿಕುಸೊ, ಝೋಕುಸೊ, ಟಾಗೆನ್ಸೋ) ಗಳನ್ನು ವಿವಿಧ ಉಪಸಂಸ್ಕೃತಿಗಳು ರಚಿಸಿದವು. ಇವೆಲ್ಲವೂ ನುಡಿಸುವ ಸಂಗೀತದ ಬದಲಾದ ಶೈಲಿಗಾಗಿ ತಮ್ಮನ್ನು ಬದಲಾಯಿಸಿಕೊಂಡವು .[೫]
ಕೊಟೊದ ಒಂದು ಪ್ರಾದೇಶಿಕ ಶೈಲಿಯೆಂದರೆ ಅಮಾಮಿ ದ್ವೀಪಗಳ ಟ್ಯಾಟೆಗೊಟೊ. ಕೊಟೊದ ಇತರ ಪ್ರಭೇದಗಳಿಗಿಂತ ಭಿನ್ನವಾಗಿ ಇದನ್ನು ಮಡಿಲಲ್ಲಿ ನೇರವಾಗಿ ಹಿಡಿದು ಒಂದು ಕೈಯಿಂದ ನುಡಿಸಲಾಗುತ್ತದೆ. ಇದು ಹೆಚ್ಚು ತಂತಿಗಳನ್ನು ಹೊಂದಿರಬಹುದು ಅಥವಾ ಚಿಕ್ಕದಾಗಿರಬಹುದು . ಇವನ್ನು ಸಾಮಾನ್ಯವಾಗಿ ಉಕ್ಕಿನ ತಂತಿಗಳಿಂದ ನಿರ್ಮಿಸಲಾಗುತ್ತದೆ.
ಇತಿಹಾಸ
ಬದಲಾಯಿಸಿಕೋಟೊದ ಪೂರ್ವಜರು ಚೀನೀ ವಾದ್ಯ ಗುಝೆಂಗ್ [೬]ಆಗಿತ್ತು. ಇದನ್ನು ಮೊದಲ ಬಾರಿಗೆ 7 ಮತ್ತು 8 ನೇ ಶತಮಾನಗಳಲ್ಲಿ ಚೀನಾದಿಂದ ಜಪಾನ್ಗೆ ಪರಿಚಯಿಸಲಾಯಿತು. ಮೊದಲ ಪರಿಚಿತ ಆವೃತ್ತಿಯು ಐದು ತಂತಿಗಳನ್ನು ಹೊಂದಿತ್ತು, ಅದು ಅಂತಿಮವಾಗಿ ಏಳು ತಂತಿಗಳಿಗೆ ಏರಿತು. ಜಪಾನೀಸ್ ಕೊಟೊ ಏಷ್ಯನ್ ಜಿಥರ್ ಕುಟುಂಬಕ್ಕೆ ಸೇರಿದೆ, ಇದು ಚೀನೀ ಝೆಂಗ್ (ಕುಟುಂಬದ ಇತರ ಜಿಥರ್ಗಳಿಗೆ ಪೂರ್ವಜರು) ಕೊರಿಯನ್ ಗಾಯಾಜಿಯಂ ಮತ್ತು ವಿಯೆಟ್ನಾಮೀಸ್ ಡಾನ್ ಟ್ರಾನ್ಹ್ ಅನ್ನು ಒಳಗೊಂಡಿದೆ. ಈ ವೈವಿಧ್ಯಮಯ ವಾದ್ಯವು ಎರಡು ಮೂಲ ರೂಪಗಳಲ್ಲಿ ಬಂದಿತು. ಅವೆಂದರೆ ಸೇತುವೆಗಳನ್ನು ಹೊಂದಿರುವ ಜಿಥರ್ ಮತ್ತು ಸೇತುವೆಗಳಿಲ್ಲದ ಜಿಥರ್.
ಕೊಟೊವನ್ನು ಮೊದಲು ಜಪಾನ್ಗೆ ಆಮದು ಮಾಡಿಕೊಂಡಾಗ ಸ್ಥಳೀಯ ಪದವಾದ ಕೊಟೊವು ಯಾವುದೇ ಮತ್ತು ಎಲ್ಲಾ ಜಪಾನೀ ತಂತಿ ವಾದ್ಯಗಳಿಗೆ ಸಾಮಾನ್ಯ ಪದವಾಗಿತ್ತು. ಜಪಾನ್ನಲ್ಲಿ ಹಲವೂ ರೀತಿಯ ತಂತಿ ವಾದ್ಯಗಳ ಸಂಖ್ಯೆ ಹೆಚ್ಚಾದಂತೆ ಒಂದು ಕೋಟೊ ಪದದ ಮೂಲ ವ್ಯಾಖ್ಯಾನವು ಈ ವಾದ್ಯಗಳ ವ್ಯಾಪಕ ವೈವಿಧ್ಯತೆಯನ್ನು ವಿವರಿಸಲು ಸಾಧ್ಯವಾಗಲಿಲ್ಲ . ಆದ್ದರಿಂದ ಹೊಸ ಪದಗಳು ಬಂದವು. ಅಜುಮಾಗೊಟೊ ಅಥವಾ ಯಮಟೋಗೊಟೊವನ್ನು ವ್ಯಾಗನ್ ಎಂದು ಕರೆಯಲಾಗುತ್ತಿತ್ತು. ಕಿನ್ ನೋ ಕೊಟೊವನ್ನು ಕಿನ್ ಎಂದು ಕರೆಯಲಾಯಿತು. ಮತ್ತು ಸೌ ನೋ ಕೊಟೊ (ಸೌ) ಅನ್ನು ′ ನ ಹಳೆಯ ಉಚ್ಚಾರಣೆಯಾಗಿರುವುದರಿಂದ ಇದನ್ನು ಸೋ ಅಥವಾ ಕೊಟೊ ಎಂದು ಕರೆಯಲಾಯಿತು.
ಕೋಟೊದ ವಿಕಾಸದಲ್ಲಿ ಒಂದು ಸಣ್ಣ ಪ್ರಭಾವವು ಕೀಕೋ ನೊಸಾಕಾ ಎಂಬ ಮಹಿಳೆಯ ಸ್ಫೂರ್ತಿಯಲ್ಲಿ ಕಂಡುಬರುತ್ತದೆ. ನೊಸಾಕಾ (2002ರಲ್ಲಿ ಜಪಾನಿನ ಸಂಸ್ಕೃತಿ ಸಚಿವಾಲಯದಿಂದ ಸಂಗೀತದಲ್ಲಿ ಗ್ರ್ಯಾಂಡ್ ಪ್ರೈಜ್ ಗೆದ್ದ ಸಂಗೀತಗಾರ) ಕೇವಲ 13 ತಂತಿಗಳನ್ನು ಹೊಂದಿರುವ ಕೊಟೊವನ್ನು ನುಡಿಸುತ್ತಿದ್ದರು. ಅವರು 20 ಅಥವಾ ಹೆಚ್ಚಿನ ತಂತಿಗಳನ್ನು ಹೊಂದಿದ ವಾದ್ಯದ ಹೊಸ ಆವೃತ್ತಿಗಳನ್ನು ರಚಿಸಿದರು.
ನಿರ್ಮಾಣ
ಬದಲಾಯಿಸಿಕೋಟೊವನ್ನು ಸಾಮಾನ್ಯವಾಗಿ ಪೌಲೋವನಿಯಾ ಮರದಿಂದ ತಯಾರಿಸಲಾಗುತ್ತದೆ (ಇದನ್ನು ಕಿರಿ ಎಂದು ಕರೆಯಲಾಗುತ್ತದೆ). ಆದಾಗ್ಯೂ ಮರದ ಸಂಸ್ಕರಣೆಯು ಕುಶಲಕರ್ಮಿಗಳ ನಡುವೆ ಮಹತ್ತರವಾಗಿ ಬದಲಾಗುತ್ತದೆ. ಕೋಟೊವನ್ನು ಅಲಂಕರಿಸಬಹುದು ಅಥವಾ ಅಲಂಕರಿಸದೇ ಇರಬಹುದು. ಅಲಂಕಾರಗಳಲ್ಲಿ ದಂತ ಮತ್ತು ಎಬೋನಿ, ಆಮೆ ಚಿಪ್ಪು, ಲೋಹದ ಅಂಕಿ ಅಂಶಗಳು ಇತ್ಯಾದಿಗಳ ಕೆತ್ತನೆಗಳು ಸೇರಿವೆ. ಮರವನ್ನು ಎರಡು ಮಾದರಿಗಳಾಗಿ ಕತ್ತರಿಸಲಾಗುತ್ತದೆ, ಇಟಾಮ್ (ಮೊಕುಮೆ ಎಂದೂ ಕರೆಯಲ್ಪಡುವ ಇದು ಸುತ್ತುತ್ತಿರುವ ಮಾದರಿಯನ್ನು ಹೊಂದಿದೆ, ಅಥವಾ ನೇರ-ಲೇಪಿತ ಮಸಾಮ್ ಮತ್ತೊಂದು ವಿಧ. ನೇರವಾದ ರೇಖೆಯ ಮಾದರಿಯು ತಯಾರಿಸಲು ಸುಲಭವಾಗಿದೆ. ಆದ್ದರಿಂದ ಸುಳಿ ಉತ್ಪಾದನೆಯ ವೆಚ್ಚವನ್ನು ಹೆಚ್ಚಿಸುತ್ತದೆ . ಹಾಗಾಗಿ ಇದನ್ನು ಅಲಂಕಾರಿಕ ಮತ್ತು ಸೊಗಸಾದ ಮಾದರಿಗಳಿಗೆ ಮೀಸಲಾಗಿದೆ.[೫]
ಇಂದು
ಬದಲಾಯಿಸಿಟಿಪ್ಪಣಿಗಳು
ಬದಲಾಯಿಸಿ- ↑ (ja) Digital Daijisen
- ↑ (ja) Kotobank koto
- ↑ (ja) Kotobank kin
- ↑ (ja) Kotobank koto
- ↑ ೫.೦ ೫.೧ Johnson, Henry (1996). ""A Koto" by Any Other name: Exploring Japanese Systems of Musical Instrument Classification". Asian Music. 49: 38–64. ಉಲ್ಲೇಖ ದೋಷ: Invalid
<ref>
tag; name ":0" defined multiple times with different content - ↑ Deal, William E. (2006). Handbook to life in medieval and early modern Japan. New York: Infobase Publishing. pp. 266–267. ISBN 0-8160-5622-6.